For Quick Alerts
ALLOW NOTIFICATIONS  
For Daily Alerts

ಮನೆಮದ್ದಿನ ಮೂಲಕವೇ ಮಚ್ಚೆ ನಿರ್ಮೂಲನೆಗೆ ಇಲ್ಲಿದೆ ಟಿಪ್ಸ್‌

|

ನಮ್ಮ ಮುಖ ಮನಸ್ಸಿನ ಕನ್ನಡಿಯಿದ್ದಂತೆ. ಮನಸ್ಸಿನಲ್ಲಿ ಬರುವ ಭಾವನೆಗಳು ಮುಖದ ಹಾವಭಾವದಲ್ಲಿ ಎದ್ದು ಕಾಣುತ್ತದೆ. ಮನಸ್ಸಿನಲ್ಲಿ ಸ್ವಲ್ಪವೂ ಕಲ್ಮಶ ಇಲ್ಲದ ವ್ಯಕ್ತಿ ಸದಾ ನಗುನಗುತ್ತಾ ಇರುತ್ತಾನೆ. ಆತನ ಮುಖ ಸದಾ ಒಳ್ಳೆಯ ಕಳೆಯಿಂದ ಕೂಡಿರುತ್ತದೆ. ಮುಖದ ಸೌಂದರ್ಯವನ್ನು ರಕ್ಷಿಸಿಕೊಳ್ಳಲು ನಾವು ಸಾಕಷ್ಟು ಹಣ ಖರ್ಚು ಮಾಡಿ ಹಲವಾರು ಸೌಂದರ್ಯ ಉತ್ಪನ್ನಗಳ ಮೊರೆ ಹೋಗುತ್ತೇವೆ.

Natural Home Remedies For Mole Removal

ಹಾಗಿದ್ದೂ ಕೂಡ ಪ್ರೌಡಾವಸ್ಥೆಯಲ್ಲಿ ಮೂಡಿ ಬಂದ ಮೊಡವೆಗಳ ಕಲೆಗಳು ಮಚ್ಚೆಗಳ ರೂಪದಲ್ಲಿ ಹಾಗೆ ನಿಂತುಕೊಳ್ಳುತ್ತದೆ. ಔಷಧಿ ಅಂಗಡಿಗಳಲ್ಲಿ ಸಿಗುವ ರಾಸಾಯನಿಕ ಉತ್ಪನ್ನಗಳಿಂದ ಇವುಗಳನ್ನು ಹೋಗಲಾಡಿಸುವ ಪ್ರಕ್ರಿಯೆ ಸ್ವಲ್ಪ ಅಪಾಯಕಾರಿ ಎಂದು ಹೇಳಬಹುದು. ಹಾಗಾಗಿ ಕೆಲವೊಂದು ಮನೆ ಮದ್ದುಗಳನ್ನು ಬಳಸಿ ಮಚ್ಚೆಗಳನ್ನು ಮತ್ತು ಅವುಗಳ ಕಲೆಗಳನ್ನು ಸುಲಭವಾಗಿ ನಿವಾರಣೆ ಮಾಡಿಕೊಳ್ಳಬಹುದು.

ನಿಮ್ಮ ಮುಖದ ಮೇಲಿನ ಮಚ್ಚೆಗಳನ್ನು ನಿವಾರಣೆ ಮಾಡುವಂತಹ ಹಲವಾರು ಅತ್ಯದ್ಭುತ ಪರಿಣಾಮಕಾರಿ ಪರಿಹಾರಗಳು ಸಾಕಷ್ಟಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ತಿಳಿಸಲಾಗಿದೆ.

1. ಆಪಲ್ ಸೈಡರ್ ವಿನೆಗರ್

1. ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್ ನಿಂದ ನಿಮ್ಮ ಮಚ್ಚೆಗಳನ್ನು ಹೀಗೆ ನಿವಾರಣೆ ಮಾಡಿಕೊಳ್ಳಿ

ಬೇಕಾಗಿರುವ ಸಾಮಗ್ರಿಗಳು

ಆಪಲ್ ಸೈಡರ್ ವಿನೆಗರ್

ಒಂದು ಹತ್ತಿಯ ಉಂಡೆ

ಬ್ಯಾಂಡೆಡ್ ಅಥವಾ ಸ್ಕ್ರಾಚ್ ಟೇಪ್

ಏನು ಮಾಡಬೇಕು ?

ಮೊದಲಿಗೆ ನಿಮ್ಮ ಬಳಿ ಇರುವ ಹತ್ತಿಯ ಉಂಡೆಯನ್ನು ಆಪಲ್ ಸೈಡರ್ ವಿನೆಗರ್ ಸಲ್ಯೂಷನ್ ನಲ್ಲಿ ಅದ್ದಿ ಅದನ್ನು ಮಚ್ಚೆ ಇರುವ ಜಾಗದ ಮೇಲೆ ಇಡಿ.

ಒಂದು ಬೆರಳಿನಲ್ಲಿ ಇದನ್ನು ಹಾಗೆ ಹಿಡಿದುಕೊಂಡು ಬ್ಯಾಂಡೆಡ್ ಅಪ್ಲೈ ಮಾಡಿ

ಸುಮಾರು 5 - 6 ಗಂಟೆಗಳ ಕಾಲ ಇದನ್ನು ಹಾಗೆ ಬಿಡಿ.

ಈಗ ಶುದ್ಧವಾದ ನೀರಿನಿಂದ ಮಚ್ಚೆ ಇರುವ ಜಾಗವನ್ನು ಚೆನ್ನಾಗಿ ತೊಳೆದುಕೊಳ್ಳಿ. ಪ್ರತಿ ದಿನವೂ ಆಪಲ್ ಸೈಡರ್ ವಿನೆಗರ್ ಅನ್ನು ಮಚ್ಚೆ ಇರುವ ಜಾಗದ ಮೇಲೆ ಇದೇ ರೀತಿ ಹಚ್ಚುತ್ತಾ ಬನ್ನಿ. ಕೆಲವೇ ದಿನಗಳಲ್ಲಿ ಮಚ್ಚೆಯ ಕಲೆ ಹೊರಟು ಹೋಗುತ್ತದೆ.

ಮಚ್ಚೆ ನಿವಾರಣೆಯಲ್ಲಿ ಆಪಲ್ ಸೈಡರ್ ವಿನೆಗರ್ ಏಕೆ ಅಷ್ಟೊಂದು ಪರಿಣಾಮಕಾರಿ?

ಆಪಲ್ ಸೈಡರ್ ವಿನಿಗರ್ ಅನ್ನು ತುಂಬಾ ಜನರು ಸರಳ ಮನೆಮದ್ದು ಬಳಕೆಯಲ್ಲಿ ಹಲವಾರು ಸಮಸ್ಯೆಗಳಿಗೆ ಬಳಸುತ್ತಾರೆ. ಇದಕ್ಕೆ ಕಾರಣ ಆಪಲ್ ಸೈಡರ್ ವಿನೆಗರ್ ಸಲ್ಯೂಷನ್ ನಲ್ಲಿ ಕಂಡುಬರುವ ಆಮ್ಲಿಯತೆ. ನಮ್ಮ ದೇಹದ ಮೇಲೆ ಉಂಟಾದ ಯಾವುದೇ ಬಗೆಯ ಮಚ್ಚೆಯ ಕಲೆ ನಿವಾರಣೆಗೆ ಇದು ಅದ್ಭುತವಾಗಿ ಕೆಲಸ ಮಾಡುತ್ತದೆ. ಮಚ್ಚೆಯನ್ನು ಒಣಗುವಂತೆ ಮಾಡಿ ಕ್ರಮೇಣವಾಗಿ ಮಾಯವಾಗಿಸುತ್ತದೆ.

2. ಹರಳೆಣ್ಣೆ ಮತ್ತು ಬೇಕಿಂಗ್ ಸೋಡಾದ ಮಿಶ್ರಣ

2. ಹರಳೆಣ್ಣೆ ಮತ್ತು ಬೇಕಿಂಗ್ ಸೋಡಾದ ಮಿಶ್ರಣ

ಬೇಕಾಗಿರುವ ಸಾಮಗ್ರಿಗಳು

1/2 ಟೀ ಚಮಚ ಬೇಕಿಂಗ್ ಸೋಡಾ

2 - 3 ಹನಿಗಳಷ್ಟು ಹರಳೆಣ್ಣೆ

ಬ್ಯಾಂಡೆಡ್ ಅಥವಾ ಅಂಟಿಸುವ ಟೇಪ್

ಮಚ್ಚೆಗಳ ನಿವಾರಣೆಗೆ ಏನು ಮಾಡಬೇಕು ?

ಮೊದಲಿಗೆ ನೀವು ತೆಗೆದುಕೊಂಡ ಬೇಕಿಂಗ್ ಸೋಡಾ ಪುಡಿಗೆ ಹರಳೆಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ

ತಯಾರಾದ ಪೇಸ್ಟ್ ಅನ್ನು ನಿಮ್ಮ ಚರ್ಮದ ಮೇಲೆ ಕಂಡು ಬರುವ ಮಚ್ಚೆಯ ಮೇಲೆ ಅನ್ವಯಿಸಿ.

ಇಡೀ ರಾತ್ರಿ ಇದನ್ನು ಹೀಗೆ ಬಿಡಲು ಇದರ ಮೇಲೆ ಬ್ಯಾಂಡೆಡ್ ಅಪ್ಲೈ ಮಾಡಿ

ಪ್ರತಿ ರಾತ್ರಿ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ

ಹರಳೆಣ್ಣೆ ಮತ್ತು ಬೇಕಿಂಗ್ ಸೋಡಾ ನಿಮ್ಮ ಮಚ್ಚೆಗಳ ನಿವಾರಣೆಯಲ್ಲಿ ನಿಜಕ್ಕೂ ಕೆಲಸ ಮಾಡಬಲ್ಲದೇ ?

ಹೌದು. ಹರಳೆಣ್ಣೆ ಮತ್ತು ಬೇಕಿಂಗ್ ಸೋಡಾ ನೈಸರ್ಗಿಕವಾಗಿ ನಮ್ಮ ದೇಹದ ಮೇಲೆ ಉಂಟಾದ ಮಚ್ಚೆಗಳು ಮತ್ತು ಅದರ ಕಲೆಗಳನ್ನು ನಿವಾರಣೆ ಮಾಡುವಂತಹ ಅದ್ಭುತ ಪರಿಹಾರ ಎಂದು ಹೇಳಬಹುದು. ಬೇಕಿಂಗ್ ಸೋಡಾ ಮಚ್ಚೆಯನ್ನು ಒಣಗಿಸುವ ಪ್ರಕ್ರಿಯೆಗೆ ಮುಂದಾದರೆ, ಹರಳೆಣ್ಣೆ ಮಚ್ಚೆಯ ಕಲೆಯನ್ನು ಆದಷ್ಟು ಬೇಗ ವಾಸಿ ಮಾಡುವ ಪ್ರಕ್ರಿಯೆಗೆ ಚಾಲನೆ ಕೊಡುತ್ತದೆ. ವಾಸಿಯಾದ ನಂತರ ಮಚ್ಚೆಯ ಯಾವುದೇ ಕಲೆ ಚರ್ಮದ ಮೇಲೆ ಉಳಿಯದಷ್ಟು ಪರಿಣಾಮಕಾರಿಯಾಗಿ ಮಚ್ಚೆಯ ನಿವಾರಣೆ ಮಾಡುತ್ತದೆ.

ಒಂದು ಅಂಶ ಗಮನಿಸಿ

ಹರಳೆಣ್ಣೆ ಮತ್ತು ಬೇಕಿಂಗ್ ಸೋಡಾ ಮಿಶ್ರಣ ಚರ್ಮದ ಮೇಲೆ ಉರಿಯೂತವನ್ನು ಉಂಟುಮಾಡಬಹುದು. ಹಾಗಾಗಿ ಈ ಮಿಶ್ರಣವನ್ನು ಹಚ್ಚಿದ ಬಳಿಕ ಚರ್ಮದಲ್ಲಿ ಕಿರಿಕಿರಿ ಅಥವಾ ಚರ್ಮದ ಬಣ್ಣ ಕೆಂಪು ಬಣ್ಣಕ್ಕೆ ತಿರುಗಿದರೆ ತಕ್ಷಣವೇ ನೀರಿನಿಂದ ಸ್ವಚ್ಛ ಮಾಡಿಕೊಳ್ಳಿ.

3. ಬಾಳೆ ಹಣ್ಣಿನ ಸಿಪ್ಪೆ

3. ಬಾಳೆ ಹಣ್ಣಿನ ಸಿಪ್ಪೆ

ಬೇಕಾಗಿರುವ ಸಾಮಗ್ರಿಗಳು

ಹಸಿ ಬಾಳೆ ಹಣ್ಣಿನ ಸಿಪ್ಪೆ

ಸ್ಕ್ರೋಟ್ಚ್ ಟೇಪ್

ಬಾಳೆ ಹಣ್ಣಿನ ಸಿಪ್ಪೆಯಿಂದ ಮಚ್ಚೆಗಳ ನಿವಾರಣೆ ಹೇಗೆ ?

ಮೊದಲಿಗೆ ಸ್ವಲ್ಪ ಬಾಳೆ ಹಣ್ಣಿನ ಸಿಪ್ಪೆಯ ತುಂಡನ್ನು ನಿಮ್ಮ ದೇಹದಲ್ಲಿ ಮಚ್ಚೆ ಉಂಟಾಗಿರುವ ಜಾಗದಲ್ಲಿ ಇಡಿ. ಸಿಪ್ಪೆಯ ಒಳ ಭಾಗ ಮಚ್ಚೆಯ ಮೇಲಿರಬೇಕು.

ಒಂದು ಟೇಪ್ ಅಥವಾ ಬ್ಯಾಂಡೇಜ್ ಬೆಳಸಿ ಬಾಳೆ ಹಣ್ಣಿನ ಸಿಪ್ಪೆಯನ್ನು ಮಚ್ಚೆಯ ಮೇಲೆ ಭದ್ರವಾಗಿ ಅಂಟಿಸಿ.

ಇಡೀ ರಾತ್ರಿ ಇದನ್ನು ಹಾಗೆ ಇರಲು ಬಿಡಿ.

ಮಚ್ಚೆಯ ಕಲೆ ನಿವಾರಣೆ ಆಗುವವರೆಗೂ ಈ ಪ್ರಕ್ರಿಯೆ ಮುಂದುವರೆಸಿ.

ಮಚ್ಚೆಗಳ ನಿವಾರಣೆಯಲ್ಲಿ ಬಾಳೆ ಹಣ್ಣಿನ ಸಿಪ್ಪೆ ಹೇಗೆ ಕೆಲಸ ನಿರ್ವಹಿಸುತ್ತದೆ ?

ಬಾಳೆ ಹಣ್ಣಿನ ಸಿಪ್ಪೆಯಲ್ಲಿ ನೈಸರ್ಗಿಕವಾಗಿ ಹಲವು ಎಂಜೈಮ್ ಗಳು ಮತ್ತು ಆಮ್ಲಿಯ ಅಂಶಗಳು ಲಭ್ಯವಿವೆ. ಮುಖ್ಯವಾಗಿ ' ಆಕ್ಸಾಲಿಕ್ ಆಸಿಡ್ ' ಮತ್ತು ' ಆಸ್ಕಾರ್ಬಿಕ್ ಆಸಿಡ್ ' ಅಂಶಗಳು ಇರುವುದರಿಂದ ನಮ್ಮ ದೇಹದ ಚರ್ಮದ ಮೇಲೆ ಉಂಟಾದ ಯಾವುದೇ ಬಗೆಯ ಮಚ್ಚೆಯ ಕಲೆಗಳು ಸುಲಭವಾಗಿ ನಿವಾರಣೆಯಾಗುತ್ತವೆ ಎಂದು ಹೇಳಬಹುದು.

4. ಮಚ್ಚೆಗಳಿಗೆ ಬೆಳ್ಳುಳ್ಳಿ ರಾಮಬಾಣ

4. ಮಚ್ಚೆಗಳಿಗೆ ಬೆಳ್ಳುಳ್ಳಿ ರಾಮಬಾಣ

ಬೇಕಾಗಿರುವ ಸಾಮಾಗ್ರಿಗಳು

ಒಂದು ಬೆಳ್ಳುಳ್ಳಿ ಎಸಳು

ಒಂದು ಹತ್ತಿ ಬಟ್ಟೆಯ ತುಂಡು

ನೀವೇನು ಮಾಡಬೇಕು ?

ಮೊದಲಿಗೆ ಬೆಳ್ಳುಳ್ಳಿಯನ್ನು ಚೆನ್ನಾಗಿ ಜಜ್ಜಿ ಪೇಸ್ಟ್ ತಯಾರಿಸಿಕೊಳ್ಳಿ

ಇದನ್ನು ಮಚ್ಚೆಯ ಮೇಲೆ ಹಚ್ಚಿ ಒಂದು ಹತ್ತಿಯ ಬಟ್ಟೆಯಿಂದ ಸುತ್ತಿ ಇಡೀ ರಾತ್ರಿ ಹಾಗೆ ಬಿಡಿ

3 ರಿಂದ 4 ವಾರಗಳ ಅವಧಿಯಲ್ಲಿ ಈ ಪ್ರಕ್ರಿಯೆಯನ್ನು ಪ್ರತಿ ದಿನ ಮಾಡುತ್ತಾ ಬಂದರೆ ಮಚ್ಚೆಗಳು ಮತ್ತು ಅದರ ಕಲೆಗಳು ಸುಲಭವಾಗಿ ನಿವಾರಣೆಯಾಗುತ್ತವೆ.

ಗಮನಿಸಿ

ಮಚ್ಚೆಗಳ ನಿವಾರಣೆ ಮಾಡಲು ಬೆಳ್ಳುಳ್ಳಿ ಬಳಕೆಯಲ್ಲಿ ಒಂದು ಸಲಹೆ. ಅದೇನೆಂದರೆ, ಪ್ರತಿ ದಿನ ಮಚ್ಚೆಗಳ ಮೇಲೆ ಬೆಳ್ಳುಳ್ಳಿ ಹಚ್ಚುವುದರಿಂದ ಬಹಳ ಬೇಗನೆ ಪರಿಹಾರ ಕಂಡುಕೊಳ್ಳಬಹುದು ನಿಜ. ಆದರೆ ಯಾವುದೇ ಕಾರಣಕ್ಕೂ ಬೆಳ್ಳುಳ್ಳಿಯನ್ನು ಮಚ್ಚೆಗಳ ಮೇಲೆ ಹಚ್ಚಿದ ನಂತರ ಅದನ್ನು ನಿಮ್ಮ ಕೈಗಳ ಬೆರಳುಗಳಿಂದ ಮುಟ್ಟಬಾರದು.

5. ತಾಜಾ ನಿಂಬೆ ಹಣ್ಣಿನ ರಸ

5. ತಾಜಾ ನಿಂಬೆ ಹಣ್ಣಿನ ರಸ

ಬೇಕಾಗಿರುವ ಸಾಮಗ್ರಿಗಳು

ಒಂದು ತಾಜಾ ನಿಂಬೆ ಹಣ್ಣಿನಿಂದ ಹಿಂಡಿ ತೆಗೆದ ರಸ

ಒಂದು ಹತ್ತಿಯ ಉಂಡೆ

ಒಂದು ಟೇಪ್

ಹೀಗೆ ಮಾಡಿ

ನಿಮ್ಮ ಬಳಿ ಇರುವ ಹತ್ತಿಯ ಉಂಡೆಯನ್ನು ನಿಂಬೆ ಹಣ್ಣಿನ ರಸದಲ್ಲಿ ಅದ್ದಿ ಅದನ್ನು ಮಚ್ಚೆಯ ಮೇಲೆ ಇಡಿ.

ಒಂದು ಟೇಪ್ ಬಳಸಿ ಹತ್ತಿಯ ಉಂಡೆ ಮಚ್ಚೆಯ ಮೇಲೆ ಹಾಗೆ ಇರುವಂತೆ ಅಂಟಿಸಿ.

ಸುಮಾರು 20 ನಿಮಿಷಗಳ ಕಾಲ ಇದನ್ನು ಹಾಗೆ ಬಿಡಿ

ದಿನಕ್ಕೆ ಒಂದು ಅಥವಾ ಎರಡು ಬಾರಿ ಈ ರೀತಿ ಮಾಡಿ.

ಮಚ್ಚೆಗಳನ್ನು ನಿವಾರಣೆ ಮಾಡುವಂತಹ ಅಂಶ ನಿಂಬೆ ಹಣ್ಣಿನಲ್ಲಿ ಏನಿದೆ ?

ನಿಂಬೆ ಹಣ್ಣಿನಲ್ಲಿ ನಿಮ್ಮ ಚರ್ಮವನ್ನು ಶುಚಿ ಮಾಡುವಂತಹ ಅದ್ಭುತ ಗುಣ ಲಕ್ಷಣಗಳಿವೆ. ನಿಂಬೆ ಹಣ್ಣಿನಲ್ಲಿ ಕಂಡು ಬರುವ ಸಿಟ್ರಿಕ್ ಆಸಿಡ್ ಅಂಶ ಇದಕ್ಕೆ ಸಹಾಯ ಮಾಡುತ್ತದೆ. ನಿಂಬೆ ಹಣ್ಣಿನ ರಸವನ್ನು ಚರ್ಮದ ಯಾವುದೇ ಕಲೆಗಳಿಗೆ ಹಚ್ಚುತ್ತಿದ್ದರೆ, ಕ್ರಮೇಣವಾಗಿ ಕಲೆ ಮಾಯವಾಗುತ್ತದೆ.

6. ಮಚ್ಚೆಗಳಿಗೆ ಆಲೂಗೆಡ್ಡೆ ಪರಿಣಾಮಕಾರಿ

6. ಮಚ್ಚೆಗಳಿಗೆ ಆಲೂಗೆಡ್ಡೆ ಪರಿಣಾಮಕಾರಿ

ಬೇಕಾಗಿರುವ ಸಾಮಗ್ರಿಗಳು

ಒಂದು ಸಣ್ಣ ತುಂಡು ಕತ್ತರಿಸಿದ ಆಲೂಗಡ್ಡೆ

ಆಲೂಗೆಡ್ಡೆಯಿಂದ ಮಚ್ಚೆಗಳ ನಿವಾರಣೆ ಹೇಗೆ ಮಾಡಬಹುದು?

ನಿಮ್ಮ ದೇಹದ ಮೇಲಿನ ಮಚ್ಚೆಯ ನಿವಾರಣೆಗೆ ಆಲೂಗಡ್ಡೆ ತುಂಡನ್ನು ಒಂದು ಅಥವಾ ಎರಡು ನಿಮಿಷದ ಕಾಲ ಮಚ್ಚೆಯ ಮೇಲೆ ನಯವಾಗಿ ಮಸಾಜ್ ಮಾಡಿ. ಇದಕ್ಕೆ ಪರ್ಯಾಯವಾಗಿ, ನೀವು ಕತ್ತರಿಸಿಟ್ಟುಕೊಂಡ ಆಲುಗಡ್ಡೆ ತುಂಡನ್ನು ಮಚ್ಚೆಯ ಮೇಲಿಟ್ಟು ಬ್ಯಾಂಡೇಜ್ ಮಾಡಬಹುದು.

ಸುಮಾರು 4 ರಿಂದ 7 ದಿನಗಳ ಕಾಲ ಇದನ್ನು ಹಾಗೆ ಇರಲು ಬಿಡಿ.

ಆಲೂಗೆಡ್ಡೆ ಕೊಳೆಯಲು ಆರಂಭವಾಗುತ್ತಿದ್ದಂತೆ ತನ್ನ ಜೊತೆ ನಿಮ್ಮ ದೇಹದ ಮೇಲಿನ ಮಚ್ಚೆಯನ್ನು ಮಾಯವಾಗಿಸುತ್ತದೆ.

ದಿನಕ್ಕೆ ಎರಡು ಬಾರಿ ಈ ರೀತಿ ಮಾಡುವುದರಿಂದ ಸಂಪೂರ್ಣವಾಗಿ ನಿಮ್ಮ ಮಚ್ಚೆ ಅಥವಾ ಮಚ್ಚೆಯ ಕಲೆಗಳಿಂದ ಮುಕ್ತಿ ಕಾಣಬಹುದು.

ಹಾಗಾದರೆ ಆಲೂಗಡ್ಡೆ ಮಚ್ಚೆ ನಿವಾರಣೆಯಲ್ಲಿ ಹೇಗೆ ಕೆಲಸ ಮಾಡುತ್ತದೆ ?

ನಿಂಬೆ ಹಣ್ಣಿನಂತೆ ಆಲುಗಡ್ಡೆಯಲ್ಲೂ ಸಹ ಮನುಷ್ಯನ ದೇಹದ ಮೇಲಿನ ಯಾವುದೇ ಕಲೆಗಳನ್ನು ನಿವಾರಣೆ ಮಾಡುವಂತಹ ಬ್ಲೀಚಿಂಗ್ ಏಜೆಂಟ್ ಅಂಶ ಹೇರಳವಾಗಿದೆ.

7. ತೆಂಗಿನ ಎಣ್ಣೆ

7. ತೆಂಗಿನ ಎಣ್ಣೆ

ಬೇಕಾಗಿರುವ ಸಾಮಗ್ರಿ

ವರ್ಜಿನ್ ಕೊಕೊನಟ್ ಆಯಿಲ್

ನೀವು ಮಾಡಬೇಕಾದುದು ಏನು ?

ನಿಮ್ಮ ದೇಹದ ಯಾವುದೇ ಭಾಗದಲ್ಲಿ ಉಂಟಾದ ಮಚ್ಚೆಯ ಮೇಲೆ ಒಂದು ಅಥವಾ ಎರಡು ಹನಿಗಳಷ್ಟು ಕೊಕೊನಟ್ ಆಯಿಲ್ ಅಪ್ಲೈ ಮಾಡಿ ಮತ್ತು ಸ್ವಲ್ಪ ಹೊತ್ತು ಹಾಗೆ ಇರಲು ಬಿಡಿ.

ತೆಂಗಿನ ಎಣ್ಣೆ ಹೇಗೆ ಕೆಲಸ ನಿರ್ವಹಿಸುತ್ತದೆ ?

ತೆಂಗಿನ ಎಣ್ಣೆಯಲ್ಲಿ ಚರ್ಮವನ್ನು ತೇವಾಂಶ ಕಾಪಾಡಿಕೊಳ್ಳುವಂತೆ ಮಾಡುವ ಗುಣ ಲಕ್ಷಣ ಇದೆ. ಹಾಗಾಗಿ ಮೊಡವೆ ಬೇಗ ಮಾಗಿ ಅದರ ಮಚ್ಚೆಯ ರೂಪ ಮತ್ತು ಅದರ ಕಲೆ ಬಹುಬೇಗನೆ ಇಲ್ಲವಾಗುತ್ತದೆ.

8. ಹೈಡ್ರೋಜನ್ ಪೆರಾಕ್ಸೈಡ್

8. ಹೈಡ್ರೋಜನ್ ಪೆರಾಕ್ಸೈಡ್

ಬೇಕಾಗಿರುವ ಸಾಮಗ್ರಿ

ಫುಡ್ ಗ್ರೇಡ್ ಗುಣಮಟ್ಟ ಹೊಂದಿರುವ 35 % ಹೈಡ್ರೋಜನ್ ಪೆರಾಕ್ಸೈಡ್ ದ್ರವ.

ನೀವು ಇದರಿಂದ ಏನು ಮಾಡಬಹುದು ?

ಟಿಪ್ ಬಳಸಿ ಹೈಡ್ರೋಜನ್ ಪೆರಾಕ್ಸೈಡ್ ದ್ರಾವಣವನ್ನು ಮಚ್ಚೆಗಳ ಮೇಲೆ ಲೇಪಿಸಿ. ದಿನ ನಿತ್ಯ 3 - 4 ಬಾರಿ ಈ ಪ್ರಯತ್ನ ಮಾಡಬಹುದು.

ಮಚ್ಚೆಗಳ ನಿವಾರಣೆಯಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಹೇಗೆ ಸಹಕಾರಿ ?

ಸಾಧಾರಣವಾಗಿ ಹೈಡ್ರೋಜನ್ ಪೆರಾಕ್ಸೈಡ್ ಅನ್ನು ವಯಸ್ಸಾದಂತೆ ಎದುರಾಗುವ ಸುಕ್ಕು ಮತ್ತು ಗೆರೆಗಳನ್ನು ನಿವಾರಿಸಲು ಬಳಸುತ್ತಾರೆ. ಆದರೆ ಮಚ್ಚೆ ಅಥವಾ ಕಲೆಗಳ ಇಲ್ಲವಾಗಿಸುವಿಕೆಯೂ ಕೂಡ ಅಷ್ಟೇ ಪರಿಣಾಮಕಾರಿಯಾಗಿ ಈ ಒಂದು ದ್ರಾವಣದಿಂದ ಇಲ್ಲವಾಗುತ್ತದೆ. ಅತ್ಯಂತ ಗಾಢವಾದ ಮಚ್ಚೆಯ ಬಣ್ಣಗಳು ಸಹ ಕ್ರಮೇಣವಾಗಿ ಬಿಳುಪಾಗುತ್ತವೆ.

9. ಅರಿಶಿನದ ಬಳಕೆ

9. ಅರಿಶಿನದ ಬಳಕೆ

ಬೇಕಾಗಿರುವ ಸಾಮಗ್ರಿಗಳು

1 ಟೀ ಚಮಚ ಅರಿಶಿನದ ಪುಡಿ

1 ವಿಟಮಿನ್ ಸಿ ಮಾತ್ರೆ

ಕೆಲವು ಹನಿ ಜೇನು ತುಪ್ಪ

ಮಚ್ಚೆಗಳ ನಿವಾರಣೆಗೆ ನೀವು ಮಾಡಬೇಕಾದುದು

ಮೊದಲಿಗೆ ವಿಟಮಿನ್ 'ಸಿ' ಮಾತ್ರೆಯನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಳ್ಳಿ.

ಈ ಪುಡಿಯನ್ನು ಅರಿಶಿನದ ಜೊತೆಗೆ ಮಿಶ್ರಣ ಮಾಡಿ.

ಇದಕ್ಕೆ ಸ್ವಲ್ಪ ಜೇನು ತುಪ್ಪ ಬೆರೆಸಿ ಚೆನ್ನಾಗಿ ಕಲಸಿ ಪೇಸ್ಟ್ ತಯಾರಿಸಿಕೊಳ್ಳಿ.

ಈ ಪೇಸ್ಟ್ ಅನ್ನು ಮಚ್ಚೆಗಳ ಕಲೆಗಳು ಕಂಡುಬರುವ ಜಾಗದ ಮೇಲೆ ಲೇಪನ ಮಾಡಿ.

ಸುಮಾರು 15 - 20 ನಿಮಿಷಗಳ ಕಾಲ ನೈಸರ್ಗಿಕವಾಗಿ ಒಣಗಲು ಬಿಡಿ.

ನಂತರ ಶುಚಿಯಾದ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ.

ದಿನಕ್ಕೆ ಎರಡು ಬಾರಿ ಇದೇ ರೀತಿ ಮಾಡಿ.

ಇದು ಹೇಗೆ ಕೆಲಸ ಮಾಡುತ್ತದೆ ?

ಮೊಡವೆಯ ನಿವಾರಣೆಯಲ್ಲಿ ವಿಟಮಿನ್ ' ಸಿ ' ಕೆಲಸ ಮಾಡಿದರೆ ಅರಿಸಿನ ವಾಸಿ ಮಾಡುವ ಪ್ರಕ್ರಿಯೆಯಲ್ಲಿ ತನ್ನ ದಕ್ಷತೆ ತೋರಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಮಚ್ಚೆಯ ಯಾವುದೇ ಕಲೆಗಳು ಉಳಿಯುವುದಿಲ್ಲ ಎಂಬ ಖಾತ್ರಿ ನಿಮಗೆ ಸಿಗುತ್ತದೆ.

10. ಅಲೋವೆರಾದ ಬಳಕೆ

10. ಅಲೋವೆರಾದ ಬಳಕೆ

ಬೇಕಾಗಿರುವ ಸಾಮಗ್ರಿಗಳು

ತಾಜಾ ಅಲೋವೆರಾ ಜೆಲ್

ಒಂದು ಹತ್ತಿಯ ಬ್ಯಾಂಡೇಜ್

ಏನು ಮಾಡಬೇಕು ?

ಮೊದಲು ಮಚ್ಚೆಯಿರುವ ಜಾಗವನ್ನು ಚೆನ್ನಾಗಿ ಸ್ವಚ್ಛ ಮಾಡಿ

ಅಲೋವೆರಾ ಜೆಲ್ ಅದರ ಮೇಲೆ ಹಚ್ಚಿ

ಈಗ ಹತ್ತಿಯ ಬ್ಯಾಂಡೇಜ್ ಸುತ್ತಿ 2 - 3 ಗಂಟೆಗಳ ಕಾಲ ಹಾಗೆ ಬಿಡಿ ದಿನಕ್ಕೆ ಎರಡು ಬಾರಿ ಈ ರೀತಿ ಮಾಡಿ.

ಮಚ್ಚೆಗಳಿಂದ ಮುಕ್ತಿ ಕೊಡಿಸಲು ಅಲೋವೆರಾ ಹೇಗೆ ಸಹಾಯಕ?

ಅಲೋವೆರಾ ನೈಸರ್ಗಿಕವಾದ ಒಂದು ಆಹಾರ ಪದಾರ್ಥವಾಗಿದ್ದು ತನ್ನಲ್ಲಿ ನೈಸರ್ಗಿಕವಾಗಿ ಪಾಲಿ ಸ್ಯಾಕರೈಡ್, ಟ್ಯಾನಿನ್, ಎಂಜೈಮ್, ವಿಟಮಿನ್ ಮತ್ತು ಖನಿಜಾಂಶಗಳನ್ನು ಹೊಂದಿದೆ. ಇದರಿಂದ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಆದರೆ ಬೇರೆ ಎಲ್ಲಾ ಮನೆ ಮದ್ದುಗಳಂತೆ ಬೇಗನೆ ಪರಿಹಾರ ಈ ಪದ್ದತಿಯಲ್ಲಿ ಸಿಗುವುದಿಲ್ಲ. ಆದ್ದರಿಂದ ಇಲ್ಲಿ ತಾಳ್ಮೆ ಬಹಳ ಮುಖ್ಯವಾಗುತ್ತದೆ. ಆದರೆ ಮಿಕ್ಕೆಲ್ಲಾ ವಿಧಾನಗಳಿಗೆ ಹೋಲಿಸಿದರೆ ಬಹಳ ಚೆನ್ನಾಗಿ ಮಚ್ಚೆಗಳ ನಿವಾರಣೆಯಾಗುತ್ತದೆ.

11. ಕೊತ್ತಂಬರಿ ಸೊಪ್ಪಿನ ಬಳಕೆ

11. ಕೊತ್ತಂಬರಿ ಸೊಪ್ಪಿನ ಬಳಕೆ

ಬೇಕಾಗಿರುವ ಸಾಮಗ್ರಿಗಳು

1 ಬಟ್ಟಲು ಹೆಚ್ಚಿದ ಕೋತ್ಯಂಬರಿ ಸೊಪ್ಪು ಮತ್ತು ಒಂದು ಗ್ಲಾಸ್ ನೀರು

ನೀವು ಏನು ಮಾಡಬೇಕು ?

ಮೊದಲಿಗೆ ಕೊತ್ತಂಬರಿ ಸೊಪ್ಪಿಗೆ ನೀರು ಹಾಕಿ ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ . ಈ ಪೇಸ್ಟ್ ಅನ್ನು ಮಚ್ಚೆಗಳು ಇರುವ ಜಾಗದ ಮೇಲೆ ಹಚ್ಚಿ. 10 ನಿಮಿಷ ಹಾಗೆ ಬಿಟ್ಟು ನಂತರ ಶುಚಿಯಾದ ನೀರಿನಿಂದ ಮುಖ ತೊಳೆದುಕೊಳ್ಳಿ. ಪ್ರತಿ ದಿನ ಎರಡು ವಾರಗಳ ತನಕ ಹೀಗೆ ಮಾಡಿದರೆ ಒಳ್ಳೆಯ ಫಲಿತಾಂಶಗಳು ಲಭ್ಯವಾಗುತ್ತವೆ.

ಇದು ಹೇಗೆ ತನ್ನ ಕೆಲಸ ನಿರ್ವಹಿಸುತ್ತದೆ ?

ಕೊತ್ತಂಬರಿ ಸೊಪ್ಪಿಗೆ ಒಂದು ವಿಚಿತ್ರ ಗುಣ ಲಕ್ಷಣವಿದೆ. ಏನೆಂದರೆ ಸದಾ ತಂಪಾದ ಸ್ವಭಾವ ಹೊಂದಿದ್ದು ಯಾವುದಾದರೂ ವಸ್ತುವಿನ ಮೇಲ್ಮೈ ಪ್ರದೇಶದಲ್ಲಿ ಬಿಸಿಯ ಲಕ್ಷಣ ಪ್ರದರ್ಶಿಸುತ್ತದೆ. ಚರ್ಮದ ವಿಚಾರದಲ್ಲೂ ಹಾಗೆ. ಮಚ್ಚೆಗೆ ಬಿಸಿಯ ಶಾಖ ನೀಡಿ ಬಹಳ ಬೇಗನೆ ಅದು ಒಣಗಿ ಉದುರಿ ಹೋಗುವಂತೆ ಮಾಡುತ್ತದೆ.

ಮಚ್ಚೆಗಳಿಗೆ ಜೇನು ತುಪ್ಪ ಹಸಿ ಜೇನು ತುಪ್ಪ ಮತ್ತು ಒಂದು ಬ್ಯಾಂಡೇಜ್ ತುಂಡು. ಮಚ್ಚೆಯ ಮೇಲ್ಭಾಗದಲ್ಲಿ ಜೇನು ತುಪ್ಪ ಸವರಿ ಬ್ಯಾಂಡೇಜ್ ಮಾಡಿ ಸುಮಾರು ಒಂದು ಗಂಟೆ ಕಾಲ ಹಾಗೆ ಬಿಟ್ಟು ನಂತರ ಬ್ಯಾಂಡೇಜ್ ತೆಗೆಯಿರಿ ನೀರಿನಿಂದ ಆ ಜಾಗವನ್ನು ತೊಳೆಯಿರಿ . ಈ ಪ್ರಕ್ರಿಯೆಯನ್ನು ದಿನದಲ್ಲಿ ಹಲವು ಬಾರಿ ಮಾಡಬಹುದು. ಆದರೆ ಪ್ರತಿ ಬಾರಿಯೂ ಒಂದು ಹೊಸ ಬ್ಯಾಂಡೇಜ್ ಹಾಕಿಕೊಳ್ಳಬೇಕು

ಇದರ ಕೆಲಸ ಹೇಗೆ ಸಾಮಾನ್ಯವಾಗಿ ಜೇನು ತುಪ್ಪ ಪ್ರತಿಯೊಬ್ಬರ ಮನೆಯಲ್ಲೂ ಲಭ್ಯವಿರುತ್ತದೆ ಹಾಗಾಗಿ ಹೆಚ್ಚು ಖರ್ಚಿಲ್ಲದೆ ಸುಲಭವಾಗಿ ಮಚ್ಚೆಗಳ ನಿವಾರಣೆ ಮಾಡಿಕೊಳ್ಳಬಹುದು. ಜೊತೆಗೆ ಜೇನು ತುಪ್ಪದಲ್ಲಿರುವ ಆಂಟಿ ಆಕ್ಸಿಡಾಂಟ್ ಗುಣ ಲಕ್ಷಣ ಮತ್ತು ಆಂಟಿ ಇಂಪ್ಲಾಮೇಟರಿ ಗುಣಲಕ್ಷಣದಿಂದ ಇದುವರೆಗೂ ಹಲವಾರು ಚರ್ಮದ ಸಮಸ್ಯೆಗಳಿಗೆ ಬಹಳ ಹಿಂದಿನಿಂದ ಉಪಯೋಗಿಸುತ್ತಾ ಬಂದಿದ್ದಾರೆ. ಕೇವಲ ಒಂದು ವಾರದಲ್ಲಿ ನಿಮಗೆ ಒಳ್ಳೆಯ ಫಲಿತಾಂಶ ಲಭ್ಯವಾಗುತ್ತದೆ.

12. ಈರುಳ್ಳಿಯ ರಸ ಬಳಕೆ

12. ಈರುಳ್ಳಿಯ ರಸ ಬಳಕೆ

ಬೇಕಾಗಿರುವ ಸಾಮಗ್ರಿಗಳು

1/4 ಕಪ್ ಹೆಚ್ಚಿದ ಈರುಳ್ಳಿ

ನೀವು ಏನು ಮಾಡಬೇಕಾಗುತ್ತದೆ?

ಮೊದಲಿಗೆ ಈರುಳ್ಳಿಯನ್ನು ಹೆಚ್ಚಿ ಅಥವಾ ಚೆನ್ನಾಗಿ ತುರಿದು ಅದರ ರಸ ತೆಗೆದುಕೊಳ್ಳಬೇಕಾಗುತ್ತದೆ

ಈರುಳ್ಳಿ ರಸವನ್ನು ಮಚ್ಚೆಗಳಿರುವ ಜಾಗದಲ್ಲಿ ಹಚ್ಚಿ

ಒಂದು ಗಂಟೆಗಳ ಕಾಲ ಹಾಗೆಯೇ ಬಿಟ್ಟು ನಂತರ ಶುದ್ಧವಾದ ನೀರಿನಿಂದ ಈರುಳ್ಳಿ ವಾಸನೆ ಹೋಗುವವರೆಗೂ ಮುಖ ತೊಳೆದುಕೊಳ್ಳಬೇಕು

ಒಂದು ವೇಳೆ ಮನೆಯಲ್ಲಿ ನಿಮಗೆ ಈರುಳ್ಳಿ ಜ್ಯೂಸ್ ತಯಾರುಮಾಡಲು ಸಾಧ್ಯವಿಲ್ಲದಿದ್ದರೆ ಸೂಪರ್ ಮಾರ್ಕೆಟ್ ಗಳಂತಹ ಅಂಗಡಿಗಳಿಂದಲೂ ಖರೀದಿ ಮಾಡಿ ತರಬಹುದು

ಒಂದು ದಿನಕ್ಕೆ ಎರಡರಿಂದ ಮೂರು ಬಾರಿ ಈ ಪ್ರಕ್ರಿಯೆ ಮುಂದುವರಿಸಿ

ಮೊಡವೆಗಳ ಕಲೆಗಳು ಅಥವಾ ಮಚ್ಚೆಗಳ ನಿವಾರಣೆಯಲ್ಲಿ ಈರುಳ್ಳಿಯ ಪಾತ್ರವೇನು?

ಈರುಳ್ಳಿ ಒಂದು ರೀತಿಯ ನೈಸರ್ಗಿಕ ಉತ್ಪನ್ನವಾಗಿರುವುದರಿಂದ ಇದರಲ್ಲಿ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ತನ್ನಲ್ಲಿನ ನೈಸರ್ಗಿಕ ಆಮ್ಲವನ್ನು ಮಚ್ಚೆಯ ಮೇಲೆ ಅನ್ವಯಿಸಿ ಕೇವಲ 21 ದಿನಗಳ ಒಳಗೆ ಮುಖದ ಮೇಲೆ ಮಚ್ಚೆಗಳ ಗುರುತು ಕೂಡ ಇಲ್ಲದಂತೆ ಮಾಡುತ್ತದೆ. ಕೇವಲ ಕೆಲವರಿಗೆ ಮಾತ್ರ ಈರುಳ್ಳಿ ರಸ ಚರ್ಮಕ್ಕೆ ಅಲರ್ಜಿ ಎಂದು ತೋರುತ್ತದೆ ಅಂತಹವರು ಬೇರೆ ಮನೆಮದ್ದುಗಳನ್ನು ಪ್ರಯತ್ನಿಸಬಹುದು.

13. ಹೂಕೋಸಿನ ಬಳಕೆ

13. ಹೂಕೋಸಿನ ಬಳಕೆ

ಬೇಕಾಗಿರುವ ಸಾಮಗ್ರಿಗಳು

ಹೂಕೋಸಿನ ಕೆಲವು ತುಂಡುಗಳು

ನೀವು ಮಾಡಬೇಕಾದದು ?

ಅಂಗಡಿಯಿಂದ ತಂದ ಹೂಕೋಸನ್ನು ಚೆನ್ನಾಗಿ ತೊಳೆದು ಅದರಿಂದ ರಸ ತೆಗೆದು ಒಂದು ಬಟ್ಟಲಿನಲ್ಲಿ ಶೇಖರಿಸಿ

ಮಚ್ಚೆಗಳು ಕಂಡು ಬರುವ ಜಾಗದಲ್ಲಿ ಈ ರಸವನ್ನು ಹಚ್ಚಿ ಸುಮಾರು 30 ನಿಮಿಷಗಳವರೆಗೆ ಹಾಗೆ ಬಿಟ್ಟು ನಂತರ ನೀರಿನಿಂದ ಮುಖ ತೊಳೆಯಿರಿ

ಪ್ರತಿದಿನವೂ ಈ ಅಭ್ಯಾಸವನ್ನು ಮುಂದುವರಿಸಿ ಕೇವಲ ಒಂದು ವಾರದ ಅಂತರದಲ್ಲಿ ಮುಖದ ಮೇಲಿನ ಯಾವುದೇ ಕಲೆಗಳು ಇಲ್ಲವಾಗುತ್ತವೆ

ಮಚ್ಚೆಗಳ ನಿವಾರಣೆಯಲ್ಲಿ ಹೂಕೋಸಿನ ಪಾತ್ರ

ಹೂಕೋಸಿನಲ್ಲಿ ಅಧಿಕ ಪ್ರಮಾಣದ ವಿಟಮಿನ್ ಸಿ ಅಂಶ ಕಂಡುಬಂದಿದ್ದು ಮಚ್ಚೆಗಳನ್ನು ಒದಗಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ

ಮಚ್ಚೆಗಳು ಉಂಟಾಗದಂತೆ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ ?

ಮಚ್ಚೆಗಳು ಉಂಟಾಗದಂತೆ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ ?

1. ಸೂರ್ಯನ ಬೆಳಕಿಗೆ ಮೈ ಒಡ್ಡದಿರುವುದು

ಹೆಚ್ಚು ಬಿಸಿಲಿನಲ್ಲಿ ಕೆಲಸ ಮಾಡುವವರಿಗೆ ಚರ್ಮದಲ್ಲಿ ಮೆಲನಿನ್ ಎಂಬ ಅಂಶ ಉತ್ಪತ್ತಿಯಾಗುತ್ತದೆ ಇದು ಮುಖದ ಮೇಲಿನ ಮಚ್ಚೆಗಳಿಗೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ. ಆದ್ದರಿಂದ ಸಾಧ್ಯವಾದಷ್ಟು ಬಿಸಿಲಿನಲ್ಲಿ ಅಡ್ಡಾಡಬಾರದು. ಅದರಲ್ಲೂ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಸೂರ್ಯನ ಅತಿನೇರಳೆ ಕಿರಣಗಳು ತುಂಬಾ ಹೆಚ್ಚಿನ ಪ್ರಭಾವವನ್ನು ಹೊಂದಿರುತ್ತವೆ. ಹಾಗಾಗಿ ಮನೆಯಿಂದ ಹೊರ ನಡೆದ ಸಂದರ್ಭದಲ್ಲಿ ಒಂದು ಟೋಪಿ ಧರಿಸಿ ಹೊರಟರೆ ಒಳ್ಳೆಯದು.

2. ಸನ್ಸ್ಕ್ರೀನ್ ಅಪ್ಲೈ ಮಾಡಿ

2. ಸನ್ಸ್ಕ್ರೀನ್ ಅಪ್ಲೈ ಮಾಡಿ

ಹೆಚ್ಚಿನ SPF ಮಟ್ಟ ಹೊಂದಿರುವ ಸನ್ ಸ್ಕ್ರೀನ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿ ಮನೆಯಿಂದ ಹೊರ ನಡೆಯಿರಿ. ನೀವು ಹಚ್ಚುವ ಸನ್ ಸ್ಕ್ರೀನ್ ಲೋಷನ್ ನಲ್ಲಿ SPF ಅಂಶ ಸುಮಾರು 20 ಇರಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಇದು ಕಾರ್ಸಿನೋಗೆನಿಕ್ ಅಲ್ಲದ ಉತ್ಪನ್ನವಾಗಿರಬೇಕು. ಮನೆಯಿಂದ ಹೊರ ನಡೆಯುವ ಮೊದಲು 30 ನಿಮಿಷಗಳಿಗಿಂತ ಮುಂಚೆ ಸನ್ಸ್ಕ್ರೀನ್ ಅಪ್ಲೈ ಮಾಡಿ. ಮನೆಯಿಂದ ಹೊರನಡೆದ ಮೇಲೂ ಸಹ ಪ್ರತಿ ಎರಡು ಗಂಟೆಗಳಿಗೊಮ್ಮೆ ಸನ್ಸ್ಕ್ರೀನ್ ಅಪ್ಲೈ ಮಾಡಬೇಕು. ಇದು ನಿಮಗೆ ನೆನಪಿರಬೇಕಾದ ಅಂಶ. ಏಕೆಂದರೆ ಯಾವುದೇ ಸನ್ಸ್ಕ್ರೀನ್ ಬಿಸಿಲಿನಲ್ಲಿ ಎರಡರಿಂದ ಮೂರು ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುವುದಿಲ್ಲ. ಹಾಗಾಗಿ ನಿಮ್ಮನ್ನು ನೀವು ತೀಕ್ಷ್ಣವಾದ ಬಿಸಿಲಿನ ಕಿರಣಗಳಿಂದ ರಕ್ಷಿಸಿಕೊಳ್ಳಲು ಆಗಾಗ ಸನ್ಸ್ಕ್ರೀನ್ ಅಪ್ಲೈ ಮಾಡುವುದು ಅವಶ್ಯಕ.

3. ನಿಮ್ಮ ಮಚ್ಚೆಗಳ ಬಗ್ಗೆ ಗಮನವಹಿಸಿ

3. ನಿಮ್ಮ ಮಚ್ಚೆಗಳ ಬಗ್ಗೆ ಗಮನವಹಿಸಿ

ಪ್ರತಿ ಒಂದು ತಿಂಗಳಿಗೊಮ್ಮೆ ನಿಮ್ಮ ಮುಖದ ಮೇಲಿನ ಮಚ್ಚೆಗಳ ಬಗ್ಗೆ ಹಾಗೂ ಅವುಗಳಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ನೀವು ಗಮನಿಸುತ್ತಿರಬೇಕು. ಯಾವುದೇ ಒಂದು ಸಣ್ಣ ಬದಲಾವಣೆ ನಿಮ್ಮ ಗಮನಕ್ಕೆ ಬಂದ ತಕ್ಷಣ ಒಂದು ವೇಳೆ ಅದು ನಿಮಗೆ ತೀರಾ ವಿಚಿತ್ರ ಎನಿಸಿದಲ್ಲಿ ನಿಮ್ಮ ಚರ್ಮರೋಗ ತಜ್ಞರನ್ನು ಭೇಟಿಯಾಗಿ ಮಾಹಿತಿ ತಿಳಿಸಿ. ಏಕೆಂದರೆ ಕೆಲವು ಮಚ್ಚೆಗಳು ಕ್ಯಾನ್ಸರ್ ರೋಗಕ್ಕೆ ತಿರುಗುವ ಸಾಧ್ಯತೆ ಇರುತ್ತದೆ. ಮಚ್ಚೆಗಳ ಬಣ್ಣ ಬೇರೆ ರೀತಿ ಬದಲಾಗುವುದು ಅವುಗಳ ಗಾತ್ರ ಮತ್ತು ಆಕಾರದ ಬಗ್ಗೆ ನೀವು ಗಮನವಹಿಸಬೇಕು.

4. ಎಸ್ಫೋಲಿಯೇಷನ್ ಪ್ರಕ್ರಿಯೆ

4. ಎಸ್ಫೋಲಿಯೇಷನ್ ಪ್ರಕ್ರಿಯೆ

ನಿಮ್ಮ ಚರ್ಮವನ್ನು ನಿತ್ಯ ನಿಯಮಿತವಾಗಿ ಎಸ್ಫೋಲಿಯೇಟ್ ಮಾಡುವುದರಿಂದ ಮಚ್ಚೆಗಳು ಮತ್ತೊಮ್ಮೆ ಮೂಡಿ ಬರುವುದನ್ನು ತಪ್ಪಿಸಬಹುದು. ಚರ್ಮದ ಮೇಲೆ ಅಲ್ಲಲ್ಲಿ ಸತ್ತ ಜೀವಕೋಶಗಳು ಒಂದೆಡೆ ಗುಂಪುಗೂಡಿ ಮಚ್ಚೆ ಉಂಟಾಗುವಂತೆ ಮಾಡುತ್ತದೆ. ಅದನ್ನು ಈ ಪ್ರಕ್ರಿಯೆಯಿಂದ ಅತ್ಯಂತ ಸರಳ ರೀತಿಯಲ್ಲಿ ತಪ್ಪಿಸಬಹುದು. ಇದರಿಂದ ನಿಮ್ಮ ಮುಖ ಕಾಂತಿಯುಕ್ತವಾಗಿರುತ್ತದೆ.

English summary

Natural Home Remedies For Mole Removal

Here we are discussing about Natural Home Remedies For Mole Removal. Effective Home Remedies For Mole Removal, get Rid Of Unwanted Moles With These Remedies Read more.
Story first published: Saturday, June 27, 2020, 17:37 [IST]
X
Desktop Bottom Promotion