For Quick Alerts
ALLOW NOTIFICATIONS  
For Daily Alerts

ಯಾವುದೇ ರಾಸಾಯನಿಕ ಇಲ್ಲದೇ ಮನೆಯಲ್ಲೇ ತಯಾರಿಸಿ ಸಕ್ಕರೆ ವ್ಯಾಕ್ಸಿಂಗ್

|

ಇದು ಅತ್ಯಂತ ಎಚ್ಚರಿಕೆ ವಹಿಸಬೇಕಾದ ಸಮಯ, ಕೋವಿಡ್ ಸೋಂಕಿನ ಮಹಾಮಾರಿ ಎಲ್ಲೆಡೆ ತನ್ನ ಕಬಂಧಬಾಹು ಚಾಚಿದೆ. ಇಂತಹ ಸಮಯದಲ್ಲಿ ತೀರಾ ಜಾಗ್ರತೆಯಿಂದ ನಮ್ಮ ಸುರಕ್ಷತೆ ಬಗ್ಗೆ ಗಮನಹರಿಸಬೇಕಿದೆ.

ಇನ್ನು ಹೆಣ್ಣು ಮಕ್ಕಳ ವಿಚಾರಕ್ಕೆ ಬಂದರೆ ಪ್ರತಿ ತಿಂಗಳು ಬ್ಯೂಟಿ ಪಾರ್ಲರ್‌ಗೆ ಹೋಗಿ ತಮ್ಮ ಸೌಂದರ್ಯದ ಕಾಳಜಿವಹಿಸುವವರು, ಇದೀಗ ಇದ್ದಕ್ಕಿಂದ್ದಂತೆ 2-3 ತಿಂಗಳು ಮನೆಯಲ್ಲೇ ತಮ್ಮ ಸೌಂದರ್ಯ ಕಾಳಜಿ ಮಾಡುವುದು ಕಷ್ಟಸಾಧ್ಯ. ಅಲ್ಲದೇ ಇದೀಗ ಲಾಕ್‌ಡೌನ್ ಸಡಿಲಿಕೆಯಾಗಿದ್ದರೂ, ಪಾರ್ಲರ್‌ಗಳು ತೆಗೆದಿದ್ದರೂ ಹೋಗಲು ಹೆದರುವವರ ಸಂಖ್ಯೆಯೇನೂ ಕಮ್ಮಿ ಇಲ್ಲ.

ಈ ಸಮಯದಲ್ಲಿ ಅನಗತ್ಯ ದೇಹದ ಕೂದಲನ್ನು ತೆಗೆದುಹಾಕುವ ಅತ್ಯುತ್ತಮ ಹಾಗೂ ಆರೋಗ್ಯಕರ ಮಾರ್ಗ ಯಾವುದು ಎಂದು ಎಲ್ಲರೂ ಯೋಚಿಸುತ್ತಾರೆ. ಇದಕ್ಕೆ ಬೆಸ್ಟ ಮಾರ್ಗ ವ್ಯಾಕ್ಸಿಂಗ್.

ಜನರು ತಮ್ಮ ಚರ್ಮದ ಕಾಳಜಿಗೆ ರಾಸಾಯನಿಕ ಮಾರ್ಗದ ಬದಲು ನೈಸರ್ಗಿಕ ಮನೆಮದ್ದುಗಳನ್ನು ಪ್ರಯತ್ನಿಸಲು ಇಚ್ಚಿಸುತ್ತಾರೆ. ತಮ್ಮ ದೈನಂದಿನ ಸೌಂದರ್ಯ ಕಾಳಜಿಗೆ ನೈಸರ್ಗಿಕ ಮಾರ್ಗಗಳನ್ನು ಹುಡುಕುತ್ತಾರೆ. ಈ ಲೇಖನದಲ್ಲಿ ಮನೆಯಲ್ಲೇ ಸುಲಭವಾಗಿ ಮನೆಮದ್ದುಗಳನ್ನು ಬಳಸಿ ಅಗ್ಗವಾಗಿ ಸಕ್ಕರೆ ವ್ಯಾಕ್ಸಿಂಗ್ ತಯಾರಿಸಿ ಮಾಡುವ ಉತ್ತಮ ಸಲಹೆಗಳನ್ನು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

ಮನೆಯಲ್ಲೇ ನೈಸರ್ಗಿಕ ಸಕ್ಕರೆ ವ್ಯಾಕ್ಸಿಂಗ್ ತಯಾರಿಸಲು ಬೇಕಾಗುವ ಪದಾರ್ಥಗಳು

ಮನೆಯಲ್ಲೇ ನೈಸರ್ಗಿಕ ಸಕ್ಕರೆ ವ್ಯಾಕ್ಸಿಂಗ್ ತಯಾರಿಸಲು ಬೇಕಾಗುವ ಪದಾರ್ಥಗಳು

1/4 ಕಪ್ ನೀರು

1/4 ಕಪ್ ನಿಂಬೆ ರಸ

2 ಕಪ್ ಸಕ್ಕರೆ (ಬಿಳಿ ಸಕ್ಕರೆ ಬಳಸುವುದು ಉತ್ತಮ)

ಅಗಲವಾದ ಪಾತ್ರೆ

ಮುಚ್ಚಳವನ್ನು ಹೊಂದಿರುವ ದೊಡ್ಡ ಗಾಜಿನ ಜಾರ್. ಪ್ಲಾಸ್ಟಿಕ್ ಜಾರ್ ಅನ್ನು ಬಳಸಬೇಡಿ.

ಹಳೆಯ ಟಿ-ಶರ್ಟ್‌ ಅಥವಾ ಜೀನ್ಸ್ ನಿಂದ ಕತ್ತರಿಸಿದ ವ್ಯಾಕ್ಸಿಂಗ್ ಸ್ಟ್ರಿಪ್ಸ್ (ಅಂಗಡಿಯಲ್ಲೂ ಪ್ರತ್ಯೇಕ ಸ್ಟ್ರಿಪ್ಸ್ ದೊರೆಯುತ್ತದೆ)

ಪಾಪ್ಸಿಕಲ್ ಸ್ಟಿಕ್ಗಳು ​, ಚಮಚ ಅಥವಾ ಪ್ಲಾಸ್ಟಿಕ್ ಸ್ಪಾಟುಲಾ

ತಯಾರಿಸುವ ವಿಧಾನ

ತಯಾರಿಸುವ ವಿಧಾನ

* ನೀರು, ಸಕ್ಕರೆ ಮತ್ತು ನಿಂಬೆ ರಸವನ್ನು ದೊಡ್ಡ ಪಾತ್ರೆಯಲ್ಲಿ ಸೇರಿಸಿ ಒಲೆಯ ಮೇಲೆ ಇರಿಸಿ. (ಮಧ್ಯಮ ಗಾತ್ರದಲ್ಲಿ ಗ್ಯಾಸ್ ಇಡಿ)

* ನಿರಂತರವಾಗಿ ಕಲಸಿ, ಗಂಟು ಕಟ್ಟದಂತೆ ಎಚ್ಚರವಹಿಸಿ. ಸಕ್ಕರೆ ಬಹಳ ಸುಲಭವಾಗಿ ಕರಗುತ್ತದೆ ಮತ್ತು ಕಲಸದಿದ್ದರೆ ಇಡೀ ಮಿಶ್ರಣವು ಹಾಳಾಗುತ್ತದೆ. ಮರದ ಅಥವಾ ದೊಡ್ಡ ಲೋಹದ ಚಮಚವನ್ನೇ ಬಳಸಿ.

* ಮಿಶ್ರಣವು ಗುಳ್ಳೆ ಬರುವಂತೆ ಮತ್ತು ಕುದಿಯಲು ಪ್ರಾರಂಭವಾಗುವವರೆಗೆ ಬೆರೆಸಿ. ಈ ಸಮಯದಲ್ಲಿ ಗ್ಯಾಸ್ ಉರಿಯನ್ನು ಕಡಿಮೆ ಮಾಡಿ ಮತ್ತು ಕಲಸುವುದನ್ನು ಮಾತ್ರ ನಿಲ್ಲಿಸಬೇಡಿ!

ಮಿಶ್ರಣ ಮಾಡುವಾಗ ಎಚ್ಚರ!

ಮಿಶ್ರಣ ಮಾಡುವಾಗ ಎಚ್ಚರ!

* ಮಿಶ್ರಣವು ಕಂದು ಬಣ್ಣಕ್ಕೆ ತಲುಪುವವರೆಗೆ ಬೆರೆಸಿ. ನೀವು ಕಂದು ಸಕ್ಕರೆಯನ್ನು ಬಳಸಿದ್ದರೆ ಮತ್ತು ಮೇಣವು ಸಿದ್ಧವಾಗಿದೆಯೆ ಎಂದು ಹೇಳಲು ಕಷ್ಟಸಾಧ್ಯವಾಗುತ್ತದೆ. ಮಿಶ್ರಣವು ಗಾಢ ಕಂದು ಬಣ್ಣಕ್ಕೆ ಬರಬೇಕು ಮತ್ತು ಸಿರಪ್ ರೀತಿ ಇರಬೇಕು.

* ಗ್ಯಾಸ್ ಆಫ್ ಮಾಡಿದ ತಕ್ಷಣವೇ ಮಿಶ್ರಣವನ್ನು ನಿಧಾನವಾಗಿ ಗಾಜಿನ ಜಾರ್‌ನಲ್ಲಿ ಸುರಿಯಿರಿ. ನಿಮಗೆ ಸುಡದಂತೆ ಎಚ್ಚರಿಕೆ ವಹಿಸಿ.

* ಜಾರ್ ಅನ್ನು ಪಕ್ಕಕ್ಕೆ ಇರಿಸಿ ಮತ್ತು ತಣ್ಣಗಾಗಲು ಬಿಡಿ. ತಣ್ಣಗಾಗುವ ಮೊದಲೇ ಮೇಣವನ್ನು ಬಳಸಿದರೆ ಸುಟ್ಟ ಗಾಯಗಳಾಗಬಹುದು, ಆದ್ದರಿಂದ ಅದನ್ನು ಸುಮಾರು ಒಂದು ಗಂಟೆ ಬಿಟ್ಟು ನಂತರ ಬಳಸಿ.

ವ್ಯಾಕ್ಸ್ ಹಚ್ಚುವ ವಿಧಾನ ಹೇಗೆ

ವ್ಯಾಕ್ಸ್ ಹಚ್ಚುವ ವಿಧಾನ ಹೇಗೆ

* ಮೇಣವು ಬೆಚ್ಚಗಿನ ತಾಪಮಾನಕ್ಕೆ ತಣ್ಣಗಾದ ನಂತರ, ಪ್ಲಾಸ್ಟಿಕ್ ಸ್ಪಾಟುಲಾ ಅಥವಾ ಪಾಪ್ಸಿಕಲ್ ಸ್ಟಿಕ್ ಬಳಸಿ ನಿಮ್ಮ ಚರ್ಮಕ್ಕೆ ಹಚ್ಚಿ. ನಿಮ್ಮ ಕೂದಲಿನ ಬೆಳವಣಿಗೆಯ ದಿಕ್ಕಿನಲ್ಲೇ ಮೇಣವನ್ನು ಅನ್ವಯಿಸಲು ಮರೆಯದಿರಿ.

* ಟಿ-ಶರ್ಟ್ ಅಥವಾ ವ್ಯಾಕ್ಸ್ ತೆಗೆಯುವ ಸ್ಟ್ರಿಪ್ಸ್ ಗಳನ್ನು ಬಳಸಿ ನಿಮ್ಮ ಚರ್ಮದ ಮೇಲೆ ಗಟ್ಟಿಯಾಗಿ ಒತ್ತಿಡ ಇಡಿ. ಸುಮಾರು 30 ಸೆಕೆಂಡುಗಳ ಕಾಲ ಹಾಗೇ ಇರಿ.

* ನಿಮ್ಮ ಚರ್ಮವನ್ನು ನಿಮ್ಮ ಇನ್ನೊಂದು ಕೈಯಿಂದ ನಿಧಾನವಾಗಿ ಎಳೆಯಿರಿ, ನಿಮ್ಮ ಕೂದಲಿನ ಬೆಳವಣಿಗೆಯ ವಿರುದ್ಧ ದಿಕ್ಕಿನಲ್ಲಿ ಸ್ಟ್ರಿಪ್ ಅನ್ನು ತ್ವರಿತವಾಗಿ ಎಳೆಯಿರಿ. ಇದನ್ನು ಸರಿಯಾಗಿ ಮಾಡಿದರೆ, ನೀವು ಮೇಣದ ಪಟ್ಟಿಯ ಮೇಲೆ ಸಣ್ಣ ಕೂದಲನ್ನು ನೋಡಬೇಕು.

ವ್ಯಾಕ್ಸಿಂಗ್ ನಂತರ ಹೀಗೆ ಮಾಡದಿರಿ

ವ್ಯಾಕ್ಸಿಂಗ್ ನಂತರ ಹೀಗೆ ಮಾಡದಿರಿ

* ಇದೇ ರೀತಿ ಕೂದಲು ಪೂರ್ಣವಾಗಿ ಹೋಗುವವರೆಗೂ ವ್ಯಾಕ್ಸಿಂಗ್ ಮುಂದುವರಿಸಿ.

* ಅಂತಿಮವಾಗಿ ತಣ್ಣನೆಯ ನೀರು ಅಥವಾ ಐಸ್ ಕ್ಯೂಬ್‌ನಿಂದ ತ್ವಚೆಯನ್ನು ನಿಧಾನವಾಗಿ ಮಸಾಜ್‌ ಮಾಡಿ, ನಿಮಗೆ ಹೊಂದುವಂಥ ಬಾಡಿ ಲೋಷನ್ ಹಚ್ಚಿ.

* ವ್ಯಾಕ್ಸಿಂಗ್‌ ನಂತರ ಯಾವುದೇ ಕಾರಣಕ್ಕೂ ಬಿಸಿ ನೀರಿನ ಸ್ನಾನ ಅಥವಾ ಬಿಸಿಲಿಗೆ ಮೈ ಒಡ್ಡುವುದು ಅಪಾಯಕಾರಿ.

English summary

How To Prepare Homemade Sugar Wax

Here we are discussing about easily how To Prepare Homemade Sugar Wax. Sugar waxing is a great alternative to those who want to make an inexpensive and all-natural solution at home with ingredients that are found in almost any cabinet!. Read more.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X