For Quick Alerts
ALLOW NOTIFICATIONS  
For Daily Alerts

ಆರೋಗ್ಯಕರ ಉಗುರನ್ನು ಬೆಳೆಸಲು ಈ ಟಿಪ್ಸ್‌ ಫಾಲೋ ಮಾಡಿ

|

ಉಗುರುಗಳು ಆಕರ್ಷಕವಾಗಿ ಕಾಣಲು ಪಾರ್ಲರ್‌ಗೆ ಹೋಗಿಯೇ ಅಂದಗೊಳಿಸಬೇಕು ಎಂದೇನಿಲ್ಲ. ನೆನಪಿರಲಿ ಪಾರ್ಲರ್‌ಗಳಲ್ಲಿ ಹೆಚ್ಚು ಮೆನಿಕ್ಯೂರ್‌ ಮಾಡಿಸಿದಷ್ಟು ಉಗುರುಗಳೂ ಇನ್ನೂ ಹಾನಿಯಾಗುವ ಸಾಧ್ಯತೆಯೇ ಹೆಚ್ಚು. ಹಾಗಾದರೆ ಉಗುರಿನ ಕಾಳಜಿ ಹೇಗೆ ಮಾಡಬೇಕು?.

ನಿಮಗೆ ಆರೋಗ್ಯಕರವಾದ ಹಾಗೂ ಆಕರ್ಷಕವಾದ ಉಗುರನ್ನು ಪಡೆಯಲು ಕೆಲವು ಕಾಳಜಿಯ ಅಗತ್ಯವಿದೆ. ನೀವು ಉಗುರುಗಳನ್ನು ಹೀಗೆ ಆರೈಕೆ ಮಾಡಿದ್ದೇ ಆದರೆ, ಆರೋಗ್ಯಕರವಾದ ಹಾಗೂ ಬಲವಾದ ಉಗುರುಗಳನ್ನು ಹೊಂದಬಹುದು:

1. ಕೈಗವಸುಗಳನ್ನು ಧರಿಸಿ

1. ಕೈಗವಸುಗಳನ್ನು ಧರಿಸಿ

ನಾವು ನಮ್ಮ ಉಗುರುಗಳನ್ನು ಅತಿಯಾದ ನೀರು ಅಥವಾ ಹಾನಿಕಾರಕ ರಾಸಾಯನಿಕಗಳಿಗೆ ಒಡ್ಡಿದಾಗ ಉಗುರುಗಳು ಬಹಳ ದುರ್ಬಲವಾಗಿರುತ್ತವೆ ಮತ್ತು ಸುಲಭವಾಗಿ ಗಾಯಗಳಾಗುವ ಸಾಧ್ಯತೆ ಇದೆ. ಸಾಬೂನು ಮತ್ತು ಸ್ಪ್ರೇಗಳ ಬಳಕೆಯನ್ನು ಒಳಗೊಂಡಿರುವ ಪಾತ್ರೆಗಳನ್ನು ತೊಳೆಯುವಾಗ ಅಥವಾ ಮನೆಯ ಧೂಳು ತೆಗೆಯುವಾಗ ನಾವು ಕೈಗವಸುಗಳನ್ನು ಕಡ್ಡಾಯವಾಗಿ ಧರಿಸಬೇಕು. ಕೈಗವಸುಗಳನ್ನು ಧರಿಸುವುದರಿಂದ ನಮ್ಮ ಕೈಗಳು ಮತ್ತು ಉಗುರುಗಳು ಹಾನಿಕಾರಕ ರಾಸಾಯನಿಕಗಳು ಮತ್ತು ಅನಗತ್ಯವಾಗಿ ನೀರಿಗೆ ಒಡ್ಡಿಕೊಳ್ಳುವುದರಿಂದ ರಕ್ಷಿಸುತ್ತದೆ. ಇದು ಉಗುರಗಳನ್ನು ಹಾನಿಮಾಡದಂತೆ ತಡೆಯುತ್ತದೆ.

2. ಉಗುರುಗಳನ್ನು ತುಂಬಾ ಉದ್ದವಾಗಿ ಬಿಡಬೇಡಿ

2. ಉಗುರುಗಳನ್ನು ತುಂಬಾ ಉದ್ದವಾಗಿ ಬಿಡಬೇಡಿ

ಉದ್ದವಾದ ಉಗುರುಗಳಿಗೆ ಹೋಲಿಸಿದರೆ ಯಾವಾಗಲೂ ಚಿಕ್ಕ ಉಗುರುಗಳನ್ನು ಹೊಂದಿರುವುದು ಉತ್ತಮ. ಚಿಕ್ಕ ಉಗುರುಗಳಿಗೆ ಕಡಿಮೆ ನಿರ್ವಹಣೆಯ ಅಗತ್ಯವಿರುತ್ತದೆ ಏಕೆಂದರೆ ಅವುಗಳನ್ನು ಸ್ವಚ್ಛಗೊಳಿಸಲು ತುಂಬಾ ಸುಲಭ. ಸಣ್ಣ ಉಗುರುಗಳ ಅಡಿಯಲ್ಲಿ ಕೊಳಕು ಸಂಗ್ರಹವಾಗುವ ಸಾಧ್ಯತೆ ಕಡಿಮೆ ಹಾಗೂ ಆದರೆ ಅದನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಸಣ್ಣ ಉಗುರುಗಳು ಬೇಗ ಮುರಿಯುವುದಿಲ್ಲ ಮತ್ತು ಅಚ್ಚುಕಟ್ಟಾಗಿ ಕಾಣುತ್ತವೆ.

3. ಕೃತಕ ಉಗುರುಗಳನ್ನು ತಪ್ಪಿಸಿ

3. ಕೃತಕ ಉಗುರುಗಳನ್ನು ತಪ್ಪಿಸಿ

ಕೃತಕ ಉಗುರುಗಳನ್ನು ಹಾಕಿಕೊಂಡು ಆಕರ್ಷಕವಾಗಿ ಕಾಣುವ ಪ್ರವೃತ್ತಿ ಇತ್ತೀಚಿನ ಟ್ರೆಂಡ್‌ ಆಗಿದೆ. ಆದರೆ ಇದು ಕೆಲವು ಅನಾನುಕೂಲತೆಯನ್ನು ಸಹ ಹೊಂದಿದೆ. ಅಂಟಿಕೊಳ್ಳುವ ವಿಧಾನ ಮತ್ತು ಅಂಟು ಬಳಕೆಯಿಂದಾಗಿ ಅವು ಉಗುರುಗಳನ್ನು ದುರ್ಬಲಗೊಳಿಸುವುದಲ್ಲದೆ, ಕೃತಕ ಉಗುರು ಹೆಚ್ಚು ಸಮಯ ಇರುವುದರಿಂದ ಅವುಗಳ ಅಡಿಯಲ್ಲಿರುವ ಕೊಳಕು ಬ್ಯಾಕ್ಟೀರಿಯಾದ ಸೋಂಕುಗಳ ಸಂತಾನೋತ್ಪತ್ತಿಗೆ ಕಾರಣವಾಗಬಹುದು.

4. ಉತ್ತಮ ಆಹಾರ ಸೇವಿಸಿ

4. ಉತ್ತಮ ಆಹಾರ ಸೇವಿಸಿ

ಆರೋಗ್ಯಕರ ಆಹಾರವು ಇಡೀ ದೇಹಕ್ಕೆ ಮಾತ್ರವಲ್ಲದೆ ಆರೋಗ್ಯಕರ ಉಗುರುಗಳಿಗೂ ಸಹ ಅಗತ್ಯವಾಗಿದೆ. ಬಲವಾದ ಉಗುರುಗಳ ಬೆಳವಣಿಗೆಗೆ ಜೀವಸತ್ವಗಳು, ಖನಿಜಗಳು ಮತ್ತು ಪ್ರೋಟೀನ್‌ಗಳ ನೈಸರ್ಗಿಕ ಮೂಲಗಳ ಅಗತ್ಯವಿದೆ. ದುರ್ಬಲ ಉಗುರುಗಳನ್ನು ಹೊಂದಿದ್ದರೆ, ನಿಮ್ಮ ವೈದ್ಯರನ್ನು ಸಂಪರ್ಕಿಸಿದ ನಂತರ ಅವರು ಬಯೋಟಿನ್ ನಂತಹ ಪೂರಕಗಳನ್ನು ನೀಡಬಹುದು.

5. ಹೆಚ್ಚು ನೀರು ಕುಡಿಯಿರಿ

5. ಹೆಚ್ಚು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯುವುದರಿಂದ ಉಗುರುಗಳು ತೇವಾಂಶವನ್ನು ಉಳಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದು ಉಗುರುಗಳು ಒಡೆಯುವಿಕೆ ಮತ್ತು ಸಿಪ್ಪೆಸುಲಿಯುವುದನ್ನು ತಡೆಯುತ್ತದೆ. ಉಗುರು ಇತರೆ ಯಾವುದೇ ಬಣ್ಣಕ್ಕೆ ತಿರುಗದೆ ಆಕರ್ಷಕವಾಗಿ ಬೆಳಯುತ್ತದೆ.

6. ಹ್ಯಾಂಡ್ ಸ್ಯಾನಿಟೈಜರ್ ತಪ್ಪಿಸಿ

6. ಹ್ಯಾಂಡ್ ಸ್ಯಾನಿಟೈಜರ್ ತಪ್ಪಿಸಿ

ಸಾಂಕ್ರಾಮಿಕ ರೋಗದ ಭಯ ಮತ್ತು ಸ್ವಚ್ಛತೆಯ ಕಾಳಜಿಯಿಂದ ಹಲವರು ಬಹಳಷ್ಟು ಹ್ಯಾಂಡ್ ಸ್ಯಾನಿಟೈಜರ್ ಅನ್ನು ಬಳಸುತ್ತಿದ್ದಾರೆ, ಅವುಗಳು

ಚರ್ಮಕ್ಕೆ ಮತ್ತು ಉಗುರುಗಳಿಗೆ ತುಂಬಾ ಹಾನಿಕಾರಕ. ಸೋಪು ಮತ್ತು ನೀರಿನಿಂದ ಕೈಗಳನ್ನು ತೊಳೆಯಲು ಪ್ರಯತ್ನಿಸಿ. ಅಲ್ಲದೆ, ನೀವು ಸ್ಯಾನಿಟೈಜರ್ ಅನ್ನು ಬಳಸುವುದೇ ಅದರೆ ಸ್ಯಾನಿಟೈಸರ್ ಉಗುರುಗಳ ಮೇಲೆ ಬೀಳದಂತೆ ತಪ್ಪಿಸಲು ಪ್ರಯತ್ನಿಸಿ.

English summary

How to get healthy nails in kannada

Here we are discussing about How to get healthy nails in kannada. Healthy nails are a reflection of how we up keep ourselves. Healthy nails do not always require expensive manicures or pedicures. Read more.
Story first published: Wednesday, December 7, 2022, 12:05 [IST]
X
Desktop Bottom Promotion