For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ಕಂಕುಳಡಿ ಬೆವರುವುದನ್ನ ತಡೆಯಲು ಇಲ್ಲಿವೆ ಟಿಪ್ಸ್

|

ಅಂಡರ್ ಆರ್ಮ್ ಬೆವರುವುದು ತುಂಬಾ ಸಾಮಾನ್ಯವಾಗಿದೆ. ನಮ್ಮ ದೇಹ ಉಷ್ಣತೆ ಅನುಭವಿಸಿದಾಗ ಬೆವರುವಿಕೆ ಸಂಭವಿಸುತ್ತದೆ. ಆದರೆ, ಗ್ರಂಥಿಗಳು ಅಧಿಕವಾಗಿರುವ ಕಾರಣ ಅಂಡರ್ ಆರ್ಮ್ ಗಳಲ್ಲಿ ಬೆವರಿನ ವಾಸನೆ ತುಂಬಾ ಹೆಚ್ಚಾಗಿರುತ್ತದೆ. ಇದರಿಂದ ಹಲವು ಬಾರಿ ಮುಜುಗರಕ್ಕೆ ಒಳಗಾಗುವುದು ಇದೆ. ಜೊತೆಗೆ ನಮ್ಮಿಷ್ಟದ ಬಟ್ಟೆಯನ್ನು ಧರಿಸುವಂತಿಲ್ಲ. ಅದಕ್ಕಾಗಿ ನಾವಿಂದು ಕಂಕುಳಡಿ ಬೆವರುವಿಕೆಯನ್ನು ಕಡಿಮೆ ಮಾಡಲು ಕೆಲವೊಂದು ಸಲಹೆಗಳನ್ನು ನೀಡಲಿದ್ದೇವೆ.

ಕಂಕುಳಡಿ ಬೆವರುವುದನ್ನು ಕಡಿಮೆ ಮಾಡಲು ಟಿಪ್ಸ್ ಗಳನ್ನು ಈ ಕೆಳಗೆ ನೀಡಲಾಗಿದೆ :

ಆಪಲ್ ಸೈಡರ್ ವಿನೆಗರ್ :

ಆಪಲ್ ಸೈಡರ್ ವಿನೆಗರ್ :

ಸ್ನಾನ ಮಾಡುವ ಮೊದಲು, ಪ್ರತಿದಿನ ಆಪಲ್ ಸೈಡರ್ ವಿನೆಗರ್ ಅನ್ನು ನಿಮ್ಮ ಕಂಕುಳಡಿ ಹಚ್ಚಿ, 30 ನಿಮಿಷಗಳ ಕಾಲ ಬಿಡಿ. ನಂತರ ಸೌಮ್ಯವಾದ ಸೋಪಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ, ರಾತ್ರಿ ಮಲಗುವ ಮುನ್ನ ಇದನ್ನು ಹಚ್ಚಿ, ಬೆಳಗ್ಗೆ ತೊಳೆದರೆ ಉತ್ತಮ. ಹೀಗೆ ಮಾಡುವುದರಿಂದ ಕಂಕುಳಡಿ ಬೆವರುವುದು ಕಡಿಮೆಯಾಗುವುದು.

ಟೀ ಟ್ರೀ ಆಯಿಲ್ :

ಟೀ ಟ್ರೀ ಆಯಿಲ್ :

ಟೀ ಟ್ರೀ ಆಯಿಲ್ ಅಂಡರ್ ಆರ್ಮ್‌ನಲ್ಲಿ ವಾಸನೆಯನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಟೀ ಟ್ರೀ ಎಣ್ಣೆಯ ಕೆಲವು ಹನಿಗಳನ್ನು ನೀರಿನಲ್ಲಿ ಬೆರೆಸಿ, ಅದನ್ನು ಸ್ಪ್ರೇ ಬಾಟಲಿಗೆ ಹಾಕಿ. ಸ್ನಾನ ಮಾಡುವ ಮೊದಲು ಅದನ್ನು ಅಂಡರ್ ಆರ್ಮ್‌ge ಸ್ಪ್ರೇ ಮಾಡಿ. ಸ್ವಲ್ಪ ಸಮಯದ ಬಳಿಕ ಸ್ನಾನ ಮಾಡುವುದರಿಂದಲೂ, ಬೆವರುವಿಕೆ ಹಾಗೂ ದುರ್ವಾಸನೆ ಹತೋಟಿಗೆ ಬರುವುದು.

ಅಡುಗೆ ಸೋಡಾ :

ಅಡುಗೆ ಸೋಡಾ :

ಅಡುಗೆ ಸೋಡಾ ಮತ್ತು ನೀರನ್ನು ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಕಂಕುಳಡಿ ಹಚ್ಚಿ 30 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ. ಕೆಲವು ದಿನಗಳವರೆಗೆ ಅನ್ವಯಿಸಿದ ನಂತರ, ನಿಮ್ಮ ಚರ್ಮವು ಒಣಗಲು ಪ್ರಾರಂಭಿಸುತ್ತದೆ. ಜೊತೆಗೆ ಬೆವರುವುದು ನಿಲ್ಲುತ್ತದೆ.

ಬೇವಿನಲೆ :

ಬೇವಿನಲೆ :

ಬ್ಯಾಕ್ಟೀರಿಯಾ ವಿರೋಧಿ ಗುಣಗಳ ಜೊತೆಗೆ ದೇಹದ ದುರ್ವಾಸನೆ ಹೋಗಲಾಡಿಸುವ ಶಕ್ತಿಯೂ ಬೇವಿಗೆ ಇದೆ. ಕೆಲವು ಕಹಿ ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ನಂತರ, ಆ ನೀರಿನಲ್ಲಿ ಟವೆಲ್ ಅದ್ದಿ ಕಂಕುಳಡಿ ಇಡಿ. ಸ್ವಲ್ಪ ಸಮಯದ ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಕಂಕುಳಡಿ ಇರುವ ಬ್ಯಾಕ್ಟೀರಿಯಾ ನಿವಾರಣೆಯಾಗಿ ಬೆವರಿನ ಜೊತೆಗೆ ದುರ್ವಾಸನೆಯು ಕಡಿಮೆಯಾಗುತ್ತದೆ.

ನಿಂಬೆಹಣ್ಣು :

ನಿಂಬೆಹಣ್ಣು :

ನಿಂಬೆಹಣ್ಣಿನಿಂದ, ಕಂಕುಳಡಿ ಬೆವರುವಿಕೆಯನ್ನು ಯಶಸ್ವಿಯಾಗಿ ನಿಲ್ಲಿಸಬಹುದು ಜೊತೆಗೆ ನಿಮ್ಮ ಕಪ್ಪಾಗಿರುವ ಕಂಕುಳಿನ ಬಣ್ಣವನ್ನು ಮರಳಿ ಪಡೆಯಬಹುದು. ಅದಕ್ಕೆ ನೀವು ಮಾಡಬೇಕಾಗಿರುವುದು ನಿಂಬೆ ಹಣ್ಣನ್ನು ಕತ್ತರಿಸಿ, ಅದನ್ನು ಅಂಡರ್ ಆರ್ಮ್ ಗೆ ಹಚ್ಚಿ, ಮಸಾಜ್ ಮಾಡಿ ಸ್ವಲ್ಪ ಸಮಯದ ಬಳಿಕ ನೀರಿಂದ ತೊಳೆಯಿರಿ.

ಗಮನಿಸಿ : ನೀವು ಹೆಚ್ಚು ಬೆವರುತ್ತಿದ್ದರೆ, ಮಸಾಲೆಯುಕ್ತ ಆಹಾರವನ್ನು ಸೇವಿಸಬೇಡಿ. ಕೆಂಪು ಮೆಣಸಿನಕಾಯಿ ಮತ್ತು ಕ್ಯಾಪ್ಸಿಕಂ ಎಲೆಗಳನ್ನು ತಿನ್ನಬೇಡಿ.

English summary

Easy Ways to Stop your Underarm Sweating in Kannada

Here we talking about Easy ways to stop your underarm sweating in kannada, read on
Story first published: Monday, April 4, 2022, 10:52 [IST]
X
Desktop Bottom Promotion