For Quick Alerts
ALLOW NOTIFICATIONS  
For Daily Alerts

ಕಲೆಗಳನ್ನು ನೈಸರ್ಗಿಕವಾಗಿ ಹೋಗಲಾಡಿಸುವ ಪರಿಣಾಮಕಾರಿ ವಿಧಾನಗಳು

|

ಚರ್ಮದ ಮೇಲೆ ಉಂಟಾಗುವ ಗಾಯದ ಗುರುತನ್ನು ನೈಸರ್ಗಿಕವಾಗಿ ಮನೆಮದ್ದಿನಿಂದ ಕೂಡ ಗುಣಪಡಿಸ ಬಹುದು. ಮೊಡವೆ, ಸುಟ್ಟಗಾಯ, ಕೊಯ್ಯುವುದು ಅಥವಾ ಇನ್ಯಾವುದೇ ರೀತಿಯ ಗಾಯಗಳಾದಾಗ ಮನೆ ಮದ್ದುಗಳನ್ನು ಬಳಸಿ ಸಂಪೂರ್ಣ ಗುಣಪಡಿಸಬಹುದು.ಗಾಯಗಳನ್ನು ಹೋಗಲಾಡಿಸಲು ಸಾಕಷ್ಟು ಮದ್ದುಗಳು ಇವೆ.ಹಳೆಯ ಗಾಯದ ಗುರುತನ್ನು ಹೋಗಲಾಡಿಸುವುದು ಕಷ್ಟವಾದರೂ ಕೂಡ ಕೆಲವು ಎಣ್ಣೆಯನ್ನು ಬಳಸಿ ಕೂಡ ಹಳೆಯ ಗಾಯದ ಗುರುತನ್ನು ಸ್ವಲ್ಪ ಕಡಿಮೆ ಮಾಡಲು ಪ್ರಯತ್ನಿಸಬಹುದು.

ಗಾಯದ ಗುರುತನ್ನು ಹೋಗಲಾಡಿಸಲು ಹೀಲಿಂಗ್ ಆಯಿಲ್ ಅನ್ನು ಬಳಸುವುದರಿಂದ ಚರ್ಮದಲ್ಲಿ ತೇವಾಂಶವನ್ನು ಹೆಚ್ಚಿಸಿ ಚರ್ಮದ ಅಂಗಾಂಶವನ್ನು ಬದಲಾಯಿಸುತ್ತದೆ.ಗಾಯದ ಗುರುತನ್ನು ಹೋಗಲಾಡಿಸುವ ಮುಖ್ಯ ಎಣ್ಣೆಗಳೆಂದರೆ ಕೊಬ್ಬರಿ ಎಣ್ಣೆ,ಗುಲಾಬಿ ಎಣ್ಣೆ, ವಿಟಮಿನ್ ಇ ಮತ್ತು ವಿಟಮಿನ್ ಸಿ ಎಣ್ಣೆಗಳು.ಗಾಯದ ಗುರುತನ್ನು ಪರಿಣಾಮಕಾರಿಯಾಗಿ ಹೋಗಲಾಡಿಸಲು ಎಸ್ಸೆನ್ಶಿಯಲ್ ಎಣ್ಣೆಯನ್ನು ಕೂಡ ಬಳಸಬಹುದು. ಈ ಕೆಳಗೆ ನೀಡಲಾಗಿರುವ ಮಾಹಿತಿಯಲ್ಲಿ ಗಾಯವನ್ನು ಸರಿಯಾಗಿ ಹೋಗಲಾಡಿಸಲು ಅಥವಾ ಅದರಿಂದಾಗುವ ಗುರುತನ್ನು ಕಡಿಮೆ ಮಾಡಲು ಕೆಲವು ವಿಧಾನಗಳನ್ನು ನೀಡಲಾಗಿದೆ.ನೈಸರ್ಗಿಕ ಚಿಕಿತ್ಸೆಯಲ್ಲಿರುವ ವೈಜ್ಞಾನಿಕ ಕಾರಣಗಳನ್ನು ಕೂಡ ನೀವಿಲ್ಲಿ ತಿಳಿಯಬಹುದು.

ಗಾಯದ ಗುರುತುಗಳಾಗಲು ಕಾರಣಗಳು

ಗಾಯದ ಗುರುತುಗಳಾಗಲು ಕಾರಣಗಳು

ಗಾಯಗಳಾದಾಗ ಹಳೆಯ ಚರ್ಮ ಹಾನಿಗೊಳಗಾಗಿ ಹೊಸ ಚರ್ಮ ಬರುವುದರಿಂದ ಕಲೆ ಉಂಟಾಗುತ್ತದೆ.ಆದ್ದರಿಂದಲೇ ಸುಟ್ಟಗಾಯ,ಮೊಡವೆಗಳು, ಆಳವಾದ ಹರಿತದಿಂದಾಗಿ ಗಾಯದ ಗುರುತು ನಿಲ್ಲುತ್ತದೆ.ಅಮೆರಿಕಾದ ಚರ್ಮಶಾಸ್ತ್ರ ಪತ್ರಿಕೆ ಪ್ರಕಾರ ಗಾಯಗಳ ಮೇಲೆ ಕಂಡುಬರುವ ಹೊಸ ಕಾಲಜನ್ ಫೈಬರ್ ಗಳು ಗಾಯದ ಕಲೆ ಉಂಟು ಮಾಡುತ್ತದೆ.ಚರ್ಮದ ಮೇಲೆ ಈ ಗಾಯದ ಕಲೆಗಳು ವಿವಿಧ ಆಕಾರ ಮತ್ತು ಗಾತ್ರದಲ್ಲಿ ಉಂಟಾಗಬಹುದು.ಕೆಲವು ಗಾಯದ ಗುರುತುಗಳು ಫ್ಲಾಟ್ ಆಗಿ ತೆಳುವಾಗಿದ್ದರೆ ಇನ್ನು ಕೆಲವು ಕೆಂಪಾಗಿ ಉಬ್ಬಿರುತ್ತದೆ.ಉದಾಹರಣೆಗೆ ಅಧಿಕ ಕೊಲಾಜೆನ್ ವೇಗವಾಗಿ ಬಂದರೆ ಉಬ್ಬಿರುವ ಕಲೆಗಳು ಉಂಟಾಗುತ್ತವೆ.

ಬಣ್ಣ ಮತ್ತು ವಿನ್ಯಾಸದಲ್ಲಿ ವ್ಯತ್ಯಾಸವಿರುತ್ತದೆ

ಬಣ್ಣ ಮತ್ತು ವಿನ್ಯಾಸದಲ್ಲಿ ವ್ಯತ್ಯಾಸವಿರುತ್ತದೆ

ನಮ್ಮ ಚರ್ಮ ಇರುವ ರೀತಿಯಲ್ಲೇ ಹೊಸ ಚರ್ಮ ಹುಟ್ಟಿದರೂ ಕೂಡ ಬಣ್ಣ ಮತ್ತು ವಿನ್ಯಾಸದಲ್ಲಿ ವ್ಯತ್ಯಾಸವಿರುತ್ತದೆ. ಶಸ್ತ್ರಚಿಕಿತ್ಸೆ ಯಿಂದಾದ ಕಲೆಗಳು ಸಾಮಾನ್ಯವಾಗಿ ಸೆಬಾಸಿಯಸ್ ಗ್ರಂಥಿಗಳು,ಅಥವಾ ಬೆವರು ಗ್ರಂಥಿಗಳನ್ನು ಹೊಂದಿರುವುದಿಲ್ಲ. ಸಾಕಷ್ಟು ಸಂದರ್ಭದಲ್ಲಿ (ಆಳದ ಗಾಯವಾದಲ್ಲಿ)ಗಾಯದ ಗುರುತನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಿಲ್ಲ.ಇನ್ನು ಕೆಲವೊಮ್ಮೆ ಗಾಯವು ನೈಸರ್ಗಿಕವಾಗಿ ಗುಣವಾಗಲು ಬಿಟ್ಟಲ್ಲಿ ಕಲೆಗಳು ಕಡಿಮೆ ಕಾಣುತ್ತವೆ. ಮುಖದಲ್ಲಿ ಗಾಯದ ಕಲೆಗಳಾದಾಗ ಇದನ್ನು ಸಂಪೂರ್ಣವಾಗಿ ಹೋಗಲಾಡಿಸುವ ಬಯಕೆಗಳಾಗುವುದು ಸಾಮಾನ್ಯ.ಗಾಯದ ಕಲೆಗಳನ್ನು ಹೋಗಲಾಡಿಸುವಲ್ಲಿ ನಿಮ್ಮ ವಯಸ್ಸು, ಚರ್ಮದ ರೀತಿ ಮತ್ತು ಚರ್ಮದ ಬಣ್ಣ ಮತ್ತು ಎಷ್ಟು ಆಳವಾಗಿ ಗಾಯವಾಗಿದೆ ಎಂಬುದು ಕೂಡ ಮುಖ್ಯವಾಗುತ್ತದೆ. ಹಾಗೆಯೇ ತುಂಬಾ ಹಳೆಯ ಕಲೆಗಳನ್ನು ಹೋಗಲಾಡಿಸುವುದು ವೈದ್ಯರಿಗೂ ಕಷ್ಟವಾಗಬಹುದು.

Most Read: 2019ರಲ್ಲಿ ಯಾವ್ಯಾವ ರಾಶಿಯವರಿಗೆ ಅದೃಷ್ಟ ತರುವ ಬಣ್ಣ ಯಾವುದು ಗೊತ್ತಾ?

ಕಲೆಗಳಾಗುವುದನ್ನು ತಡೆಯಲು ಗಾಯಕ್ಕೆ ಸರಿಯಾದ ಚಿಕಿತ್ಸೆಯ ಅಗತ್ಯವಿದೆ.ಆದ್ದರಿಂದಲೇ ಸಾಕಷ್ಟು ಮನೆ ಮದ್ದುಗಳು ಪರಿಣಾಮಕಾರಿ ಮದ್ದುಗಳಾಗಿವೆ.

ಕಲೆಗಳ ವಿಧಾನಗಳು :

ಕಲೆಗಳ ವಿಧಾನಗಳು :

ನೈಸರ್ಗಿಕ ಮನೆ ಮದ್ದುಗಳ ಮೂಲಕ ಕಲೆಗಳನ್ನು ಹೋಗಲಾಡಿಸಲು ಮೊದಲು ಆಗಿರುವ ಕಲೆಗಳು ಯಾವ ರೀತಿಯದ್ದು ಎಂಬುದನ್ನು ತಿಳಿದುಕೊಳ್ಳಬೇಕು.ದೇಹದ ಯಾವ ಭಾಗದಲ್ಲಿ ಗಾಯವಾಗಿದೆ ಮತ್ತು ಯಾವ ರೀತಿಯ ಗಾಯ ಎಂಬುದು ಗಾಯದ ಕಲೆಗೆ ಕಾರಣವಾಗುತ್ತದೆ.

ಮೊಡವೆಯ ಗಾಯ

ಮೊಡವೆಯ ಗಾಯ

ಮೊಡವೆಯಿಂದಾದ ಕಲೆಗಳು ಮುಖದ ಮೇಲೆ ಕಾಣಿಸಿಕೊಳ್ಳುತ್ತವೆ.ಇದು ತ್ವಚೆಯಲ್ಲಿ ಕೊಬ್ಬಿನ ಅಂಶ ಕಡಿಮೆಯಾಗಿ ಉಂಟಾಗುವ ಕಲೆಗಳಾಗಿವೆ.ಈ ರೀತಿಯ ಕಲೆಗಳನ್ನು ಕಣ್ಣಿಗೆ ರಾಚುವ ಕಲೆಗಳು,ರೋಲಿಂಗ್ ಸ್ಕಾರ್ಸ್ ಅಥವಾ ಬಾಕ್ಸರ್ ಸ್ಕಾರ್ಸ್ ಎಂದು ಕೂಡ ಕರೆಯಲಾಗುತ್ತದೆ.

ಫೈನ್ ಲೈನ್ ಕಲೆಗಳು

ಫೈನ್ ಲೈನ್ ಕಲೆಗಳು

ಚಾಕುವಿನಿಂದಾದ ಕಲೆಗಳು ಅಥವಾ ಸರ್ಜರಿಯಿಂದಾಗುವ ಗುರುತುಗಳನ್ನು ಫೈನ್ ಲೈನ್ ಕಲೆಗಳು ಎನ್ನಲಾಗುತ್ತದೆ.ಈ ರೀತಿಯ ಗಾಯದ ಗುರುತು ತೆಳುವಾದ ಬಿಳಿ ಕಲೆಯನ್ನು ಇದು ಉಳಿಸಬಹುದು ಅಥವಾ ಕ್ರಮೇಣ ಅಳಿಸಿಯೂ ಹೋಗಬಹುದು.ಪ್ರೆಶರ್ ಥೆರಪಿ ಮೂಲಕ ಈ ರೀತಿಯ ಕಲೆಗಳನ್ನು ಕ್ರಮೇಣ ಹೋಗಲಾಡಿಸಬಹುದು ಎಂದು ವೈದ್ಯರು ಹೇಳುತ್ತಾರೆ.

ಪ್ರಗ್ನೆನ್ಸಿ ನಂತರ ಕಾಣಿಸಿಕೊಳ್ಳುವ ಸ್ಟ್ರೆಚ್ ಮಾರ್ಕ್ಸ್

ಪ್ರಗ್ನೆನ್ಸಿ ನಂತರ ಕಾಣಿಸಿಕೊಳ್ಳುವ ಸ್ಟ್ರೆಚ್ ಮಾರ್ಕ್ಸ್

ಸ್ಟ್ರೆಚ್ ಮಾರ್ಕ್ಸ್ ಚರ್ಮದ ಮೇಲೆ ಯಾವುದೇ ರೀತಿಯಲ್ಲಿ ಉಬ್ಬದೆ ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳಬಹುದು.ಇದು ಕೆಲವೊಮ್ಮೆ ವ್ಯಾಪಕ ಕಲೆಗಳಾಗಿ ಕೂಡ ಕಾಣಿಸಿಕೊಳ್ಳುತ್ತವೆ.

ಸುಟ್ಟಗಾಯಗಳಿಂದ ಕೆಂಪಾದ ಕಲೆಗಳು ಚರ್ಮದ ಸುತ್ತ ಅಥವಾ ಸಂಧಿಗಳಲ್ಲಿ ಕಂಡು ಬರುತ್ತದೆ

ಸುಟ್ಟಗಾಯಗಳಿಂದ ಕೆಂಪಾದ ಕಲೆಗಳು ಚರ್ಮದ ಸುತ್ತ ಅಥವಾ ಸಂಧಿಗಳಲ್ಲಿ ಕಂಡು ಬರುತ್ತದೆ

ಹೈಪರ್ಟ್ರೋಫಿಕ್ ಸ್ಕಾರ್ಸ್:ಗಾಯಗಳು ಕಡಿಮೆ ಆಗಲು ಉತ್ಪತ್ತಿಯಾದ ಅಧಿಕವಾದ ಕೊಲಾಜೆನ್ ಈ ರೀತಿಯ ಉಬ್ಬಿದ ಕಲೆಗಳಿಗೆ ಕಾರಣವಾಗಿರುತ್ತದೆ.ಈ ರೀತಿಯ ಗಾಯದ ಕಲೆಗಳು ಕೆಂಪಾಗಿ, ತುರಿಕೆಯಿಂದ ಕೆಲವೊಮ್ಮೆ ನೋವಿನಿಂದ ಕೂಡ ಕೂಡಿರುತ್ತದೆ.

ಕೆಲಾಯ್ಡ್ ಕಲೆಗಳು :ಈ ರೀತಿ ಕಲೆಗಳು ಚುಚ್ಚುವುದು,ಸುಟ್ಟ ಗಾಯ,ಮೊಡವೆ,ಕೀಟಗಳ ಕಡಿತದಿಂದಾಗಿ ತಕ್ಷಣ ಕಂಡುಬರುತ್ತದೆ.ಇದು ಚರ್ಮದ ಅಂಗಾಂಶದ ಅಧಿಕ ಬೆಳವಣಿಗೆಯಿಂದ ಉಂಟಾಗಿದ್ದು ಉರಿಯೂತ ಕೂಡ ಕಂಡು ಬರಬಹುದು.ಇದು ಹೈಪರ್ಟ್ರೋಫಿಕ್ ಕಲೆಗಳಂತೆಯೇ ಇದ್ದರೂ ಅಪರೂಪವಾಗಿ ಕಂಡುಬರುವ ಕಲೆಗಳಾಗಿವೆ.ಆದರೆ ಇದನ್ನು ನೈಸರ್ಗಿಕವಾಗಿ ಗುಣಪಡಿಸುವುದು ಕಷ್ಟವಾಗಿದ್ದು ಚರ್ಮರೋಗ ತಜ್ಞರ ಅವಶ್ಯಕತೆ ಇರುತ್ತದೆ.

Most Read: ಚಳಿಗಾಲದಲ್ಲಿ ಒಡೆದ ಹಿಮ್ಮಡಿಗಳಿಗೆ ಕೆಲವು ನೈಸರ್ಗಿಕ ದೇಸೀ ಮನೆಮದ್ದುಗಳು

ಹೈಡ್ರೋಜೆನ್ ಪೆರಾಕ್ಸೈಡ್ ಗಾಯ

ಹೈಡ್ರೋಜೆನ್ ಪೆರಾಕ್ಸೈಡ್ ಗಾಯ

ಹೈಡ್ರೋಜೆನ್ ಪೆರಾಕ್ಸೈಡ್ ಗಾಯದಲ್ಲಿ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸಿ ಚರ್ಮವನ್ನು ಹಾನಿ ಉಂಟುಮಾಡುವುದರಿಂದ ಇದನ್ನು ಬಳಸುವುದನ್ನುನಿರಾಕರಿಸಲಾಗುತ್ತದೆ. ನೈಸರ್ಗಿಕವಾಗಿ ಹೇಗೆ ಗಾಯದ ಕಲೆಗಳನ್ನು ಹೋಗಲಾಡಿಸಬಹುದು ಎಂಬುದು ನಿಮ್ಮ ವಯಸ್ಸು, ಲಿಂಗ ಮತ್ತು ದೇಹದ ತೂಕ ಮತ್ತು ಹಾರ್ಮೋನ್ ಸಮತೋಲನವನ್ನು ಕೂಡ ಅವಲಂಬಿಸಿರುತ್ತದೆ. ನೈಸರ್ಗಿಕವಾಗಿ ಕಲೆಗಳನ್ನು ಹೋಗಲಾಡಿಸಲು ಉತ್ತಮ ಮನೆಮದ್ದುಗಳು ಕಲೆಗಳನ್ನು ಅತಿಬೇಗ ಹೋಗಲಾಡಿಸಲು ಇರುವ ಕೆಲವು ವಿಧಾನಗಳನ್ನುತಿಳಿದುಕೊಳ್ಳೋಣ. ಮನೆಮದ್ದುಗಳು ಕಲೆಗಳನ್ನು ಒಂದೇ ರಾತ್ರಿಯಲ್ಲಿ ಹೋಗಲಾಡಿಸವುದಿಲ್ಲವಾದರೂ ಅವುಗಳನ್ನು ಕಾಣದಂತೆ ತಡೆಯಲು ಸಹಕರಿಸುತ್ತವೆ.

ಗಾಯವು ಹಸಿಯಾಗಿರುವಾಗಲೇ ಇದಕ್ಕೆ ಚಿಕಿತ್ಸೆ ನೀಡುವುದರಿಂದ ಕಲೆ ಬೇಗ ಗುಣವಾಗುತ್ತದೆ.

ಗಾಯವು ಹಸಿಯಾಗಿರುವಾಗಲೇ ಇದಕ್ಕೆ ಚಿಕಿತ್ಸೆ ನೀಡುವುದರಿಂದ ಕಲೆ ಬೇಗ ಗುಣವಾಗುತ್ತದೆ.

ಗಾಯಗಳು ಹಳೆಯದಾದಂತೆ ಗಾಯದ ಗುರುತು ಮರೆಮಾಚುವುದು ಕಷ್ಟ ಮತ್ತು ವೈದ್ಯರ ಸಲಹೆ ಮತ್ತು ಲೇಸರ್ ಚಿಕಿತ್ಸೆ ಕೂಡ ಅಗತ್ಯವಾಗಬಹುದು. ದಿನನಿತ್ಯದ ಚಿಕಿತ್ಸೆ ಮತ್ತು ತಾಳ್ಮೆಯ ಅಗತ್ಯ ಗಾಯದ ಕಲೆಯನ್ನು ಮರೆಮಾಚಲು ಬೇಕಾಗುತ್ತದೆ. ಒಂದೆರಡು ದಿನದಲ್ಲಿ ಯಾವುದೇ ಕಲೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲ ಕನಿಷ್ಠ ಕೆಲವಾರು ವಾರಗಳು ಬೇಕಾಗುತ್ತದೆ ಎಂಬುದು ನಿಮಗೆ ನೆನಪಿರಲಿ.

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ ಬಳಸುವುದರಿಂದ ಗಾಯದ ಗುರುತುಗಳನ್ನು ಬೇಗ ಹೋಗಲಾಡಿಸಬಹುದು. ಗಾಯದ ಗುರುತನ್ನು ಹೋಗಲಾಡಿಸಲು ಬೇಕಾಗುವ ಕೊಲಾಜನ್ ಅನ್ನು ಇದು ಉತ್ಪತ್ತಿ ಮಾಡಲು ಸಹಾಯಮಾಡುತ್ತದೆ.ಕೊಬ್ಬರಿ ಎಣ್ಣೆ ಬಳಸುವುದರಿಂದ ಗಾಯವು ಕೆಳಮಟ್ಟದ ಪೆರಾಡಿಕ್ಸೈಡ್ ಉತ್ಪತ್ತಿ ಮಾಡಿ ಗಾಯವನ್ನು ಗುಣಪಡಿಸಲು ಸಹಕರಿಸುತ್ತದೆ. ಕೊಬ್ಬರಿ ಎಣ್ಣೆ ಬಳಸುವುದರಿಂದ ಚರ್ಮದ ಮೇಲೆ ರಕ್ಷಣಾ ಪದರ ಹುಟ್ಟುತ್ತದೆ ಮತ್ತು ಉರಿಯೂತ ಕಡಿಮೆ ಮಾಡಿ ಚರ್ಮದಲ್ಲಾದ ಕಲೆಯನ್ನು ಹೋಗಲಾಡಿಸುತ್ತದೆ. ನಿಮ್ಮ ಕೈ ಬೆರಳುಗಳಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು ಮೊಡವೆಯ ಕಲೆ ಅಥವಾ ಸ್ಟ್ರೆಚ್ ಮಾರ್ಕ್ಸ್ ಯಾವುದೇ ಇದ್ದರೂ ಕೂಡ ಅದರ ಮೇಲೆ ಹಚ್ಚಿ.ಕಲೆಯು ಕಾಣದಷ್ಟು ಅಥವಾ ಗುಣಮುಖವಾಗುವವರೆಗೂ ನಿಯಮಿತವಾಗಿ ಎರಡು ಮೂರು ಬಾರಿ ಕೊಬ್ಬರಿ ಎಣ್ಣೆಯನ್ನು ಹಚ್ಚಬೇಕು.ಸ್ವಲ್ಪ ಪ್ರಮಾಣದ ಕೊಬ್ಬರಿ ಎಣ್ಣೆಯನ್ನು ಬೆಳಿಗ್ಗೆ ಮತ್ತು ಸಂಜೆ ತ್ವಚೆಯ ತೇವಾಂಶವನ್ನು ಕಾಪಾಡಲು ಬಳಸಿ.

Most Read: ಕೂದಲಿಗೆ ಉಪ್ಪನ್ನು ಬಳಸುವುದರಿಂದಾಗುವ ಐದು ಅನುಕೂಲಗಳು

ಜೇನುತುಪ್ಪ ಕಲೆಯನ್ನು ಹೋಗಲಾಡಿಸುವ ನೈಸರ್ಗಿಕ ವಸ್ತು

ಜೇನುತುಪ್ಪ ಕಲೆಯನ್ನು ಹೋಗಲಾಡಿಸುವ ನೈಸರ್ಗಿಕ ವಸ್ತು

ಸನ್ ಬರ್ನ್ ಅಥವಾ ಸುಟ್ಟ ಗಾಯಗಳಿಂದ ಉಂಟಾಗುವ ಕಲೆಗಳನ್ನು ಜೇನುತುಪ್ಪ ಬಳಸುವುದರಿಂದ ಬೇಗ ಗುಣಮುಖವಾಗುತ್ತದೆ.ಗಾಯಗಳಿಂದ ಉಂಟಾಗುವ ಆಕ್ಸಿಡೇಟಿವ್ ಒತ್ತಡ ಕೂಡ ಕಲೆಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ಕಂಡುಹಿಡಿದಿದ್ದಾರೆ.ಗಾಯದ ಸೋಂಕನ್ನು ತಡೆಯುವ ಗುಣವನ್ನು ಜೇನುತುಪ್ಪ ಹೊಂದಿರುವುದು ಕೂಡ ಕಲೆ ಬೇಗ ಕಡಿಮೆಯಾಗಲು ಮುಖ್ಯ ಕಾರಣ. ಜೇನುತುಪ್ಪವನ್ನು ನೇರವಾಗಿ ಗಾಯದ ಮೇಲೆ ಹಚ್ಚುವುದರಿಂದ ಗಾಯ ಕಡಿಮೆಯಾಗಿ ಕಲೆ ಹೋಗಲಾಡಿಸಲು ಸಹಕರಿಸುತ್ತದೆ.ಹತ್ತಿಯಿಂದ ಗಾಯದ ಗುರುತಿನ ಮೇಲೆ ಜೇನುತುಪ್ಪವನ್ನು ಹಚ್ಚಿ ಮತ್ತು ಆಗಾಗ ಬದಲಾಯಿಸುತ್ತಿರಿ.

ಗಾಯದ ಕಲೆಗಳನ್ನು ಕಡಿಮೆ ಮಾಡಲು ಜೇನುತುಪ್ಪ ಹೇಗೆ ಸಹಾಯಕ ಎಂಬುದರ ಬಗ್ಗೆ ಹೆಚ್ಚು ತಿಳಿದುಕೊಳ್ಳಿ.

Most Read: ಚಳಿಗಾಲದಲ್ಲಿ ತ್ವಚೆಯ ಆರೈಕೆ ಹೀಗಿರಲಿ, ಯಾವ ಬಗೆಯ ಚರ್ಮದ ಸಮಸ್ಯೆಯೂ ಬಾರದು

ಅಲೋವೆರಾ ಜೆಲ್

ಅಲೋವೆರಾ ಜೆಲ್

ತುರಿಕೆ ಮತ್ತು ಉರಿಯೂತವನ್ನು ಹೊಂದಿದ ಗಾಯದ ಗುರುತನ್ನು ಹೋಗಲಾಡಿಸಲು ಅತ್ಯುತ್ತಮ ನೈಸರ್ಗಿಕ ವಿಧಾನವೆಂದರೆ ಅಲೋವೆರಾ ಬಳಸುವುದು.ಅಲೋವೆರಾ ಬಳಸುವುದರಿಂದ ಕಲೆಗಳು ಸ್ವಾಭಾವಿಕವಾಗಿ ಕಡಿಮೆ ಆಗುತ್ತವೆ ಎಂಬುದಕ್ಕೆ ಪುರಾವೆಗಳಿವೆ.ಆನಲ್ಸ್ ಆಫ್ ಪ್ಲಾಸ್ಟಿಕ್ ಸರ್ಜರಿ ಎಂಬ ಜರ್ನಲ್ ಅಲೋವೆರಾದಲ್ಲಿ ಕಲೆಗಳನ್ನು ಹೋಗಲಾಡಿಸುವ ನೈಸರ್ಗಿಕ ಸಂಯುಕ್ತಗಳಿವೆ ಎಂದು ವರದಿಮಾಡಿವೆ.ಅಲೋವೆರಾವನ್ನು ನಿಯಮಿತವಾಗಿ ಬಳಸುವದರಿಂದ ಕಲೆಗಳ ಗಾತ್ರ ಕೂಡ ಕಡಿಮೆ ಆಗುತ್ತದೆ ಎನ್ನಲಾಗುತ್ತದೆ.

ವಿಟಮಿನ್ ಸಿ

ವಿಟಮಿನ್ ಸಿ

ಮೊಡವೆಯಿಂದ ಉಂಟಾಗುವ ಕಲೆ ಅಥವಾ ಇತರ ಕಲೆಗಳನ್ನು ಹೋಗಲಾಡಿಸಿ ಉತ್ತಮ ತ್ವಚೆಯನ್ನು ಪಡೆಯಲು ವಿಟಮಿನ್ ಸಿ ಅನುಕೂಲಕಾರಿ.ಸಿಲಿಕಾನ್ ಜೆಲ್ ಮತ್ತು ವಿಟಮಿನ್ ಸಿ ಕ್ರೀಂ ಅನ್ನು ಆರು ತಿಂಗಳ ಕಾಲ ಪ್ರತಿದಿನ ಬಳಸುವುದರಿಂದ ಕಲೆಗಳನ್ನು ನೈಸರ್ಗಿಕವಾಗಿ ಗುಣಪಡಿಸಬಹುದು ಎನ್ನಲಾಗಿದೆ.ಮುಖದಲ್ಲಿರುವ ಕಲೆಯನ್ನು ಹೋಗಲಾಡಿಸಲು ಈ ಕ್ರೀಂ ಹೆಚ್ಚು ಸಹಾಯಕ ಎಂದು ಸಂಶೋಧಕರು ಹೇಳುತ್ತಾರೆ. ಕಲೆಗಳಾಗುವುದನ್ನು ತಡೆಯಲು ಎಲ್ಲಾ ಹಂತದಲ್ಲೂ ವಿಟಮಿನ್ ಸಿ ಅಗತ್ಯವಿದೆ ಎಂದು ತಜ್ಞರು ತಿಳಿಸಿದ್ದಾರೆ.ವಿಟಮಿನ್ ಸಿ ಕಡಿಮೆ ಇರುವುದರಿಂದ ಗಾಯದ ಕಲೆಗಳನ್ನು ಹೋಗಲಾಡಿಸುವುದು ಕಷ್ಟ ಮತ್ತು ಆರೋಗ್ಯಕರ ಕೊಲಾಜೆನ್ ಅಂಶ ಕೂಡ ಕಡಿಮೆಯಾಗುತ್ತದೆ.

ಈರುಳ್ಳಿ ರಸ

ಈರುಳ್ಳಿ ರಸ

ಈರುಳ್ಳಿ ರಸ ಕಲೆಯನ್ನು ಹೋಗಲಾಡಿಸಲು ಸಾಧ್ಯವೇ ಎಂದು ಕೆಲವರು ಕೇಳಬಹುದು.ಈರುಳ್ಳಿ ರಸದ ಬಳಕೆ ಗಾಯದ ಕಲೆಯನ್ನು ಹೋಗಲಾಡಿಸುವ ಪರಿಣಾಮಕಾರಿ ವಿಧಾನ ಎಂದರೆ ಆಶ್ಚರ್ಯವಾಗಬಹುದು. ಈರುಳ್ಳಿಯಲ್ಲಿರುವ ಸಂಯುಕ್ತಗಳು ಗಾಯವನ್ನು ಹೋಗಲಾಡಿಸಿ ಶಸ್ತ್ರಚಿಕಿತ್ಸಾ ಕಲೆಗಳನ್ನು ಕೂಡ ನೈಸರ್ಗಿಕವಾಗಿ ಮರೆಮಾಚುವ ಗುಣವನ್ನು ಹೊಂದಿದೆ.ಈರುಳ್ಳಿ ರಸವನ್ನು ಹತ್ತು ವಾರಗಳ ಕಾಲ ಗಾಯದ ಮೇಲೆ ಬಳಸುವುದರಿಂದ ಕೆಂಪಾಗುವುದನ್ನು ತಡೆದು ಕಲೆಯ ಮಟ್ಟವನ್ನು ಕೂಡ ಕಡಿಮೆ ಮಾಡುತ್ತದೆ. ಆದ್ದರಿಂದ ಈರುಳ್ಳಿ ಕಲೆ ಹೋಗಲಾಡಿಸಲು ಒಂದು ಪರಿಣಾಮಕಾರಿ ಮನೆಮದ್ದು. ಈರುಳ್ಳಿ ರಸ ಅಥವಾ ಟಿಂಕ್ಚರ್ ಆನ್ಲೈನ್ ಅಥವಾ ಮೆಡಿಕಲ್ ಸ್ಟೋರ್ ನಲ್ಲಿ ಕೂಡ ತೆಗೆದುಕೊಂಡು ಬಳಸಬಹುದು.ಇದನ್ನು ಗಾಯಕ್ಕೆ ಹಚ್ಚಿದಾಗ ಸ್ವಲ್ಪ ಕೆರೆತ ಕಂಡು ಬಂದರೂ ಸ್ವಲ್ಪ ಸಮಯದಲ್ಲಿ ಕಡಿಮೆಯಾಗುತ್ತದೆ.

English summary

The Best Proven Ways to Heal Scars Naturally

Scars form as new skin tissue develops in the wound where the thick layer of skin has been damaged. Scars are formed after damage to the skin caused by pimples, burns, deep cuts, or skin conditions. According to the Journal of the American Academy of Dermatology, scar tissue is made up as new collagen fibers form over the wound. Scars can develop in different shapes and sizes. Some scars appear flat and pale whereas others are raised and red. For example, if too much collagen develops too quickly, raised scars may form.
X
Desktop Bottom Promotion