For Quick Alerts
ALLOW NOTIFICATIONS  
For Daily Alerts

ಮೆಹೆಂದಿಯ ಬಣ್ಣ ಗಾಢವಾಗಿ ಬರಬೇಕೇ? ಈ ಆರು ನೈಸರ್ಗಿಕ ವಿಧಾನಗಳನ್ನು ಅನುಸರಿಸಿ

|

ಸೌಂದರ್ಯವನ್ನು ವೃದ್ಧಿಸುವ ಹಾಗೂ ಯಾವುದೇ ಹಾನಿಯಿಲ್ಲದೇ ತ್ವಚೆಯ ಮೇಲೆ ಆಕರ್ಷಕ ರಂಗಿನ ಚಿತ್ತಾರವನ್ನು ಬಿಡಿಸಿ ಮನಸೂರೆಗೊಳ್ಳುವ ಮದರಂಗಿ ಅತ್ಯಂತ ಜನಪ್ರಿಯ ಸಾಂಪ್ರಾದಾಯಿಕ ವಿಧಾನವಾಗಿದ್ದು ಭಾರತೀಯ ವಿವಾಹ ಹಾಗೂ ಹಬ್ಬಗಳಂದು ಅತಿ ಹೆಚ್ಚಾಗಿ ಹಚ್ಚಿಕೊಳ್ಳಲಾಗುತ್ತದೆ.

ಒಂದು ವೇಳೆ ನಿಮಗೂ ಮದರಂಗಿ ಎಂದರೆ ಬಹಳ ಇಷ್ಟವಾಗಿದ್ದು ಪ್ರತಿ ಬಾರಿ ಹಚ್ಚಿಕೊಂಡ ಬಳಿಕ ಇದರ ಬಣ್ಣ ಗಾಢ, ಆಕರ್ಷಕ ಹಾಗೂ ಸ್ಪಷ್ಟವಾಗಿರಬೇಕು ಎಂದೆನಿಸಿದರೆ ಇಂದಿನ ಲೇಖನದಲ್ಲಿ ನಿಮಗಾಗಿ ಕೆಲವು ಅಮೂಲ್ಯ ಸಲಹೆಗಳನ್ನು ನೀಡಲಾಗಿದೆ. ಇವು ಸರಳ ಹಾಗೂ ಸುರಕ್ಷಿತವಾಗಿದ್ದು ನಿಮ್ಮ ಮದರಂಗಿಯ ರಂಗನ್ನು ಇನ್ನಷ್ಟು ಗಾಢವಾಗಿಸಲು ನೆರವಾಗುತ್ತದೆ.

ನಿಮ್ಮ ಕೈಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿಕೊಂಡಿರಬೇಕು

ನಿಮ್ಮ ಕೈಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿಕೊಂಡಿರಬೇಕು

ಮದರಂಗಿ ಹಚ್ಚಿಕೊಳ್ಳುವ ಮುನ್ನ ನಿಮ್ಮ ಹಸ್ತ ಹಾಗೂ ಮದರಂಗಿ ಹಚ್ಚಿಕೊಳ್ಳುವ ಭಾಗದ ತ್ವಚೆಯನ್ನು ಚೆನ್ನಾಗಿ ತೊಳೆದು ಪೂರ್ಣವಾಗಿ ಒಣಗಿರುವಂತೆ ನೋಡಿಕೊಳ್ಳಿ. ಏಕೆಂದರೆ ನೀರಿನಿಂದ ತೋಯ್ದ ತ್ವಚೆ ವಿಸ್ತಾರಗೊಂಡು ಹಸ್ತ ಹಾಗೂ ಬೆರಳುಗಳ ಚರ್ಮ ನೆರಿಗೆ ನೆರಿಗೆಯಾಗಿರುತ್ತದೆ ಈ ಸಮಯದಲ್ಲಿ ಹಚ್ಚುವ ಮದರಂಗಿ ಅಕ್ಕ ಪಕ್ಕ ಹರಡಿಬಿಡುತ್ತದೆ. ಹಾಗಾಗಿ ಪೂರ್ಣವಾಗಿ ಒಣಗಿದ ಬಳಿಕ ಹಚ್ಚುವ ಮದರಂಗಿ ಚರ್ಮದಾಳಕ್ಕೆ ಇಳಿಯಲು ಹಾಗೂ ಹರಡದೇ ಇರಲು ಸಾಧ್ಯವಾಗುತ್ತದೆ.

ಹಚ್ಚಿದ ಬಳಿಕ ಕೆಲವು ಘಂಟೆಗಳಾದರೂ ಇರಲಿ

ಹಚ್ಚಿದ ಬಳಿಕ ಕೆಲವು ಘಂಟೆಗಳಾದರೂ ಇರಲಿ

ಮದರಂಗಿ ತನ್ನ ಬಣ್ಣವನ್ನು ನೈಸರ್ಗಿಕವಾಗಿಯೇ ಚರ್ಮಕ್ಕೆ ನೀಡುವುದು ಅತ್ಯಂತ ಸುರಕ್ಷಿತವಾಗಿದೆ. ಆದರೆ ಬಣ್ಣ ಪೂರ್ಣವಾಗಿ ಇಳಿಯಬೇಕಾದರೆ ಕೆಲವು ಘಂಟೆಗಳಾದರೂ ಬೇಕಾಗುತ್ತದೆ. ಆಗಲೇ ಈ ಬಣ್ಣ ಗಾಢವಾಗಿ ಸ್ಪಷ್ಟವಾಗಿ ಮೂಡಲು ಸಾಧ್ಯವಾಗುತ್ತದೆ. ಹಾಗಾಗಿ ಈ ಅವಧಿಯಲ್ಲಿ ಅಲ್ಲಾಡದೇ ಅತ್ತಿತ್ತ ಹೋಗದೇ ಇರುವಷ್ಟು ಮುನ್ನೆಚ್ಚರಿಕೆಗಳನ್ನು ಮೊದಲೇ ವಹಿಸಬೇಕು. ಅಲ್ಲದೇ ಬಿಸಿಗಾಳಿ ಸೂಸುವ ಹೀಟರ್, ಕೂದಲನ್ನು ಒಣಗಿಸುವ ಬ್ಲೋ ಡ್ರೈಯರ್ ಮೊದಲಾದವುಗಳಿಗೆ ಮದರಂಗಿ ಹಚ್ಚಿದ ಭಾಗ ಒಡ್ಡದಂತೆ ಜಾಗೃತೆ ವಹಿಸಿ, ಏಕೆಂದರೆ ಈ ಮೂಲಕ ಮದರಂಗಿಯನ್ನು ಒಣಗಿಸಿದರೆ ಬಣ್ಣ ಚರ್ಮಕ್ಕಿಳಿಯುವುದೇ ಇಲ್ಲ.

Most Read: ಮೆಹಂದಿ ಆಹಾ...ಮೆಹಂದಿ... ಕೇಶ ಸೌಂದರ್ಯಕ್ಕೆ ಹೇಗೆಲ್ಲಾ ಸಹಕಾರಿ ಗೊತ್ತಾ?

ಮುಖ್ಯ ಕಾರ್ಯಕ್ರಮಕ್ಕೂ ಒಂದೆರಡು ದಿನ ಮುನ್ನವೇ ಹಚ್ಚಿ

ಮುಖ್ಯ ಕಾರ್ಯಕ್ರಮಕ್ಕೂ ಒಂದೆರಡು ದಿನ ಮುನ್ನವೇ ಹಚ್ಚಿ

ಒಂದು ವೇಳೆ ವಿವಾಹ ಮೊದಲಾದ ಪ್ರಮುಖ ಸಂದರ್ಭಕ್ಕಾಗಿ ಮದರಂಗಿ ಹಚ್ಚಿಕೊಳ್ಳುತ್ತಿದ್ದರೆ ಮುಖ್ಯ ಕಾರ್ಯಕ್ರಮಕ್ಕೂ ಒಂದು ಅಥವಾ ಎರಡು ದಿನ ಮುಂಚಿತವಾಗಿ ಮದರಂಗಿ ಹಚ್ಚಿಕೊಳ್ಳುವ ಕಾರ್ಯಕ್ರಮವನ್ನಿರಿಸಿಕೊಳ್ಳಿ. ಏಕೆಂದರೆ ಮದರಂಗಿ ಹಚ್ಚಿದ ಬಳಿಕ ಇದರ ಗರಿಷ್ಟ ಮಟ್ಟದ ಪರಿಣಾಮ ಪಡೆಯಲು ಸುಮಾರು ಮೂವತ್ತರಿಂದ ನಲವತ್ತು ಘಂಟೆ ಕಾಲ ಬೇಕಾಗುತ್ತದೆ. ಈ ಸಮಯವನ್ನು ಪರಿಗಣಿಸಿ ಸೂಕ್ತ ಸಮಯದಲ್ಲಿ ಮದರಂಗಿ ಹಚ್ಚಿಕೊಂಡರೆ ಮದರಂಗಿಯ ನೈಸರ್ಗಿಕ ಹಾಗೂ ಪ್ರಖರ ವರ್ಣ ಅತ್ಯುತ್ತಮವಾಗಿ ಕಾಣುತ್ತದೆ.

ಲವಂಗದ ಜಾದೂ ನಿರ್ವಹಿಸಲು ಅನುವು ಮಾಡಿಕೊಡಿ

ಲವಂಗದ ಜಾದೂ ನಿರ್ವಹಿಸಲು ಅನುವು ಮಾಡಿಕೊಡಿ

ಒಂದು ಬಾಣಲೆಯನ್ನು ಚಿಕ್ಕ ಉರಿಯಲ್ಲಿ ಕೊಂಚವೇ ಬಿಸಿಯಾಗಿಸಿ ಇದರಲ್ಲಿ ಕೆಲವು ಲವಂಗಗಳನ್ನು ಹಾಕಿ ಬಾಣಲೆಯನ್ನು ಅಲ್ಲಾಡಿಸುತ್ತಿರಿ. ಲವಂಗದಿಂದ ಯಾವಾಗ ಕೊಂಚವೇ ಹೊಗೆ ಬರಲು ಪ್ರಾರಂಭವಾಯಿತೋ ತಕ್ಷಣವೇ ಈ ಉರಿ ಆರಿಸಿ ಈ ಹೊಗೆಯ ಮೇಲೆ ಮದರಂಗಿ ಹಚ್ಚಿ ಒಣಗಿದ ಬಳಿಕ ನಿವಾರಿಸಿದ ತ್ವಚೆಯ ಭಾಗವನ್ನು ಒಡ್ಡಿಕೊಳ್ಳಿ. ಈ ಹೊಗೆ ಮದರಂಗಿಯ ಬಣ್ಣವನ್ನು ಇನ್ನಷ್ಟು ಗಾಢವಾಗಿಸುತ್ತದೆ.

ನೋವು ನಿವಾರಕ ಬಾಮ್ ಹಚ್ಚಿಕೊಳ್ಳಿ

ನೋವು ನಿವಾರಕ ಬಾಮ್ ಹಚ್ಚಿಕೊಳ್ಳಿ

ಮದರಂಗಿ ಹಚ್ಚಿಕೊಂಡು ಒಣಗಿಸಿ ನಿವಾರಿಸಿದ ಬಳಿಕ ಬಣ್ಣ ತಗುಲಿರುವ ಭಾಗಕ್ಕೆ ತೆಳುವಾಗಿ ನೋವು ನಿವಾರಕ ಬಾಮ್ ಅನ್ನು ಹಚ್ಚಿಕೊಳ್ಳಿ. ಅಲ್ಲದೇ ಮದರಂಗಿ ಹಚ್ಚಿಕೊಂಡ ದಿನವೇ ಈ ಬಾಮ್ ಅನ್ನು ಹಚ್ಚಿಕೊಳ್ಳುವುದು ಅಗತ್ಯ. ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡು ಮಲಗಿದರೆ ಬೆಳಿಗ್ಗೆದ್ದಾಗ ಮದರಂಗಿಯ ಬಣ್ಣ ಗಾಢವಾಗಿರುವುದನ್ನು ಗಮನಿಸಬಹುದು.

Most Read: ಕೂದಲಿಗೆ ಮೆಹೆಂದಿ ಹಚ್ಚಿಕೊಳ್ಳುವ ಮುನ್ನ ಎರಡು ಬಾರಿ ಆಲೋಚಿಸಿ!

ನೀರು ತಾಕುವುದನ್ನು ತಪ್ಪಿಸಿ

ನೀರು ತಾಕುವುದನ್ನು ತಪ್ಪಿಸಿ

ಮದರಂಗಿ ಗಾಢವಾಗಿರಬೇಕೆಂದರೆ ಒಣಗಿದ ಮದರಂಗಿಯ ಪುಡಿಯನ್ನು ನಿವಾರಿಸಿದ ಬಳಿಕ ಕೆಲವು ಘಂಟೆಗಳವರೆಗಾದರೂ ನೀರು ತಾಕದಂತೆ ಇರುವುದು ಅಗತ್ಯ .ಇದು ಬಣ್ಣ ಇನ್ನಷ್ಟು ಸ್ಪಷ್ಟವಾಗಿ ಮೂಡಲು ನೆರವಾಗುತ್ತದೆ.

English summary

Six natural ways to make your mehendi darker

Mehendi is a form of body art, which is a very popular tradition at weddings and also many festivals in India. If you love getting mehendi done and want the colour to come out darker every time, then we've got the right tips for you. Follow these simple tips and get the darkest mehendi ever:
X
Desktop Bottom Promotion