For Quick Alerts
ALLOW NOTIFICATIONS  
For Daily Alerts

ಕಾಲುಗಳಲ್ಲಿರುವ ಕಪ್ಪು ಕಲೆ ಮತ್ತು ಇತರ ಗುರುತಗಳನ್ನು ನಿವಾರಿಸಲು ಪವರ್ ಫುಲ್ ಮನೆಮದ್ದುಗಳು

|

ಹಿಂದೆಂದೋ ಆಗಿದ್ದ ಗಾಯ ಅಥವಾ ಇತರ ಕಾರಣಗಳಿಂದ ಕಾಲುಗಳ ಮೇಲೆ ಉಳಿದುಕೊಂಡಿರುವ ಕಲೆ ಅಥವಾ ಗುರುತುಗಳು ನಿಮಗೆ ಕಾಲುಗಳನ್ನು ತೋರುವ ಉಡುಗೆ ಉಟ್ಟುಕೊಳ್ಳಲು ಮುಜುಗರ ತರಿಸುತ್ತಿದ್ದಿರಬಹುದು. ಆದರೆ ಇನ್ನು ಮುಂದೆ ಚಿಂತಿಸುವ ಕಾರಣವಿಲ್ಲ, ನಮ್ಮಲ್ಲಿ ಈ ಕಲೆಗಳನ್ನು ನಿವಾರಿಸುವ ಕೆಲವು ಸಮರ್ಥ ಮನೆಮದ್ದುಗಳಿವೆ ಹಾಗೂ ಇವುಗಳ ಪ್ರಭಾವ ಕೊಂಚ ನಿಧಾನವಾಗಿಯಾದರೂ ಸರಿ, ಯಾವುದೇ ಅಡ್ಡಪರಿಣಾಮವಿಲ್ಲದೇ ಈ ಭಾಗದ ಚರ್ಮ ಸಹಜವರ್ಣವನ್ನು ಪಡೆಯಲು ಸಾಧ್ಯವಾಗುತ್ತದೆ. ಇದಕ್ಕೆ ನಿಮ್ಮ ಅಡುಗೆಮನೆಯಲ್ಲಿ ಸದಾ ಲಭಿಸುವ ಸಾಮಾಗ್ರಿಗಳೇ ಸಾಕಾಗುತ್ತವೆ. ಬನ್ನಿ, ನೋಡೋಣ....

ಲಿಂಬೆ

ಲಿಂಬೆ

ಲಿಂಬೆ ಹುಳಿಯಾಗಿರಲು ಇದರಲ್ಲಿರುವ ಸಿಟ್ರಿಕ್ ಆಮ್ಲ ಕಾರಣ. ಇದರ ಆಮ್ಲೀಯತೆ ಚರ್ಮದ ಹೊರಪದರದಲ್ಲಿ ಅಂಟಿಕೊಂಡಿದ್ದ ಸತ್ತ ಜೀವಕೋಶಗಳನ್ನು ನಿವಾರಿಸಲು ಹಾಗೂ ಹೊಸ ಜೀವಕೋಶಗಳ ಬೆಳವಣಿಗೆಗೆ ನೆರವಾಗುತ್ತದೆ ಹಾಗೂ ಚರ್ಮದ ಸೆಳೆತ ಹೆಚ್ಚಿಸಲೂ ನೆರವಾಗುತ್ತದೆ. ಅಲ್ಲದೇ ಕಪ್ಪಗಾಗಿದ್ದ ಭಾಗದ ಜೀವಕೋಶಗಳನ್ನು ನಿವಾರಿಸಿ ಆ ಸ್ಥಳದಲ್ಲಿ ಸಹಜವರ್ಣದ ವರ್ಣದ್ರವ್ಯಗಳನ್ನು ಹೊಂದಿರುವ ಜೀವಕೋಶಗಳನ್ನು ಬೆಳೆಸುವ ನೈಸರ್ಗಿಕ ಬಿಳಿಚುಕಾರಕವೂ ಆಗಿದೆ. ಇದಕ್ಕೆ ಒಂದು ಲಿಂಬೆಹಣ್ಣಿನ ರಸವನ್ನು ಸಂಗ್ರಹಿಸಿ ಹತ್ತಿಯುಂಡೆಯೊಂದನ್ನು ಹೀರಿಕೊಳ್ಳುವಂತೆ ಮಾಡಿ ಇದನ್ನು ಅಗಲವಾಗಿ, ಕಲೆ ಇರುವ ಭಾಗದ ಮೇಲೆ ನೇರವಾಗಿ ತಾಕುವಂತೆ ಹತ್ತು ನಿಮಿಷ ಇರಿಸಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಕಲೆ ಮಾಯವಾಗುವವರೆಗೂ ನಿತ್ಯವೂ ಈ ವಿಧಾನವನ್ನು ಅನುಸರಿಸಿ.

Most Read: ಅರಿಶಿನ ಕಾರ್ಯಕ್ರಮದ ಮೊದಲು ವಧುವರರು ಈ ಎಲ್ಲಾ ಸಲಹೆಗಳನ್ನು ತಪ್ಪದೇ ಅನುಸರಿಸಿ

ಜೇನು

ಜೇನು

ಇದೊಂದು ನೈಸರ್ಗಿಕ ತೇವಕಾರಕ ಅಥವಾ ಮಾಯಿಶ್ಚರೈಸರ್ ಆಗಿದ್ದು ಕಲೆಗಳನ್ನು ತಿಳಿಯಾಗಿಸಲೂ ನೆರವಾಗುತ್ತದೆ. ವಿಶೇಷವಾಗಿ ಗಾಯದ ಗುರುತುಗಳನ್ನು ಇಲ್ಲವಾಗಿಸಲು ಜೇನು ಹೆಚ್ಚು ಸಕ್ಷಮವಾಗಿದೆ. ಇದಕ್ಕಾಗಿ ಸುಮಾರು ಎರಡು ದೊಡ್ಡಚಮಚದಷ್ಟು ಜೇನನ್ನು ಎರಡು ದೊಡ್ಡಚಮಚ ಅಡುಗೆ ಸೋಡಾದೊಂದಿಗೆ ಬೆರೆಸಿ. ಈ ಮಿಶ್ರಣವನ್ನು ಗಾಯದ ಗುರುತಿರುವ ಭಾಗ್ದ ಮೇಲೆ ನಯವಾದ ಮಜಾಸ್ ನೊಂದಿಗೆ ಹಚ್ಚಿಕೊಂಡು ಮೂರು ನಿಮಿಷ ಮಸಾಜ್ ಮಾಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಒಂದು ವೇಳೆ ಗಾಯದ ಗುರುತಿನ ಬಣ್ಣವೂ ಗಾಢವಾಗಿದ್ದರೆ ಅಡುಗೆ ಸೋಡಾದ ಬದಲು ಸಮಪ್ರಮಾಣದ ಲಿಂಬೆರಸದೊಂದಿಗೆ ಬೆರೆಸಿ. ಪರಿಣಾಮ ಇನ್ನಷ್ಟು ಶೀಘ್ರವಾಗಿ ಆಗಲು ಈ ವಿಧಾನವನ್ನು ನಿತ್ಯವೂ ಒಂದೇ ಸಮಯದಲ್ಲಿ ನಿರ್ವಹಿಸಿ. ಈ ಮೂಲಕ ಕಲೆಗಳು ಮಾಯವಾಗುವ ಜೊತೆಗೇ ಜರ್ಮದ ಸತ್ತ ಜೀವಕೋಶಗಳು ನಿವಾರಣೆಯಾಗಲು ಮತ್ತು ಸೆಳೆತವೂ ಹೆಚ್ಚುತ್ತದೆ.

ಲೋಳೆಸರ

ಲೋಳೆಸರ

ಆಲೋವೆರಾ ಅಥವಾ ಲೋಳೆಸರದಲ್ಲಿ ಅತ್ಯುತ್ತಮ ಉರಿಯೂತ ನಿವಾರಕ ಗುಣಗಳಿವೆ ಹಾಗೂ ಇವು ಚರ್ಮದ ಉರಿಯೂತವನ್ನು ಶಮನಗೊಳಿಸುತ್ತದೆ ಹಾಗೂ ಸತ್ತ ಜೀವಕೋಶಗಳನ್ನು ನಿವಾರಿಸಿ ಗಾಯಗಳನ್ನು ಮಾಗಿಸಲೂ ನೆರವಾಗುತ್ತದೆ. ವಿಶೇಷವಾಗಿ, ಗಾಯವಾದಾದ ಲೋಳೆಸರದ ತಿರುಳನ್ನು ನೇರವಾಗಿ ಹಚ್ಚಿಕೊಳ್ಳುವ ಮೂಲಕ ಗಾಯ ಕಲೆಯಿಲ್ಲದೇ ಮಾಗುವ ಜೊತೆಗೇ ಊದಿಕೊಳ್ಳುವುದನ್ನೂ ತಡೆಯಬಹುದು. ಈ ಗಿಡವನ್ನು ಸುಲಭವಾಗಿ, ಹೆಚ್ಚಿನ ಆರೈಕೆಯಿಲ್ಲದೇ ಮನೆಯಂಗಳದಲ್ಲಿ ಬೆಳೆಯಬಹುದು. ಪರ್ಯಾಯವಾಗಿ ಇವುಗಳಿಂದ ತಯಾರಿಸಿದ ಎಣ್ಣೆ ಮತ್ತು ಮುಲಾಮುಗಳನ್ನೂ ಬಳಸಬಹುದು. ಕಲೆ ಮತ್ತು ಗಾಯದ ಗುರುತು ಇಲ್ಲವಾಗಿಸಲು ಇದರ ತಾಜಾ ತಿರುಳನ್ನು ನಿತ್ಯವೂ ಒಂದೇ ಸಮಯದಲ್ಲಿ ಹೆಚಿಕೊಳ್ಳುತ್ತಾ ಬರುವ ಮೂಲಕ ಶೀಘ್ರವೇ ಉತ್ತಮ ಪರಿಣಾಮವನ್ನು ಗಮನಿಸಬಹುದು.

ಕೋಕೋ ಬೆಣ್ಣೆ. (Cocoa Butter)

ಕೋಕೋ ಬೆಣ್ಣೆ. (Cocoa Butter)

ಕಲೆಗಳನ್ನು ನಿವಾರಿಸುವ ಶಕ್ತಿ ಇರುವ ನೈಸರ್ಗಿಕ ಉತ್ಪನ್ನಗಳಲ್ಲಿ ಕೋಕೋ ಬೆಣ್ಣೆ ಸಹಾ ಒಂದು. ಕಲೆ ಇರುವ ಭಾಗದಲ್ಲಿ ಹೆಚ್ಚಿನ ಆರ್ದ್ರತೆ ಒದಗಿಸಿ ಈ ಭಾಗವನ್ನು ಸಡಿಲಗೊಳಿಸುವ ಮೂಲಕ ಚರ್ಮದ ಹೊರಮತ್ತು ನಡುಪದರಗಳನ್ನು ಮೃದುವಾಗಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಅಪ್ಪಟ ಕೋಕೋ ಬೆಣ್ಣೆಯನ್ನು ಬಳಸುವುದು ಅತ್ಯುತ್ತಮ. ಆದರೆ ಈ ಬೆಣ್ಣೆ ತಾಜಾ ರೂಪದಲ್ಲಿ ಲಭಿಸುವುದು ದುರ್ಲಭವಾಗಿರುವ ಕಾರಣ ಕೋಕೋ ಬೆಣ್ಣೆಯನ್ನು ಬಳಸಿರುವ ಉತ್ತಮ ಗುಣಮಟ್ಟದ ಪ್ರಸಾದನಗಳನ್ನು ಬಳಸಬಹುದು. ಈ ಪ್ರಸಾದನವನ್ನು ಕಲೆಯಿರುವ ಭಾಗದ ಮೇಲೆ ತೆಳುವಾಗಿ ಹಚ್ಚಿ ಹೆಚ್ಚಿನ ಒತ್ತಡವಿಲ್ಲದ, ವೃತ್ತಾಕಾರದಲ್ಲಿ ಕೆಲ ನಿಮಿಷಗಳ ಕಾಲ ಮಸಾಜ್ ಮಾಡಿಕೊಂಡು ಬಳಿಕ ಉಗುರು ಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಬೇಕು. ಉತ್ತಮ ಹಾಗೂ ಶೀಘ್ರ ಪರಿಣಾಮಕ್ಕಾಗಿ ದಿನಕ್ಕೆರಡು ಬಾರಿ ಈ ವಿಧಾನವನ್ನು ಅನುಸರಿಸಬೇಕು.

Most Read: ಈ 5 ರಾಶಿಚಕ್ರದವರು 'ಐ ಲವ್ ಯು' ಅಂತ ಹೇಳಲು ತುಂಬಾನೇ ಕಷ್ಟ ಪಡುತ್ತಾರಂತೆ!

ಅವಶ್ಯಕ ತೈಲ

ಅವಶ್ಯಕ ತೈಲ

ಈ ತೈಲಗಳಿಗೆ ಕಲೆಗಳನ್ನು ನಿವಾರಿಸುವ ಗುಣವೂ ಇದೆ. ಇದಕ್ಕಾಗಿ ಅತ್ಯುತ್ತಮವಾದ ಆಯ್ಕೆಗಳೆಂದರೆ ಕೊಬ್ಬರಿ ಎಣ್ಣೆ ಮತ್ತು ಆಲಿವ್ ಎಣ್ಣೆ. ತಣ್ಣನೆಯ ವಿಧಾನದಲ್ಲಿ ಹಿಂಡಿದ ಎಣ್ಣೆಗಳೇ ಅತ್ಯುತ್ತಮವಾಗಿದ್ದು ಇವುಗಳಲ್ಲಿ ಹೆಚ್ಚಿನ ಆಮ್ಲೀಯತೆ ಇರುವ ಕಾರಣ ಉತ್ತಮ ಫಲಿತಾಂಶ ಒದಗಿಸುತ್ತವೆ. ವಿಶೇಷವಾಗಿ ಆಲಿವ್ ಎಣ್ಣೆಯಲ್ಲಿ ವಿಟಮಿನ್ ಇ ಮತ್ತು ವಿಟಮಿನ್ ಕೆ ಹೇರಳವಾಗಿದೆ ಹಾಗೂ ಕೊಬ್ಬರಿ ಎಣ್ಣೆಯಲ್ಲಿರುವ ಪೋಷಕಾಂಶಗಳು ಹೊಸ ಜೀವಕೋಶಗಳನ್ನು ಬೆಳೆಸುವ ಜೊತೆಗೇ ಅಗತ್ಯ ಆರ್ದ್ರತೆಯನ್ನೂ ಒದಗಿಸುತ್ತದೆ. ಹಾಗಾಗಿ ಸಮಪ್ರಮಾಣದಲ್ಲಿ ಕೊಬ್ಬರಿ ಮತ್ತು ಆಲಿವ್ ಎಣ್ಣೆಗಳನ್ನು ಮಿಶ್ರಣ ಮಾಡಿ ಇದಕ್ಕೆ ಕೆಲವು ತೊಟ್ಟು ಲ್ಯಾವೆಂಡರ್ ಎಣ್ಣೆಯನ್ನು ಬೆರೆಸಿ ನಿತ್ಯವೂ ಒಂದೇ ಸಮಯದಲ್ಲಿ ಕಲೆಗಳ ಮೇಲೆ ಹಚ್ಚಿಕೊಳ್ಳುವ ಮೂಲಕ ಶೀಘ್ರವೇ ಈ ಕಲೆಗಳೆಲ್ಲಾ ಮಾಯವಾಗಿ ಕಾಂತಿಯುಕ್ತ ತ್ವಚೆಯನ್ನು ಪಡೆಯಬಹುದು.

English summary

Home Remedies to Get Rid Of Scars and dark spots On Legs

The legs scars can stop you from exposing your sexy legs and make you feel embarrassed. Not to worry we do have couple of home-made products that can treat to get rid of scars, the output of these homemade products can slightly take some time but it will definitely show the result.
Story first published: Friday, February 22, 2019, 13:22 [IST]
X
Desktop Bottom Promotion