For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಒಡೆದ ಹಿಮ್ಮಡಿಗಳಿಗೆ ಕೆಲವು ನೈಸರ್ಗಿಕ ದೇಸೀ ಮನೆಮದ್ದುಗಳು

|

ಚಳಿಗಾಲ ಬಂತೆಂದರೆ ಸಾಕು ಹಲವಾರು ದೈಹಿಕ ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭವಾಗುವುದು. ಇದರಲ್ಲಿ ಅತಿಯಾಗಿ ಕಾಡುವ ಸಮಸ್ಯೆಯೇ ಕಾಲಿನ ಹಿಮ್ಮಡಿ ಒಡೆಯುವುದು. ಇದು ಸಾಮಾನ್ಯಕ್ಕಿಂತ ತೀವ್ರ ರೀತಿಯ ನೋವನ್ನು ಉಂಟು ಮಾಡುವುದು ಮಾತ್ರವಲ್ಲದೆ ತೀವ್ರವಾಗಿ ಒಡೆದರೆ ಅದರಿಂದ ರಕ್ತಸ್ರಾವವು ಆಗುವುದು. ಇಂತಹ ಸಮಯದಲ್ಲಿ ಹೆಚ್ಚಾಗಿ ಜನರು ಹಲವಾರು ಕ್ರೀಮ್ ಹಾಗೂ ಲೋಷನ್ ಗಳನ್ನು ಬಳಸಿಕೊಳ್ಳುವರು.

ಕೈಗಳು, ಕುತ್ತಿಗೆ ಹಾಗೂ ಮುಖಕ್ಕೆ ಕ್ರೀಮ್ ಹಾಗೂ ಲೋಷನ್

ಕೈಗಳು, ಕುತ್ತಿಗೆ ಹಾಗೂ ಮುಖಕ್ಕೆ ಕ್ರೀಮ್ ಹಾಗೂ ಲೋಷನ್

ಹಚ್ಚಿಕೊಳ್ಳುವವರು ಕಾಲಿನ ಹಿಮ್ಮಡಿ ಬಗ್ಗೆ ನಿರ್ಲಕ್ಷ್ಯ ಮಾಡುವರು. ಹೀಗಾಗಿ ಸಮಸ್ಯೆಯು ಮತ್ತಷ್ಟು ಹೆಚ್ಚಾಗುವುದು. ಕೆಲವೊಂದು ಸಲ ಕಾಲಿನ ಹಿಮ್ಮಡಿ ಒಡೆಯುವುದರಿಂದ ನಡೆದಾಡಲು ಕಷ್ಟಪಡಬೇಕಾಗುತ್ತದೆ. ಹೀಗಾಗಿ ಒಡೆದ ಹಿಮ್ಮಡಿ ನಿವಾರಣೆ ಮಾಡಲು ಕೆಲವೊಂದು ಮನೆಮದ್ದನ್ನು ಇಲ್ಲಿ ಹೇಳಿ ಕೊಡಲಾಗುವುದು. ಇದನ್ನು ನೀವು ಬಳಸಿಕೊಂಡರೆ ಕಾಲು ಹಾಗೂ ಹಿಮ್ಮಡಿಯು ತುಂಬಾ ನಯ ಮತ್ತು ಮೃದುವಾಗುವುದು.

ಎಣ್ಣೆಯ ಮಸಾಜ್

ಎಣ್ಣೆಯ ಮಸಾಜ್

ಎಣ್ಣೆಯ ನೈಸರ್ಗಿಕ ಮೊಶ್ಚಿರೈಸರ್ ಎಂದು ಪರಿಗಣಿಸಲಾಗಿದೆ. ಇದು ಕೇವಲ ಕಾಲಿಗೆ ಮಾತ್ರವಲ್ಲದೆ ದೇಹದ ಯಾವುದೇ ಭಾಗವೂ ಒಣಗಿದ್ದರೆ ಅದಕ್ಕೆ ಮೊಶ್ಚಿರೈಸ್ ನೀಡುವುದು. ನೀವು ಯಾವುದೇ ರೀತಿಯ ಹೈಡ್ರೋಜನೀಕರಿಸಿದ ಎಣ್ಣೆ ಬಳಸಬಹುದು ಅಥವಾ ಎಲ್ಲವನ್ನು ಮಿಶ್ರಣ ಮಾಡಿಕೊಂಡು ಅದರಿಂದ ಲಾಭ ಪಡೆದುಕೊಳ್ಳಬಹುದು.

ಗ್ಲಿಸರಿನ್ ಮತ್ತು ರೋಸ್ ವಾಟರ್

ಗ್ಲಿಸರಿನ್ ಮತ್ತು ರೋಸ್ ವಾಟರ್

ಗ್ಲಿಸರಿನ್ ತುಂಬಾ ಮೊಶ್ಚಿರೈಸ್ ನೀಡುವಂತಹ ಸಾಮಗ್ರಿಯಾಗಿದೆ. ಒಡೆದ ಹಿಮ್ಮಡಿಗಳಿಗೆ ಗ್ಲಿಸರಿನ್ ಹಚ್ಚಿಕೊಂಡರೆ ಅದರಿಂದ ಬೇಗನೆ ಗುಣಮುಖವಾಗಲು ನೆರವಾಗುವುದು. ಒಂದು ಚಮಚ ಗ್ಲಿಸರಿನ್ ಮತ್ತು ಎರಡು ಚಮಚ ರೋಸ್ ವಾಟರ್ ಹಾಗೂ ಅರ್ಧ ಚಮಚ ತಾಜಾ ಲಿಂಬೆರಸವನ್ನು ಬೆರೆಸಿಕೊಂಡು ಮಿಶ್ರಣ ಮಾಡಿ. ಈ ಮಿಶ್ರಣವನ್ನು ನೀವು ಒಡೆದ ಕಾಲುಗಳಿಗೆ ಹಚ್ಚಿಕೊಂಡು ಬಳಿಕ ಒಂದು ಸ್ವಚ್ಛವಾಗಿರುವ ಸಾಕ್ಸ್ ಧರಿಸಿ. ರಾತ್ರಿ ಮಲಗುವ ಮೊದಲು ನೀವು ಈ ಕ್ರಮವನ್ನು ಅಳವಡಿಸಿಕೊಂಡು ಹೋಗಬೇಕು. ಇದರಿಂದ ಯಾವುದೇ ರೀತಿಯ ಬಿರುಕು ಇಲ್ಲದೆ ನಯ ಹಾಗೂ ಮೃಧುವಾದ ಹಿಮ್ಮಡಿಯು ನಿಮ್ಮದಾಗುವುದು.

Most Read: ಹಿಮ್ಮಡಿ ಕಾಲು ಒಡೆದಿದ್ರೆ, ಒಮ್ಮೆ ಈ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ...

ಓಟ್ ಮೀಲ್ ಮತ್ತು ಜೊಜೊಬಾ ತೈಲದ ಮಿಶ್ರಣ

ಓಟ್ ಮೀಲ್ ಮತ್ತು ಜೊಜೊಬಾ ತೈಲದ ಮಿಶ್ರಣ

ಒಡೆದಿರುವಂತಹ ಹಿಮ್ಮಡಿಗಳಿಗೆ ಮತ್ತೊಂದು ಪರಿಹಾರವೆಂದರೆ ಹುಡಿ ಮಾಡಿದ ಓಟ್ ಮೀಲ್ ಮತ್ತು ಜೊಜೊಬಾ ತೈಲ. ಒಂದು ಚಮಚ ಓಟ್ ಮೀಲ್ ನ್ನು ಮಿಕ್ಸಿಗೆ ಹಾಕಿ ಹುಡಿ ಮಾಡಿ. ಇದನ್ನು ಒಂದು ಪಿಂಗಾಣಿಗೆ ಹಾಕಿಕೊಳ್ಳಿ ಮತ್ತು ಜೊಜೊಬಾ ಎಣ್ಣೆ ಹಾಕಿಕೊಂಡು ದಪ್ಪಗಿನ ಪೇಸ್ಟ್ ಮಾಡಿ. ಇದನ್ನು ಹಿಮ್ಮಡಿಗೆ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ ಮತ್ತು ಅರ್ಧ ಗಂಟೆ ಕಾಲ ಹಾಗೆ ಬಿಡಿ. ಇದರ ಬಳಿಕ ತಣ್ಣೀರಿನಿಂದ ಕಾಲುಗಳನ್ನು ತೊಳೆಯಿರಿ.

ಅಕ್ಕಿ ಹಿಟ್ಟಿನ ಸ್ಕ್ರಬ್

ಅಕ್ಕಿ ಹಿಟ್ಟಿನ ಸ್ಕ್ರಬ್

ಕಾಲಿನ ಚರ್ಮವನ್ನು ಕಿತ್ತು ಹಾಕದೆ ಇರುವುದು ಕೂಡ ಒಣ ಹಾಗೂ ಒಡೆದ ಹಿಂಗಾಲಿಗೆ ಕಾರಣವಾಗಿದೆ. ಇದರಿಂದಾಗಿ ನೀವು ಸ್ಕ್ರಬ್ ಮಾಡಬೇಕು. ಇದಕ್ಕಾಗಿ ಅಕ್ಕಿ ಹಿಟ್ಟನ್ನು ಬಳಸಿಕೊಂಡು ಮನೆಯಲ್ಲೇ ಸ್ಕ್ರಬ್ ಮಾಡಿಕೊಳ್ಳಿ. ಒಂದು ಚಮಚ ಅಕ್ಕಿ ಹಿಟ್ಟು, ಎರಡು ಚಮಚ ಜೇನುತುಪ್ಪ ಮತ್ತು ಒಂದು ಚಮಚ ಲಿಂಬೆರಸ ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡ ಬಳಿಕ ಹತ್ತು ನಿಮಿಷ ಕಾಲ ಹಾಗೆ ಹಿಮ್ಮಡಿಗೆ ಸರಿಯಾಗಿ ಸ್ಕ್ರಬ್ ಮಾಡಿ. ಹಿಮ್ಮಡಿ ಒಡೆದ ಸ್ಥಿತಿಯು ಗಂಭೀರವಾಗಿದ್ದರೆ ಆಗ ನೀವು 15 ನಿಮಿಷ ಕಾಲ ಕಾಲುಗಳನ್ನು ಬಿಸಿ ನೀರಿನಲ್ಲಿ ಮುಳುಗಿಸಿಡಿ. ಇದರ ಬಳಿಕ ಸ್ಕ್ರಬ್ ಮಾಡಿಕೊಳ್ಳಿ.

ಬೇವಿನ ಎಲೆ ಮತ್ತು ಅರಶಿನ

ಬೇವಿನ ಎಲೆ ಮತ್ತು ಅರಶಿನ

ಇದೊಂದು ಆಯುರ್ವೇದದ ಚಿಕಿತ್ಸೆಯಾಗಿದ್ದು, ಶತಮಾನಗಳಿಂದಲೂ ಇದನ್ನು ಒಡೆದ ಹಿಮ್ಮಡಿ ಸಮಸ್ಯೆ ನಿವಾರಣೆ ಮಾಡಲು ಬಳಸಿಕೊಂಡು ಬರಲಾಗುತ್ತಿದೆ. ಶಿಲೀಂಧ್ರ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಬೇವಿನ ಎಲೆಗಳನ್ನು ನೀವು ಅರಶಿನದ ಜತೆಗೆ ಮಿಶ್ರಣ ಮಾಡಿಕೊಳ್ಳಿ. ಇದರ ಬಳಿಕ ಒಡೆದ ಹಿಮ್ಮಡಿಗೆ ಹಚ್ಚಿಕೊಂಡರೆ ಅದರಿಂದ ನಯ ಹಾಗೂ ಮೃಧುವಾದ ಹಿಮ್ಮಡಿಯು ನಿಮ್ಮದಾಗುವುದು. ರಕ್ತಸ್ರಾವವಾಗುವಂತಹ ಹಿಮ್ಮಡಿಗಳಿಗೆ ಇದು ತುಂಬಾ ಪರಿಣಾಮಕಾರಿಯಾಗಿ ಇರುವುದು.

Most Read: ಒಡೆದ ಹಿಮ್ಮಡಿ ಸಮಸ್ಯೆಗೆ, ಫಟಾಫಟ್ ಟಿಪ್ಸ್-ಒಮ್ಮೆ ಪ್ರಯತ್ನಿಸಿ

ಹಾಲು ಮತ್ತು ಜೇನುತುಪ್ಪ

ಹಾಲು ಮತ್ತು ಜೇನುತುಪ್ಪ

ಕಾಲಿನ ಬಗ್ಗೆ ಸರಿಯಾದ ಕಾಳಜಿ ವಹಿಸದೆ ಇದ್ದಾಗ ಹಿಮ್ಮಡಿ ಒಡೆಯುವಂತಹ ಸಮಸ್ಯೆಯು ಕಾಡುವುದು. ಇದರಿಂದ ನೀವು ದಿನನಿತ್ಯವು ಕಾಲನ್ನು ಶುಚಿಗೊಳಿಸಬೇಕು ಮತ್ತು ಹಿಮ್ಮಡಿಗಳನ್ನು ಮೊಶ್ಚಿರೈಸ್ ಮಾಡಬೇಕು. ಚಳಿಗಾಲದಲ್ಲಿ ವಾರಕ್ಕೊಮ್ಮೆ ಹಿಮ್ಮಡಿಯ ಚರ್ಮ ಕಿತ್ತುಹಾಕಬೇಕು. ಈಗಾಗಲೇ ಹಿಮ್ಮಡಿಯು ಒಡೆದಿದ್ದರೆ ಆಗ ನೀವು ಹಾಲು ಮತ್ತು ಜೇನುತುಪ್ಪ ಪ್ರತಿನಿತ್ಯ ಬಳಸಿಕೊಂಡು ಕಾಲುಗಳಿಗೆ ಮೊಶ್ಚಿರೈಸ್ ನೀಡಬೇಕಾಗಿದೆ.

ಹಣ್ಣಿನ ಮಾಸ್ಕ್

ಹಣ್ಣಿನ ಮಾಸ್ಕ್

ಹಣ್ಣುಗಳಲ್ಲಿ ಹಲವಾರು ರೀತಿಯ ಕಿಣ್ವಗಳು ಮತ್ತು ಅದ್ಭುತವಾಗಿರುವ ಅಂಶಗಳು ಇವೆ. ಇದರಿಂದ ಒಡೆದ ಹಿಮ್ಮಡಿಯು ನಿವಾರಣೆಯಾಗುವುದು. ಬಾಳೆಹಣ್ಣು, ಅನಾನಸು, ಅವಕಾಡೋ, ಪಪ್ಪಾಯಿ ತೆಗೆದುಕೊಂಡು ಅದನ್ನು ಸರಿಯಾಗಿ ಪೇಸ್ಟ್ ಮಾಡಿ ಅದರಿಂದ ಚಳಿಗಾಲದಲ್ಲಿ ಹಿಮ್ಮಡಿಗಳಿಗೆ ಮಸಾಜ್ ಮಾಡಿ. ಬಾಳೆಹಣ್ಣು ಮತ್ತು ಪಪ್ಪಾಯಿ ಒಳ್ಳೆಯ ಆಯ್ಕೆ. ಯಾಕೆಂದರೆ ಇದನ್ನು ಸುಲಭವಾಗಿ ಹಿಚುಕಬಹುದು. ಇದನ್ನು ಹಾಗೆ ಉಜ್ಜಿಕೊಳ್ಳಿ ಅಥವಾ ಹಣ್ಣುಗಳ ಮಿಶ್ರಣ ಮಾಡಿ ಉಜ್ಜಿಕೊಳ್ಳಬಹುದು.

English summary

Desi remedies for cracked heels during winters

During winter, we apply lotions and creams to our hands, neck and face but miss out the most important part, the feet, thus causing cracked heels.
X
Desktop Bottom Promotion