For Quick Alerts
ALLOW NOTIFICATIONS  
For Daily Alerts

ಬಾದಾಮಿ ಎಣ್ಣೆ: ಸ್ವಲ್ಪ ದುಬಾರಿ, ಆದರೆ ಸೌಂದರ್ಯ ವಿಷಯದಲ್ಲಿ ಎತ್ತಿದ ಕೈ!

|

ಹೆಣ್ಣು ಮಕ್ಕಳಿಗೆ ಕೂದಲು ಮತ್ತು ತ್ವಚೆಯ ಕಾಳಜಿ ಮಾಡುವುದು ಎಂದರೆ ಏನೋ ಹುರುಪು. ಅದಕ್ಕಾಗಿ ಟಿವಿಯಲ್ಲಿ ಬರುವ ಇಲ್ಲವೇ ಸ್ನೇಹಿತರ ಮೂಲಕ ತಿಳಿಯಲಾಗುವ ಬಗೆ ಬಗೆಯ ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತಲೇ ಇರುತ್ತಾರೆ. ಆದರೆ ಸರಿಯಾದ ಫಲಿತಾಂಶ ದೊರಕದೇ ಇದ್ದಾಗ ಏನೋ ಒಂದು ಬೇಸರ ಅವರ ಮನದಲ್ಲಿ. ನಾವು ಎಷ್ಟೇ ಮಾಡಿದರೂ ಸೂಕ್ತ ಫಲಿತಾಂಶ ದೊರೆಯುವುದಿಲ್ಲ ಎಂಬುದು ಮನದಲ್ಲಿ ಅಸಮಾಧಾನವನ್ನುಂಟು ಮಾಡುತ್ತಿರುತ್ತದೆ. ಅನಾದಿ ಕಾಲದಿಂದಲೂ ಆಯುರ್ವೇದದಲ್ಲಿ ತ್ವಚೆ ಮತ್ತು ಕೂದಲಿನ ಕಾಳಜಿಗಾಗಿ ಹಲವಾರು ರೀತಿಯ ಮನೆಮದ್ದುಗಳ ವಿವರಗಳನ್ನು ನೀಡುತ್ತಿದ್ದಾರೆ.

ಋಷಿಗಳ ಕಾಲದಿಂದಲೂ ಕೂಡ ಪ್ರಾಕೃತಿಕ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದರಿಂದ ಯಾವುದೇ ಅಡ್ಡಪರಿಣಾಮಗಳು ಇಲ್ಲದೇ ಇರುವುದರಿಂದ ಅವುಗಳನ್ನು ತ್ವಚೆ ಮತ್ತು ಕೂದಲಿನ ಸರ್ವ ಸಮಸ್ಯೆಗಳಿಗೆ ಬಳಸುತ್ತಿದ್ದರು. ಇಂತಹ ಪ್ರಾಕೃತಿಕ ಅಂಶಗಳನ್ನು ಒಳಗೊಂಡಿರುವ ವಸ್ತುವಾಗಿದೆ ಬಾದಾಮಿ ಎಣ್ಣೆ. ಇದು ನಿಮ್ಮ ಸೌಂದರ್ಯದ ಬಗೆಗಿನ ಹೆಚ್ಚಿನ ಕೊರತೆಗಳನ್ನು ನಿವಾರಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ನಿಮ್ಮ ಸಂಪೂರ್ಣ ತ್ವಚೆ ಮತ್ತು ಕೇಶ ಕಾಳಜಿಯನ್ನು ಬಾದಾಮಿ ಎಣ್ಣೆ ಮಾಡುತ್ತದೆ.

Benefits of almond oil in kannada

ನಿಮ್ಮ ತ್ವಚೆ ಯಾವುದೇ ಬಗೆಯದ್ದಾಗಲೀ ಬಾದಾಮಿ ಎಣ್ಣೆ ಮಾಡುವ ಚಮತ್ಕಾರ ಮಾತ್ರ ಅತ್ಯದ್ಭುತವಾದುದು. ಎಲ್ಲಾ ತ್ವಚೆ ಪ್ರಕಾರಗಳಿಗೆ ಇದು ಅತ್ಯುತ್ತಮ ಎಂದೆನಿಸಿದೆ. ಬೇರೆ ಬೇರೆ ಸಾಮಾಗ್ರಿಗಳೊಂದಿಗೆ ಬಳಸಿ ಕೂಡ ಬಾದಾಮಿ ಎಣ್ಣೆಯನ್ನು ಬಳಸಬಹುದಾಗಿದೆ. ಕ್ರೀಮ್‌ಗಳು, ಆಯಿಂಟ್‌ಮೆಂಟ್‌ಗಳು, ಸೋಪ್, ಲೋಶನ್‌ಗಳಲ್ಲಿ ಈ ಎಣ್ಣೆಯ ಬಳಕೆಯನ್ನು ಮಾಡುತ್ತಾರೆ ಅಂತೆಯೇ ಮೊಡವೆ, ತ್ವಚೆಯ ಸೋಂಕುಗಳು, ನೆರಿಗೆಗಳು ಮತ್ತು ಕಲೆಗಳನ್ನು ನಿವಾರಿಸುವಲ್ಲಿ ಬಾದಾಮಿ ಎಣ್ಣೆ ಎತ್ತಿದ ಕೈಯಾಗಿದೆ. ಇದು ನಿಮ್ಮ ತ್ವಚೆಯೆ ಮಾಯಿಶ್ಚರೈಸರ್‌ನಂತೆ ಕೆಲಸ ಮಾಡುತ್ತದೆ ಮತ್ತು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ತ್ವಚೆಯ ಕಾಳಜಿಯನ್ನು ಮಾಡುತ್ತದೆ.

ತ್ವಚೆಗೆ ಬಾದಾಮಿ ಎಣ್ಣೆಯಿಂದ ಆಗುವ ಪ್ರಯೋಜನಗಳು

ಇಂದಿನ ಲೇಖನದಲ್ಲಿ ಬಾದಾಮಿ ಎಣ್ಣೆಯ ಕೆಲವೊಂದು ಪ್ರಮುಖ ಗುಣಲಕ್ಷಣಗಳು ಮತ್ತು ಪ್ರಯೋಜನಗಳನ್ನು ತಿಳಿಸುತ್ತಿದ್ದು ಇದನ್ನು ತಿಳಿದ ನಂತರ ಇಂದಿನಿಂದಲೇ ಬಾದಾಮಿ ಎಣ್ಣೆಯನ್ನು ನೀವು ನಿತ್ಯವೂ ಬಳಸಲು ಪ್ರಾರಂಭಿಸುವುದು ಖಂಡಿತ.

1. ಮೊಡವೆ ನಿವಾರಣೆ

1. ಮೊಡವೆ ನಿವಾರಣೆ

ಪಿಎಚ್ ನಿಯಂತ್ರಣವನ್ನು ಮಾಡುವ ಮೂಲಕ ಹೆಚ್ಚಿನ ಎಣ್ಣೆಯನ್ನು ನಿಯಂತ್ರಿಸಿ ಮೊಡವೆ ತಡೆಗಟ್ಟಲು ಬಾದಾಮಿ ಎಣ್ಣೆ ಕೆಲಸ ಮಾಡುತ್ತದೆ. ನಿತ್ಯವೂ ಈ ಎಣ್ಣೆಯನ್ನು ಬಳಸಲು ಇದನ್ನು ಲಿಂಬೆ ರಸದೊಂದಿಗೆ ಬೆರೆಸಿ ಹಚ್ಚಿಕೊಳ್ಳಿ. ಹತ್ತಿಯ ಉಂಡೆಯನ್ನು ಬಳಸಿಕೊಂಡು ಮೊಡವೆ ಇರುವ ಜಾಗಕ್ಕೆ ಇದನ್ನು ಹಚ್ಚಿ ಮೊಡವೆ ಕೂಡಲೇ ನಿವಾರಣೆಯಾಗುತ್ತದೆ.

2. ಒಣ ತ್ವಚೆಯ ನಿವಾರಣೆ

2. ಒಣ ತ್ವಚೆಯ ನಿವಾರಣೆ

ಒಣ ತ್ವಚೆ ಕೊಂಚ ಸವಾಲಿನದ್ದಾಗಿದೆ. ಒಣ ತ್ವಚೆಯನ್ನು ತಡೆಗಟ್ಟಲು ಹಲವಾರು ಔಷಧಿಗಳಿವೆ. ಆದರೆ ಬಾದಾಮಿ ಎಣ್ಣೆ ಅತ್ಯುತ್ತಮವಾಗಿದ್ದು ಟೋನರ್‌ನಂತೆ ಇದನ್ನು ತ್ವಚೆಗೆ ಬಳಸಬಹುದಾಗಿದೆ. ಯುವತ್ವವನ್ನು ಕಾಪಾಡಲು ಮತ್ತು ತಾಜಾ ಆಗಿರಿಸಲು ಬಾದಾಮಿ ಎಣ್ಣೆ ಪ್ರಮುಖವಾದುದು. ಇದು ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿದೆ ಆದ್ದರಿಂದ ಬಾದಾಮಿ ಎಣ್ಣೆ ಅತ್ಯುತ್ತಮವಾಗಿದೆ.

ಸ್ಪ್ರೇ ಬಾಟಲಿನಲ್ಲಿ 2 ಚಮಚ ಬಾದಾಮಿ ಎಣ್ಣೆಯನ್ನು ಹಾಕಿ ಮತ್ತು ಅದಕ್ಕೆ 1 ಚಮಚ ರೋಸ್ ವಾಟರ್ ಬೆರೆಸಿ. ಚೆನ್ನಾಗಿ ಶೇಕ್ ಮಾಡಿ. ನಿಮ್ಮ ಮುಖಕ್ಕೆ ಇದನ್ನು ಸ್ಪ್ರೇ ಮಾಡಿ. ನಿತ್ಯವೂ ಇದನ್ನು ಬಳಸಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ. ಇದನ್ನು ನೀವು ಫ್ರಿಡ್ಜ್‌ನಲ್ಲಿ ಕೂಡ ಸಂಗ್ರಹಿಸಿಡಬಹುದಾಗಿದೆ.

3. ತುಟಿಯನ್ನು ಸುಕೋಮಲವಾಗಿಸುತ್ತದೆ

3. ತುಟಿಯನ್ನು ಸುಕೋಮಲವಾಗಿಸುತ್ತದೆ

ನಿಮ್ಮ ತುಟಿಯನ್ನು ಕೋಮಲಗೊಳಿಸುವ ಸಾಮರ್ಥ್ಯ ಬಾದಾಮಿ ಎಣ್ಣೆಗಿದೆ. ನಿಮ್ಮ ತುಟಿಯ ರಂಗನ್ನು ಇದು ನೈಸರ್ಗಿಕವಾಗಿ ಹೊಳೆಯಿಸುತ್ತದೆ. ನಿತ್ಯವೂ ಬಾದಾಮಿ ಎಣ್ಣೆಯಿಂದ ತುಟಿಗೆ ಮಸಾಜ್ ಮಾಡಿಕೊಳ್ಳುವುದು ನಿಮ್ಮ ತುಟಿಯನ್ನು ಮೃದುವಾಗಿಸಿ ಕೆಂಪಾಗಿಸುತ್ತದೆ. ನೀವು ಮಲಗುವ ಮುನ್ನ ಈ ಎಣ್ಣೆಯನ್ನು ತುಟಿಗೆ ಹಚ್ಚಿ. ನಿಮ್ಮ ಗುಲಾಬಿ ಬಣ್ಣದ ತುಟಿ ರಂಗು ಬೇಕೆಂದರೆ ಬಾದಾಮಿ ಎಣ್ಣೆಯನ್ನು ಹೀಗೆ ಬಳಸಿಕೊಳ್ಳಬಹುದು.

ಬೀಟ್‌ರೂಟ್ ಅನ್ನು ತುಂಡರಿಸಿ ಅದನ್ನು ಸೂರ್ಯನ ಬಿಸಿಲಿನಲ್ಲಿ ಒಣಗಿಸಿ. ಇದನ್ನು ಗ್ರೈಂಡ್ ಮಾಡಿಕೊಂಡು ಹುಡಿ ತಯಾರಿಸಿ. ಒಂದು ಚಿಟಿಕೆಯಷ್ಟು ಪುಡಿಗೆ ಬಾದಾಮಿ ಎಣ್ಣೆ ಸೇರಿಸಿ. ನಿಮ್ಮ ತುಟಿಗೆ ಇದನ್ನು ಹಚ್ಚಿಕೊಳ್ಳಿ ಮತ್ತು 10 ನಿಮಿಷ ಒಣಗಿಸಿ. ನಂತರ ತಣ್ಣೀರಿನಿಂದ ತುಟಿಯನ್ನು ತೊಳೆಯಿರಿ. ದಿನಕ್ಕೊಕ್ಕೆ ಇದನ್ನು ಮಾಡಿ.

4. ಮೇಕಪ್ ರಿಮೂವರ್

4. ಮೇಕಪ್ ರಿಮೂವರ್

ಮೇಕಪ್ ರಿಮೂವರ್‌ಗಳಿಗೆ ಖರ್ಚು ಮಾಡುವ ಬದಲಿಗೆ ನೈಸರ್ಗಿಕವಾಗಿ ವಿಧಾನವನ್ನು ನೀವು ಬಳಸಿಕೊಳ್ಳಬಹುದು. ಬಾದಾಮಿ ಎಣ್ಣೆಯಲ್ಲಿ ಹತ್ತಿಯನ್ನು ಮುಳುಗಿಸಿ ಮತ್ತು ನಿಮ್ಮ ಮೇಕಪ್ ಇರುವ ಮುಖಕ್ಕೆ ಹಚ್ಚಿ. ನಿಮ್ಮ ಮುಖದಿಂದ ಮೇಕಪ್ ಸಂಪೂರ್ಣ ನಿವಾರಣೆಯಾಗುವವರೆಗೆ ಇದನ್ನು ಹಚ್ಚಿ. ರಾತ್ರಿ ಮಲಗುವ ಮುನ್ನ ಹೀಗೆ ಮಾಡಿ. ನಿಮ್ಮ ಮುಖದಿಂದ ಮೇಕಪ್ ಅನ್ನು ನಿವಾರಿಸುವುದರ ಜೊತೆಗೆ ತ್ವಚೆಗೆ ಮಾಯಿಶ್ಚರೈಸರ್‌ನಂತೆ ಕಾರ್ಯನಿರ್ವಹಿಸುತ್ತದೆ.

5. ಬಿರುಕು ಬಿಟ್ಟ ಪಾದಗಳಿಗೆ

5. ಬಿರುಕು ಬಿಟ್ಟ ಪಾದಗಳಿಗೆ

ಬಾದಾಮಿ ಎಣ್ಣೆ ಮತ್ತು ರೋಸ್ ವಾಟರ್ ಅನ್ನು ಬಳಸಿಕೊಂಡು ನಿಮ್ಮ ಬಿರುಕು ಬಿಟ್ಟ ಪಾದಗಳನ್ನು ಕೋಮಲಗೊಳಿಸಬಹುದು. ಸಮ ಪ್ರಮಾಣದಲ್ಲಿ ಬಾದಾಮಿ ಎಣ್ಣೆಯನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ರೋಸ್ ವಾಟರ್ ಸೇರಿಸಿ. ನಿಮ್ಮ ಪಾದಕ್ಕೆ ಈ ಮಿಶ್ರಣವನ್ನು ಹಚ್ಚಿ, ನೀವು ಮಲಗುವ ಮುನ್ನ ಇದನ್ನು ಬಳಸಬೇಕು. ನಂತರ ಮರುದಿನ ತಣ್ಣೀರಿನಿಂದ ಪಾದಗಳನ್ನು ತೊಳೆದುಕೊಳ್ಳಿ. ನಿಮಗೆ ಬೇಕಾದಾಗ ಇದನ್ನು ಬಳಸಿ.

6. ಟ್ಯಾನ್ ನಿವಾರಣೆ

6. ಟ್ಯಾನ್ ನಿವಾರಣೆ

ಬೇಸಿಗೆ ಸಮಯದಲ್ಲಿ ಟ್ಯಾನ್ ಸಮಸ್ಯೆ ಹೆಚ್ಚಾಗಿರುತ್ತದೆ. ತ್ವಚೆಯ ಟ್ಯಾನ್ ನಿವಾರಣೆಗೆ ಬಾದಾಮಿ ಎಣ್ಣೆಯನ್ನು ಬಳಸಿ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. 1 ಚಮಚ ಕಡಲೆಹಿಟ್ಟನ್ನು ಒಂದು ಬೌಲ್‌ನಲ್ಲಿ ತೆಗೆದುಕೊಳ್ಳಿ ಇದಕ್ಕೆ 1 ಚಮಚ ಲಿಂಬೆ ರಸ ಸೇರಿಸಿ ಮತ್ತು 1 ಚಮಚ ಬಾದಾಮಿ ಎಣ್ಣೆಯನ್ನು ಮಿಶ್ರ ಮಾಡಿಕೊಳ್ಳಿ. ಟ್ಯಾನ್ ಇರುವ ಸ್ಥಳಕ್ಕೆ ಇದನ್ನು ಹಚ್ಚಿ. 15 ನಿಮಿಷಗಳ ನಂತರ ಅದನ್ನು ತಣ್ಣೀರಿನಿಂದ ತೊಳೆದುಕೊಳ್ಳಿ.

7. ಬಿರುಸಾಗಿರುವ ಕೂದಲಿಗೆ

7. ಬಿರುಸಾಗಿರುವ ಕೂದಲಿಗೆ

ಒಣ ಮತ್ತು ಹಾನಿಗೊಂಡಿರುವ ಕೂದಲು ಯಾವ ಮಹಿಳೆಯರಿಗೂ ಇಷ್ಟವಾಗುವುದಿಲ್ಲ. ಈ ಸಮಸ್ಯೆಗಾಗಿ ಇಲ್ಲಿ ಪರಿಹಾರವಿದೆ. ಸ್ವಲ್ಪ ಬಾದಾಮಿ ಎಣ್ಣೆಯನ್ನು ತೆಗೆದುಕೊಳ್ಳಿ ಮತ್ತು ಅದನ್ನು ನಿಮ್ಮ ಕೂದಲಿಗೆ ಹಚ್ಚಿ ಮಸಾಜ್ ಮಾಡಿ. 30 ನಿಮಿಷ ಹಾಗೆಯೇ ಬಿಡಿ ನಂತರ ತಣ್ಣೀರಿನಿಂದ ಮೃದುವಾದ ಶ್ಯಾಂಪೂ ಬಳಸಿ ಕೂದಲು ತೊಳೆದುಕೊಳ್ಳಿ. ರೇಷ್ಮೆಯಂತಹ ಕೂದಲನ್ನು ಪಡೆಯಲು ವಾರಕ್ಕೊಮ್ಮೆ ಈ ವಿಧಾನವನ್ನು ಅನುಸರಿಸಿ. ಕೂದಲ ಹೊಳಪನ್ನೂ ಹೆಚ್ಚಿಸುತ್ತದೆ!... ಹೌದು, ಕೂದಲ ಹೊಳಪು ಹೆಚ್ಚಿಸಲು ಇದುವರೆಗೆ ಹಲವು ಚಿಕಿತ್ಸೆ ಅಥವಾ ಸೀರಂಗಳನ್ನು ನೀವು ಉಪಯೋಗಿಸಿದ್ದಿರಬಹುದು. ಆದರೆ ಇದಕ್ಕೂ ಉತ್ತಮ ಪೋಷಣೆಯನ್ನು ಬಾದಾಮಿ ಎಣ್ಣೆ ನೀಡುತ್ತದೆ. ಇದಕ್ಕಾಗಿ ಸ್ನಾನದ ಬಳಿಕ ಕೂದಲು ಒದ್ದೆ ಇದ್ದಂತೆಯೇ ಕೆಲವು ಹನಿ ಬಾದಾಮಿ ಎಣ್ಣೆಯನ್ನು ಕೂದಲ ಬುಡದಿಂದ ತುದಿಯವರೆಗೂ ನಯವಾಗಿ ಹಚ್ಚಿ. ಇದರಿಂದ ಕೂದಲು ರೇಶ್ಮೆಯಂತೆ ಹೊಳೆಯುತ್ತದೆ ಹಾಗೂ ದೃಢವಾಗುತ್ತದೆ.

8. ಕಪ್ಪು ವರ್ತುಲವನ್ನು ನಿವಾರಿಸಲು

8. ಕಪ್ಪು ವರ್ತುಲವನ್ನು ನಿವಾರಿಸಲು

ನೀವು ಕಣ್ಣುಗಳ ಸುತ್ತಲು ಕಪ್ಪಗಿನ ವರ್ತುಲವನ್ನು ಹೊಂದಿದ್ದೀರಿ ಎಂದಾದಲ್ಲಿ ಬಾದಾಮಿ ಎಣ್ಣೆ ಇದಕ್ಕೆ ಪರಿಹಾರವನ್ನು ಒದಗಿಸಲಿದೆ. ಹತ್ತಿಯನ್ನು ಈ ಎಣ್ಣೆಯಲ್ಲಿ ಮುಳಗಿಸಿ ಮತ್ತು ಕಪ್ಪು ವರ್ತುಲದ ಕೆಳಗೆ ಹಚ್ಚಿ. ಇದು ಕಣ್ಣುಗಳ ಕೆಳಗಿರುವ ಊತವನ್ನು ನಿವಾರಿಸುತ್ತದೆ ಮತ್ತು ಕಪ್ಪು ವರ್ತುಲವನ್ನು ದೂರ ಮಾಡುತ್ತದೆ.

English summary

beauty-benefits-of-almond-oil-you-didn-t-know

Almond oil is one of the effective natural remedies for several beauty-related issues. It can either be used on its own or can be mixed with other ingredients for it to be more effective. Lets look into some natural home remedies using almond oil that you could use to solve your beauty woes.
X
Desktop Bottom Promotion