For Quick Alerts
ALLOW NOTIFICATIONS  
For Daily Alerts

ದೇಹದ ಆರೈಕೆಗೆ ಸರಳ ಬ್ಯೂಟಿ ಟಿಪ್ಸ್- ನೀವೂ ಪ್ರಯತ್ನಿಸಿ ನೋಡಿ

By Hemanth
|

ಸೌಂದರ್ಯ ಬೇಡವೆನ್ನುವವರು ಯಾರಿದ್ದಾರೆ ಹೇಳಿ? ಸೌಂದರ್ಯಕ್ಕೆ ಮಾರು ಹೋಗದವರು ಈ ಭೂಮಿ ಮೇಲೆ ಇರಲಿಕ್ಕಿಲ್ಲ. ಇದು ಪ್ರಕೃತಿ ಮೇಲಿನ ಸೌಂದರ್ಯವೇ ಆಗಿರಲಿ ಅಥವಾ ಮನುಷ್ಯದ ದೇಹದ ಸೌಂದರ್ಯವೇ ಆಗಿರಬಹುದು. ಅದರಲ್ಲೂ ಮನುಷ್ಯನು ತನ್ನ ಸೌಂದರ್ಯದ ಬಗ್ಗೆ ಕಾಳಜಿ ವಹಿಸುವುದು ಹೆಚ್ಚು. ಇದಕ್ಕಾಗಿ ಆತ ತನ್ನ ದೇಹದ ಆರೈಕೆ ಕಡೆ ಹೆಚ್ಚಿನ ಗಮನ ಹರಿಸುತ್ತಾನೆ. ಆದರೆ ರಾಕೆಟ್ ಶತಮಾನದಲ್ಲಿ ಪ್ರತಿಯೊಂದು ವೇಗದಲ್ಲೇ ಆಗುವ ಕಾರಣ ಹೆಚ್ಚಿನವರಿಗೆ ತಮ್ಮ ದೇಹದ ಆರೈಕೆಗೆ ಸಮಯವೇ ಸಿಗುವುದಿಲ್ಲ.

ಸಮಯ ಮಾತ್ರವಲ್ಲದೆ ಕಲುಷಿತ ವಾತಾವರಣ, ಬಿಸಿಲಿಗೆ ಅತಿಯಾಗಿ ಮೈಯೊಡ್ಡುವುದು, ರಾಸಾಯನಿಕ ಬಳಕೆ ಕೂಡ ದೇಹದ ಮೇಲೆ ಪರಿಣಾಮ ಬೀರುವುದು. ಈ ಲೇಖನದಲ್ಲಿ ರಾಸಾಯನಿಕ ಬಿಟ್ಟು ಕೆಲವೊಂದು ನೈಸರ್ಗಿಕವಾಗಿರುವ ದೇಹದ ಆರೈಕೆಯ ವಿಧಾನಗಳನ್ನು ನಿಮಗೆ ಹೇಳಿಕೊಡಲಿದ್ದೇವೆ. ಇದನ್ನು ನೀವು ಬಳಸಿಕೊಂಡು ಅದರ ಲಾಭ ಪಡೆದುಕೊಳ್ಳಬಹುದು. ಇದು ನೈಸರ್ಗಿಕವಾದರೂ ತುಂಬಾ ಪರಿಣಾಮಕಾರಿಯಾಗಿರಲಿದೆ. ಇದರ ಬಗ್ಗೆ ಮುಂದಕ್ಕೆ ಓದಿಕೊಳ್ಳಿ.

1. ಕಾಂತಿಯುತ ಚರ್ಮ

1. ಕಾಂತಿಯುತ ಚರ್ಮ

ದೀರ್ಘ ಹಾಗೂ ಬಸವಳಿದ ದಿನದ ಬಳಿಕ ನಮ್ಮ ಚರ್ಮವು ತುಂಬಾ ನಿಸ್ತೇಜವಾಗಿರುವುದು. ಇದರಿಂದ ನೀವು ಕೆಲಸದಿಂದ ಮರಳಿದ ಬಳಿಕ ನಿಮ್ಮ ಚರ್ಮಕ್ಕೆ ಪುನಶ್ಚೇತನ ಬೇಕಾಗುವುದು. ತಕ್ಷಣ ಕಾಂತಿ ಹಾಗೂ ಚರ್ಮಕ್ಕೆ ಆರೋಗ್ಯ ನೀಡುವ ಎರಡು ಮನೆಮದ್ದನ್ನು ನೀವು ಪ್ರಯತ್ನಿಸಬಹುದು.

ಮನೆಮದ್ದುಗಳು

ಒಂದು ಚಮಚ ಲಿಂಬೆರಸ, ಒಂದು ಚಮಚ ಗ್ಲಿಸರಿನ್ ಮತ್ತು ಒಂದು ಚಮಚ ರೋಸ್ ವಾಟರ್ ಹಾಕಿಕೊಂಡು ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 20 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಸಾಮಾನ್ಯ ನೀರಿನಿಂದ ಮುಖ ತೊಳೆಯಿರಿ. ವಿಟಮಿನ್ ಸಿ ಹೊಂದಿರುವ ಇದು ಚರ್ಮಕ್ಕೆ ಕಾಂತಿ ನೀಡಲು ನೆರವಾಗುವುದು. ಇಷ್ಟು ಮಾತ್ರವಲ್ಲದೆ ಚರ್ಮದಲ್ಲಿ ಕಾಲಜನ್ ಉತ್ಪತ್ತಿ ಮಾಡಲು ನೆರವಾಗುವುದು.

ಇನ್ನೊಂದು ಪರಿಹಾರವೆಂದರೆ ಜೇನುತುಪ್ಪ ಮತ್ತು ಹಾಲು. ಒಂದು ಚಮಚ ಹಾಲು ಮತ್ತು ½ ಚಮಚ ಜೇನುತುಪ್ಪ ಬೆರೆಸಿಕೊಳ್ಳಿ. ಇದನ್ನು ಮುಖಕ್ಕೆ ಪೂರ್ತಿಯಾಗಿ ಹಚ್ಚಿಕೊಳ್ಳಿ ಮತ್ತು 15 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ.

2. ಕಂಕುಳ ಕಪ್ಪುಗಟ್ಟಿರುವ ಸಮಸ್ಯೆಗೆ

2. ಕಂಕುಳ ಕಪ್ಪುಗಟ್ಟಿರುವ ಸಮಸ್ಯೆಗೆ

ಕೆಲವರ ಸಮಸ್ಯೆಯೆಂದರೆ ಕಂಕುಳ ಭಾಗವು ಕಪ್ಪಾಗಿರುವುದು. ಇದರಿಂದ ಅವರಿಗೆ ಸ್ಲೀವ್ ಲೆಸ್ ಬಟ್ಟೆ ಧರಿಸಲು ಸಾಧ್ಯವಾಗಲ್ಲ. ಇದಕ್ಕಾಗಿ ಮನೆಮದ್ದನ್ನು ಬಳಸಿಕೊಳ್ಳಬಹುದು.

ಮನೆಮದ್ದುಗಳು

*ಒಂದು ಲಿಂಬೆಯನ್ನು ಎರಡು ತುಂಡುಗಳನ್ನಾಗಿ ಮಾಡಿಕೊಂಡು ಸುಮಾರು 15 ನಿಮಿಷ ಕಾಲ ಕಂಕುಳಿನ ಭಾಗಕ್ಕೆ ಉಜ್ಜಿಕೊಳ್ಳಿ. ಇದರ ಬಳಿಕ ನೀವು ಸ್ನಾನ ಮಾಡಿಕೊಳ್ಳಿ. ಪ್ರತಿನಿತ್ಯ ಎರಡು ಸಲ ಹೀಗೆ ಮಾಡಿ. ಲಿಂಬೆಯಲ್ಲಿ ವಿಟಮಿನ್ ಸಿ ಇರುವ ಕಾರಣ ಇದು ಚರ್ಮದ ಸತ್ತ ಕೋಶಗಳನ್ನು ತೆಗೆಯುವುದು ಮತ್ತು ಚರ್ಮವು ಕಾಂತಿ ಪಡೆಯುವುದು.

*ಇನ್ನೊಂದು ಪರಿಹಾರವೆಂದರೆ ಒಂದು ಚಮಚ ಲಿಂಬೆ ರಸ ಮತ್ತು ಚಿಟಿಕೆ ಅರಶಿನ ಬೆರೆಸಿಕೊಂಡು ಕಂಕುಳಿನ ಭಾಗಕ್ಕೆ ಹಚ್ಚಿಕೊಳ್ಳಿ. 10 ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಿಸಿ ನೀರಿನಿಂದ ತೊಳೆಯಿರಿ.

*ಒಂದು ಚಿಕ್ಕ ಬೋಗುಣಿಯಲ್ಲಿ ಒಂದು ದೊಡ್ಡ ಚಮಚ ನೀರಿನಲ್ಲಿ ಬೇಯಿಸಿ ತಣಿಸಿದ ಓಟ್ಸ್ ರವೆ (oatmeal) ಹಾಗೂ ಎರಡು ದೊಡ್ಡ ಚಮಚ ಅರೆದ ಎಳೆಸೌತೆಯ ತಿರುಳನ್ನು ಬೆರೆಸಿ ಮಿಶ್ರಣ ಮಾಡಿ. - ಈ ಮಿಶ್ರಣವನ್ನು ಈಗತಾನೇ ಉಗುರುಬೆಚ್ಚನೆಯ ನೀರಿನಿಂದ ತೊಳೆದು ಸ್ವಚ್ಛಗೊಳಿಸಿದ ಕಂಕುಳ ಭಾಗಕ್ಕೆ ತೆಳುವಾಗಿ ಹಚ್ಚಿ - ಕೈಗಳನ್ನು ಮೇಲಿರಿಸಿದ ಸ್ಥಿತಿಯಲ್ಲಿ ಕೆಲವಾರು ನಿಮಿಷಗಳ ಕಾಲ ಹಾಗೇ ಒಣಗಲು ಬಿಡಿ - ಬಳಿಕ ಉಗುರುಬೆಚ್ಚನೆಯ ನೀರಿನಿಂದ ಹಾಗೂ ಮೃದುವಾದ ಮೈಯುಜ್ಜುವ ಬ್ರಶ್ ಬಳಸಿ ಕೆರೆದು ನಿವಾರಿಸಿ ತೊಳೆದುಕೊಳ್ಳಿ.

3. ಕಣ್ಣಿನ ಸುತ್ತಲಿನ ನೆರಿಗೆಗಾಗಿ

3. ಕಣ್ಣಿನ ಸುತ್ತಲಿನ ನೆರಿಗೆಗಾಗಿ

ಕಣ್ಣಿನ ಸುತ್ತಲು ನೆರಿಗೆ ಕಾಣಿಸಿಕೊಳ್ಳುವುದು ವಯಸ್ಸಾಗುವ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ. ಈ ಕೆಳಗಿನ ಮನೆಮದ್ದು ಬಳಸಿದರೆ ಅದರಿಂದ ನೆರಿಗೆ ಮುಕ್ತ ಚರ್ಮ ಪಡೆಯಬಹುದು.

ಮನೆಮದ್ದು

ಮೂರು ಚಮಚ ಹಸಿ ಹಾಲು ಮತ್ತು ಮೂರು ಚಮಚ ಜೇನುತುಪ್ಪ ಬೆರೆಸಿಕೊಳ್ಳಿ. ಇದನ್ನು ಬಿಸಿ ಮಾಡಿಕೊಂಡು ಕಣ್ಣಿನ ಸುತ್ತಲಿನ ಭಾಗಕ್ಕೆ ಹಚ್ಚಿಕೊಳ್ಳಿ. 20 ನಿಮಿಷ ಹಾಗೆ ಬಿಡಿ ಮತ್ತು ಇದರ ಬಳಿಕ ಬಿಸಿ ನೀರಿನಿಂದ ತೊಳೆಯಿರಿ.

4. ಬಿಸಿಲಿನ ಕಲೆ

4. ಬಿಸಿಲಿನ ಕಲೆ

ನೀವು ಯಾವಾಗಲು ಬಳಸುವಂತಹ ಸನ್ ಸ್ಕ್ರೀನ್ ಕೆಲಸ ಮಾಡದೆ ಇದ್ದರೆ ಬಿಸಿಲಿನಿಂದ ಆಗಿರುವ ಕಲೆಗಳ ನಿವಾರಣೆ ಮಾಡಲು ನೀವು ಮನೆಮದ್ದನ್ನು ಬಳಸಬಹುದು.

ಮನೆಮದ್ದು

ಒಂದು ಚಮಚ ಮೊಸರು ಮತ್ತು ½ ಚಮಚ ಜೇನುತುಪ್ಪ ಹಾಕಿಕೊಂಡು ಮಿಶ್ರಣ ಮಾಡಿ ಇದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ. 10-15 ನಿಮಿಷ ಬಿಟ್ಟು ಮುಖ ತೊಳೆಯಿರಿ. ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲವಿದೆ ಮತ್ತು ಇದು ಚರ್ಮವನ್ನು ಕಿತ್ತೊಗೆಯಲು ನೆರವಾಗುವುದು ಮತ್ತು ಸತ್ತ ಕೋಶಗಳನ್ನು ತೆಗೆದರೆ ಚರ್ಮವು ಕಾಂತಿ ಪಡೆಯುವುದು.

5. ದುರ್ಬಲ ಉಗುರುಗಳ ಸಮಸ್ಯೆಗೆ

5. ದುರ್ಬಲ ಉಗುರುಗಳ ಸಮಸ್ಯೆಗೆ

ನಮ್ಮ ಉಗುರುಗಳು ದುರ್ಬಲವಾಗುವುದು ಮತ್ತು ಸರಿಯಾಗಿ ಮೊಶ್ಚಿರೈಸ್ ಸಿಗದೇ ಇರುವಾಗ ತುಂಡಾಗುವುದು. ಉಗುರು ತುಂಡಾಗದಂತೆ ತಡೆಯಲು ನೀವು ತೇವಾಂಶದಿಂದ ಇರಬೇಕು.

ಮನೆಮದ್ದು

2-3 ಚಮಚ ಆಲಿವ್ ತೈಲವನ್ನು ಒಂದು ಸಣ್ಣ ಪಾತ್ರೆಗೆ ಹಾಕಿ. ಅದರಲ್ಲಿ ಉಗುರುಗಳನ್ನು ಸುಮಾರು 10-15 ನಿಮಿಷ ಕಾಲ ಮುಳುಗಿಸಿಡಿ. ಪ್ರತಿನಿತ್ಯ ನೀವು ಹೀಗೆ ಮಾಡಿದರೆ ಅದರಿಂದ ಬಲಿಷ್ಠ ಉಗುರುಗಳು ನಿಮ್ಮದಾಗುವುದು ಮತ್ತು ಉಗುರು ತುಂಡಾಗುವುದು ತಪ್ಪುವುದು.

6. ಒಣ ಚರ್ಮ

6. ಒಣ ಚರ್ಮ

ಮಾಯಿಶ್ಚರೈಸರ್ ಕೊರತೆಯಿಂದಾಗಿ ಚರ್ಮವು ಒಣಗಿ ಹೋಗುವುದು. ಇದಕ್ಕೆ ಸರಿಯಾದ ಆರೈಕೆ ಮಾಡದೆ ಇದ್ದರೆ ಆಗ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳಾದ ಕೆಂಪಾಗುವುದು ಮತ್ತು ತುರಿಕೆ ಕಾಣಿಸಬಹುದು.

ಮನೆಮದ್ದು

½ ಚಮಚ ಮೊಸರು ಮತ್ತು ಒಂದು ಚಮಚ ವಿನೇಗರ್ ಹಾಕಿಕೊಂಡು ಭಾದಿತ ಜಾಗಕ್ಕೆ ಹಚ್ಚಿಕೊಳ್ಳಿ. ಮುಖವನ್ನು ಹೊರತುಪಡಿಸಿ ದೇಹದ ಬೇರೆ ಭಾಗಕ್ಕೆ ಹಚ್ಚಬಹುದು. ಯಾಕೆಂದರೆ ವಿನೇಗರ್ ಅಸಿಡಿಕ್ ಗುಣ ಹೊಂದಿದೆ ಮತ್ತು ಸೂಕ್ಷ್ಮ ಚರ್ಮಕ್ಕೆ ಹಾನಿಯಾಗಬಹುದು.

* ಇನ್ನೊಂದು ಪರಿಹಾರ ಒಣ ಹಾಗೂ ನಿಸ್ತೇಜ ಚರ್ಮಕ್ಕೆ ಮೊಸರನ್ನು ಬಳಸಿದರೆ ಅದು ಬೇಗನೆ ಫಲಿತಾಂಶವನ್ನು ನೀಡುವುದು. ಚರ್ಮದಲ್ಲಿ ಉರಿಯೂತ ಹಾಗೂ ತುರಿಕೆಯನ್ನು ಉಂಟು ಮಾಡುವ ಬ್ಯಾಕ್ಟೀರಿಯಾ ಮತ್ತು ಕೀಟಾಣುಗಳನ್ನು ಇದು ಕೊಂದು ಹಾಕುತ್ತದೆ. ಸ್ವಲ್ಪ ಮೊಸರಿಗೆ ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ನಿಂಬೆರಸವನ್ನು ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದರಿಂದ ಮುಖ ಹಾಗೂ ಕೈಗಳಿಗೆ ಮಸಾಜ್ ಮಾಡಿಕೊಳ್ಳಿ. ಸ್ವಲ್ಪ ಸಮಯದ ಬಳಿಕ ತಣ್ಣಗಿನ ನೀರಿನಿಂದ ತೊಳೆಯಿರಿ.

English summary

Basic Body Care Tips That You Must Know

Are you looking for a one-stop guide for complete body care? Then you are definitely at the right place. In this article, we'll be discussing some of the most common body care issues and the remedies to treat them. These issues occur due to some common factors like pollution, overexposure to the sun, lifestyle, excess usage of chemicals, etc. If the ready-made remedies are not helping you, then it's high time for you to turn to some natural ways of dealing with such issues.
X
Desktop Bottom Promotion