ಮೆಹೆಂದಿಯ ಬಣ್ಣ ಹೆಚ್ಚು ಕೆಂಪಾಗಿ ಕಾಣಬೇಕೇ? ಹಾಗಾದರೆ ಇಲ್ಲಿದೆ ಟಿಪ್ಸ್‌....

By: Hemanth
Subscribe to Boldsky

ಮದರಂಗಿಯಲ್ಲಿ ಮದುವೆಯ ರಂಗು ತುಂಬಿದೆ ಎನ್ನುವ ಹಾಡು ಪ್ರತಿಯೊಂದು ಮದರಂಗಿ ಹಾಗೂ ಮದುವೆ ಕಾರ್ಯಕ್ರಮದಲ್ಲಿ ಕೇಳಿಬರುತ್ತದೆ. ವಧು ಹಾಗೂ ವರನ ಕೈಗೆ ಮದರಂಗಿ (ಮೆಹೆಂದಿ) ಇಡುವ ಕಾರ್ಯಕ್ರಮ ಮದುವೆ ಸಂದರ್ಭದಲ್ಲಿ ನಡೆಯುತ್ತದೆ. ಇಂದಿನ ದಿನಗಳಲ್ಲಿ ಮದರಂಗಿಯಲ್ಲಿ ಹಲವಾರು ಬಗೆಯ ಹಾಗೂ ವಿನ್ಯಾಸವಿರುತ್ತದೆ. ವಧು ಹಾಗೂ ವರನ ಅಂಗೈಗೆ ವಿವಿಧ ವಿನ್ಯಾಸದ ಮದರಂಗಿ ಬಿಡಿಸುತ್ತಾರೆ. ಇದನ್ನು ನೋಡುವುದೇ ಒಂದು ಅಂದವಾಗಿದೆ. ಅದರ ಬಣ್ಣ ಹಾಗೂ ವಿನ್ಯಾಸವು ಎಲ್ಲರನ್ನು ಗಮನಸೆಳೆಯುತ್ತದೆ.

ಕೈಯಿಂದ ಮೆಹೆಂದಿ ಬಣ್ಣ ನಿವಾರಿಸಲು-ಸ್ಟೆಪ್ ಬೈ ಸ್ಟೆಪ್ ಟಿಪ್ಸ್

ಆದರೆ ಇಂದಿನ ದಿನಗಳಲ್ಲಿ ಮದರಂಗಿ ಎನ್ನುವುದು ಕೇವಲ ಮದುವೆ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿಲ್ಲ. ಕೆಲವೊಂದು ಸಲ ಮಹಿಳೆಯರು ಮದರಂಗಿಯನ್ನು ತಿಂಗಳಿಗೊಮ್ಮೆ ಅಥವಾ ಮೂರು ತಿಂಗಳಿಗೊಮ್ಮೆ ಬಳಸುವುದು ಇದೆ. ಯಾವುದೇ ಮಾಲ್ ಅಥವಾ ಮಾರುಕಟ್ಟೆಗೆ ಹೋದರೆ ಅಲ್ಲಿ ಮದರಂಗಿ ವಿನ್ಯಾಸ ನಿಮ್ಮ ಕೈಯ ಮೇಲೆ ಬಿಡಿಸುವ ಅಂಗಡಿಗಳು ಕಾಣಸಿಗುತ್ತದೆ. ಹೊಸ ಹೊಸ ವಿನ್ಯಾಸದ ಮದರಂಗಿಗಳು ಎಲ್ಲರನ್ನು ಸೆಳೆಯುತ್ತದೆ. ಆದರೆ ಇಂತಹ ಮದರಂಗಿಗೆ ಸ್ವಲ್ಪ ರಾಸಾಯನಿಕ ಕೂಡ ಮಿಶ್ರಣ ಮಾಡಿರುತ್ತಾರೆ. ಇದು ಕೆಲವರಿಗೆ ಅಲರ್ಜಿ ಉಂಟು ಮಾಡಲೂಬಹುದು.

ಮೆಹೆಂದಿ -ಕೇವಲ ಅಲಂಕಾರಿಕವಲ್ಲ, ಆರೋಗ್ಯಕರವೂ ಕೂಡಾ

ಮದರಂಗಿ ಅಥವಾ ಮೆಹೆಂದಿಯಲ್ಲಿರುವ ಕೆಲವೊಂದು ಅಂಶಗಳು ದೇಹಕ್ಕೆ ತುಂಬಾ ತಂಪುಕಾರಕವೆಂದು ಹೇಳಲಾಗುತ್ತದೆ. ಇನ್ನು ವಧುವಿಗೆ ಹಾಕಿರುವ ಮದರಂಗಿ ಬಣ್ಣವು ಅಂಗೈಯಿಂದ ಹೊರಗೆ ಬಂದರೆ ಆಕೆಯ ಅತ್ತೆಯು ತುಂಬಾ ಪ್ರೀತಿಸುತ್ತಾರೆ ಎನ್ನಲಾಗಿದೆ. ಇದು ಕೆಲವೊಂದು ಕಟ್ಟುಕಥೆಗಳಾಗಿದೆ. ಇದನ್ನು ನಂಬುವುದು ಬಿಡುವುದು ನಿಮ್ಮ ಇಷ್ಟ. ಮದರಂಗಿ ಹಾಕಿಕೊಳ್ಳಲು ಸರಿಯಾದ ತಯಾರಿ ಮತ್ತು ಯೋಜನೆ ಬೇಕಾಗುತ್ತದೆ. ಆದರೆ ದೇಹದ ಉಷ್ಣತೆಗೆ ಅನುಗುಣವಾಗಿ ಮದರಂಗಿಯ ಬಣ್ಣವು ಕಡು ಅಥವಾ ತಿಳಿಯಾಗುವುದು. ಮನೆಯಲ್ಲಿ ಮದರಂಗಿ ತಯಾರಿಸಿ ಅದನ್ನು ಅಂಗೈಯ ಮೇಲೆ ಹಾಕಿಕೊಳ್ಳುವ ಮೊದಲು ಪಾಲಿಸಬೇಕಾದ ಕೆಲವೊಂದು ನಿಯಮಗಳು ಹಾಗೂ ಸಲಹೆಗಳನ್ನು ಬೋಲ್ಡ್ ಸ್ಕೈ ನಿಮಗೆ ತಿಳಿಸಲಿದೆ. ಇದನ್ನು ಓದಿರಿ.....

ಮದರಂಗಿಗೆ ಬೇಕಾಗಿರುವ ಪೂರ್ವ ತಯಾರಿ

ಮದರಂಗಿಗೆ ಬೇಕಾಗಿರುವ ಪೂರ್ವ ತಯಾರಿ

ಮದರಂಗಿಯನ್ನು ಅಂಗೈಗೆ ಹಾಕಿಕೊಳ್ಳುವುದರಿಂದ ಮದರಂಗಿಗೆ ಒಳ್ಳೆಯ ಬಣ್ಣ ಬರುವುದಿಲ್ಲ. ಇದನ್ನು ತಯಾರಿಸಲು ಮತ್ತು ಬಳಸಲು ಕೆಲವೊಂದು ತಂತ್ರಗಳನ್ನು ಪಾಲಿಸಿದರೆ ಆಗ ಮದರಂಗಿ ಬಣ್ಣವು ಒಳ್ಳೆಯ ರೀತಿಯಲ್ಲಿರುವುದು. ಮದರಂಗಿ ವಿನ್ಯಾಸ ಬಿಡಿಸಿಕೊಳ್ಳುವ ಮೊದಲು ಮಾಡಬೇಕಾದ ಮತ್ತು ಮಾಡಬಾರದ ಕೆಲವೊಂದು ಕೆಲಸಗಳು ಇಲ್ಲಿವೆ.

*ಕೈಯ ಕೂದಲು ತೆಗೆಯಬೇಕೆಂದು ನೀವು ನಿರ್ಧರಿಸಿದ್ದರೆ ಮದರಂಗಿ ಹಾಕುವ ಮೊದಲು ಈ ಕೆಲಸ ಮಾಡಿ ಮುಗಿಸಿ. ವ್ಯಾಕ್ಸಿಂಗ್ ಆಥವಾ ಶೇವ್ ಮಾಡಿದರೆ ಮದರಂಗಿಯ ಮೇಲ್ಪದರವು ಕಿತ್ತು ಬರುವುದು. ಇದರಿಂದ ಬಣ್ಣ ಕಳಕೊಂಡು ತುಂಬಾ ಹಳೆಯದಾಗಿ ಕಾಣುವುದು.

*ಮದರಂಗಿ ಹಾಕಿಕೊಳ್ಳುವ ಮೊದಲು ಕೈ ತೊಳೆಯಬೇಡಿ ಮತ್ತು ಕೊಳಕು ಕೈಯ ಮೇಲೆ ಮದರಂಗಿ ಹಾಕಬೇಡಿ. ಕೈಗಳನ್ನು ಸ್ವಚ್ಛಗೊಳಿಸಬೇಕೆಂದು ನಿಮಗನಿಸುತ್ತಾ ಇದ್ದರೆ ಹತ್ತಿ ಉಂಡೆಯನ್ನು ತೆಗೆದುಕೊಂಡು ಅದರಿಂದ ಅಂಗೈಯನ್ನು ಸ್ವಚ್ಛ ಮಾಡಿಕೊಳ್ಳಿ.

*ಮದರಂಗಿ ಕೋನ್ ಗಳು ನಿಮ್ಮ ಕೈಗಳನ್ನು ಸ್ಪರ್ಶಿಸಲು ತಯಾರಿ ನಡೆಸುತ್ತಿರುವ ಸ್ವಲ್ಪ ಮೊದಲು ಎರಡು ಅಂಗೈಗಳನ್ನು ಸರಿಯಾಗಿ ಉಜ್ಜಿಕೊಳ್ಳಿ.

ಲಿಂಬೆರಸ ಮತ್ತು ಸಕ್ಕರೆಯ ಮಿಶ್ರಣ ಮಾಡಿಕೊಂಡು ಒಂದು ಸಣ್ಣ ಪಾತ್ರೆಯಲ್ಲಿ ಹಾಕಿ ಬದಿಯಲ್ಲೇ ಇಟ್ಟುಕೊಳ್ಳಿ.

*ಕೆಲವು ಲವಂಗವನ್ನು ಒಂದು ತವಾದಲ್ಲಿ ಹಾಕಿಡಿ ಮತ್ತು ಅದನ್ನು ಗ್ಯಾಸ್ ಮೇಲಿಡಿ. ಗ್ಯಾಸ್ ಉರಿಸಬೇಡಿ.

*ಸಾಸಿವೆ ಎಣ್ಣೆ ಅಥವಾ ಉಪ್ಪಿನಕಾಯಿ ಎಣ್ಣೆ ಅಡುಗೆ ಮನೆಯಲ್ಲಿರಲಿ. ಮಲಾಮ್ ಅಥವಾ ಪೆಟ್ರೋಲಿಯಂ ಜೆಲ್ ಮನೆಯಲ್ಲಿ ಇರಲಿ.

*ಬೇಡದ ಬಟ್ಟೆ ಅಥವಾ ಹತ್ತಿ ಉಂಡೆಯನ್ನು ಬದಿಯಲ್ಲೇ ಇಟ್ಟುಕೊಳ್ಳಿ.

*ಮದರಂಗಿ ಹಾಕಿಕೊಳ್ಳುವ ಒಂದು ಗಂಟೆಯ ಮೊದಲು ಅಂಗೈಗೆ ಒಳ್ಳೆಯ ಗುಣಮಟ್ಟದ ನೀಲಗಿರಿ ಎಣ್ಣೆ ಹಾಕಿಕೊಳ್ಳಿ. ಎಣ್ಣೆಯು ಒಣಗಿದ ಬಳಿಕ ಮದರಂಗಿ ವಿನ್ಯಾಸ ಆರಂಭಿಸಬಹುದು.

ಮದರಂಗಿ ಒಣಗಲು ಬಿಡಿ

ಮದರಂಗಿ ಒಣಗಲು ಬಿಡಿ

ಅಂಗೈಗೆ ಮದರಂಗಿ ಹಾಕಿಕೊಂಡ ಬಳಿಕ ಅದು ತುಂಬಾ ಒದ್ದೆಯಾಗಿರುವುದರಿಂದ ಆದಷ್ಟು ಬೇಗ ತೊಳೆಯಬೇಕೆಂದು ಹೆಚ್ಚಿನ ಮಹಿಳೆಯರು ಬಯಸುತ್ತಾರೆ. ಮದರಂಗಿಯು ಸರಿಯಾಗಿ ಒಣಗಲು ತಾಳ್ಮೆ ವಹಿಸಿ ಬಳಿಕ ಒಳ್ಳೆಯ ಬಣ್ಣವು ನಿಮ್ಮದಾಗುವುದು. ಕೈಗಳನ್ನು ತುಂಬಾ ಸುರಕ್ಷಿತವಾಗಿಡಿ. ಇಲ್ಲವಾದಲ್ಲಿ ಮದರಂಗಿಯ ವಿನ್ಯಾಸವು ಹಾಳಾಗುವುದು. ಮದರಂಗಿಯು ಅದರಷ್ಟಕ್ಕೆ ಒಣಗಲಿ. ಫ್ಯಾನ್ ನ ಗಾಳಿ ಅಥವಾ ಇತರ ಯಾವುದೇ ವಿಧಾನ ಬಳಸಿ ಮದರಂಗಿ ಒಣಗಿಸಲು ಪ್ರಯತ್ನಿಸಿದರೆ ಇದು ಬಣ್ಣದ ಮೇಲೆ ಪರಿಣಾಮ ಬೀರುವುದು. ಇದರಿಂದ ತಾಳ್ಮೆ ವಹಿಸಿ, ಮದರಂಗಿಯು ನೈಸರ್ಗಿಕವಾಗಿ ಒಣಗಲು ಬಿಡಿ.

 ಲಿಂಬೆ ಸಕ್ಕರೆ ಮಿಶ್ರಣ ಹಾಕಿ

ಲಿಂಬೆ ಸಕ್ಕರೆ ಮಿಶ್ರಣ ಹಾಕಿ

ಮದರಂಗಿಯು ಒಣಗುತ್ತಿದೆ ಎಂದು ನಿಮಗನಿಸಿದರೆ ಆಗ ಲಿಂಬೆರಸ ಮತ್ತು ಸಕ್ಕರೆಯ ಮಿಶ್ರಣವನ್ನು ಹತ್ತಿ ಉಂಡೆ ಬಳಸಿಕೊಂಡು ಅದರ ಮೇಲೆ ಹಾಕಿ. ಮದರಂಗಿ ಮೇಲೆ ಈ ಮಿಶ್ರಣ ಹಾಕಿಕೊಳ್ಳುವ ಮೊದಲು ಸ್ವಲ್ಪ ಬಿಸಿ ಮಾಡಿ. ಲಿಂಬೆ ಮತ್ತು ಸಕ್ಕರೆಯ ಮಿಶ್ರಣವು ಜಿಗುಟು ಉಂಟು ಮಾಡಿದರೂ ಇದು ಒಳ್ಳೆಯದು. ಈ ಮಿಶ್ರಣ ಹಾಕುವುದನ್ನು ಮುಂದುವರಿಸಿ. ಮದರಂಗಿ ಮೇಲೆ ಲಿಂಬೆ-ಸಕ್ಕರೆ ಮಿಶ್ರಣ ಹಾಕಲು ಮರೆಯಬೇಡಿ.

ಲವಂಗ

ಲವಂಗ

ಗ್ಯಾಸ್ ಮೇಲೆ ಇಟ್ಟಿರುವ ಲವಂಗದ ಬಗ್ಗೆ ನಿಮಗೆ ನೆನಪಿರಲಿ. ಗ್ಯಾಸ್ ಹೊತ್ತಿಸಿ ಅದರಿಂದ ಬರುವ ಹೊಗೆಯು ನಿಮ್ಮ ಅಂಗೈಗೆ ಬೀಳುತ್ತಿರಲಿ. ತವಾದ ಮೇಲ್ಬಾಗದಿಂದ ಅಂಗೈಯನ್ನು ತೆಗೆಯಿರಿ. ಆದರೂ ಅಂಗೈಯ ಮದರಂಗಿಗೆ ಹೊಗೆಯು ತಾಗುತ್ತಾ ಇರಲಿ. ಇದು ತುಂಬಾ ಅಪಾಯಕಾರಿ ಅಥವಾ ಸಮಸ್ಯೆ ಉಂಟು ಮಾಡುತ್ತಾ ಇದ್ದರೆ ಲವಂಗದ ಎಣ್ಣೆ ಬಳಸಿ.

ಸಾಸಿವೆ ಎಣ್ಣೆ ಅಥವಾ ಉಪ್ಪಿನಕಾಯಿ ಎಣ್ಣೆ

ಸಾಸಿವೆ ಎಣ್ಣೆ ಅಥವಾ ಉಪ್ಪಿನಕಾಯಿ ಎಣ್ಣೆ

ಲಿಂಬೆ-ಸಕ್ಕರೆ ಸೀರಪ್ ಮತ್ತು ಲವಂಗದ ಹೊಗೆಯ ಬಳಿಕ ಮದರಂಗಿಯು ಒಣಗಿರುತ್ತದೆ ಮತ್ತು ಪದರವು ಮೇಲೆ ಬಂದಿರುತ್ತದೆ. ಎರಡು ಅಂಗೈಗಳನ್ನು ಉಜ್ಜಿಕೊಳ್ಳಿ. ಮದರಂಗಿಯ ಪದರ ತೆಗೆಯಲು ಚೂಪಾದ ಸಾಧನಗಳಾದ ಚಾಕು ಅಥವಾ ಬ್ಲೇಡ್ ಬಳಸಬೇಡಿ. ಮದರಂಗಿ ಪದರ ಕಿತ್ತು ಹಾಕಿದ ಬಳಿಕ ಸಾಸಿವೆ ಎಣ್ಣೆ ಅಥವಾ ಉಪ್ಪಿನಕಾಯಿ ಎಣ್ಣೆ ಅಂಗೈಗೆ ಹಾಕಿಕೊಂಡು ಸರಿಯಾಗಿ ಮಸಾಜ್ ಮಾಡಿಕೊಳ್ಳಿ. ಇದು ಮದರಂಗಿಯ ಬಣ್ಣವನ್ನು ಮತ್ತಷ್ಟು ಹೆಚ್ಚಿಸುವುದು. ಈ ವೇಳೆ ನಿಮಗೆ ಮದರಂಗಿಯ ಬಣ್ಣದ ವ್ಯತ್ಯಾಸ ಕಂಡುಬರುವುದು.

English summary

Tips To Get Dark And Deep Mehendi Colour On The Hands

The art of applying mehendi on the hands is done occasionally and everyone wants it perfect every time. From design to colour, there is not an inch of compromise that mehendi enthusiasts are ready for. Of course, the aim is beautiful hands with elaborate mehendi designs that stand out among the ladies. The colour of the mehendi is also very competitive, especially among Indian women, as there are many myths associated with it. It is said, the more the colour on the inside of the palm - the more one's lover would love her after marriage.
Subscribe Newsletter