For Quick Alerts
ALLOW NOTIFICATIONS  
For Daily Alerts

ಮೂಗುತಿ ಚುಚ್ಚಿಸಿಕೊಳ್ಳುವ ಮುನ್ನ, ತಿಳಿದಿರಲಿ ಇಂತಹ ಸಂಗತಿಗಳು

ಮೂಗುತಿ ಚುಚ್ಚುವುದನ್ನು ಫ್ಯಾಷನೋ ಅಂತಲೋ ಹೇಳಿ, ಸಂಪ್ರದಾಯ ಅಂತಲೋ ಹೇಳಿ ಮೂಗುತಿ ಹೆಣ್ಣಿನ ಮುಖದ ಕಳೆ ಹೆಚ್ಚಿಸುತ್ತದೆ ಅನ್ನುವುದು ಮಾತ್ರ ಸುಳ್ಳಲ್ಲ. ಆದರೆ ಕೆಲವೊಂದು ವಿಷಯದಲ್ಲಿ ಮಾತ್ರ ಎಚ್ಚರಿಕೆ ವಹಿಸಲೇಬೇಕು!

By Hemanth
|

ಮೂಗುತಿಯೆಂದರೆ ಕೇವಲ ಸಾಂಪ್ರದಾಯಿಕ ಮಹಿಳೆಯರು ಮಾತ್ರ ಹಾಕಿಕೊಳ್ಳುವುದು, ಆಧುನಿಕ ಮಹಿಳೆಯರು ಮೂಗುತಿ ಧರಿಸುವುದಿಲ್ಲ. ಅವರು ಇದರಿಂದ ದೂರು ಇರುತ್ತಾರೆ ಎನ್ನುವ ಕಾಲವಿತ್ತು. ಆದರೆ ಕ್ರಮೇಣ ಮೂಗುತಿ ಕೂಡ ಒಂದು ಫ್ಯಾಷನ್ ಆಗುತ್ತಾ ಹೋಯಿತು. ಟೆನಿಸ್ ತಾರೆ ಸಾನಿಯಾ ಮಿರ್ಜಾ ಕೂಡ ಮೂಗುತಿ ಸುಂದರಿ ಎಂದು ಕರೆಯಲ್ಪಡುತ್ತಿದ್ದಳು. ಆಕೆಯನ್ನು ನೋಡಿಯೋ ಗೊತ್ತಿಲ್ಲ. ಮೂಗುತಿ ಮಾತ್ರ ಒಂದು ಫ್ಯಾಷನ್ ಆಗಿ ಬೆಳೆಯಿತು.

ಕೆಲವೊಂದು ಸಿನಿಮಾಗಳಲ್ಲಿ ನಾಯಕಿಯರು ಮೂಗುತಿ ಧರಿಸಿ ಮತ್ತಷ್ಟು ಟ್ರೆಂಡ್ ಉಂಟು ಮಾಡಿದರು. ಮೂಗು ಚುಚ್ಚಿಕೊಳ್ಳುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಸ್ವಲ್ಪ ತಪ್ಪಾದರೂ ಅದರ ಕಲೆ ಜೀವಮಾನವಿಡಿ ಉಳಿದುಕೊಳ್ಳುವುದು.

ಇದನ್ನೂ ಓದಿ - ಮೂಗುತಿ ಚೆಲುವೆಯರಿಗಾಗಿ ಈ ಬ್ಯೂಟಿ ಟಿಪ್ಸ್

ಅದೇ ರೀತಿ ಕೆಲವು ಮಂದಿ ಮೂಗುತಿ ಚುಚ್ಚಿಸಿಕೊಳ್ಳುವುದರಿಂದ ಸೋಂಕು ಉಂಟಾಗಬಹುದು. ಮೂಗುತಿ ಚುಚ್ಚಿಸಿಕೊಳ್ಳುವ ಪ್ರಾಮುಖ್ಯತೆ ಬಗ್ಗೆ ಈ ಲೇಖನದಲ್ಲಿ ತಿಳಿಯುವ. ಇದನ್ನು ತಿಳಿದುಕೊಂಡರೆ ನಿಮ್ಮ ಅನುಭವ ಮತ್ತಷ್ಟು ಸುಖದಾಯಕ ಹಾಗೂ ಸೋಂಕು ರಹಿತವಾಗಲಿದೆ...

ವೃತ್ತಿಪರರಿಂದ ಮೂಗು ಚುಚ್ಚಿಸಿಕೊಳ್ಳಿ

ವೃತ್ತಿಪರರಿಂದ ಮೂಗು ಚುಚ್ಚಿಸಿಕೊಳ್ಳಿ

ಕೆಲವರು ಮನೆಯಲ್ಲಿಯೇ ಮೂಗು ಚುಚ್ಚಿಸಿಕೊಳ್ಳಲು ಇಷ್ಟಪಡುತ್ತಾರೆ. ಮನೆಯಲ್ಲಿ ಹೆಚ್ಚಿನ ಧೈರ್ಯ ಕೂಡು ಬರುವುದು. ಆದರೆ ಇದರಿಂದ ಸೋಂಕು ಅಥವಾ ಬೇರೆ ಸಮಸ್ಯೆ ಕಾಣಿಸಬಹುದು. ವೃತ್ತಿಪರರ ನೆರವು ಪಡೆದರೆ ತುಂಬಾ ಒಳ್ಳೆಯದು. ಅವರು ಕಿವಿ ಚುಚ್ಚಿಸಿಕೊಳ್ಳುವ ಪ್ರಾಮುಖ್ಯತೆಯನ್ನು ನಿಮಗೆ ಹೇಳಬಹುದು.

ಒಳ್ಳೆಯ ಗುಣಮಟ್ಟದ ಕ್ಲಿನಿಕ್‌ಗೆ ಹೋಗಿ

ಒಳ್ಳೆಯ ಗುಣಮಟ್ಟದ ಕ್ಲಿನಿಕ್‌ಗೆ ಹೋಗಿ

ಸಣ್ಣ ಸಲೂನ್ ಅಥವಾ ಕ್ಲಿನಿಕ್‌ಗಳು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದಿಲ್ಲ. ಇದರಿಂದ ರಕ್ತಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು. ಇದರಿಂದ ಕಿವಿ ಚುಚ್ಚಿಸಿಕೊಳ್ಳಲು ಒಳ್ಳೆಯ ಗುಣಮಟ್ಟದ ಕ್ಲಿನಿಕ್ ಗಳನ್ನು ಆಯ್ಕೆ ಮಾಡಿಕೊಳ್ಳಿ. ಇದರಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳಬೇಡಿ.

ನಿಮಗೇನು ಬೇಕು ಎನ್ನುವ ಬಗ್ಗೆ ಸ್ಪಷ್ಟತೆಯಿರಲಿ

ನಿಮಗೇನು ಬೇಕು ಎನ್ನುವ ಬಗ್ಗೆ ಸ್ಪಷ್ಟತೆಯಿರಲಿ

ಮೂಗು ಚುಚ್ಚಿಸಿಕೊಳ್ಳುವುದರಿಂದ ಅದು ಮೂಗಿನಲ್ಲಿ ಶಾಶ್ವತವಾದ ತೂತನ್ನು ಉಂಟು ಮಾಡುತ್ತದೆ. ಇದರಿಂದ ನಿಮಗೆ ಮೂಗುತಿ ಬೇಕೇ ಅಥವಾ ಬೇಡವೇ ಎನ್ನುವುದನ್ನು ನಿಧಾನವಾಗಿ ಕುಳಿತುಕೊಂಡು ಯೋಚಿಸಿ. ಮೂಗು ಚುಚ್ಚಿಸಿಕೊಂಡ ಬಳಿಕ ನಿಮಗೆ ಏನೂ ಮಾಡಲು ಸಾಧ್ಯವಾಗಲ್ಲ.

ಸ್ವಲ್ಪ ಅಧ್ಯಯನ ಮಾಡಿ

ಸ್ವಲ್ಪ ಅಧ್ಯಯನ ಮಾಡಿ

ನಿಮಗೆ ಏನು ಬೇಕು ಎನ್ನುವುದು ಸ್ವಷ್ಪವಾದರೂ ನೇರವಾಗಿ ಹೋಗಿ ಮೂಗುತಿ ಚುಚ್ಚಿಸಿಕೊಳ್ಳಬೇಡಿ. ಸ್ವಲ್ಪ ಸಮಯ ತೆಗೆದುಕೊಂಡು ಮೂಗು ಚುಚ್ಚಿಸಿಕೊಳ್ಳುವ ವಿಧಾನ ಮತ್ತು ಮೂಗುತಿಯ ಆಯ್ಕೆಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡು ಅಧ್ಯಯನ ನಡೆಸಿ.

ಸ್ವಲ್ಪ ಅಧ್ಯಯನ ಮಾಡಿ

ಸ್ವಲ್ಪ ಅಧ್ಯಯನ ಮಾಡಿ

ನಿಮ್ಮ ವಿನ್ಯಾಸದಲ್ಲಿ ಬದಲಾವಣೆಯಾಗುವ ಬಗ್ಗೆ ಸ್ಪಷ್ಟವಾಗಿರಿ. ಅಧ್ಯಯನ ಮಾಡಿದರೆ ಮೂಗುತಿ ಚುಚ್ಚಿಸಿಕೊಳ್ಳುವ ಪ್ರಾಮುಖ್ಯತೆ ಬಗ್ಗೆ ತಿಳಿದುಕೊಳ್ಳಲಿದ್ದೀರಿ.

ಸ್ಥಳೀಯ ಅನಸ್ತೇಸಿಯಾ ನೆರವಾಗಬಹುದು

ಸ್ಥಳೀಯ ಅನಸ್ತೇಸಿಯಾ ನೆರವಾಗಬಹುದು

ಮೂಗು ಚುಚ್ಚಿಸಿಕೊಳ್ಳಲು ನಿರ್ಧರಿಸಿದ್ದರೂ ಅದರಿಂದ ಆಗುವಂತಹ ನೋವಿನ ಬಗ್ಗೆ ನಿಮಗೆ ತುಂಬಾ ಭೀತಿ ಉಂಟಾಗಿರುತ್ತದೆ. ಆದರೆ ಇದರ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ಮೆಡಿಕಲ್‌ಗಳಲ್ಲಿ ಕೆಲವೊಂದು ಸ್ಥಳೀಯ ಅನಸ್ತೇಸಿಯಾಗಳು ಲಭ್ಯವಿದೆ. ಇದು ನಿಮಗೆ ನೆರವಾಗಬಹುದು. ಕೆಲವು ಕ್ಲಿನಿಕ್ ಗಳು ಕ್ರೀಮ್ ಗಳನ್ನು ಬಳಸುತ್ತವೆ.

ಚರ್ಚೆ ಮಾಡಿ

ಚರ್ಚೆ ಮಾಡಿ

ಈಗಾಗಲೇ ಮೂಗುತಿ ಚುಚ್ಚಿಸಿಕೊಂಡಿರುವವರ ಜತೆ ಅವರ ಅನುಭವನ್ನು ತಿಳಿದುಕೊಳ್ಳಬಹುದು. ನಿಮಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸುಲಭವಾಗಬಹುದು. ಇದರಿಂದ ಮೂಗು ಚುಚ್ಚಿಸಿಕೊಳ್ಳುವ ಸಲೂನ್ ಮತ್ತು ಅದರ ಬಳಿಕದ ಆರೈಕೆಯ ಬಗ್ಗೆ ತಿಳಿದುಕೊಳ್ಳಲು ಸುಲಭವಾಗುತ್ತದೆ.

ಮನೆಯಲ್ಲಿ ಪ್ರಯತ್ನಿಸಬೇಡಿ

ಮನೆಯಲ್ಲಿ ಪ್ರಯತ್ನಿಸಬೇಡಿ

ಹಿಂದಿನ ಕಾಲದಲ್ಲಿ ಮನೆಯಲ್ಲಿಯೇ ಮೂಗನ್ನು ಚುಚ್ಚಿಸಿಕೊಳ್ಳಲಾಗುತ್ತಾ ಇತ್ತು. ಆದರೆ ಇಂದಿನ ದಿನಗಳಲ್ಲಿ ಹಲವಾರು ರೀತಿಯಿಂದ ವಾತಾವರಣವು ಕಲುಷಿತವಾಗಿರುವ ಕಾರಣದಿಂದಾಗಿ ಸೋಂಕು ಹರಡುವ ಸಾಧ್ಯತೆ ತುಂಬಾ ಹೆಚ್ಚಿರುತ್ತದೆ. ಇದರಿಂದ ಮನೆಯಲ್ಲಿ ಮೂಗು ಚುಚ್ಚಿಸಿಕೊಳ್ಳಲು ಹೋಗಬೇಡಿ.

ಇದನ್ನೂ ಓದಿ -ಚಿಕ್ಕ ವಯಸ್ಸಿನಲ್ಲಿಯೇ ಕಿವಿ ಚುಚ್ಚಿದರೆ, ಪುಟಾಣಿಗಳ ಆರೋಗ್ಯ ವೃದ್ಧಿ

English summary

Things To Know Before A Nose Piercing

However, if you are getting a piercing without prior research and planning, you may end up having an unwanted scar on your face that will stay lifelong. Most people experience infection on their nose if the piercing is not taken proper care of. It is good to get the help from people who are experts in this field to decide the site at which you want to pierce you nose, to select the best ring or stud and to get the procedure done correctly.
X
Desktop Bottom Promotion