For Quick Alerts
ALLOW NOTIFICATIONS  
For Daily Alerts

ಕ್ಷಣ ಮಾತ್ರದಲ್ಲಿ ತುಟಿಯು ಸಹಜವಾದ ಕೆಂಬಣ್ಣವನ್ನು ಪಡೆಯಬೇಕೇ?

|

ಪ್ರತಿಯೊಬ್ಬ ವ್ಯಕ್ತಿಯೂ ಕೂಡ, ಅದರಲ್ಲೂ ವಿಶೇಷವಾಗಿ ಮಹಿಳೆಯರು, ಗುಲಾಬಿವರ್ಣದ ಅಂದವಾದ ತುಟಿಗಳುಳ್ಳವರಾಗಿರಲು ಬಯಸುತ್ತಾರೆಯೇ ಹೊರತು, ಶರೀರದ ಇತರ ಭಾಗಗಳಿಗೆ ನೀಡುವಷ್ಟು ಪ್ರಾಮುಖ್ಯತೆಯನ್ನು ತುಟಿಗಳಿಗೆ ನೀಡುವುದು ಅತಿ ವಿರಳ. ಈ ಕಾರಣದಿಂದಾಗಿಯೇ ಬಹಳಷ್ಟು ಜನರ ತುಟಿಗಳು ಬಿರುಕುಗೊಂಡಿದ್ದು, ಸಹಜವಾದ ವರ್ಣವನ್ನು ಕಳೆದುಕೊಂಡು ಬಿಳುಚಿಕೊಂಡಂತೆ ಕಾಣಿಸುತ್ತವೆ.

ಅದರಲ್ಲೂ ಚಳಿಗಾಲದಲ್ಲಿ ಸಮಯದಲ್ಲಿ ಅಂತೂ ತುಟಿಗಳು ಒಣಗಿ ಒಡೆಯಲು ಆರಂಭಿಸುತ್ತವೆ. ಅವುಗಳನ್ನು ನೀವು ಸಮಯಕ್ಕೆ ಸರಿಯಾಗಿ ನೋಡಿಕೊಳ್ಳಲಿಲ್ಲವಾದಲ್ಲಿ ಅದರಿಂದ ರಕ್ತವು ಸಹ ಬರಬಹುದು. ಹಾಗಾದರೆ ನಿಮ್ಮ ತುಟಿಗಳನ್ನು ಯೋಗ್ಯವಾದ ರೀತಿಯಲ್ಲಿ ಆರೈಕೆ ಮಾಡಿ, ಆರೋಗ್ಯಕರವಾದ, ಗುಲಾಬಿ ವರ್ಣದ ತುಟಿಗಳನ್ನು ಪಡೆಯುವುದು ಹೇಗೆ ಎಂಬುದನ್ನು ನೋಡೋಣ...

ಕಿತ್ತಳೆ ಹಣ್ಣಿನ ಸಿಪ್ಪೆ

Top remedies to Have Naturally Red Lips

ಫಲಭರಿತ ಪ್ರಯತ್ನಗಳು ಕಿತ್ತಳೆ ಹಣ್ಣಿನ ಸಿಪ್ಪೆಯು ನಿಮ್ಮ ತುಟಿಗಳನ್ನು ಚೆನ್ನಾಗಿ ಸ್ವಚ್ಚಗೊಳಿಸುತ್ತವೆ ಹಾಗೂ ಅವನ್ನು ತೇವವಾಗಿರಿಸುತ್ತವೆ. ನಿಮ್ಮ ಮುಂದಿನ ಕಿತ್ತಳೆ ಹಣ್ಣನ್ನು ಸೇವಿಸುವಾಗ ಈ ಅಂಶವನ್ನು ನಿನಪಿಸಿಕೊಳ್ಳಿ. ನಿಮ್ಮ ಮನೆಯಲ್ಲಿ, ಸೌತೆಕಾಯಿಯ ರಸ, ಕ್ಯಾರೆಟ್ ರಸ, ಅಥವಾ ಬೀಟ್‌ರೂಟ್ ರಸ ಇವುಗಳನ್ನು ಹತ್ತಿಯನ್ನುಪಯೋಗಿಸಿ ನಿಮ್ಮ ತುಟಿಗಳ ಮೇಲೆ ಲೇಪಿಸಿಕೊಂಡರೆ ಕೆಲವೇ ದಿನಗಳಲ್ಲಿ ನಿಮಗೆ ನಿಖರವಾದ ಫಲಿತಾಂಶವು ಕಾಣುತ್ತದೆ.

ಗುಲಾಬಿ ಎಸಳು


ಕೆಲವು ಗುಲಾಬಿ ಹೂವಿನ ಎಸಳುಗಳನ್ನು ಹಾಲಿನಲ್ಲಿ ಅದ್ದಿರಿ ನಂತರ ಅವುಗಳನ್ನು ಜಜ್ಜಿ ಪೇಸ್ಟ್ ನಂತೆ ಮಾಡಿರಿ. ಇದಕ್ಕೆ ಬೇಕಾದರೆ ಜೇನು ತುಪ್ಪ ಹಾಗೂ ಗ್ಲಿಸಿರಿನ್ ಅನ್ನು ಸೇರಿಸಬಹುದು. ಈ ಪೇಸ್ಟನ್ನು ನಿಮ್ಮ ತುಟಿಗಳಿಗೆ ಹಚ್ಚಿರಿ, ನಂತರ ಹಾಲಿನಿಂದ ಇದನ್ನು ಉಜ್ಜಿ ತೆಗೆಯಿರಿ. ಕೆಲವು ದಿನಗಳ ಕಾಲ ಹೀಗೆ ಮಾಡುವುದರಿಂದ ನಿಮ್ಮ ತುಟಿಗಳು ಗುಲಾಬಿ ವರ್ಣವನ್ನು ಪಡೆದುಕೊಳ್ಳುತ್ತವೆ.

ದಾಳಿಂಬೆಯ ಹಣ್ಣಿನ ಜಾದೂ


ತುಟಿಗಳ ಮೇಲೆ ದಾಳಿಂಬೆಯು ಮಾಡಬಹುದಾದ ಜಾದೂವನ್ನು ಸ್ವತಃ ಅದರ ಬಣ್ಣವೇ ಸೂಚಿಸುತ್ತದೆ. ಒಂದು ಬಟ್ಟಲಿನಲ್ಲಿ ದಾಳಿಂಬೆಯ ಬೀಜಗಳನ್ನು ಕಲೆಹಾಕಿ ಅವನ್ನು ಚೆನ್ನಾಗಿ ಜಜ್ಜಿರಿ. ಇದನ್ನು ಹಾಲಿನ ಕೆನೆಯೊಂದಿಗೆ ಬೆರೆಸಿ ನಿಮ್ಮ ತುಟಿಗಳಿಗೆ ಲೇಪಿಸಿರಿ. ಸ್ವಲ್ಪ ಸಮಯದ ನಂತರ ಇದನ್ನು ತೆಗೆಯಿರಿ. ಇದರ ಫಲಿತಾಂಶವು ನಿಮಗೆ ಕೂಡಲೇ ತಿಳಿಯುತ್ತದೆ. ನಿಯಮಿತವಾಗಿ ಹೀಗೆ ಮಾಡುವುದರಿಂದ ನಿಮ್ಮ ತುಟಿಗಳು ಹೊಳೆಯುವ ಗುಲಾಬಿವರ್ಣವನ್ನು ಪಡೆಯುತ್ತವೆ.

ತುಟಿಗಳ ಮಸಾಜ್


ಮಸಾಜ್ ಎನ್ನುವುದು ದೇಹದ ಯಾವುದೇ ಭಾಗಕ್ಕೆ ಆರೈಕೆ ಮಾಡುವ ಅತಿ ಹಳೆಯದಾದ ಚಿಕಿತ್ಸಾ ಪಧ್ಧತಿಯಾಗಿದೆ. ಬಾದಾಮಿ ಎಣ್ಣೆ ಹಾಗೂ ಲಿಂಬೆ ರಸದ ಮಿಶ್ರಣದಿಂದ ತುಟಿಗಳನ್ನು ನಿಯಮಿತವಾಗಿ ಮಸಾಜ್ ಮಾಡಿಕೊಳ್ಳಬಹುದು. ಈ ಮಿಶ್ರಣದಿಂದ ಪ್ರತೀ ರಾತ್ರಿ ಮಲಗುವ ಮೊದಲು ನಿಮ್ಮ ತುಟಿಗಳನ್ನು ಮಸಾಜ್ ಮಾಡಿಕೊಳ್ಳಿರಿ.

ನಿಂಬೆ ಹಣ್ಣು


ಪ್ರತಿದಿನ ರಾತ್ರಿ ಮಲಗುವ ಮೊದಲು, ನಿಂಬೆ ರಸ ಹಾಗೂ ಗ್ಲಿಸಿರಿನ್‌ನ ಮಿಶ್ರಣವನ್ನು ನಿಮ್ಮ ತುಟಿಗಳಿಗೆ ಲೇಪಿಸಿರಿ. ಇದನ್ನು, ರಾತ್ರಿ ಪೂರ್ತಿ ಹಾಗೆಯೇ ಇರಗೊಟ್ಟು, ಮರುದಿನ ಬೆಳಗ್ಗೆ ತೊಳೆಯಿರಿ. ಇದು ನಿಮ್ಮ ತುಟಿಗಳಿಗೆ ಹೊಳಪು ನೀಡಲು ಸಹಕಾರಿಯಾಗಿದೆ.
English summary

Top remedies to Have Naturally Red Lips

Lips are said to be the second point of attraction on any woman’s face after eyes. Lips do get older along with you and your skin. There are natural ways by which you can make your lips look younger, bigger and red. have a look
X
Desktop Bottom Promotion