For Quick Alerts
ALLOW NOTIFICATIONS  
For Daily Alerts

ಹೊಳಪಿನ ಉಗುರುಗಳಿಗಾಗಿ ಯಶಸ್ವಿ ಮನೆಮದ್ದುಗಳು

|

ನಮ್ಮ ದೇಹದ ಅಂಗಗಳಲ್ಲಿ ಉಗುರಿಗೆ ಕೂಡ ಪ್ರಮುಖ ಮಹತ್ವವಿದ್ದು ಇವುಗಳ ಕಾಳಜಿಯನ್ನು ದೇಹದ ಇತರ ಅಂಗಗಳ ರೀತಿಯಲ್ಲೇ ನಾವು ಮಾಡಬೇಕು. ನಮ್ಮ ದೇಹದಲ್ಲಿ ಉಂಟಾಗುವ ವೈಪರೀತ್ಯಗಳು ಉಗುರಿನ ಪೋಷಣೆಯಲ್ಲಿ ಕೊರತೆಯನ್ನುಂಟು ಮಾಡುತ್ತವೆ, ಉದಾಹರಣೆಗೆ ರಕ್ತದ ಕೊರತೆ, ಬಣ್ಣ ಹಳದಿಯಾಗುವಿಕೆ, ಪೋಷಕಾಂಶದ ಕೊರತೆ ಮೊದಲಾದ ಕೊರತೆಗಳನ್ನು ನಿಮ್ಮ ಉಗುರು ಎದುರಿಸಬಹುದು.

ನಮ್ಮಲ್ಲಿ ಬಹುತೇಕ ಮಂದಿಗೆ ಪರಿಸರ ಮಾಲಿನ್ಯವು ತ್ವಚೆ ಮತ್ತು ಕೇಶದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದಿರುತ್ತದೆ. ಆದರೆ ಅಂತಹವರು ಸಹ ಉಗುರುಗಳ ಆರೋಗ್ಯವನ್ನು ಉದಾಸೀನ ಮಾಡಿರುತ್ತಾರೆ. ಉಗುರುಗಳು ಯಾವಾಗಲು ಸ್ವಚ್ಛವಾಗಿ ಇಟ್ಟಿರಬೇಕು ಮತ್ತು ಅದನ್ನು ನೇಲ್ ಕಟ್ಟರ್ ಮೂಲಕ ಜಾಗರೂಕತೆಯಿಂದ ಕತ್ತರಿಸಿರಬೇಕು. ಉಗುರುಗಳನ್ನು ಆರೋಗ್ಯಕರವಾದ ರೀತಿಯಲ್ಲಿ ಕಾಪಾಡಿಕೊಳ್ಳಲು ಹಲವಾರು ಮಾರ್ಗೋಪಾಯಗಳಿವೆ.

ಇವುಗಳ ಪೈಕಿ, ಮನೆಯಲ್ಲಿಯೇ ಕೈಗೊಳ್ಳಬಹುದಾದ ಪರಿಹಾರೋಪಾಯಗಳು ಹೆಚ್ಚು ಸ್ಥಿರವಾದವುಗಳಾಗಿರುತ್ತವೆ ಹಾಗೂ ವಾಸ್ತವದಲ್ಲಿ ಹೆಚ್ಚು ಪರಿಣಾಮಕಾರಿಯೂ ಆಗಿರುತ್ತವೆ. ಬನ್ನಿ ಇಂದಿನ ಲೇಖನದಲ್ಲಿ ನಿಮ್ಮ ಉಗುರಿನ ಕಾಳಜಿಯನ್ನು ಹೇಗೆ ಮಾಡಬೇಕು ಎಂಬುದನ್ನು ನಾವು ವಿವರವಾಗಿ ತಿಳಿಸಲಿರುವೆವು. ಉಗುರುಗಳಿಗೆ ಬಣ್ಣ ಹಚ್ಚುವಾಗ ನೀವು ಮಾಡುವ ತಪ್ಪುಗಳೇನು?

ಆಲೀವ್ ಎಣ್ಣೆಯ ಪಾತ್ರ

ಆಲೀವ್ ಎಣ್ಣೆಯ ಪಾತ್ರ

ಉಗುರುಗಳನ್ನು ಆರೋಗ್ಯಕರ ರೀತಿಯಲ್ಲಿ ಕಾಪಾಡಿಕೊಳ್ಳಲು ನೆರವಾಗುವ ವಿವಿಧ ಮಾರ್ಗೋಪಾಯಗಳ ಕುರಿತು ಯೋಚಿಸುವಾಗ, ಆ ಯೋಚನೆಗಳ ಜೊತೆಗೆ ಆಲಿವ್ ಎಣ್ಣೆಯ ಬಳಕೆಯನ್ನೂ ಸೇರ್ಪಡೆಗೊಳಿಸಿಕೊಳ್ಳಬೇಕು. ಆಲಿವ್ ಎಣ್ಣೆಯು ಒ೦ದು ನೈಸರ್ಗಿಕವಾದ ತೇವಕಾರಕವಾಗಿದ್ದು, ಇದು ತ್ವಚೆಯ ತೈಲಗ್ರ೦ಥಿಗಳನ್ನು ಪುನರುಜ್ಜೀವನಗೊಳಿಸುತ್ತದೆ

ಮೊಯಿಶ್ಚರ್ ಮಾಡುತ್ತಿರಿ

ಮೊಯಿಶ್ಚರ್ ಮಾಡುತ್ತಿರಿ

ನಿಮ್ಮ ಕೈಗಳನ್ನು ಮೊಯಿಶ್ಚರ್ ಮಾಡುತ್ತಾ ಇರಿ. ಒಂದು ವೇಳೆ ನೀವು ನೇಲ್ ಆಯಿಲ್ ಬಳಸಿದಲ್ಲಿ, ಅದು ನಿಮ್ಮ ಉಗುರುಗಳಿಗೆ ಅಗತ್ಯವಾದ ಹೈಡ್ರೇಷನ್ ನೀಡುತ್ತದೆ. ಇದು ಉಗುರುಗಳನ್ನು ಆರೋಗ್ಯವಾಗಿಡಲು ಅಗತ್ಯವಾದ ಒಂದು ಸಲಹೆಯಾಗಿರುತ್ತದೆ.

ಅಡುಗೆ ಸೋಡ ಮತ್ತು ಲಿಂಬೆ ರಸ

ಅಡುಗೆ ಸೋಡ ಮತ್ತು ಲಿಂಬೆ ರಸ

ಉತ್ತಮ ಗುಣಮಟ್ಟದ ಅಡುಗೆ ಸೋಡ ಮತ್ತು ನಿಂಬೆ ರಸ ಸೇರಿಸಿ ಪೇಸ್ಟ್ ಮಾಡಿ. ಇದನ್ನು ಉಗುರುಗಳಿಗೆ ಹಚ್ಚಿ. ಇದು ಸಂಪೂರ್ಣವಾಗಿ ಹಳದಿ ಉಗುರುಗಳನ್ನು ಹೋಗಲಾಡಿಸಲು ಸಹಾಯಮಾಡುತ್ತದೆ.

ಉಗುರಿಗಳನ್ನು ಸ್ವಚ್ಛವಾಗಿಡಿ

ಉಗುರಿಗಳನ್ನು ಸ್ವಚ್ಛವಾಗಿಡಿ

ನಿಮ್ಮ ಉಗುರುಗಳನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಬೇಕು. ಹಾಗೆಂದು ಅದನ್ನು ಯಾವಾಗಲು ತೊಳೆಯುತ್ತಾ ಇರಬೇಕು ಎಂದರ್ಥವಲ್ಲ. ಅವುಗಳನ್ನು ಒಣಗಲು ಬಿಡಬೇಡಿ ಎಂದು ಹೇಳುತ್ತೇವೆ. ಇವುಗಳನ್ನು ಸ್ವಚ್ಛವಾಗಿಡಲು, ಅಪಾಯಕಾರಿ ರಾಸಾಯನಿಕಗಳನ್ನು ಬಳಸಲು ಹೋಗಬೇಡಿ. ಒಣ ಉಗುರುಗಳು ಯಾವತ್ತಿಗೂ ನಿಮಗೆ ಅಪಾಯಕಾರಿಯೇ.

ಬೆಣ್ಣೆ

ಬೆಣ್ಣೆ

ಬೆಣ್ಣೆಯನ್ನು ನೇರವಾಗಿ ಉಗುರುಗಳಿಗೆ ಹಾಗೂ ಉಗುರುಗಳನ್ನಾವರಿಸಿಕೊ೦ಡಿರುವ ತ್ವಚೆಗೆ ಲೇಪಿಸಿಕೊಳ್ಳುವುದು, ಆರೋಗ್ಯಕರವಾದ ಉಗುರುಗಳನ್ನು ಕಾಪಾಡಿಕೊಳ್ಳುವ ಮಾರ್ಗೋಪಾಯಗಳ ಪೈಕಿ ಒ೦ದಾಗಿರುತ್ತದೆ. ಬೆಣ್ಣೆಯಲ್ಲಿರುವ ಕೊಬ್ಬಿನಾ೦ಶವು, ಉಗುರುಗಳು ಸಾಕಷ್ಟು ಪ್ರಮಾಣದಲ್ಲಿ ತೇವಾ೦ಶವನ್ನು ಪಡೆದುಕೊಳ್ಳಲು ಸಹಕರಿಸುತ್ತದೆ. ಸು೦ದರವಾದ ಉಗುರುಗಳನ್ನು ನಿಮ್ಮದಾಗಿಸಿಕೊಳ್ಳಲು ಲಭ್ಯವಿರುವ ಮಾರ್ಗೋಪಾಯಗಳ ಪೈಕಿ ಇದೂ ಕೂಡಾ ಒ೦ದಾಗಿರುತ್ತದೆ.

ನೇಲ್ ಕಟ್ಟರ್‌ಗಳು

ನೇಲ್ ಕಟ್ಟರ್‌ಗಳು

ಹಳೆಯ ಅಥವಾ ತುಕ್ಕು ಹಿಡಿದ ನೇಲ್ ಕಟ್ಟರ್‌ಗಳನ್ನು ಬಳಸಲು ಹೋಗಬೇಡಿ. ಅವುಗಳು ನಿಮ್ಮ ತ್ವಚೆಗೆ ಮತ್ತು ಉಗುರುಗಳಿಗೆ ಹಾನಿಯುಂಟು ಮಾಡಬಹುದು.

English summary

Tips For Healthy Nails

Most of us need some tips for healthy nails as we seldom give our nails enough attention. Nails reflect your health condition and they also enhance your look. Keeping your nails healthy is important if you want to make them look beautiful.
X
Desktop Bottom Promotion