For Quick Alerts
ALLOW NOTIFICATIONS  
For Daily Alerts

ಸ್ಪೆಕ್ಸ್ ನಲ್ಲಿ ಸ್ಮಾರ್ಟ್ ಆಗಿ ಕಾಣಲು ಇಲ್ಲಿದೆ ಟ್ರಿಕ್ಸ್

|

ಕನ್ನಡಕ ಧರಿಸುವುದು ಫ್ಯಾಷನ್. ಸನ್ ಗ್ಲಾಸ್ ಆಗಿರಲಿ ಅಥವಾ ದೃಷ್ಟಿ ದೋಷಕ್ಕೆ ಬಳಸುವ ಕನ್ನಡಕ ಆಗಿರಲಿ ಧರಿಸಿದಾಗ ಅದು ಫ್ಯಾಷನಬಲ್ ಆಗಿ ಕಾಣಬೇಕು, ಮುಖಕ್ಕೆ ವಿಶೇಷ ಕಳೆ ನೀಡುವಂತೆ ಇರಬೇಕೆಂದು ಬಯಸುತ್ತಾರೆ. ಆದರೆ ಕನ್ನಡಕ ಧರಿಸುವುದರಿಂದ ನಮ್ಮ ಮೇಕಪ್ ಹಾಳಾಗುವುದು ಎಂದು ಐದರಲ್ಲಿ ಮೂರರಷ್ಟು ಮಹಿಳೆಯರು ಅಸಮಧಾನ ವ್ಯಕ್ತ ಪಡಿಸುತ್ತಾರೆ ಎಂದು ಇದರ ಬಗ್ಗೆ ನಡೆಸಿದ ಸಂಶೋಧನೆಯಿಂದ ಧೃಡಪಟ್ಟಿದೆ.

ಆದರೆ ಕನ್ನಡಕಗಳು ನೀವು ಅಂದವಾಗಿ, ನಿಪುಣರಂತೆ, ಹಾಗೂ ಸೂಕ್ಷ್ಮಗ್ರಾಹಿ ವ್ಯಕ್ತಿಯಂತೆ ಕಾಣಲು ಅತ್ಯುತ್ತಮವಾದ ಸಾಧನಗಳಾಗಿವೆ. ಕನ್ನಡಕವನ್ನು ಧರಿಸಿಕೊಂಡು, ಅಂದವಾಗಿ ಕಾಣಿಸಲು ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ ನೋಡಿ.

1. ನಿಮ್ಮ ಕಣ್ಣಿನ ಹುಬ್ಬುಗಳನ್ನು ಓರಣವಾಗಿರಿಸಿಕೊಳ್ಳಿರಿ

1. ನಿಮ್ಮ ಕಣ್ಣಿನ ಹುಬ್ಬುಗಳನ್ನು ಓರಣವಾಗಿರಿಸಿಕೊಳ್ಳಿರಿ

ನಿಮ್ಮ ಕಣ್ಣಿನ ಹುಬ್ಬುಗಳನ್ನು ಸ್ವಚ್ಚವಾಗಿ ಮತ್ತು ಒಪ್ಪವಾಗಿರಿಸಿಕೊoಡರೆ, ನೀವು ಕನ್ನಡಕವನ್ನು ಧರಿಸಿಕೊoಡಿದ್ದಾಗ್ಯೂ ನಿಮ್ಮ ಕಣ್ಣುಗಳು ಅಂದವಾಗಿ ಎದ್ದು ಕಾಣುತ್ತವೆ. ಐ ಬ್ರೋ ಲೈನರ್ ಅನ್ನು ಹಾಗೂ ಬ್ರೋ ಪೌಡರ್ (ಹುಬ್ಬುಗಳ ನಡುವಿನ ಸ್ಥಳಕ್ಕೆ ಲೇಪಿಸಲು) ಬಳಸಿಕೊಂಡು ನಿಮ್ಮ ಹುಬ್ಬುಗಳಿಗೆ ಒಂದು ನಿಖರವಾದ ಆಕೃತಿಯನ್ನು ಕಲ್ಪಿಸಿರಿ.

2. ಕನ್ಸೀಲರ್ ಅನ್ನು ಉಪಯೋಗಿಸಿರಿ

2. ಕನ್ಸೀಲರ್ ಅನ್ನು ಉಪಯೋಗಿಸಿರಿ

ಕನ್ನಡಕವನ್ನು ಧರಿಸುವುದರ ಒಂದು ನ್ಯೂನತೆಯೇನೆಂದರೆ, ಇದು ನಿಮ್ಮ ಕಣ್ಣಿನ ಕೆಳಭಾದಲ್ಲಿರಬಹುದಾದ ಕಪ್ಪು ವರ್ತುಲಗಳನ್ನು, ನೆರಿಗೆಗಳನ್ನು, ಮತ್ತು ಇತರ ದೊಷಗಳನ್ನೂ ಸಹ ಎದ್ದು ಕಾಣುವಂತೆ ಮಾಡುತ್ತದೆ. ಈ ತೊಂದರೆಯನ್ನು ತಪ್ಪಿಸಲು ಹಗುರವಾಗಿ, ನವಿರಾಗಿಕನ್ಸೀಲರ್ ಅನ್ನು ಕಪ್ಪು ವರ್ತುಲಗಳು ಮತ್ತು ಕಪ್ಪು ಚುಕ್ಕೆಗಳ ಮೇಲೆ ಸಣ್ಣ ಸಣ್ಣ ಚುಕ್ಕೆಗಳ ರೂಪದಲ್ಲಿ ಲೇಪಿಸಿಕೊಳ್ಳಿರಿ. ಈ ಕನ್ಸೀಲರ್ ಅನ್ನು ನೀವು ನಿಮ್ಮಮೇಕಪ್ ಸ್ಪಂಜಿನೊಡನೆ ಬಳಸಬಹುದು.

3 . ಸಮರ್ಪಕವಾದ ಐ ಶ್ಯಾಡೋವನ್ನು ಉಪಯೋಗಿಸಿರಿ

3 . ಸಮರ್ಪಕವಾದ ಐ ಶ್ಯಾಡೋವನ್ನು ಉಪಯೋಗಿಸಿರಿ

ನಿಮ್ಮ ಕನ್ನಡಕದ ಚೌಕಟ್ಟಿಗೆ ಹೊಂದಿಕೆಯಾಗುವ ಐ ಶ್ಯಾಡೋಬಣ್ಣವನ್ನು ಬಳಸಿರಿ. ನೀವು, ನಿಮ್ಮ ಕನ್ನಡಕ ಹಾಗೂ ನಿಮ್ಮ ಕಣ್ಣುಗಳು, ಇವೆರಡೂ ಕೂಡ ಎದ್ದು ಕಾಣಿಸಬೇಕೆಂದು ಬಯಸುವಿರಾದರೆ, ಬಣ್ಣಗಳ ಗುಚ್ಚದಿಂದ, ನಿಮ್ಮ ಕನ್ನಡಕದ ಚೌಕಟ್ಟಿನ ಬಣ್ಣಕ್ಕೆ ವಿರುದ್ಧವಾದ ಶೇಡ್ ಅನ್ನು ಆರಿಸಿಕೊಳ್ಳಿರಿ. ನೀವು ಸಹಜವಾಗಿಯೇ ಕಾಣಿಸಬಯಸುವಿರಾದರೆ, ತಟಸ್ಥ (neutral) ಶೇಡ್ ಗಳ ಮೊರೆ ಹೋಗಿರಿ.

4 . ಐ ಲೈನರ್ ಅನ್ನು ಉಪಯೋಗಿಸಿರಿ

4 . ಐ ಲೈನರ್ ಅನ್ನು ಉಪಯೋಗಿಸಿರಿ

ನಿಮ್ಮ ಕಣ್ಣುಗಳು ಗಮನ ಸೆಳೆಯುವಂತೆ ಕಾಣಲು, ಐ ಲೈನರ್ ಅನ್ನು ಬಳಸಿರಿ. ನಿಮ್ಮ ಕಣ್ಣುಗಳ ಅಂಚಿಗೆ (ಬದಿಗಳಿಗೆ) ಮಾತ್ರವೇ ಐ ಲೈನರ್ ಅನ್ನು ಬಳಸಿ ಮತ್ತು ಹೀಗೆ ಮಾಡುವಾಗ ಕಣ್ಣಿನ ಒಳಭಾಗಕ್ಕೆ ಲೈನರ್ತಗುಲಿ, ಕಣ್ಣುಗಳು ಮಬ್ಬಾಗಿ ಕಾಣುವಂತೆ ಆಗದಿರಲು ಎಚ್ಚರವಹಿಸಿ. ನೀವು ಆಕರ್ಷಕವಾಗಿ ಕಾಣುವಂತೆ ಆಗಬೇಕೇ ಹೊರತು, ಅದು ವಿಪರೀತಕ್ಕೆ ಹೋಗಿ ನೀವು ಭಯ ಹುಟ್ಟಿಸುವವರಂತೆ ಕಾಣಿಸಬಾರದು.

5. ಎದ್ದು ಕಾಣಿಸುವ, ಗಾಢವಾದ ತುಟಿಯ ರಂಗನ್ನು ಉಪಯೋಗಿಸಿರಿ

5. ಎದ್ದು ಕಾಣಿಸುವ, ಗಾಢವಾದ ತುಟಿಯ ರಂಗನ್ನು ಉಪಯೋಗಿಸಿರಿ

ಕೇವಲ ನಿಮ್ಮ ಕನ್ನಡಕವನ್ನು ಮಾತ್ರವೇ ಎಲ್ಲರೂ ಗಮನಿಸುವoತಾಗುವುದು ಬೇಡ. ನಿಮ್ಮ ಕನ್ನಡಕದ ಚೌಕಟ್ಟು ಕಂದು ಅಥವಾ ಕಪ್ಪು ವರ್ಣದ್ದಾಗಿದ್ದರೆ, ಕಡು ಕೆಂಪು ಅಥವಾ ಆಕರ್ಷಕ (hot) ಕಡು ಗುಲಾಬಿ ವರ್ಣದಂತಹ ಎದ್ದು ಕಾಣಿಸುವ ಢಾಳಾದ ತುಟಿಯ ರಂಗನ್ನು ಆರಿಸಿಕೊಳ್ಳಿರಿ. ನಿಮ್ಮ ಕನ್ನಡಕದ ಚೌಕಟ್ಟು ಬಣ್ಣದ್ದಾಗಿದ್ದರೆ, ಗುಲಾಬಿ ವರ್ಣದಂತಹ ನ್ಯೂಡ್ ಕಲರ್ ಆರಿಸಿಕೊಳ್ಳಿರಿ.

6. ಕೇಶರಾಶಿಯನ್ನು ಸರಿಯಾಗಿರಿಸಿಕೊಳ್ಳಿರಿ

6. ಕೇಶರಾಶಿಯನ್ನು ಸರಿಯಾಗಿರಿಸಿಕೊಳ್ಳಿರಿ

ಅರ್ಧ ಭಾಗ ಮೇಲಕ್ಕೆ ಮತ್ತು ಅರ್ಧ ಭಾಗ ಕೆಳಕ್ಕಿರುವoತಹ ಕೇಶವಿನ್ಯಾಸವು ಕನ್ನಡಕವನ್ನು ಧರಿಸುವ ಹುಡುಗಿಯರಿಗೆ ಅಷ್ಟೊoದು ಸೂಕ್ತವಲ್ಲ ಎಂಬುದನ್ನು ನೆನಪಿನಲ್ಲಿಡಿ. ಈ ಎರಡರಲ್ಲಿ ಒಂದು ಪದ್ಧತಿಯನ್ನು ನಿಮ್ಮದಾಗಿಸಿಕೊಳ್ಳಲು, ಒಂದೋ ಕೂದಲನ್ನು ಸಡಲಿವಾಗಿ, ನಿಮ್ಮ ಮುಖಕ್ಕೊಂದು ಆಯಾಮವನ್ನು ನೀಡುವ ಹಾಗೆ ಇರಗೊಳಿಸಿ ಇಲ್ಲವೇ ಲೂಸ್ ಬನ್ ಅಥವಾ ಪೋನಿ ಟೇಲ್ ನ ರೀತಿಯಲ್ಲಿ ನಿಮ್ಮ ಕೂದಲನ್ನು ಕಟ್ಟಿಕೊಳ್ಳಿರಿ. ಹೀಗೆ ಮಾಡುವುದರಿಂದ ನೀವು ಅಂದವಾಗಿ ಕಾಣುವಂತಾಗುತ್ತದೆ.

English summary

How to look pretty in glasses?

Glasses are a great way to look smart, sassy and sophisticated. Here are ways to look pretty in glasses.
X
Desktop Bottom Promotion