For Quick Alerts
ALLOW NOTIFICATIONS  
For Daily Alerts

ದೇಹದ ಕೂದಲನ್ನು ಶೇವ್ ಮಾಡಬಾರದು!

|

ದೇಹದಲ್ಲಿರುವ ಬೇಡದ ಕೂದಲನ್ನು ತೆಗೆಯಲು ವ್ಯಾಕ್ಸ್ ಮಾಡುವ ಬದಲು ಶೇವ್ ಮಾಡುವ ಅಭ್ಯಾಸ ಕೆಲ ಮಹಿಳೆಯರಲ್ಲಿ ಇರುತ್ತದೆ. ಎರಡು ಕಾರಣದಿಂದ ಶೇವ್ ಮಾಡುವ ವಿಧಾನವನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. 1. ಸುಲಭವಾಗಿ ಶೇವ್ ಮಾಡಬಹುದು 2. ಎರಡನೆಯದು ವ್ಯಾಕ್ಸ್ ಮಾಡಿದಷ್ಟು ನೋವಾಗುವುದಿಲ್ಲ.

ಅಲ್ಲದೆ ಪುರುಷರು ಕೂಡ ನಮ್ಮ ದೇಹದಲ್ಲಿರುವ ಕೂದಲನ್ನು ತೆಗೆಯುವುದಾದರೆ ಮುಖಕ್ಕೆ ಶೇವ್ ಮಾಡಿದಂತೆ ದೇಹಕ್ಕೂ ಶೇವಿಂಗ್ ವಿಧಾನವನ್ನು ಬಳಸುತ್ತಾರೆ. ವ್ಯಾಕ್ಸ್ ಅನ್ನು ಸ್ತ್ರೀಯರು ಮಾತ್ರ ಮಾಡುವುದು ಎಂಬ ಭಾವನೆ ಪುರುಷರಲ್ಲಿರುತ್ತದೆ

ಮಹಿಳೆಯರಾಗಲಿ, ಪುರುಷರಾಗಲಿ ದೇಹದಲ್ಲಿರುವ ಬೇಡದ ಕೂದಲನ್ನು ತೆಗೆಯಲು ಶೇವಿಂಗ್ ಮಾಡಬಾರದು. ಏಕೆ ಮಾಡಬಾರದೆನ್ನುವುದಕ್ಕೆ ಕಾರಣಗಳನ್ನು ಇಲ್ಲಿ ಹೇಳಲಾಗಿದೆ.

Why You Shouldn't Shave Body Hair?

ಕೂದಲನ್ನು ಕತ್ತರಿಸುತ್ತದೆ, ಕೀಳುವುದಿಲ್ಲ: ಶೇವಿಂಗ್ ಮಾಡಿದರೆ ಕೂದಲನ್ನು ಕತ್ತರಿಸಿಬಹುದು, ಆದರೆ ಬುಡದಿಂದ ಕೀಳಲು ಸಾಧ್ಯವಿಲ್ಲ, ಆದ್ದರಿಂದ ಮೈ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ.

ಹಸಿರು ಬಣ್ಣ: ದೇಹವನ್ನು ಶೇವಿಂಗ್ ಸೆಟ್ ನಿಂದ ಶೇವ್ ಮಾಡಿದರೆ ಮೈಯ ತ್ವಚೆ ಸ್ವಲ್ಪ ಹಸಿರು ಬಣ್ಣವನ್ನು ಹೊಂದುತ್ತದೆ.

ಕೂದಲು ಒರಡಾಗುತ್ತದೆ: ಶೇವಿಂಗ್ ಮಾಡಿದರೆ ನಂತರ ಬರುವ ಕೂದಲು ತುಂಬಾ ಒರಟಾಗಿರುತ್ತದೆ. ಅಲ್ಲದೆ ಆ ಕೂದಲು ಬಂದಾಗ ಮೈಯೆಲ್ಲಾ ತುರಿಸುತ್ತದೆ.

ಕೂದಲು ಹೆಚ್ಚಾಗಿ ಬೆಳೆಯುತ್ತದೆ: ವ್ಯಾಕ್ಸ್ ಮಾಡಿದರೆ ಕೂದಲು ಬೆಳೆಯುವುದು ಕಡಿಮೆಯಾಗುತ್ತದೆ. ಆದರೆ ಶೇವಿಂಗ್ ಮಾಡಿದರೆ ಅಧಿಕ ಕೂದಲು ಹುಟ್ಟಿ ಬರುತ್ತದೆ.

ಕೂದಲು ಬೇಗನೆ ಬೆಳೆಯುತ್ತದೆ: ಶೇವಿಂಗ್ ಮಾಡಿದರೆ ಕೆಲವೇ ದಿನಗಳಲ್ಲಿ ಕೂದಲು ಹುಟ್ಟಿ ನಿಮಗೆ ಕಿರಿಕಿರಿ ಅನಿಸುವುದು.

ದೇಹವನ್ನು ಒರಟಾಗಿಸುತ್ತದೆ: ಶೇವಿಂಗ್ ಮಾಡಿದರೆ ತ್ವಚೆ ತನ್ನ ಮೃದುತ್ವವನ್ನು ಕಳೆದುಕೊಂಡು ಒರಟಾಗುತ್ತದೆ.

English summary

Why You Shouldn't Shave Body Hair? | Tips For Body Hair | ದೇಹದ ಕೂದಲನ್ನು ಏಕೆ ಶೇವ್ ಮಾಡಬಾರದು | ದೇಹದ ಆರೈಕೆಗೆ ಕೆಲ ಸಲಹೆಗಳು

The problem is not so much with women who already know that using a shaving razor can damage their skin. But men think body hair can be shaved off just like they shave their cheeks! So to make you aware, here are some of the side effects of shaving body hair that will keep you forewarned.
X
Desktop Bottom Promotion