For Quick Alerts
ALLOW NOTIFICATIONS  
For Daily Alerts

ದಿನವಿಡೀ ಇರುತ್ತೆ ಸುಗಂಧದ್ರವ್ಯದ ಸುವಾಸನೆ

|
How To Make Deodorant Last Longer
ಬೇಸಿಗೆಯಲ್ಲಿ ಬೆವರಿನ ದುರ್ವಾಸನೆಯನ್ನು ಸುಗಂಧದ್ರವ್ಯಗಳನ್ನು ಬಳಸಿ ತಡೆಗಟ್ಟಬಹುದು. ಆದರೆ ಬೆಳಗ್ಗೆ ಹಾಕಿದ ಸುಗಂಧ ದ್ರವ್ಯದ ಸುವಾಸನೆ ತುಂಬಾ ಹೊತ್ತು ನಿಲ್ಲುವುದಿಲ್ಲ. ಆದರೆ ಕೆಲವೊಂದು ಸರಳ ವಿಧಾನಗಳಿಂದ ಸುಗಂಧದ್ರವ್ಯದ ಸುವಾಸನೆ ದಿನಪೂರ್ತಿ ಇರುವಂತೆ ಮಾಡಬಹುದು. ಅದಕ್ಕಾಗಿ ಸುಗಂಧದ್ರವ್ಯ ಹಾಕುವಾಗ ಈ ಉಪಾಯಗಳನ್ನು ಪಾಲಿಸಿ:

1. ಸುಗಂಧದ್ರವ್ಯ ಹಾಕುವ ಮೊದಲು ಬಾಟಲಿಯನ್ನು ಒಮ್ಮೆ ಅಲುಗಾಡಿಸಿ ನಂತರ ಸ್ಪ್ರೇ ಮಾಡಬೇಕು.

2. ಮೈ ತುಂಬಾ ಬೆವರುವುದಾದರೆ ಸುಗಂಧದ್ರವ್ಯವನ್ನು ನೇರವಾಗಿ ಮೈಗೆ ಹಾಕದೆ ಡ್ರೆಸ್ ಮಾಡಿದ ಮೇಲೆ ಹಾಕುವುದು ಒಳ್ಳೆಯದು.

3. ಮೈ ಒದ್ದೆಯನ್ನು ಚೆನ್ನಾಗಿ ಟವಲ್‌ನಿಂದ ಒರೆಸಿದ ನಂತರ ಬಟ್ಟೆ ಧರಿಸಬೇಕು. ಸ್ನಾನ ಮಾಡಿದ ತೇವ ಹಾಗೇ ಇದ್ದರೆ ಸುಗಂಧ ದ್ರವ್ಯ ಹಾಕಿದರೆ ತುಂಬಾ ಹೊತ್ತು ನಿಲ್ಲುವುದಿಲ್ಲ.

4. ಪಾಲಿಸ್ಟರ್ ಮತ್ತು ದಪ್ಪನೆಯ ಫ್ಯಾಬ್ರಿಕ್ ಬಟ್ಟೆಗಳನ್ನು ಧರಿಸದಿರುವುದು ಒಳ್ಳೆಯದು.

5. ಹತ್ತಿ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು. ಅಲ್ಲದೆ ಇಂತಹ ಬಟ್ಟೆ ಧರಿಸಿದಾಗ ಗಾಳಿಯಾಡುವುದರಿಂದ ಬೆವರಿನ ವಾಸನೆ ಅಷ್ಟಾಗಿ ಬರುವುದಿಲ್ಲ.

6. ಸುಗಂದದ್ರವ್ಯವನ್ನು ಕಂಕುಳಿಗೆ ಮಾತ್ರವಲ್ಲ, ಮೊಣಕೈ ಮತ್ತು ಕತ್ತಿನ ಭಾಗಕ್ಕೆ ಹಾಕಿದರೆ ಸುವಾಸನೆ ತುಂಬಾ ಹೊತ್ತು ನಿಲ್ಲುತ್ತದೆ.

7. ಸ್ಲೀವ್ ಲೆಸ್ ಬಟ್ಟೆ ಧರಿಸುವುದಾದರೆ ಕಂಕುಳಿಗೆ ಸ್ವಲ್ಪ ಅಡುಗೆ ಸೋಡಾದಿಂದ ಉಜ್ಜಿ ನಂತರ ಮೈಗೆ ಮತ್ತು ಬಟ್ಟೆಗೆ ಸುಗಂಧದ್ರವ್ಯವನ್ನು ಹಾಕಬೇಕು.

English summary

How To Make Deodorant Last Longer | Tips For Beauty | ಸುಗಂಧ ದ್ರವ್ಯ ಹೆಚ್ಚು ಸಮಯ ನಿಲ್ಲುವಂತೆ ಮಾಡಲು ಕೆಲ ಸಲಹೆಗಳು

During summer without being uncomfortable and the urge to smell good keeps attacking you. So, we give you some of the proper techniques to apply a deodorant to feel fresh for 24 hours.
Story first published: Saturday, April 14, 2012, 10:31 [IST]
X
Desktop Bottom Promotion