For Quick Alerts
ALLOW NOTIFICATIONS  
For Daily Alerts

ಬಾಯಿ ವಾಸನೆ? ಇಲ್ಲಿದೆ ನೈಸರ್ಗಿಕ ಮೌತ್ ವಾಶ್

|
Mouth wash
ಬಾಯಿಯ ಸ್ವಾಸ್ಥ್ಯಕ್ಕೆ ಮೌತ್ ವಾಶ್ ಗಳು ಬೇಕು. ಆದರೆ ಈಗಿನ ಕೆಮಿಕಲ್ ಮಿಶ್ರಿತ ಮೌತ್ ವಾಶ್ ಸಾಧನಗಳು ಕೇವಲ ಕೀಟಾಣುಗಳನ್ನಲ್ಲದೇ ಒಸಡು ಮತ್ತು ಹಲ್ಲುಗಳನ್ನೂ ಹಾಳುಗೆಡಹುತ್ತವೆ. ಇದರಲ್ಲಿರುವ ಆಲ್ಕೊಹಾಲ್, ಸಕ್ಕರೆ ಅಂಶ ಮತ್ತು ಪೋಲೊಕ್ಸಾಮರ್ 407 ಬಾಯಿ ಮತ್ತು ಗಂಟಲಿನ ಕ್ಯಾನ್ಸರನ್ನೂ ತಂದೊಡ್ಡಬಹುದು. ಆದ್ದರಿಂದ ಆರೋಗ್ಯದ ವಿಷಯದಲ್ಲಿ ಚಾನ್ಸ್ ತೆಗೆದುಕೊಳ್ಳುವುದು ಬೇಡ.

ಕೆಲವು ನೈಸರ್ಗಿಕ ಮೌತ್ ವಾಶ್ ಗಳನ್ನು ಬಳಸಿ ಬಾಯಿ, ಹಲ್ಲಿನ ಆರೋಗ್ಯವನ್ನು ಹೇಗೆ ಸ್ವಾಸ್ಥ್ಯವಾಗಿರಿಸಿಕೊಳ್ಳಬಹುದು ಎಂದು ತಿಳಿದುಕೊಳ್ಳಿ:

1. ನೀರು, ಕಲ್ಲುಪ್ಪು, ಅಡುಗೆ ಸೋಡಾ, ಹೈಡ್ರೋಜೆನ್ ಪೆರಾಕ್ಸೈಡ್ ಮತ್ತು ಪುದೀನಾ ರಸವನ್ನು ಒಂದು ಲೋಟಕ್ಕೆ ಹಾಕಿ ಕರಗಿಸಿ ಮೂರು ಬಾರಿ ಬಾಯಿ ಮುಕ್ಕುಳಿಸಬೇಕು. ಇದು ಕೀಟಾಣುಗಳ ವಿರುದ್ಧ ಹೋರಾಡಿ ಹಲ್ಲನ್ನು ಶುದ್ಧ ಮತ್ತು ಗಟ್ಟಿಗೊಳಿಸುತ್ತದೆ.

2. ಬೇವಿನ ಎಣ್ಣೆಯನ್ನು ಬಾಯಿ ಮತ್ತು ಒಸಡಿಗೆ ಲೇಪಿಸಿಕೊಂಡು ಬೆಚ್ಚಗಿನ ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು. ಇದರಿಂದ ಒಸಡಿನಲ್ಲಿ ನೋವು ದೂರಾಗುವುದಲ್ಲದೆ ಹಲ್ಲುಗಳು ಗಟ್ಟಿಗೊಳ್ಳುತ್ತವೆ.

3.ಬೇವಿನ ಎಣ್ಣೆಯೊಂದಿಗೆ ಲವಂಗ ಮತ್ತು ಆಲಿವ್ ಎಣ್ಣೆ ಬೆರೆಸಿಕೊಂಡು ಬಾಯಿಗೆ ಮತ್ತು ಹುಳುಕು ಹಲ್ಲುಗಳಿದ್ದರೆ ಆ ಜಾಗಕ್ಕೆ ಹಚ್ಚಿಕೊಂಡು ಬೆಚ್ಚಗಿನ ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು.

4. ಎಳ್ಳೆಣ್ಣೆಯನ್ನು ಬಿಸಿ ನೀರಿನೊಂದಿಗೆ ಬೆರೆಸಿ ಮೌತ್ ವಾಶ್ ನಂತೆ ಬಳಸಬಹುದು.

5. ಬಿಸಿ ನೀರಿಗೆ ನಿಂಬೆ ರಸ ಬೆರಸಿ ಬಾಯಿ ಮುಕ್ಕಳಿಸಬೇಕು. ನಿಂಬೆರಸದಿಂದ ಹಲ್ಲುಗಳನ್ನು ನಯವಾಗಿ ಉಜ್ಜುವುದರಿಂದ ಹೊಳೆಯುವ ಹಲ್ಲಿನೊಂದಿಗೆ ಸ್ವಸ್ಥ ಉಸಿರು ನಿಮ್ಮದಾಗುತ್ತದೆ.

English summary

Dental problem and care | Best mouth wash | Natural mouth wash | ಹಲ್ಲುಗಳ ಸ್ವಾಸ್ಥ್ಯ | ಬಾಯಿಯ ಸ್ವಾಸ್ಥ್ಯಕ್ಕೆ ನೈಸರ್ಗಿಕ ಸಲಹೆ

To prevent bad breath and germs, many people bank on the highly advertised mouthwashes but how far are they safe?. May be they kill the harmful bacteria but they even damage our healthy gums and teeth. Why risk health unnecessarily?, try these natural and homemade mouthwashes.
Story first published: Tuesday, August 9, 2011, 16:56 [IST]
X
Desktop Bottom Promotion