Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಏಪ್ರಿಲ್ ತಿಂಗಳಿನಲ್ಲಿ ಬರುವ ಪ್ರಮುಖ ದಿನಗಳಿವು: ಯುಗಾದಿ ಸೇರಿ ಈ ವಿಶೇಷ ಹಬ್ಬಗಳಿವೆ
ಈ ಏಪ್ರಿಲ್ ತಿಂಗಳು ತುಂಬಾನೇ ವಿಶೇಷವಾಗಿದೆ. ಈ ತಿಂಗಳಿನಲ್ಲಿ ಯುಗಾದಿ, ರಾಮನವಮಿ, ರಂಜಾನ್ ಹೀಗೆ ಹಲವು ಹಬ್ಬಗಳಿಗೆ. ಏಪ್ರಿಲ್ ತಿಂಗಳಿನಲ್ಲಿ ಬರುವ ಹಬ್ಬಗಳು ಹಾಗೂ ವ್ರತಗಳ ಸಂಪೂರ್ಣ ಲಿಸ್ಟ್ ಇಲ್ಲಿದೆ:

ಏಪ್ರಿಲ್ 1: ಶೀತಲ ಸಪ್ತಮಿ, ಬ್ಯಾಂಕ್ ರಜಾದಿನ
ಏಪ್ರಿಲ್ 5: ಪಾಪವಿಮೋಚನಿ ಏಕಾದಶಿ
ಏಪ್ರಿಲ್ 6: ಶನಿ ತ್ರಯೋದಶಿ, ಪ್ರದೋಷ ವ್ರತ
ಏಪ್ರಿಲ್ 7: ಮಾಸಿಕ ಶಿವರಾತ್ರಿ
ಏಪ್ರಿಲ್ 8: ಸಂಪೂರ್ಣ ಸೂರ್ಯಗ್ರಹಣ, ಸೋಮಾವತಿ ಅಮವಾಸ್ಯೆ
ಏಪ್ರಿಲ್ 9 :ಯುಗಾದಿ
ಏಪ್ರಿಲ್ 10: ರಂಜಾನ್
ಏಪ್ರಿಲ್ 9: ಚೈತ್ರ ನವರಾತ್ರಿ
ಏಪ್ರಿಲ್ 13: ಮೇಷ ಸಂಕ್ರಾಂತಿ
ಏಪ್ರಿಲ್ 14: ವಿಷು ಕಣಿ
ಏಪ್ರಿಲ್ 14: ಅಂಬೇಡ್ಕರ್ ಜಯಂತಿ
ಏಪ್ರಿಲ್ 17: ರಾಮ ನವಮಿ
ಏಪ್ರಿಲ್ 19: ಕಾಮದ ಏಕಾದಶಿ
ಏಪ್ರಿಲ್ 20: ವಾಮನ ದ್ವಾದಶಿ
ಏಪ್ರಿಲ್ 21: ಪ್ರದೋಷ ವ್ರತ
ಏಪ್ರಿಲ್ 22:ಭೂಮಿ ದಿನ
ಏಪ್ರಿಲ್ 23: ಹನುಮಾನ್ ಜಯಂತಿ
ಏಪ್ರಿಲ್ 23: ಚೈತ್ರ ಪೂರ್ಣಿಮಾ ವ್ರತ'
ಏಪ್ರಿಲ್ 27: ವಿಕಟ ಸಂಕಷ್ಠಿ ಚತುರ್ಥಿ
ಏಕಾದಶಿ: ಏಕಾದಶಿ ಶ್ರೀ ವಿಷ್ಣುವಿಗೆ ಮೀಸಲಾದ ದಿನ. ಈ ತಿಂಗಳಿನಲ್ಲಿ ಪಾಪವಿಮೋಚನಿ ಹಾಗೂ ಕಾಮದ ಏಕಾದಶಿ ಬರುತ್ತದೆ, ಈ ಎರಡೂ ಏಕಾದಶಿಗಳು ಅದರದ್ದೇ ಆದ ಪ್ರಾಮುಖ್ಯತೆ ಇದೆ. ಏಕಾದಶಿಯನ್ನು ಉಪವಾಸವಿದ್ದು ಆಚರಿಸಲಾಗುವುದು, ಶ್ರೀ ವಿಷ್ಣುವನ್ನು ಈ ದಿನ ಪೂಜಿಸುವುದರಿಂದ ಇಷ್ಟಾರ್ಥಗಳು ನೆರವೇರುವುದು ಎಂದು ಹೇಳಲಾಗುವುದು.
ಪ್ರದೋಷ ವ್ರತ: ಈ ದಿನ ಶಿವನಿಗೆ ಮೀಸಲಾದ ದಿನ, ಈ ದಿನ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಈ ದಿನ ಶಿವನನ್ನು ಪೂಜಿಸುವುದರಿಂದ ಇಷ್ಟಾರ್ಥಗಳು ನೆರವೇರುವುದು. ಈ ದಿನ ಶಿವನಿಗೆ ಅಭಿಷೇಕ ಮಾಡಿಸಿ ಶಿವ ಮಂತ್ರಗಳನ್ನು ಪಠಿಸಿದರೆ ತುಂಬಾ ಒಳ್ಳೆಯದು.
ಏಪ್ರಿಲ್ 9: ಕರ್ನಾಟಕದ ಪ್ರಮುಖ ಹಬ್ಬ ಯುಗಾದಿ. ಯುಗಾದಿಯಿಂದ ಹೊಸ ವರ್ಷ ಶುರು ಎಂದು ನಾವು ನಂಬುತ್ತೇವೆ. ಬೇವು-ಬೆಲ್ಲದೊಂದಿಗೆ ಆಚರಿಸುವ ಈ ಹಬ್ಬ ಬದುಕಿನ ಆಶಯವನ್ನು ಆಚರಿಸಲಾಗುವುದು. ಬದುಕು ಎಂದರೆ ಖುಷಿ ಮಾತ್ರವಲ್ಲ ದುಃಖವೂ ಇರಲಿದೆ, ಎರಡನ್ನೂ ಸಮನಾಗಿ ಸ್ವೀಕರಿಸಬೇಕು. ಬೇವು ಬೆಲ್ಲ ಆರೋಗ್ಯಕ್ಕೂ ತುಂಬಾ ಒಳ್ಳೆಯದು.
ಮೇಷ ಸಂಕ್ರಾಂತಿ: ಸೂರ್ಯ ತನ್ನ ರಾಶಿ ಬದಲಾವಣೆ ಮಾಡುತ್ತಾನೆ, ಏಪ್ರಿಲ್ 13ಕ್ಕೆ ಸೂರ್ಯ ಮೇಷ ರಾಶಿಗೆ ಸಂಚರಿಸಲಿದೆ. ಇನ್ನು ಒಂದು ತಿಂಗಳು ಸೂರ್ಯ ಮೇಷ ರಾಶಿಯಲ್ಲಿ ಇರಲಿದೆ, ಅಲ್ಲದೆ ಮೇಷ ರಾಶಿ ಕನ್ನಡ ಮಾಸದ ಮೊದಲ ಮಾಸ ಕೂಡ ಹೌದು.
ವಿಷು ಕಣಿ: ಈ ದಿನ ಶ್ರೀ ವಿಷ್ಣುವನ್ನು ಆಚರಿಸಲಾಗುವುದು. ಕೇರಳದಲ್ಲಿ ಹಾಗೂ ದಕ್ಷಿಣ ಕನ್ನಡದಲ್ಲಿ ವಿಷು ಹಬ್ಬವನ್ನು ಆಚರಿಸಲಾಗುವುದು. ಈ ದಿನ ಶ್ರೀ ವಿಷ್ಣುವಿನ ವಿಗ್ರಹವನ್ನು ಹೂವುಗಲು, ಆಭರಣ, ಹಣ್ಣುಗಳು, ನಾಣ್ಯ ಇವುಗಳಿಂದ ಅಲಂಕರಿಸಬೇಕು, ನಂತರ ಬೆಳಗ್ಗೆ ಎದ್ದು ಬಂದು ಶ್ರೀ ವಿಷ್ಣುವಿನ ದರ್ಶನ ಪಡೆಯಲಾಗುವುದು. ಹೀಗೆ ಮಾಡುವುದರಿಂದ ವರ್ಷಪೂರ್ತಿ ನಮಗೆ ಶುಭವಾಗಿರಲಿದೆ ಎಂಬ ನಂಬಿಕೆ.
ರಂಜಾನ್: ರಂಜಾನ್ ಮುಸ್ಲಿಂರ ಪವಿತ್ರ ಹಬ್ಬ. 30 ದಿವಸದ ಉಪವಾಸದ ನಂತರ ರಂಜಾನ್ ಹಬ್ಬವನ್ನು ಆಚರಿಸಲಾಗುವುದು. ಈ ದಿನ ಮುಸ್ಲಿಂ ಬಾಂಧವರು ವಿಶೇಷ ಅಡುಗೆಗಳನ್ನು ತಯಾರಿಸಿ ವಿಶೇಷವಾಗಿ ಆಚರಿಸಲಾಗುವುದು.
ರಾಮ ನವಮಿ: ಈ ಹಬ್ಬವನ್ನು ದೇಶದಾದ್ಯಂತ ಆಚರಿಸಲಾಗುವುದು. ಈ ವರ್ಷ ರಾಮ ನವಮಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಅಯೋಧ್ಯೆಯಲ್ಲಿ ರಾಮಮಂದಿರ ಓಪನ್ ಆಗಿದೆ, ಹೀಗಾಗಿ ರಾಮನವಮಿ ಸಡಗರ ಹೆಚ್ಚಾಗಲಿದೆ, ಈ ದಿನ ಅಯೋಧ್ಯೆಯನ್ನು ಅಲಂಕರಿಸಲಾಗುವುದು, ಲಕ್ಷಾಂತರ ಭಕ್ತರು ಅಯೋಧ್ಯೆಗೆ ಬರಲಿದ್ದಾರೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications