ರುಚಿಯಾದ ಗ್ರೇವಿಗಾಗಿ ಸರಳ ಉಪಾಯ

Tips To Prepare Tasty Gravy
ರೊಟ್ಟಿ, ಚಪಾತಿ ಜೊತೆ ಗ್ರೇವಿ ತಿನ್ನಲು ತುಂಬಾ ರುಚಿಯಾಗಿರುತ್ತದೆ. ವೆಜ್ ಮತ್ತು ನಾನ್ ವೆಜ್ ನಿಂದ ಗ್ರೇವಿ ತಯಾರಿಸಲಾಗುವುದು. ನೀವು ತಯಾರಿಸುವ ಗ್ರೇವಿ ಮತ್ತಷ್ಟು ರುಚಿಕರವಾಗಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿ.

1. ಗ್ರೇವಿ ತಯಾರಿಸುವಾಗ ಎಣ್ಣೆ ಜೊತೆ ತುಪ್ಪ ಅಥವಾ ವನಸ್ಪತಿಯನ್ನು ಸೇರಿಸಬೇಕು.

2. ಗ್ರೇವಿಗೆ ಹಾಕಲು ಬಳಸುವ ಮಸಾಲವನ್ನು ಕಡಿಮೆ ಉರಿಯಲ್ಲಿ ಹುರಿಯಬೇಕು. ಇದರಿಂದ ಮಸಾಲದ ಬಣ್ಣ ಮತ್ತು ರುಚಿ ಹೆಚ್ಚಾಗುತ್ತದೆ.

3. ಸ್ವಲ್ಪ ಸಕ್ಕರೆಯನ್ನು ಹಾಕಿದರೆ ಗ್ರೇವಿ ರುಚಿ ಹೆಚ್ಚಾಗುತ್ತದೆ.

4. ಎಣ್ಣೆ ಬಿಸಿ ಮಾಡಿ ಅದರಲ್ಲಿ ಟೊಮೆಟೊವನ್ನು ಕತ್ತರಿಸಿ ಹಾಕಿ ಸ್ವಲ್ಪ ಹೊತ್ತು ಬಿಸಿಮಾಡಿ ಪೇಸ್ಟ್ ರೀತಿಯಲ್ಲಿ ಮಾಡಬೇಕು. ಅದರಲ್ಲೂ ಹಣ್ಣಾದ ಟೊಮೆಟೊ ಮಾತ್ರ ಬಳಸಿ.

5. ಗ್ರೇವಿ ಮಾಡುವಾಗ ಒಳ್ಳೆಯ ಗುಣಮಟ್ಟದ ಕೆಣಪು ಮೆಣಸಿನಕಾಯಿ ಉಪಯೋಗಿಸಿ. ಮನೆಯಲ್ಲಿ ಕೆಂಪು ಮೆಣಸಿನಕಾಯಿಯನ್ನು ಒಣಗಿಸಿ ಪುಡಿ ಮಾಡಿದರೆ ಮೆಣಸಿನ ಪುಡಿ ತುಂಬಾ ಕೆಂಪಾಗಿರುತ್ತೆ.

6. ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಉಪಯೋಗಿಸುವಾಗ 60% ಬೆಳ್ಳುಳ್ಳಿ ಮತ್ತು 40%ನಷ್ಟು ಶುಂಠಿ ಪೇಸ್ಟ್ ಉಪಯೋಗಿಸಿ. ಬೆಳ್ಳುಳ್ಳಿಗಿಂತ ಶುಂಠಿ ಜಾಸ್ತಿಯಾದರೆ ಗ್ರೇವಿಯ ರುಚಿ ಹಾಳಾಗುತ್ತದೆ.

ಈ ಎಲ್ಲಾ ಟಿಪ್ಸ್ ಗಳನ್ನು ಗಮನದಲ್ಲಿಟ್ಟು ಗ್ರೇವಿ ತಯಾರಿಸಿದರೆ ರುಚಿಕರವಾದ ಗ್ರೇವಿ ರೆಡಿ.

User Comments
Smitha 09 Feb 2012 08:40 am
Very good tips for everyone.Enjoy!
[ ಅಭಿಪ್ರಾಯ ಬರೆಯಿರಿ ]