ಇಡೀ ಜಗತ್ತು ಪ್ರೇಮಿಗಳ ದಿನದತ್ತ ದೃಷ್ಟಿ ನೆಟ್ಟಿದೆ. ಪ್ರೇಮಿಗಳಿಗೆ ಪ್ರೇಮ ಲೋಕದಲ್ಲಿ ಜೋಡಿ ಹಕ್ಕಿಗಳಂತೆ ಹಾರುವ ಆಸೆ. ಪ್ರೇಮಿಗಳ ದಿನಕ್ಕೆ ನಿಮ್ಮ ಬಾಳಿನ ಸಂಗಾತಿಗೆ ಏನಾದರೂ ಗಿಪ್ಟ್ ಮಾಡಬೇಕೆಂದು ಯೋಚಿಸುತ್ತಾ ಇರುತ್ತೀರಾ? ಗಿಫ್ಟ್ ಜೊತೆ ನಿಮ್ಮ ಕೈಯಾರೆ ಮಾಡಿದ ಈ ಸಿಹಿ ತಿನಿಸನ್ನು ಅವರ ಬಾಯಿಗೆ ಹಾಕಿ. ಈ ಚಾಕಲೇಟ್ ಮಾಡುವ ವಿಧಾನ ಸುಲಭವಾಗಿದ್ದು ಇದನ್ನು ಅರ್ಧ ಗಂಟೆಯಲ್ಲಿ ತಯಾರಿಸಬಹುದಾಗಿದೆ.
ಬೇಕಾಗುವ ಸಾಮಾಗ್ರಿಗಳು:
1. ಸಕ್ಕರೆ 1 ಕಪ್ ( ತುಂಬಾ ಸಿಹಿ ಬೇಡ ಅಂದರೆ ಸಕ್ಕರೆ ಸ್ವಲ್ಪ ಕಡಿಮೆ ಹಾಕಿ )
2. ಹಾಲಿನ ಪುಡಿ 1 ಕಪ್
3. ನೀರು 3/4 ಕಪ್
4. ಕೋಕಾ ಪುಡಿ 2 ಚಮಚ
5. ಬೆಣ್ಣೆ 50 ಗ್ರಾಂ
6. ನಟ್ಸ್ ಕೈ ತುಂಬಾ
7. ವೆನಿಲ್ಲಾ ರಸ 2 ಹನಿ
8. ಚಾಕಲೇಟ್ ಮಿಶ್ರಣ ಹಾಕಲು ಹೃದಯಾಕಾರದ ಚಿಕ್ಕ ಮೋಲ್ಡ್ ಗಳು ( ಪಾತ್ರೆ)
ತಯಾರಿಸುವ ವಿಧಾನ:
1. ನೀರಿನಲ್ಲಿ ಸಕ್ಕರೆಯನ್ನು ಹಾಕಿ ಕರಗಿಸಿ ಬಿಸಿ ಮಾಡಬೇಕು. ಸಕ್ಕರೆ ಪಾನಕ ಗಟ್ಟಿಯಾಗುವವರೆಗೆ ಕುದಿಸಬೇಕು.
2. ನಂತರ ಸಕ್ಕರೆ ಪಾನಕವನ್ನು ಉರಿಯಿಂದ ತೆಗೆದು ಹಾಲಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರ ಮಾಡಬೇಕು.
3. ಈಗ ಕೋಕಾ ಪುಡಿಯನ್ನು ಹಾಕಿ ಮಿಶ್ರ ಮಾಡಿ ಬೆಣ್ಣೆಯನ್ನು ಹಾಕಬೇಕು. ಸ್ವಲ್ಪ ವೆನಿಲ್ಲಾ ರಸವನ್ನು ಸೇರಿಸಿ.
4. ನಂತರ ನಟ್ಸ್ ಅನ್ನು ಸೇರಿಸಿ ಮತ್ತೊಮ್ಮೆ ಮಿಶ್ರ ಮಾಡಿ ಚಿಕ್ಕ-ಚಿಕ್ಕ ಚಾಕಲೇಟ್ ಪಾತ್ರೆಗೆ ಹಾಕಿ ಫ್ರಿಜ್ ನಲ್ಲಿಡಿ.
ಈ ರೀತಿ ಸಿಹಿಯನ್ನು ತಯಾರಿಸಿ ವ್ಯಾಲೆಂಟೈನ್ಸ್ ಡೇ ಗೆ ನಿಮ್ಮ ಗಂಡನಿಗೆ ಸರ್ ಫ್ರೈಸ್ ಕೊಡಿ.