Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಪಿಜ್ಜಾ ಬೇಸಿಗೆ ಮೈದಾ ಬದಲು ಗೋಧಿ-ಅಕ್ಕಿಹಿಟ್ಟು

ಹೊರಗಡೆ ದೊರೆಯುವ ಪಿಜ್ಜಾದಲ್ಲಿ ಕ್ಯಾಲೋರಿ ಹೆಚ್ಚಾಗಿರುವುದರಿಂದ ಹೆಚ್ಚು ತಿಂದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಕಡಿಮೆ ಕ್ಯಾಲೋರಿಯಲ್ಲಿ ಆರೋಗ್ಯಕರ ಪಿಜ್ಜಾ ಮಾಡಿ ಮನೆಯಲ್ಲಿಯೆ ಸೇವಿಸಬಹುದಾಗಿದ್ದು, ಇಲ್ಲಿದೆ ನೋಡಿ ಚೀಸ್ ಫ್ರೀ ಪಿಜ್ಜಾ ರೆಸಿಪಿ.
ಚೀಸ್ ಫ್ರೀ ಪಿಜ್ಜಾ ತಯಾರಿಸುವಾಗ ಮೈದಾ ಬದಲು ಗೋಧಿ ಅಥವಾ ಅಕ್ಕಿಹಿಟ್ಟಿನಿಂದ ಪಿಜ್ಜಾ ಬೇಸ್ ತಯಾರಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಬೇಕಾಗುವ ಸಾಮಾಗ್ರಿಗಳು:
* 1 ಪಿಜ್ಜಾ ಬೇಸ್
* 1/2 ಕಪ್ ಟೊಮೆಟೊ ಸಾಸ್
* 1/2 ಕಪ್ ಕತ್ತರಿಸಿದ ಈರುಳ್ಳಿ
* 1/2 ಕಪ್ ಜೋಳ ( ಸ್ವಲ್ಪ ಬೆಣ್ಣೆ ಹಾಕಿ ಬೇಯಿಸಿದ ಜೋಳ)
* ಕತ್ತರಿಸಿದ ತುಳಸಿ
* 1/2 ಕಪ್ ದೊಡ್ಡ ಮೆಣಸಿನ ಕಾಯಿ
* ಸ್ವಲ್ಪ ಕರಿಮೆಣಸಿನ ಪುಡಿ
ತಯಾರಿಸುವ ವಿಧಾನ:
1. ಪಿಜ್ಜಾ ಬೇಸ್ ನಲ್ಲಿ ಸಾಸ್ ಮತ್ತು ಕತ್ತರಿಸಿದ ತುಳಸಿ ಎಲೆ ಮತ್ತು ತರಕಾರಿಗಳನ್ನು ಅದರ ಮೇಲೆ ಉದುರಿಸಬೇಕು.
2. ಈಗ ಪಿಜ್ಜಾ ಬೇಸ್ ಮೈಕ್ರೋವೇವ್ ನಲ್ಲಿಟ್ಟು 3-4 ನಿಮಿಷ ಬೇಯಿಸಿದರೆ ಪಿಜ್ಜಾ ರೆಡಿ.
ಪಿಜ್ಜಾ ತಯಾರಿಸುವಾಗ ತರಕಾರಿ ಬದಲು ಕತ್ತರಿಸಿ ಜೇನಿನಲ್ಲಿ ಅದ್ದಿದ ಆಪಲ್, ಬಾಳೆಹಣ್ಣು, ಅನನಾಸ್ ಹಾಕಿ ಮಾಡಿದರೂ ರುಚಿಕರವಾದ ಫ್ರೂಟ್ ಪಿಜ್ಜಾ ರೆಡಿ.



Click it and Unblock the Notifications