For Quick Alerts
ALLOW NOTIFICATIONS  
For Daily Alerts

ಅಪ್ಪಟ ಮಂಗಳೂರು ಶೈಲಿಯಲ್ಲಿ ಮೀನಿನ ಸಾರು

|

ಮಂಗಳೂರು ಮೀನು ಸಾರಿಗೆ ಪ್ರಸಿದ್ಧ. ಇಲ್ಲಿ ಅನೇಕ ರುಚಿಯಲ್ಲಿ ಮೀನು ಸಾರನ್ನು ಮಾಡಲಾಗುವುದು. ಬರೀ ಉಪ್ಪು, ಮೆಣಸು ಹುಳಿ ಹಾಕಿ ತಯಾರಿಸಲಾಗುವುದು, ಹಸಿ ತೆಂಗಿನಕಾಯಿಯನ್ನು ರುಬ್ಬಿ ಹಾಕಿ ಮಾಡುತ್ತಾರೆ, ಮತ್ತೆ ಕೆಲವರು , ಮೊದಲು ತೆಂಗಿನ ತುರಿಯನ್ನು ಹುರಿದು ನಂತರ ರುಬ್ಬಿ ಸಾರು ಮಾಡುತ್ತಾರೆ.

ಇಲ್ಲಿ ನಾವು ಒಂದು ಬಗೆಯ ಮೀನು ಸಾರಿನ ರೆಸಿಪಿ ನೀಡಿದ್ದೇವೆ ನೋಡಿ:

Mangalorean fish curry

ಬೇಕಾಗುವ ಸಾಮಾಗ್ರಿಗಳು

1/4 ಚಮಚ ಮೆಂತೆ ಮತ್ತು ಸ್ವಲ್ಪ ಅಜ್ವೈನ್
ಶುಚಿ ಮಾಡಿದ ಮೀನು 1 ಕೆಜಿ(ಮೀನು ನಿಮಗೆ ಇಷ್ಟವಾದದು)
6-8 ಎಸಳು ಬೆಳ್ಳುಳ್ಳಿ
1 ಈರುಳ್ಳಿ
1ಚಮಚ ಕೊತ್ತಂಬರಿ ಬೀಜ
1 ಚಮಚ ಜೀರಿಗೆ
ಕಾಲು ಚಮಚ ಅರಿಶಿಣ
6 ಕೆಂಪು ಮೆಣಸು(ನಿಮ್ಮ ಖಾರಕ್ಕೆ ತಕ್ಕಷ್ಟು)
1 ಚಮಚ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್
ಸ್ವಲ್ಪ ಹುಣಸೆ ಹಣ್ಣಿನ ರಸ
2 ಚಮಚ ಎಣ್ಣೆ
ಕರಿ ಬೇವಿನ ಎಲೆ

ತಯಾರಿಸುವ ವಿಧಾನ:

* ಈಗ ಹಸಿ ತೆಂಗಿನ ತುರಿ, ಅರಿಶಿಣ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಒಣ ಮೆಣಸು ಹಾಕಿ ಪೇಸ್ಟ್ ಮಾಡಿ.
* ಹುಣಸೆ ಹಣ್ಣನ್ನು ಬಿಸಿ ನೀರಿನಲ್ಲಿ ನೆನೆಸಿ ಹುಣೆಸೆ ಹಣ್ಣಿನ ರಸ ತಯಾರಿಸಿಡಿ.
* ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಮೆಂತೆ, ಅಜ್ವೈನ್, ಕತ್ತರಿಸಿ ಬೆಳ್ಳುಳ್ಳಿ, ಕತ್ತರಿಸಿ ಈರುಳ್ಳಿ ಹಾಕಿ ಚೆನ್ನಾಗಿ ಆಡಿಸಿ.
* ಈಗ ಕೊತ್ತಂಬರಿ ಬೀಜ, ಜೀರಿಗೆ , ಕರಿ ಬೇವಿನ ಎಲೆ ಹಾಕಿ 2-3 ನಿಮಿಷ ಹುರಿಯಿರಿ.
* ಈಗ ರುಬ್ಬಿದ ಮಿಶ್ರಣ ಹಾಕಿ 2 ನಿಮಿಷ ಸೌಟ್ ನಿಂದ ಆಡಿಸಿ, ಒಂದು ಕಪ್ ನೀರು ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಕುದಿಸಿ.
* ಮಿಶ್ರಣ ಕುದಿ ಬಂದಾಗ ಹುಣಸೆ ಹಣ್ಣಿನ ರಸ ಹಾಕಿ ಹಾಕಿ ಮತ್ತೆ 5 ನಿಮಿಷ ಕುದಿಸಿ.
* ನಂತರ ಮೀನನ್ನು ಹಾಕಿ ಬೇಯಿಸಿದರೆ ಮೀನು ಸಾರು ರೆಡಿ.

English summary

Mangalorean fish curry | Variety Of Fish Curry | ಮಂಗಳೂರು ಶೈಲಿಯ ಮೀನು ಸಾರು | ಅನೇಕ ಬಗೆಯ ಮೀನಿನ ಸಾರು

Mangalore is very famous for fish curry. If you taste mangalore style fish foods really you would love. Here we have given one of the authentic fish curry recipe from Mangalore.
X
Desktop Bottom Promotion