For Quick Alerts
ALLOW NOTIFICATIONS  
For Daily Alerts

ಪ್ರಸವದ ನಂತರ ತಾಯಂದಿರು ತಿನ್ನಬಾರದ ಆಹಾರಗಳು

By Arpitha Rao
|

ಪ್ರಸವದ ನಂತರ ಎದೆ ಹಾಲು ಉಣಿಸುವುದು ಪ್ರತಿಯೊಬ್ಬ ತಾಯಿ ಮತ್ತು ಮಗುವಿಗೆ ಮಹತ್ತರವಾದುದು. ಎದೆ ಹಾಲು ಉಣಿಸುವ ತಾಯಿ ತನ್ನ ಆರೋಗ್ಯದ ಜೊತೆಗೆ ಮಗುವಿನ ಆರೋಗ್ಯದ ಜೊತೆಗೂ ಸರಿಯಾದ ರೀತಿಯ ಆರೈಕೆ ಮಾಡಿಕೊಳ್ಳುವುದು ಅವಶ್ಯಕ. ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎಷ್ಟು ಸೇವಿಸಬೇಕು ಎಂಬುದು ಅಷ್ಟೇ ಮುಖ್ಯ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಎಂಟನೆಯ ತಿಂಗಳಲ್ಲಿ ದೈಹಿಕ ಸಂಪರ್ಕ ಎಷ್ಟು ಸರಿ ?

ಇದು ಕೇವಲ ಮಗುವಿನ ಆರೋಗ್ಯಕ್ಕೆ ಮಾತ್ರವಲ್ಲ ಜೀವನ ಶೈಲಿಯನ್ನು ಉತ್ತಮವಾಗಿ ಇರಿಸಿಕೊಳ್ಳುವಲ್ಲಿ ಕೂಡ ಅತಿ ಹೆಚ್ಚು ಸಹಾಯಕವಾಗುತ್ತದೆ.ಆದ್ದರಿಂದ ಪ್ರಸವದ ನಂತರ ಪ್ರತಿ ಅಮ್ಮ ತನ್ನ ಮಗುವಿನ ಆರೋಗ್ಯಕ್ಕಾಗಿ ಕಟ್ಟುನಿಟ್ಟು ಜೀವನ ಶೈಲಿ ಅನುಕರಿಸುವುದು ಅನಿವಾರ್ಯ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಜನನ ನಿಯಂತ್ರಣದ ಬಳಿಕ ಗರ್ಭಧರಿಸಬಹುದೇ?

ಮೊಟ್ಟೆ:

ಮೊಟ್ಟೆ:

ಕುಟುಂಬದಲ್ಲಿ ಅಲರ್ಜಿಯ ತೊಂದರೆ ಇದ್ದರೆ ಮಗುವಿಗೂ ಮುಂದೆ ಇದು ಕಂಡು ಬರುವ ಸಾಧ್ಯತೆ ಇದೆ ಎಂದು ತಜ್ಞರು ಕಂಡು ಹಿಡಿದಿದ್ದಾರೆ.ನಿಮ್ಮ ಮಗುವಿಗೆ ಅಲರ್ಜಿಯ ತೊಂದರೆ ಇದೆ ಎಂದು ನಿಮಗೆ ಅನಿಸಿದರೆ ಡೈರಿ ಉತ್ಪನ್ನಗಳು,ಸೋಯಾ,ಮೊಟ್ಟೆಯ ಬಿಳಿ ಭಾಗ,ಗೋಧಿ,ಶೇಂಗ ಇವುಗಳನ್ನು ಬಳಸದಿರುವುದು ಉತ್ತಮ.

ಬೆಳ್ಳುಳ್ಳಿ:

ಬೆಳ್ಳುಳ್ಳಿ:

ಬೆಳ್ಳುಳ್ಳಿಯನ್ನು ತಿಂದ ಎರಡು ತಾಸಿನ ನಂತರವೂ ಅದರ ವಾಸನೆ ಹಾಗೆಯೇ ಇರುತ್ತದೆ.ಬೆಳ್ಳುಳ್ಳಿ ತಿಂದ ನಂತರ ಅದು ಹಾಲಿನಲ್ಲೂ ಕೂಡ ಸೇರಿಕೊಂಡು ಹಾಲು ಕೂಡ ವಾಸನೆ ಬರಬಹುದು ಇದರಿಂದ ನಿಮ್ಮ ಮಗು ಹೇವರಿಕೆ ಪಟ್ಟುಕೊಳ್ಳಬಹುದು.ಇದರ ಬಗ್ಗೆ ಎಚ್ಚರದಿಂದಿರಿ.

ಪಪ್ಪಾಯ ಹಣ್ಣು:

ಪಪ್ಪಾಯ ಹಣ್ಣು:

ಉಗುಳುವುದು,ಡೈಪರ್ ರಾಷ್ ಇವುಗಳು ಮಗುವಿನಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಗಳು.ಸಿಟ್ರಸ್ ಅಂಶವಿರುವ ಹಣ್ಣುಗಳನ್ನು ಬಳಸುವುದರಿಂದ ಕೂಡ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ.ಸಿಟ್ರಸ್ ಅಂಶವಿರುವ ಹಣ್ಣುಗಳಲ್ಲಿ ಇರುವ ಸಂಯುಕ್ತಗಳು ತುರಿಕೆಯ ಸಮಸ್ಯೆಗಳು ಕಂಡು ಬರಲು ಕಾರಣವಾಗಬಹುದು.ಕಿತ್ತಳೆ,ಲಿಂಬು ಇವುಗಳ ಬದಲು ಮಾವಿನ ಹಣ್ಣು ಮತ್ತು ಪಪ್ಪಾಯ ಹಣ್ಣುಗಳನ್ನು ಮಗುವಿಗೆ ಕೊಡಿ.

ವಾಂತಿ,ನಿದ್ದೆ ಬರುವಿಕೆ

ವಾಂತಿ,ನಿದ್ದೆ ಬರುವಿಕೆ

ನೀವು ಹೆಚ್ಚು ಡೈರಿ ಉತ್ಪನ್ನಗಳು,ಚೀಸ್,ಐಸ್ ಕ್ರೀಂ,ಮೊಸರು ಇವುಗಳನ್ನು ಬಳಸುವುದರಿಂದ ಇದು ತಕ್ಷಣ ಎದೆ ಹಾಲಿಗೂ ಪರಿಣಾಮ ಬೀರುವ ಸಂಭವವಿರುತ್ತದೆ ಮತ್ತು ಇದರಿಂದ ವಾಂತಿ,ನಿದ್ದೆ ಬರದಿರುವಿಕೆ,ಕೆಂಪು ಕಜ್ಜಿ ಇವುಗಳೆಲ್ಲ ಮಗುವಿಗೆ ಸಂಭವಿಸಬಹುದು.ಆದ್ದರಿಂದ ಇದನ್ನು ಕಡಿಮೆ ಪ್ರಮಾಣದಲ್ಲಿ ಬಳಸಿ.

ಮೀನು:

ಮೀನು:

ಮೀನಿನಲ್ಲಿರುವ ಸಂಯುಕ್ತಗಳು ಎದೆ ಹಾಲಿನ ಮೂಲಕ ಮಗುವಿಗೆ ಹೋದಾಗ ಇದರಿಂದ ಮಗುವಿಗೆ ಗ್ಯಾಸ್ ಆಗುವ ಸಂಭವ ಹೆಚ್ಚಿರುತ್ತದೆ.ಆದ್ದರಿಂದ ಎದೆಹಾಲು ಉಣಿಸುತ್ತಿರುವಾಗ ಶಾರ್ಕ್ ಮೀನು,ಕತ್ತಿ ಮೀನು,ಟೈಲ್ ಫಿಶ್ ಇವುಗಳ ಬಳಕೆ ಮಾಡದಿರುವುದು ಸೂಕ್ತ.

ಕಾಫಿ:

ಕಾಫಿ:

ಕಾಫಿಯಲ್ಲಿರುವ ಕೆಫಿನ್ ಅಂಶ ಎದೆ ಹಾಲಿನ ಮೂಲಕ ಮಗುವಿಗೆ ರವಾನೆಯಾದಾಗ ಮಗು ಕಿರಿಕಿರಿ ಮತ್ತು ನಿದ್ದೆ ಬರದಿರುವುದು ಇಂತಹ ಸಮಸ್ಯೆ ಅನುಭವಿಸುತ್ತದೆ.ಆದ್ದರಿಂದ ಎದೆ ಹಾಲು ಕುಡಿಸುವುದು ನಿಲ್ಲಿಸುವವರೆಗೆ ಕಾಫಿ ಕುಡಿಯುವುದನ್ನು ಆದಷ್ಟು ಕಡಿಮೆ ಮಾಡುವುದು ಸೂಕ್ತ.

ಅಲ್ಕೋಹಾಲ್:

ಅಲ್ಕೋಹಾಲ್:

ಅಲ್ಕೋಹಾಲ್ ಕುಡಿಯುವುದರಿಂದ ಮಗುವಿನ ದೇಹದ ತೂಕ ಹೆಚ್ಚುವುದು,ನಿಶ್ಯಕ್ತಿ,ಅರೆನಿದ್ರಾವಸ್ಥೆ ಇವುಗಳು ಕಂಡು ಬರುತ್ತದೆ ಜೊತೆಗೆ ತಾಯಿಯಲ್ಲಿ ಎದೆ ಹಾಲನ್ನು ಕಡಿಮೆ ಮಾಡುತ್ತದೆ.ಆದ್ದರಿಂದ ಅಲ್ಕೋಹಾಲ್ ಕುಡಿಯದಿರುವುದು ಒಳ್ಳೆಯದು.

ಶೇಂಗಾ:

ಶೇಂಗಾ:

ನಿಮ್ಮ ಕುಟುಂಬದಲ್ಲಿ ಶೇಂಗಾ ತಿನ್ನುವುದರಿಂದ ಅಲರ್ಜಿ ತೊಂದರೆ ಕಂಡು ಬಂದಿದ್ದರೆ ಮಗುವಿಗೂ ಕೂಡ ಇದು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.ಇದರಿಂದ ಉಬ್ಬಸ,ತುರಿಕೆ ಮುಂತಾದ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.ಆದಾಗ್ಯೂ ಕೆಲವು ಮಗು ಕಡಲೆ ಅಥವಾ ಶೇಂಗಾ ಬಳಸುವುದರಿಂದ ಯಾವುದೇ ಸಮಸ್ಯೆಗಳನ್ನು ಹೊಂದುವುದಿಲ್ಲ.ಆದ್ದರಿಂದ ನಟ್ಸ್ ಗಳನ್ನು ಬಳಸುವುದನ್ನು ಕಡಿಮೆ ಮಾಡಿ.

ಆಹಾರದಲ್ಲಿ ಹೆಚ್ಚು ಖಾರ ಇರದಂತೆ ನೋಡಿಕೊಳ್ಳಿ:

ಆಹಾರದಲ್ಲಿ ಹೆಚ್ಚು ಖಾರ ಇರದಂತೆ ನೋಡಿಕೊಳ್ಳಿ:

ನಿಮ್ಮ ಆಹಾರದಲ್ಲಿ ಹೆಚ್ಚು ಖಾರ ಇರದಂತೆ ನೋಡಿಕೊಳ್ಳಿ.ಖಾರ ಹೆಚ್ಚು ಬಳಸಿದಾಗ ಇದು ಮಗುವಿಗೆ ಕಿರಿ ಕಿರಿ ತರುತ್ತದೆ.ಆದ್ದರಿಂದ ಖಾರದ ಮೆಣಸಿನ ಕಾಯಿಯನ್ನು ಬಳಸುವುದನ್ನು ತಪ್ಪಿಸಿ ಬೇಕಿದ್ದಲ್ಲಿ ಶುಂಟಿ ಮತ್ತು ಲಿನ್ಬುವನ್ನು ಹೆಚ್ಚು ಬಳಸಿ.

ಕೆಫಿನ್ :

ಕೆಫಿನ್ :

ಚಾಕೊಲೆಟ್‌ನಲ್ಲಿ ಕಾಫಿಯಲ್ಲಿರುವಂತೆ ಕೆಫಿನ್ ಇರುತ್ತದೆ.ನಿಮ್ಮ ಮಗುವಿಗೆ ಒಳ್ಳೆಯ ಆರೋಗ್ಯವನ್ನು ನೀಡಲು ಎದೆ ಹಾಲು ಉಣಿಸುವ ಸಮಯದಲ್ಲಿ ಇವುಗಳ ಬಳಕೆಯನ್ನು ಕಡಿಮೆ ಮಾಡಿ.

X
Desktop Bottom Promotion