For Quick Alerts
ALLOW NOTIFICATIONS  
For Daily Alerts

ಭಾರತೀಯ ನೃತ್ಯ ಪ್ರಕಾರಗಳ ಕಿರು ಪರಿಚಯ

|
Indian Classical Dance
ಭಾರತದ ಶಾಸ್ತ್ರೀಯ ನೃತ್ಯವೆಂದರೆ ಅಲ್ಲೊಂದು ಲಯ, ತಾಳ, ರಾಗ ಪದ್ದತಿ, ಬೆಡಗು, ಬೆರಗು ಸೇರಿದ ನವಭಾವಗಳ ಅಭಿವ್ಯಕ್ತಿ. ಶಾಸ್ತ್ರೀಯ ನೃತ್ಯಗಳು ಅಂದಕಾಲತ್ತಿಲ್ ದೇವರ ಸೃಷ್ಟಿ ಎಂದು ಹೇಳಲಾಗುತ್ತದೆ. ಜೊತೆಗೆ ದೇವರನ್ನು ಸಂಪ್ರೀತಿಗೊಳಿಸುವ ಭಕ್ತರೂ ಶಾಸ್ತ್ರೀಯ ನೃತ್ಯ ಮಾಡುತ್ತಾರೆ. ನೃತ್ಯವೆಂದರೆ ಸಂತೋಷವನ್ನು ವ್ಯಕ್ತಪಡಿಸುವ ಒಂದು ವಿಧಾನ ಕೂಡ ಹೌದು.

ಆದರೆ ಇದೀಗ ಸಾವಿರಾರು ವರ್ಷಗಳು ಕಳೆದಿವೆ. ದೇಶದ ನೃತ್ಯ ಪರಂಪರೆ ಇದೀಗ ಬದಲಾಗಿದೆ. ಬದಲಾದರೂ ಸೊಗಡು ಉಳಿಸಿಕೊಂಡಿದೆ. ಇದೀಗ ನೃತ್ಯ ಕಲಿಸಲು ಸಾಕಷ್ಟು ಕೋರ್ಸ್ ಗಳಿವೆ. ಅದೊಂದು ಪಠ್ಯಕ್ರಮವೂ ಆಗಿದೆ. ನೃತ್ಯಕಲಿಯ ಬಯಸುವರಿಗೆ ಸಾಕಷ್ಟು ಸಂಸ್ಥೆಗಳೂ ಇವೆ.

ತಮಿಳುನಾಡಿನ ಭರತನಾಟ್ಯ(ಕರ್ನಾಟಕದಲ್ಲೂ ಜನಪ್ರಿಯ), ಉತ್ತರ ಪ್ರದೇಶದ ಕಥಕ್, ಕೇರಳದ ಕಥಕಳಿ, ಒರಿಸ್ಸಾದ ಒಡ್ಡಿಸಿ ಇವೆಲ್ಲ ಜನಪ್ರಿಯ ಶಾಸ್ತ್ರೀಯ ನೃತ್ಯಪ್ರಕಾರಗಳು. ಇವುಗಳನ್ನು ಹೊರತು ಪಡಿಸಿದರೆ ಇನ್ಯಾವ ನೃತ್ಯ ಪ್ರಕಾರಗಳಿವೆ ಎಂಬುದನ್ನು ಸುಮ್ಮನೆ ನೆನಪಿಸಿಕೊಳ್ಳೋಣ.

ಕಲರಿಪಟ್ಟು: ಕಲರಿಪಟ್ಟು ಎಂದರೆ ಒಂದು ಬಗೆಯ ಯುದ್ಧಕಲೆ. ಇದು ಕೇರಳ ಮಾತ್ರವಲ್ಲದೇ ತಮಿಳುನಾಡು, ಕರ್ನಾಟಕದಲ್ಲೂ ಜನಪ್ರಿಯ. ಇದನ್ನು ಶ್ರೀಲಂಕಾ ಮತ್ತು ಮಲೇಶಿಯಾದಲ್ಲಿ ಮಲೆಯಾಲಿಗಳೂ ಹರಡುತ್ತಿದ್ದರೆ. ಅಲ್ಲೂ ಜನಪ್ರಿಯವಾಗುತ್ತಿದೆ.

ಕುಮ್ಮಿ ಮತ್ತು ಕೋಲಾಟ: ತಮಿಳುನಾಡಿನಲ್ಲಿ ಇವೆರಡು ಜನಪ್ರಿಯ. ಭಾರತದ ಎಲ್ಲಾ ಭಾಗದಲ್ಲೂ ಈಗ ಕೋಲಾಟದ ನೃತ್ಯಗಳು ನಡೆಯುತ್ತಿವೆ. ಕುಮ್ಮಿ ಎಂದರೆ 8ರಿಂದ 40 ಜನರು ವೃತ್ತಾಕಾರವಾಗಿ, ಚಪ್ಪಾಳೆ ಹೊಡೆಯುತ್ತ ನಲಿಯುವ ಒಂದು ಬಗೆಯ ನೃತ್ಯ. ಸಣ್ಣ ಕೋಲುಗಳಲ್ಲಿ ಆಟವಾಡುತ್ತ ನಲಿಯುವುದು ಕೋಲಾಟ.

ತಾಂಡವ: ತಾಂಡವ ಅಂದಾಕ್ಷಣ ನೆನಪಿಗೆ ಬರುವುದು ಶಿವತಾಂಡವ. ಆನಂದ ಭೈರವಿಯ ಬ್ರಹ್ಮಾಂಜಲಿ ತಾಂಡವ ನೃತ್ಯ ಹೆಚ್ಚಿನರಿಗೆ ನೆನಪಿರಬಹುದು. ರುದ್ರ ತಾಂಡವವೆಂದರೆ ಶಿವ/ನಟರಾಜನ ಭಯಾನಕ ರೂಪ. ತಾಂಡವವೆಂದರೆ ಸೃಷ್ಟಿ, ರಕ್ಷಣೆ, ಲಯದ ಸಂಕೇತ.

ಕೂಚುಪುಡಿ: ಭಾರತದ ಕ್ಲಾಸಿಕಲ್ ಡ್ಯಾನ್ಸ್ ಅಂದಾಕ್ಷಣ ನೆನಪಿಗೆ ಬರುವುದು ಕೂಚುಪುಡಿ. ಇದರ ಮೂಲ ಮಧ್ಯಪ್ರದೇಶವಾದೂ ದಕ್ಷಿಣ ರಾಜ್ಯಗಳಲ್ಲೂ ಜನಪ್ರಿಯವಾದ ಶಾಸ್ತ್ರೀಯ ಕಲೆ.

ಘೋಮರ್: ಇದು ರಾಜಸ್ತಾನದ ಮಹಿಳೆಯರ ಶಾಸ್ತ್ರೀಯ ನೃತ್ಯಕಲೆ. ಮಹಿಳೆಯರ ಗುಂಪು(ಕೆಲವೊಮ್ಮೆ ಪುರುಷರೂ ಸೇರಿಕೊಂಡು) ಘೋಮರ್ ನೃತ್ಯವಾಡುತ್ತಾರೆ. ಇಲ್ಲಿ ಮಹಿಳೆಯರ ಮುಖ ಕವರ್ ಮಾಡಲಾಗಿರುತ್ತದೆ.

ಇವು ದೇಶದ ಕೆಲವು ಶಾಸ್ತ್ರೀಯ ನೃತ್ಯ ಪ್ರಕಾರಗಳು. ಇಲ್ಲಿ ಸಂತೋಷ, ಸಂಭ್ರಮ, ದುಃಖ, ದುಮ್ಮಾನ, ಕೋಪ, ಭಯ ಸೇರಿದಂತೆ ನವಭಾವ ವ್ಯಕ್ತಗೊಳಿಸುವ ಹಲವು ನೃತ್ಯಪ್ರಕಾರಗಳಿವೆ.

English summary

Indian Classical Dance | Bharatanatyam and Kalaripayattu | ಭಾರತದ ಶಾಸ್ತ್ರೀಯ ನೃತ್ಯಗಳು

Indian classical dance like Bharatanatyam, Kathak, Kathakali, Oddisi to name a few are the most common danced forms which are practiced and performed nationwide. Lets have a look at the other Indian classical dance forms.
Story first published: Thursday, June 9, 2011, 15:37 [IST]
X
Desktop Bottom Promotion