Latest Updates
-
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ?
ಕುಡಿತಕ್ಕೆ ವಯಸ್ಸಿನ ಮಿತಿ ನಿಮ್ಮ ಅಭಿಪ್ರಾಯವೇನು?

ಮಹಾರಾಷ್ಟ್ರ, ದೆಹಲಿ ರಾಜ್ಯಗಳಲ್ಲಿ ಗುಂಡು ಹಾಕಲು ವಯಸ್ಸಿನ ಮಿತಿ ಹಾಕಲಾಗಿದೆ. 25 ವಯಸ್ಸು ಆಗದವರು ಮದ್ಯ ಖರೀದಿ ಅಥವಾ ಸೇವನೆ ಮಾಡುವಂತಿಲ್ಲ. ಕರ್ನಾಟಕದಲ್ಲಿ ಯಾವಾಗ? ಯಾವ ಮಂತ್ರಿ? ಯಾವ ಪಕ್ಷ? ಇಂತಹ ಒಂದು ಶಾಸನ ಜಾರಿ ತರಬಹುದು ಗೊತ್ತಿಲ್ಲ. ಆದರೆ ಈ ಕುರಿತು ಸಾಧಕ ಬಾಧಕಗಳ ಚರ್ಚೆಯೂ ಆಗುತ್ತಿದೆ.
"ಇಂತಹ ಕಾನೂನಿನಿಂದ ಕಡಿದು ರಾಶಿ ಹಾಕುವಂತದ್ದು ಏನಿಲ್ಲ. ಇತ್ತೀಚೆಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದು ಎಂಬ ಕಾನೂನು ಬಂತಲ್ವ. ಅದರ ಅನುಷ್ಠಾನ ಆಗಿಲ್ಲ. ರಾಜಾರೋಷವಾಗಿ ಎಲ್ಲರೂ ಧೂಮಪಾನ ಮಾಡುತ್ತಾರೆ. ಈ ಮದ್ಯದ ಕಥೆಯೂ ಹಾಗೆಯೇ ಆಗುತ್ತದೆ" ಇದು ಶಾಂತಿನಗರದ ಸುದರ್ಶನ್ ಎಂಬವರ ಅಭಿಪ್ರಾಯ.
"25ರೊಳಗಿನವರು ಮದ್ಯ ಖರೀದಿ ಮತ್ತು ಸೇವನೆ ಮಾಡಬಾರದು ಎಂಬುದು ಒಳ್ಳೆಯ ಕಾನೂನೇ. ಆದರೆ 25 ವಯಸ್ಸು ದಾಟಿದವರಿಂದ ಪಾರ್ಸೆಲ್ ತರಿಸಿ ಎಲ್ಲಾದರೂ ಕೂತು ಸಿಕ್ಕಿ ಬೀಳದಂತೆ ಕುಡಿಯುವ ಅಪಾಯವಿದೆ. ಹೀಗಾಗಿ ಈ ಶಾಸನ ಪ್ರಯೋಜನವಿಲ್ಲ" ಹೀಗಂತ ಹೇಳಿದ್ದು ಜಯನಗರದ "ನಲ್ಲಿ ಸಿಲ್ಕ್" ಉದ್ಯೋಗಿ ಎಸ್ . ಬಿ. ನವೀನ.
"ಕುಡಿಯಬೇಕೆಂದು ತೀರ್ಮಾನಿಸಿದವರನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಸಂವಿಧಾನ ಬಾಹಿರವಾಗಿ ಕುಡಿಯುವಂತೆ ಪ್ರೇರೆಪಿಸಲಿದೆ. ನಾವು ಈಗಲೂ ಪಾರ್ಸೆಲ್ ತಂದು ಕುಡಿತೀವಿ. ಇಂತಹ ಕಾನೂನು ಬಂದ್ರು ಹೇಗೆ ಕುಡಿಬೇಕು ಅಂತ ನಂಗೊತ್ತು" ಹಾಗಂತ ಕಾಲೇಜೊಂದರ ಪಕ್ಕ ಸಿಕ್ಕ ಹುಡುಗ ಹೇಳಿದರೂ ಯಾಕೋ ಆತ ಹೆಸರು ಹೇಳಲು ಇಚ್ಛಿಸಲಿಲ್ಲ.
"ವೈನ್ ಸೇವನೆಗೆ ಯಾವುದೇ ವಯಸ್ಸಿನ ಮಿತಿಗಳಿಲ್ಲ. ಬಿಯರ್ ಕುಡಿಯಲು 21 ವರ್ಷವಾದರೆ ಸಾಕು. ಆದರೆ ಬರೀ ರಮ್, ವಿಸ್ಕಿಗೆ ವಯಸ್ಸಿನ ಮಿತಿ ಒಡ್ಡಿರುವುದು ಸರಿಯಲ್ಲ. ಎಲ್ಲಾ ರೀತಿಯ ಹಾಟ್ ಡ್ರಿಂಕ್ಸ್ ಗಳಲ್ಲೂ ಆಲ್ಕೋಹಾಲ್ ಇದೆ" ಎಂದು ಮದ್ಯ ಮದ್ಯದ ನಡುವಿನ ತಾರತಮ್ಯ ಬಿಚ್ಚಿಟ್ಟವರು ಸಾಫ್ಟ್ ವೇರ್ ಕಂಪನಿಯೊಂದರ ಉದ್ಯೋಗಿ ಕಿರಣ್ ಎಸ್ ಕೆ. ಅವರು ವಾರಕ್ಕೊಮ್ಮೆ ಮಾತ್ರ ಪಾನಗೋಷ್ಠಿಯಲ್ಲಿ ಪಾಲ್ಗೊಳ್ಳುತ್ತಾರಂತೆ!
;



Click it and Unblock the Notifications
