Latest Updates
-
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್
ಮದುವೆಗೆ ಮೊದಲು ಇಬ್ಬರು ಹಣದ ಬಗ್ಗೆ ಈ ವಿಷಯಗಳ ಚರ್ಚೆ ಮಾಡಿದರೆ ಒಳ್ಳೆಯದು
ಮದುವೆ ಅಂತ ಬಂದಾಗ ಸಾಕಷ್ಟು ವಿಚಾರಗಳನ್ನು ನೋಡಬೇಕಾಗುತ್ತಿದೆ. ಇಬ್ಬರ ಗುಣಗಳು ಹೊಂದಾಣಿಕೆಯಾಗುವುದೇ? ನನ್ನ ಬದುಕಿಗೆ ಸೂಕ್ತವಾದ ವ್ಯಕ್ತಿಯೇ ಹೀಗೆ ಹಲವು ವಿಚಾರಗಳನ್ನು ತಿಳಿದುಕೊಳ್ಳಬೇಕು. ಅದರ ಜೊತೆಗೆ ಹಣಕಾಸಿನ ವಿಷಯಗಳ ಬಗ್ಗೆ ಮುಕ್ತ ಮಾತನಾಡುವುದು ಒಳ್ಳೆಯದು, ಆದರೆ ಹೆಚ್ಚಿನವರು ಈ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ.
ಹಣಕಾಸಿನ ಬಗ್ಗೆ ಮಾತನಾಡಿದರೆ ಎಲ್ಲಿ ನಮ್ಮನ್ನು ತಪ್ಪಾಗಿ ತಿಳಿದುಕೊಳ್ಳುತ್ತಾರೋ ಎಂಬ ಅಂಜಿಕೆಯಲ್ಲಿ ಕೇಳಬೇಕಾದ ಕೆಲವೊಂದು ವಿಷಯಗಳನ್ನು ಕೇಳುವುದೇ ಇಲ್ಲ. ಉದಾಹರಣೆಗೆ ಇಬ್ಬರ ನಡುವೆ ಆರ್ಥಿಕ ಸ್ಥಿತಿಯಲ್ಲಿ ತುಂಬಾ ವ್ಯತ್ಯಾಸವಿದ್ದಾಗ ಅಂದರೆ ಸಂಗಾಂತಿಯಾಗುವ ವ್ಯಕ್ತಿ ನಮಗಿಂತ ತುಂಬಾ ಅನುಕೂಲಸ್ಥರಾಗಿದ್ದರೆ ಈ ಅಂತಸ್ತು ಅಸಮಾನತೆ ನಮ್ಮ ನಡುವೆ ಏನೂ ಸಮಸ್ಯೆ ತರಲ್ಲ ಅಲ್ವಾ? ಎಂಬುವುದನ್ನು ಕೇಳಲು ಹಿಂಜರಿಯಲೇಬೇಡಿ. ಏಕೆಂದರೆ ವಿಚ್ಛೇಧನಕ್ಕೆ ಎರಡನೇ ಪ್ರಮುಖ ವಿಷಯವೆಂದರೆ ಅದು ಆರ್ಥಿಕ ಸ್ಥಿತಿಯಂತೆ!

ಇಬ್ಬರ ಅಂತಸ್ತಿನಲ್ಲಿ ತುಂಬಾ ವ್ಯತ್ಯಾಸವಿದೆಯೇ?
ಹುಡುಗ ಅಂತಸ್ತಿನಲ್ಲಿ ಹುಡುಗಿಗಿಂತ ತುಂಬಾ ಶ್ರೀಮಂತನೇ?
ಹಾಗಾದರೆ ಹುಡುಗಿ ಆತನ ಬಳಿಕ ಕೆಲವೊಂದು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡುವುದು ಒಳ್ಳೆಯದು. ನಾವು ಮದುವೆಯಾದ ಮೇಲೆ ನನ್ನ ಅಂತಸ್ತು ನಿಮ್ಮಷ್ಟು ಇಲ್ಲ ಎಂಬ ಮಾತುಗಳು ನಿಮ್ಮಿಂದ ಅಥವಾ ನಿಮ್ಮ ಮನೆಯವರಿಂದ ಬರಬಾರದು ಎಂಬುವುದು ಸ್ಪಷ್ಟವಾಗಿ ಹೇಳಿ. ಅಲ್ಲದೆ ನನ್ನ ಮನೆಯವರನ್ನು ಬಡವರು ಎಂಬ ಕಾರಣಕ್ಕೆ ಗೌರವ ನೀಡದಿರುವುದು ಮಾಡುವುದಾದರೆ ನನಗೆ ಈ ಸಂಬಂಧದಲ್ಲಿ ಒಪ್ಪಿಗೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿ.
ಕೆಲವರು ತುಂಬಾ ಅನುಕೂಲಸ್ಥ ಸಂಬಂಧ ಅಂತ ಒಪ್ಪಿ ಮದುವೆಯಾಗಿ ಕೆಲವು ತಿಂಗಳು ಅಥವಾ ವರ್ಷ ಕಳೆದ ಮೇಲೆ ಇವರನ್ನು ಮದುವೆಯಾಗಿ ತಪ್ಪು ಮಾಡಿದೆ, ನಮ್ಮ ಲೆವಲ್‌ಗೆ ತಕ್ಕ ಹುಡುಗ ಸಾಕಾಗಿತ್ತು ಎಂದು ಹೇಳುವವರು ತುಂಬಾ ಜನ ಇದ್ದಾರೆ. ಶ್ರೀಮಂತನ ಮದುವೆಯಾದರೆ ತೊಂದರೆಯಾಗುತ್ತೆ ಎಂದು ನಾವು ಹೇಳುತ್ತಿಲ್ಲ, ಎಲ್ಲರೂ ಹಾಗೆ ಇರಲ್ಲ, ಆದರೆ ಕೆಲವರು ಆಡಿಕೊಳ್ಳುವವರೂ ಇರ್ತಾರೆ. ಆದ್ದರಿಂದ ಮದುವೆಗೆ ಮುಂಚೆಯೇ ಖಾತರಿಪಡಿಸಿ.
ಮದುವೆಯಾಗುವ ಹುಡುಗಿ ನಿಮಗಿಂತ ತುಂಬಾ ಶ್ರೀಮಂತಳೇ?
ತುಂಬಾ ಅನುಕೂಲವಾಗಿ ಬೆಳೆದ ಹೆಣ್ಣು ಮಗಳು ಒಂದು ಸಾಧಾರಣ ಅಥವಾ ಮಧ್ಯಮವರ್ಗದ ಮನೆಗೆ ಮದುವೆಯಾಗಿ ಬಂದರೆ ಒಗ್ಗಿಕೊಳ್ಳಲು ತುಂಬಾನೇ ಕಷ್ಟಪಡಬಹುದು. ಅವಳು ಲೈಫ್‌ಸ್ಟೈಲ್ ತುಂಬಾನೇ ಭಿನ್ನವಾಗಿರುತ್ತದೆ, ಅವಳು ನಿಮ್ಮ ಮನೆಯ ಪರಿಸ್ಥಿತಿಗೆ ಹಿಂದಕೊಳ್ಳಲು ಸಿದ್ಧಲೇ? ಎಂಬವುದರ ಬಗ್ಗೆ ನೇರವಾಗಿ ಕೇಳಿ. ಮೊದಲಿಗೆ ಒಪ್ಪಿ ನಂತರ ಮದುವೆಯ ಬಳಿಕ ಯಾವುದೇ ತಕರಾರು ಬಂದರೆ ಸುಮ್ಮನೆ ಮನಸ್ಸಿಗೆ ಬೇಸರವಾಗುವುದು. ಆದ್ದರಿಂದ ಈ ಕುರಿತು ಮೊದಲೇ ಮಾತನಾಡಿದರೆ ಒಳ್ಳೆಯದು.
ನಿಮಗೆ ಏನಾದರೂ ಲೋನ್ ಇದ್ದರೆ ಅದರ ಬಗ್ಗೆ ಮಾತನಾಡಿ
ಮನೆ ಲೋನ್, ಆಸ್ತಿ ಅಥವಾ ವ್ಯವಹಾರಕ್ಕಾಗಿ ಲೋನ್ ಮಾಡಿದ್ದರೆ ಈ ಕುರಿತು ಅರಿವು ನಿಮ್ಮ ಕೈ ಹಿಡಿಯುವವರಿಗೆ ಇದ್ದರೆ ಒಳ್ಳೆಯದು. ಇಲ್ಲದಿದ್ದರೆ ಮುಂದೆ ಹಣಕಾಸಿನ ಸಮಸ್ಯೆ ಅಂತ ಬಂದಾಗ ದೊಡ್ಡ ಜಗಳವೇ ಉಂಟಾಗುವುದು. ನಿಮ್ಮ ವರಮಾನ ಎಷ್ಟಿದೆ ಎಂಬುವುದನ್ನು ಹೇಳುವುದು ಒಳ್ಳೆಯದು. ಕೆಲವರು ಸುಳ್ಳು ಹೇಳಿ ಮದುವೆಯಾಗುತ್ತಾರೆ, ಈ ರೀತಿ ಮಾತ್ರ ಮಾಡಲೇಬಾರದು.
* ಫೈನಾನಿಕ್ಷಿಯಲ್ ಫ್ಲ್ಯಾನ್ ಮಾಡಿ
ನಾವು ಪ್ಲ್ಯಾನ್ ಮಾಡಿದಂತೆ ಲೈಫ್ ಇರುತ್ತದೆ ಎಂದು ಹೇಳಲು ಸಾದ್ಯವಿಲ್ಲ. ಆದರೆ ಫೈನಾನ್ಷಿಯಲ್ ಪ್ಲ್ಯಾನ್ ಎಂಬುವುದು ಬೇಕೆ ಬೇಕು. ನಮ್ಮ ವರಮಾನಕ್ಕೆ ತಕ್ಕಂತೆ ನಾವು ಹೇಗೆ ಬದುಕಬಹುದು, ಎಷ್ಟು ಉಳಿತಾಯ ಮಾಡಬಹುದು? ಮದುವೆಯ ನಂತರ ಹುಡುಗಿ ಕೆಲಸ ಮಾಡಬಹುದೇ? ಬೇಡ್ವೆ? ಈ ಬಗ್ಗೆ ಎಲ್ಲಾ ಮುಕ್ತವಾಗಿ ಚರ್ಚಿಸಿ.
ಈ ಬಗೆಯ ಚರ್ಚೆ ಮದುವೆಗೆ ಮೊದಲು ಮಾಡುವುದು ಎಷ್ಟು ಸರಿ? ಎಂದು ಅನಿಸಬಹುದು. ಆದರೆ ಇದುವೇ ಸರಿ. ಎಷ್ಟೋ ಕುಟುಂಬಗಳಲ್ಲಿ ಮದುವೆಯಾದ ಬಳಿಕ ಹಣಕಾಸಿನ ಕಾರಣಕ್ಕೆ ಸಮಸ್ಯೆ ಶುರುವಾಗುತ್ತೆ, ಇಬ್ಬರ ನಡುವೆ ಸಮಸ್ಯೆ ದೊಡ್ಡದಾಗಿ ವಿಚ್ಛೇದನ ಆದ ಎಷ್ಟೂ ಜನರಿದ್ದಾರೆ. ಅದೇ ಈ ಕುರಿತು ಮದುವೆಗೆ ಮೊದಲೇ ಇಬ್ಬರು ಮಾತನಾಡಿದರೆ ಎಷ್ಟೋ ಭ್ರಮೆಗಳು ದೂರಾಗುವುದು. ನಮ್ಮ ಬದುಕು ಹೇಗಿರಲಿದೆ ಎಂಬ ಕಲ್ಪನೆ ಇರುತ್ತದೆ. ನಮ್ಮ ವರಮಾನಕ್ಕೆ ತಕ್ಕಂತೆ ಸಂಗಾತಿ ಕೂಡ ಜೀವನಶೈಲಿ ರೂಢಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದ್ದರಿಂದ ಮದುವೆಗೆ ಮೊದಲು ಹಣಕಾಸಿನ ಬಗ್ಗೆ ಮಾತನಾಡುವುದು ತುಂಬಾನೇ ಮುಖ್ಯ, ಈ ಕುರಿತು ನಿಮ್ಮ ಅಭಿಪ್ರಾಯವೇನು?



Click it and Unblock the Notifications
