Latest Updates
-
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು!
ಮಾತು ಮಾತಿಗೂ ನಿಮ್ಮ ಸಂಗಾತಿ ಉರಿದು ಬೀಳ್ತಾರಾ? ಅವರ ಕೋಪ ತಣಿಸಲು ಇಲ್ಲಿದೆ ಟಿಪ್ಸ್
ಕೋಪ ಮನುಷ್ಯನ ಅತೀದೊಡ್ಡ ಶತ್ರು. ಒಂದು ಕ್ಷಣದ ಕೋಪ ಮನುಷ್ಯನ ಕೈಯಿಂದ ಎಂತಹ ತಪ್ಪು ಕೆಲಸವನ್ನಾದರೂ ಮಾಡಿಸಿ ಬಿಡಬಹುದು. ಈ ಕೋಪದಿಂದಾಗಿ ಅದೆಷ್ಟೋ ಸಂಸಾರಗಳು ಮುರಿದು ಬಿದ್ದಿದೆ. ಕೋಪ ಒಂದು ರೀತಿ ಕಾಡ್ಗಿಚ್ಚು ಇದ್ದಂತೆ. ಒಂದೇ ಸಾರಿಗೆ ಎಲ್ಲವನ್ನು ನಾಶ ಮಾಡಿ ಆನಂತರ ಸುಮ್ಮನಾಗಿಬಿಡುತ್ತದೆ. ಒಂದು ವೇಳೆ ನಿಮ್ಮ ಸಂಗಾತಿಯಾದವರು ಮುಂಗೋಪಿಯಾಗಿದ್ರೆ ಅವರನ್ನು ನೀವು ಯಾರ ರೀತಿ ನಿಭಾಯಿಸುತ್ತೀರಿ? ಇಲ್ಲಿದೆ ಟಿಪ್ಸ್.
1. ಜಗಳವಾದಾಗ ಶಾಂತವಾಗಿರಿ
ದಂಪತಿಗಳ ಮಧ್ಯೆ ಜಗಳವಾಗೋದು ಸಾಮಾನ್ಯ. ಆದರೆ ಇಬ್ಬರಲ್ಲಿ ಒಬ್ಬರಿಗೆ ಮೂಗಿನ ತುದಿಯಲ್ಲೇ ಕೋಪವಿದ್ರೆ. ಅವರು ಯಾವುದೇ ಸಂದರ್ಭವಾದರೂ ಸರಿ ಬೇಗನೇ ಪ್ರತಿಕ್ರಿಯೆ ನೀಡುತ್ತಾರೆ. ಮಾತು ಮಾತಿಗೂ ಉರಿದು ಬೀಳುತ್ತಾರೆ. ಅವರಿಗೆ ಕೋಪ ಎಷ್ಟರ ಮಟ್ಟಿಗೆ ಇರುತ್ತೆ ಅಂದ್ರೆ ತಾನು ಏನು ಮಾತನಾಡುತ್ತಿದ್ದೀನಿ ಅನ್ನೋ ಪರಿಜ್ಞಾನವೂ ಕೂಡ ಇರೋದಿಲ್ಲ.

ಇಂತಹ ಸಂದರ್ಭದಲ್ಲಿ ನೀವು ಶಾಂತವಾಗಿರಿ. ಅವರು ಏನು ಮಾತಾಡಿದರೂ ನೀವು ಉತ್ತರಿಸೋದಕ್ಕೆ ಹೋಗಬೇಡಿ. ನಿಮ್ಮಷ್ಟಕ್ಕೆ ನಿಮ್ಮ ಕೆಲಸ ಮಾಡಿಕೊಂಡಿರಿ. ಕೋಪ ತಣ್ಣಗಾದ ಮೇಲೆ ಅವರೇ ನಿಮ್ಮ ಬಳಿ ಬರುತ್ತಾರೆ. ಆಗ ನೀವು ಅವರಿಗೆ ಎಲ್ಲವನ್ನೂ ತಿಳಿ ಹೇಳಿ. ಅವರ ತಪ್ಪಿನ ಅರಿವು ಅವರಿಗೆ ಆಗುವಂತೆ ಮಾಡಿ. ಖಂಡಿತ ಮುಂದಿನ ಸಲ ಅವರು ಕೋಪಗೊಂಡು ಪ್ರತಿಕ್ರಿಯೆ ನೀಡುವ ಮೊದಲು ಕೊಂಚ ಯೋಚಿಸುತ್ತಾರೆ.
2. ಬೆಂಕಿಗೆ ತುಪ್ಪ ಸುರಿಯೋದಕ್ಕೆ ಹೋಗಬೇಡಿ
ಮುಂಗೋಪಿಯಾಗಿರುವ ನಿಮ್ಮ ಸಂಗಾತಿ ಚಿಕ್ಕ ಚಿಕ್ಕ ವಿಷಯಕ್ಕೂ ಬೇಗನೆ ಕೋಪಗೊಂಡು ನಿಮ್ಮಲ್ಲಿ ಜಗಳಕ್ಕೆ ನಿಂತು ಬಿಡುತ್ತಾರೆ. ಇಂತಹ ಸಮಯದಲ್ಲಿ ನೀವು ಉರಿಯುವ ಬೆಂಕಿಗೆ ತುಪ್ಪ ಸುರಿಯೋದಕ್ಕೆ ಹೋಗಬೇಡಿ. ಮಾತಿಗೆ ಮಾತು ಹೆಚ್ಚಿಸುತ್ತಾ ಹೋಗಬೇಡಿ. ಇದರಿಂದ ನಿಮ್ಮ ಸಂಬಂಧಕ್ಕೆ ಆಪತ್ತು ಉಂಟಾಗಬಹುದು. ಇಂತಹ ಸಂದರ್ಭದಲ್ಲಿ ಪ್ರಬುದ್ಧತೆಯಿಂದ ವರ್ತಿಸೋದು ನಿಮ್ಮ ಕರ್ತವ್ಯ.
3. ಅವರ ನಡವಳಿಕೆ ಬಗ್ಗೆ ತಿಳಿ ಹೇಳಿ
ನಿಮ್ಮ ಸಂಗಾತಿ ಶಾಂತವಾಗಿದ್ದಾಗ ಅವರಲ್ಲಿ ಸ್ವಲ್ಪ ಹೊತ್ತು ಕೂತು ಮಾತನಾಡಿ. ಕೋಪದಲ್ಲಿ ಅವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ. ಅವರ ಆ ಚುಚ್ಚು ಮಾತುಗಳು ನಿಮ್ಮ ಮೇಲೆ ಯಾವ ರೀತಿ ಪರಿಣಾಮ ಬೀರಿತು ಅನ್ನೋದನ್ನು ಅವರಿಗೆ ಅರ್ಥೈಸಿ. ಅವರಿಗೆ ಒಳ್ಳೆಯ ಮನಸ್ಸಿದ್ದರೆ ಖಂಡಿತ ಅವರ ತಪ್ಪನ್ನು ತಿದ್ದಿಕೊಳ್ಳುತ್ತಾರೆ. ಮುಂದಿನ ಸಾರಿ ಜಗಳವಾದಾಗ ನಿಮಗೆ ನೋವಾಗೋ ಹಾಗೆ ಅವರು ಮಾತನಾಡೋದಿಲ್ಲ.
4. ಯೋಗ, ಧ್ಯಾನ ಮಾಡಿಸಿ
ದಿನ ನಿತ್ಯ ಎದ್ದ ತಕ್ಷಣ ಯೋಗ ಧ್ಯಾನ ಮಾಡೋದ್ರಿಂದ ನಮ್ಮ ಕೋಪವನ್ನು ನಾವು ನಿಯಂತ್ರಣದಲ್ಲಿ ಇಡಬಹುದು. ನಿಮ್ಮ ಸಂಗಾತಿಯ ಕೋಪ ನಿಯಂತ್ರಣದಲ್ಲಿಡಲು ನೀವು ಕೂಡ ಪ್ರತಿ ನಿತ್ಯ ಅವರ ಜೊತೆಗೆ ಯೋಗ ಧ್ಯಾನದಲ್ಲಿ ತೊಡಗಿಕೊಳ್ಳಿ. ಸಾಧ್ಯವಾದರೆ ಬೆಳಗ್ಗೆ ಇಬ್ಬರೂ ಒಟ್ಟಾಗಿ ವಾಕಿಂಗ್‌ಗೆ ಹೋಗಿ. ಹೀಗೆ ಮಾಡಿದಾಗ ಅವರ ಮನದೊಳಗಿನ ಒತ್ತಡ ಕಡಿಮೆ ಆಗುತ್ತದೆ. ಹಾಗೂ ಕೋಪ ತನ್ನಿಂದ ತಾನೇ ನಿಯಂತ್ರಣಕ್ಕೆ ಬರುತ್ತದೆ.
5. ಅಗೌರವವನ್ನು ಖಂಡಿತ ಸಹಿಸಬೇಡಿ
ನಿಮ್ಮ ಸಂಗಾತಿಗೆ ನಿಯಂತ್ರಿಸಲು ಸಾಧ್ಯವಾಗದಷ್ಟು ಕೋಪ ಇರಬಹುದು. ಅವರು ನಿರಂತರವಾಗಿ ನಿಮ್ಮನ್ನು ನಿಂದಿಸುತ್ತಿದ್ದರೆ, ನಿಮ್ಮ ಅಭಿಪ್ರಾಯಕ್ಕೆ ಆದ್ಯತೆ ನೀಡದಿದ್ದರೆ, ನಿಮಗೆ ಸುಳ್ಳು ಹೇಳುವುದು, ನಿಮ್ಮ ಗಡಿಗಳನ್ನು ನಿರ್ಲಕ್ಷಿಸುವುದು ಅಥವಾ ಉದ್ದೇಶಪೂರ್ವಕವಾಗಿ ನಿಮ್ಮ ಭಾವನೆಗಳನ್ನು ನೋಯಿಸುವುದನ್ನು ಮಾಡುತ್ತಿರಬಹುದು. ಇವೆಲ್ಲಾ ನಡವಳಿಕೆಗಳು ಅವರು ನಿಮಗೆ ಅಗೌರವ ತೋರುತ್ತಿದ್ದಾರೆ ಎಂಬುವುದನ್ನು ಸೂಚಿಸುತ್ತದೆ.
ಈ ನಡವಳಿಕೆಗಳನ್ನು ನಿಮ್ಮ ಸಂಗಾತಿಯಲ್ಲಿ ನೀವು ಗಮನಿಸಿದ್ದೇ ಆದ್ರೆ ನೀವು ಒಂದು ನಿರ್ಧಾರಕ್ಕೆ ಬನ್ನಿ. ಈ ಬಗ್ಗೆ ಮೊದಲು ಅವರೊಂದಿಗೆ ಮುಕ್ತವಾಗಿ ಮಾತನಾಡಿ. ನೀವು ಅವರನ್ನು ಎಷ್ಟು ಕಾಳಜಿ ಮಾಡುತ್ತಿದ್ದೀರಿ ಅನ್ನೋದನ್ನು ತಿಳಿ ಹೇಳಿ. ಖಂಡಿತ ಅವರಿಗೆ ತಮ್ಮ ತಪ್ಪಿನ ಅರಿವಾಗುತ್ತದೆ. ನಿಧಾನವಾಗಿ ಅವರ ಗುಣಗಳನ್ನು ಅವರು ಬದಲಿಸುತ್ತಾರೆ.
6. ಕ್ಷುಲ್ಲಕ ವಿಚಾರಕ್ಕೆ ಜಗಳವಾಡಬೇಡಿ
ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಸಾಮಾನ್ಯವಾಗಿ ವಿಭಿನ್ನ ನಂಬಿಕೆಗಳು, ಅಭಿಪ್ರಾಯಗಳು, ಆದ್ಯತೆಗಳು ಮತ್ತು ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಪ್ರತಿಬಾರಿ ಕ್ಷುಲ್ಲಕ ವಿಷಯಕ್ಕೂ ಜಗಳವಾಡುವುದು ನಿಮ್ಮ ಸಂಬಂಧವನ್ನು ದುರ್ಬಲಗೊಳಿಸಬಹುದು. ಕೆಲವು ಸಣ್ಣ ವಿಷಯಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಮತ್ತು ರಾಜಿ ಮಾಡಿಕೊಳ್ಳುವುದು ಜಾಣತನ. ಈ ಸಮಸ್ಯೆಗಳು ಮಾತುಕತೆಯಿಂದ ಸರಿಯಾಗದೇ ಇದ್ದರೆ ಆಗ ನಿಮ್ಮ ಸಂಗಾತಿಯೊಂದಿಗೆ ಚರ್ಚಿಸುವುದು ಉತ್ತಮ. ಸಣ್ಣ ವಿಚಾರಗಳನ್ನು ನಿರ್ಲಕ್ಷಿಸದಿದ್ದರೆ ಅದು ಮುಂದೆ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು.
7. ನಿಮ್ಮ ಸಂಗಾತಿಯನ್ನು ಬದಲಾಯಿಸಲು ಪ್ರಯತ್ನಿಸಬೇಡಿ
ನಿಮ್ಮ ಸಂಗಾತಿಯ ಕೋಪ ನಿಮಗೆ ಇಷ್ಟವಾಗದೇ ಇರಬಹುದು. ಹಾಗಂತ ನೀವು ಅವರನ್ನು ಸಂಪೂರ್ಣವಾಗಿ ಬದಲಾಯಿಸುತ್ತೇನೆ ಎಂಬ ನಿರ್ಧಾರಕ್ಕೆ ಬರಬೇಡಿ. ಆಗ ಅವರು ತಮ್ಮ ವ್ಯಕ್ತಿತ್ವವನ್ನೇ ಕಳೆದುಕೊಂಡು ಬಿಡಬಹುದು. ಇದರ ಬದಲಾಗಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಿ. ಅವರ ಮುಂಗೋಪ ಸಂಬಂಧವನ್ನು ಎಷ್ಟರ ಮಟ್ಟಿಗೆ ಹಾಳು ಮಾಡುತ್ತಿದೆ ಎಂಬುವುದನ್ನು ತಿಳಿ ಹೇಳಿ. ಖಂಡಿತ ಅವರು ಅರ್ಥ ಮಾಡಿಕೊಳ್ಳುತ್ತಾರೆ.
ದಂಪತಿಗಳು ಕೊನೆವರೆಗೂ ಒಟ್ಟಾಗಿ ಬದುಕಬೇಕೆಂಬ ಬಯಕೆಯಿಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುತ್ತೀರಿ. ಆದರೆ ಒಬ್ಬರ ಮುಂಗೋಪ ಇಡೀ ಸಂಸಾರವನ್ನೇ ಬಲಿ ಕೊಡಬಾರದಲ್ಲವೇ. ಹೀಗಾಗಿ ಆದಷ್ಟು ಕೋಪವನ್ನು ನಿಯಂತ್ರಿಸಿ ಬದುಕೋದನ್ನು ಕಲಿಯಿರಿ.



Click it and Unblock the Notifications












