Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಎರಡನೇ ಮಗುವಾದಾಗ ಮೊದಲ ಮಗುವಿನ ಮನಸ್ಸಿನ ಮೇಲೆ ಬೀರುವ ಪ್ರಭಾವವೇನು?
ಮೊದಲ ಮಗುವಾದಾಗ ಅಪ್ಪ-ಅಮ್ಮನ ಗಮನವೆಲ್ಲಾ ಆ ಮಗುವಿನ ಮೇಲೇ ಇರುತ್ತದೆ, ಎಷ್ಟು ಮುದ್ದಿಸಿದರೂ ಸಾಲದು, ಆ ಮಗುವಿನ ಲಾಲನೆ-ಪಾಲನೆ ಕಡೆಗೆ ತುಂಬಾನೇ ಗಮನ ಕೊಡುತ್ತಾರೆ. ಮೊದಲ ಮಗುವಿಗೆ ಸಿಗುವ ಸ್ಪೆಷಲ್ ಕೇರ್ ಎರಡನೇ ಮಗುವಿಗೆ ಸಿಗುವುದಿಲ್ಲ.

ಆದರೆ ಎರಡನೇ ಮಗುವಾದಾಗ ಮೊದಲನೇ ಮಗುವಿನ ಮನಸ್ಸಿನ ಮೇಲೆ ಕೆಲವೊಂದು ಪರಿಣಾಮ ಬೀರಬಹುದು. ಮಗುವಿಗೆ ಇದ್ದಕ್ಕಿದ್ದಂತೆ ತಾನು ಒಂಟಿ, ಅಪ್ಪ-ಅಮ್ಮ ನನ್ನನ್ನು ಮುದ್ದಿಸುತ್ತಿಲ್ಲ ಎಂಬ ಭಾವನೆ ಮೂಡುವ ಅಪಾಯವು ಇದೆ. ಆದ್ದರಿಂದ ಎರಡನೇ ಮಗುವಿಗೆ ಪ್ಲ್ಯಾನ್ ಮಾಡುವಾಗ ಅಥವಾ ಎರಡನೇ ಮಗುವಿನ ಆಗಮನವಾಗುತ್ತಿದೆ ಎಂದು ಗೊತ್ತಾದಾಗ ಮೊದಲ ಮಗುವನ್ನು ಮಾನಸಿಕವಾಗಿ ಸಿದ್ಧ ಮಾಡಬೇಕಾಗಿದೆ.
ಪೋಷಕರಲ್ಲೂ ಗೊಂದಲವಿರುತ್ತದೆ
ಎರಡನೇ ಮಗುವಿನ ಆಗಮನವಾಗುತ್ತಿದೆ ಎಂದು ತಿಳಿದಾಗ ದಂಪತಿಗೆ ತುಂಬಾನೇ ಖುಷಿಯಾಗುವುದು. ಎಷ್ಟೋ ಜನ ಮೊದಲ ಮಗು ಒಂಟಿಯಾಗಿ ಬೆಳೆಯಬಾರದು ನಮ್ಮ ಮಗುವಿಗೆ ಒಡಹುಟ್ಟಿದವರು ಬೇಕು ಎಂದು ಸೆಕೆಂಡ್ ಮಗುವಿಗೆ ಪ್ಲ್ಯಾನ್ ಮಾಡಿರುತ್ತಾರೆ. ಆದರೆ ಯಾವಾಗ ಸೆಕೆಂಡ್ ಪ್ರೆಗ್ನೆನ್ಸಿ ಕನ್‌ಫರ್ಮ್ ಆಗುವುದೋ ಖುಷಿಯ ಜೊತೆಗೆ ತುಂಬಾ ಒಂದು ರೀತಿಯ ಗೊಂದಲದ ಮನಸ್ಥಿತಿ ಕೂಡ ಉಂಟಾಗುವುದು. ಎರಡನೇ ಮಗು ಬಂದ ಮೇಲೆ ಮೊದಲ ಮಗುವಿನ ಕಡೆ ನಮ್ಮ ಗಮನ ಕಡಿಮೆಯಾಗುವುದೇ? ಎಂಬ ಗೊಂದಲ , ನೋವು ಕಾಡುವುದು.
ಎರಡನೇ ಮಗುವಾದ ಬಳಿಕ
ಎರಡನೇ ಮಗುವಾದ ಬಳಿಕ ಮೊದಲ ಮಗುವಿಗಿಂತ ಎರಡನೇ ಮಗುವಿನ ಕಡೆಗೆ ಹೆಚ್ಚಿನ ಗಮನ ಕೊಡುತ್ತೇವೆ. ಅದು ಚಿಕ್ಕ ಮಗು ಎಂಬ ಕಾರಣಕ್ಕೆ ತುಂಬಾನೇ ಗಮನ ಕೊಡುತ್ತೇವೆ. ದೊಡ್ಡ ಮಗು ಎಂದ ಮಾತ್ರ ಒಂದು ವರ್ಷ ದೊಡ್ಡವನು/ದೊಡ್ಡವಳಾದರೂ ನಾವು ಆ ಮಗುವಿನಿಂದ ಅಣ್ಣ-ಅಕ್ಕನ ನಡವಳಿಕೆ ನಿರೀಕ್ಷೆ ಮಾಡಲಾರಂಭಿಸುತ್ತೇವೆ. ಇಬ್ಬರು ಒಂದು ವಸ್ತುವಿಗೆ ಗಲಾಟೆ ಮಾಡುತ್ತಿದ್ದರೆ ಅವನು/ಅವಳು ಚಿಕ್ಕವನು ಅಲ್ವ? ಕೊಡು ಎಂದು ಹೇಳುತ್ತೇವೆ. ಪ್ರತಿಯೊಂದು ವಿಷಯಕ್ಕೆ ಆ ಮಗುವಿನ ತಲೆಗೆ ಅಣ್ಣ-ಅಕ್ಕನ ಜವಾಬ್ದಾರಿ ಹೊರೆಸುತ್ತೇವೆ.
ಮಗುವಿಗೆ ನನ್ನನ್ನು ಅಪ್ಪ-ಅಮ್ಮ ಪ್ರೀತಿಸುತ್ತಿಲ್ಲ ಎಂಬ ಭಾವನೆ ಮೂಡುವಂತಾಗಬಾರದು
ಎರಡನೇ ಮಗುವಾದಾಗ ಇದೊಂದು ಅಪಾಯವಿದೆ. ತಮ್ಮ ಅಥವಾ ತಂಗಿ ಬಂದ ಮೇಲೆ ಅಮ್ಮ-ಅಪ್ಪನ ಪ್ರೀತಿ ಕಡಿಮೆಯಾಗಿದೆ ಎಂದು ಮಗುವಿಗೆ ಅನಿಸಲಾರಂಭಿಸಿದರೆ ಅದು ಅವರ ಪುಟಾಣಿ ಮನಸ್ಸಿನ ಮೇಲೆ ತುಂಬಾನೇ ಗಂಭೀರ ಪ್ರಬಾವ ಬೀರುವುದು. ಆದ್ದರಿಂದ ಈ ವಿಷಯದ ಕಡೆಗೆ ಪೋಷಕರು ತುಂಬಾನೇ ಗಮನಹರಿಸಬೇಕು. ಎರಡನೇ ಮಗು ಬರುತ್ತಿದೆ ಎಂದು ತಿಳಿದ ತಕ್ಷಣದಿಂದ ಮೊದಲನೇ ಮಗುವನ್ನು ತಮ್ಮ ಅಥವಾ ತಂಗಿಯನ್ನು ಸ್ವೀಕರಿಸುವ ಮನಸ್ಥಿತಿಗೆ ಸಿದ್ಧತೆ ಮಾಡಬೇಕು. ನೀವು ಆ ಕುರಿತು ಹೇಳುತ್ತಿದ್ದರೆ ದೊಡ್ಡವರಲ್ಲಿ ತಮ್ಮ-ತಂಗಿ ಮೇಲೆ ಪ್ರೀತಿ ಹೆಚ್ಚಾಗುವುದು. ಆವಾಗ ಅವರು ಎಷ್ಟೇ ಚಿಕ್ಕವರಾದರೂ ತಮ್ಮ-ತಂಗಿಯ ಮೇಲೆ ಅಕ್ಕರೆ ತೋರುತ್ತಾರೆ, ಅವರು ಪರಿಸ್ಥಿತಿಗೆ ಸುಲಭವಾಗಿ ಹೊಂದಿಕೊಳ್ಳುತ್ತಾರೆ.



Click it and Unblock the Notifications
