Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಮದುವೆಯ ನಂತರ ಪತಿಯು ಪತ್ನಿಯಿಂದ ನಿರೀಕ್ಷೇ ಮಾಡುವ ಗುಣಗಳಿವು!
ಅರೇಂಜ್ ಮ್ಯಾರೇಜ್ ಆದ ಸಮಯದಲ್ಲಿ ಗಂಡ-ಹೆಂಡತಿಯು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬಾಳೋದಕ್ಕೆ ಕೊಂಚ ಸಮಯ ಬೇಕಾಗುತ್ತದೆ. ಸಾಮಾನ್ಯವಾಗಿ 5-6 ತಿಂಗಳು ಕಳೆದ ನಂತರ ಎಲ್ಲವೂ ನಾರ್ಮಲ್ ಆಗಿದೆ ಅನ್ನಿಸೋದಕ್ಕೆ ಶುರುವಾಗುತ್ತದೆ. ಆದರೆ ದಾಂಪತ್ಯ ಎಂದ ಮೇಲೆ ಗಂಡನಿಗೆ ಹೆಂಡತಿ ಮೇಲೆ ಹೆಂಡತಿಗೆ ಗಂಡನ ಮೇಲೆ ನಿರೀಕ್ಷೇಗಳು ಇದ್ದೇ ಇರುತ್ತದೆ.
ಆದರೆ ಕೆಲವೊಂದು ಸಂದರ್ಭಗಳಲ್ಲಿ ಆ ನಿರೀಕ್ಷೇಗಳನ್ನು ಈಡೇರಿಸುವುದು ಕಷ್ಟ. ಯಾಕಂದ್ರೆ ಹೆಂಡತಿಯರು ಗಂಡನ ಬಳಿ ಅನೇಕ ವಿಚಾರಗಳನ್ನು ಮನಬಿಚ್ಚಿ ಮಾತನಾಡುತ್ತಾರೆ. ಆದರೆ ಗಂಡಂದಿರು ಹೆಂಡತಿಯ ಬಳಿ ಯಾವುದೇ ವಿಚಾರವನ್ನೂ ಹೇಳೋದೇ ಇಲ್ಲ. ತಮ್ಮೆಲ್ಲಾ ನಿರೀಕ್ಷೇಗಳನ್ನು ಮನಸ್ಸಿನ ಗಟ್ಟಿಯಾಗಿ ಹಿಡಿದಿರುತ್ತಾರೆ. ಅಷ್ಟಕ್ಕು ಮದುವೆಯ ನಂತರ ಗಂಡಂದಿರು ಹೆಂಡತಿಯಿಂದ ಏನೆಲ್ಲಾ ನಿರೀಕ್ಷೇಗಳನ್ನು ಇಟ್ಟುಕೊಳ್ಳುತ್ತಾರೆ ಅನ್ನೋದನ್ನು ತಿಳಿಯೋಣ.

1. ಪ್ರಾಮಾಣಿಕತೆ
ಹೆಂಡತಿಯು ಗಂಡನೊಂದಿಗೆ ಸಪ್ತಪದಿ ತುಳಿದು ಆತನ ಬಾಳ ಸಂಗಾತಿಯಾದಳು ಎಂದರೆ ಸಾಯುವವರೆಗೂ ನಿಮ್ಮ ಜೊತೆಯಲ್ಲಿಯೇ ಇರುತ್ತೇನೆ ಎಂದು ಪ್ರಮಾಣ ಮಾಡಿದಂತೆ. ಗಂಡನು ತನ್ನ ಹೆಂಡತಿ ಪ್ರಾಮಾಣಿಕವಾಗಿ ದಾಂಪತ್ಯ ನಡೆಸಬೇಕು ಎಂದು ಬಯಸುತ್ತೇನೆ. ಯಾವುದೇ ಕಷ್ಟ ಬಂದರೂ ಕೂಡ ಆಕೆ ನನ್ನನ್ನು ಬಿಟ್ಟು ಹೋಗಬಾರದು, ನನಗೆ ಮೋಸ ಮಾಡಬಾರದು. ಅನ್ಯ ಪುರುಷನ ಜೊತೆಯಲ್ಲಿ ಸಂಬಂಧ ಇಟ್ಟುಕೊಳ್ಖಬಾರದು ಎಂದು ಬಯಸುತ್ತಾನೆ. ಒಟ್ಟಿನಲ್ಲಿ ಆಕೆಯ ಪ್ರೀತಿ ಆತನಿಗೆ ಪ್ರಮಾಣಿಕವಾಗಿ ಮೀಸಲಿರಬೇಕು.
2. ಅರ್ಥ ಮಾಡಿಕೊಳ್ಳಬೇಕು
ದಾಂಪತ್ಯ ಚೆನ್ನಾಗಿರಬೇಕೆಂದರೆ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿರಬೇಕು. ಕೆಲವೊಂದು ಸಲ ಗಂಡ ಕೆಲಸದಲ್ಲಿ ತುಂಬಾನೇ ಬ್ಯಸಿಯಾಗಿರ್ತಾನೆ. ಇಂತಹ ಸಂದರ್ಭದಲ್ಲಿ ಆತನಿಗೆ ಮನೆಯ ಕಡೆಗೆ ಗಮನ ಹರಿಸೋದಕ್ಕೆ ಆಗೋದಿಲ್ಲ. ಆಗ ಮನೆ ಹಾಗೂ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೆಂಡತಿ ಹೊತ್ತುಕೊಳ್ಳಬೇಕು. ನಿನ್ನ ಕೆಲಸದ ಕಡೆಗೆ ನೀನು ಗಮನ ಹರಿಸು, ನಿನ್ನ ಜೊತೆಗೆ ನಾನು ಯಾವಾಗಲೂ ಇರುತ್ತೇನೆ ಎಂದು ನೀವು ಗಂಡನಿಗೆ ದೈರ್ಯ ಹೇಳಿ ಸಾಕು. ಗಂಡ ಇದನ್ನೇ ನಿಮ್ಮಿಂದ ಬಯಸೋದು.
3. ಕಾಳಜಿ ಮಾಡಬೇಕು
ಮದುವೆಯಾದ ಮೇಲೆ ಪ್ರತಿಯೊಬ್ಬ ಗಂಡಸಿಗೂ ಹೆಂಡತಿ ಹಾಗೂ ಮಕ್ಕಳೇ ಪ್ರಪಂಚವಾಗುತ್ತಾರೆ. ಹೀಗಾಗಿ ಹೆಂಡತಿಯು ಗಂಡನ ಮೇಲೆ ಕಾಳಜಿ ತೋರಬೇಕು. ಆತನಿಗೆ ಮಾನಸಿಕ ಹಾಗೂ ಭಾವನಾತ್ಮಕವಾಗಿ ಶಕ್ತಿಯಾಗಿ ಇರಬೇಕೆಂದು ಗಂಡ ಬಯಸುತ್ತಾನೆ. ಆತ ನಿಮ್ಮ ಬಳಿ ಯಾವುದೇ ನೋವನ್ನು ಹೇಳಿಕೊಳ್ಳದಿದ್ದರೂ ಕೂಡ ನೀವು ಅದನ್ನು ಅರ್ಥ ಮಾಡಿಕೊಳ್ಳಬೇಕು. ಈ ನಿರೀಕ್ಷೇಗಳಂತೂ ಗಂಡನಿಗೆ ಹೆಂಡತಿಯ ಮೇಲೆ ಇದ್ದೇ ಇರುತ್ತದೆ.
4. ಗೌರವ ಕೊಡಬೇಕು
ಹೆಂಡತಿಯು ನನಗೆ ಗೌರವ ಕೊಡಬೇಕು ಎಂದು ಗಂಡ ಬಯಸುತ್ತಾನೆ. ಎಂತಹ ಪರಿಸ್ಥಿತಿಯಾದರೂ ಹೆಂಡತಿಯು ಗಂಡನೊಂದಿಗೆ ಅಗೌರವದಿಂದ ನಡೆದುಕೊಳ್ಳಬಾರದು. ಆತ ಕುಡಿಯುತ್ತಿರಲಿ, ಸಣ್ಣ ಕೆಲಸದಲ್ಲಿದ್ದು ಕಡಿಮೆ ಸಂಪಾದಿಸುತ್ತಿರಲಿ. ಆದರೂ ಕೂಡ ಆತ ಆಕೆಯ ಗಂಡನೇ. ಇಂತಹ ಸಂದರ್ಭದಲ್ಲೂ ಕೂಡ ಆಕೆ ಗಂಡನಿಗೆ ಅಗೌರವ ಕೊಡಬಾರದು. ಆತನನ್ನು ಮಾರ್ಯಾದೆಯಿಂದ ನಡೆಸುಕೊಳ್ಳಬೇಕೆಂದು ಬಯಸುತ್ತಾನೆ.
5. ಪ್ರೀತಿ
ಗಂಡನು ತನ್ನ ಹೆಂಡತಿಯಿಂದ ಪ್ರೀತಿಯನ್ನು ಬಯಸುತ್ತಾನೆ. ಮದುವೆಯಾಗಿ ಕೆಲ ದಿನಗಳ ನಂತರ ಗಂಡ ಹಾಗೂ ಹೆಂಡತಿಯ ನಡುವೆ ಇದ್ದ ಆ ಪ್ರೀತಿ ಕಡಿಮೆಯಾಗುತ್ತದೆ. ಮಕ್ಕಳ ಅಥವಾ ಇನ್ಯಾವುದೋ ಜವಾಬ್ದಾರಿಯಲ್ಲಿ ಅವರು ಬ್ಯುಸಿಯಾಗುತ್ತಾರೆ. ಆದರೆ ಗಂಡನು ತನ್ನ ಹೆಂಡತಿಯಿಂದ ಮೊದಲಿನ ಪ್ರೀತಿಯನ್ನೇ ಬಯಸುತ್ತಾನೆ. ಎಂತಹದ್ಧೇ ಕಷ್ಟದ ಸಂದರ್ಭ ಬಂದರೂ ಕೂಡ ಆಕೆಗೆ ತನ್ನ ಮೇಲಿದ್ದ ಪ್ರೀತಿ ಕಡಿಮೆ ಆಗಬಾರದೆಂದು ಬಯಸುತ್ತಾನೆ.
6. ಗುರಿ ಸಾಧಿಸುವ ಛಲ ಇರಬೇಕು
ಪ್ರತಿಯೊಬ್ಬ ಗಂಡನು ತನ್ನ ಹೆಂಡತಿಗೆ ಗುರಿ ಸಾಧಿಸುವ ಛಲ ಇರಬೇಕೆಂದು ಬಯಸುತ್ತಾನೆ. ಆಕೆ ಛಲಗಾರ್ತಿಯಾಗಿರಬೇಕು ತನ್ನ ಗುರಿಯೆಡೆಗೆ ಆಕೆ ಕೆಲಸವನ್ನು ಮಾಡಬೇಕು. ಅಷ್ಟೇ ಅಲ್ಲ, ಆಕೆ ನನ್ನ ಗುರಿ ಸಾಧನೆಗೂ ನನ್ನ ಜೊತೆಯಲ್ಲಿದ್ದು ಪ್ರೋತ್ಸಾಹ ನೀಡುವವಳಾಗಬೇಕೆಂದು ಗಂಡನಾದವನು ಸಹಜವಾಗಿ ಬಯಸುತ್ತಾನೆ.
7. ಸುಂದರಿ ಹಾಗೂ ಬುದ್ಧಿವಂತೆ
ಪ್ರತಿಯೊಬ್ಬ ಗಂಡಸು ತನ್ನ ಹೆಂಡತಿಯು ಸುಂದರಿ ಜೊತೆಗೆ ಬುದ್ಧಿವಂತೆಯಾಗಿರಬೇಕೆಂದು ಬಯಸುತ್ತಾನೆ. ಆಕೆಯಲ್ಲಿ ಕೇವಲ ಸೌಂದರ್ಯ ಇದ್ದರಷ್ಟೇ ಸಾಲೋದಿಲ್ಲ. ಜೊತೆಗೆ ಆಕೆ ಎಂತಹ ಸಂದರ್ಭದಲ್ಲೂ ಸರಿಯಾದ ನಿರ್ಧಾರವನ್ನೇ ತೆಗೆದುಕೊಳ್ಳುವ ಬುದ್ಧಿವಂತೆಯಾಗಿರಬೇಕೆಂದು ಬಯಸುತ್ತಾನೆ.
ಇವೆಲ್ಲಾ ಗಂಡಂದಿರು ಮದುವೆಯಾದ ಬಳಿಕ ಹೆಂಡತಿಯ ನಿರೀಕ್ಷಿಸುವ ಅಂಶಗಳಾಗಿದೆ. ಈ ಎಲ್ಲಾ ಗುಣಗಳು ಆತನಲ್ಲಿದ್ದರೆ ಗಂಡ ಸಂತೃಪ್ತನಾಗುತ್ತಾನಂತೆ.



Click it and Unblock the Notifications

