ಇದೇ ಕಾರಣಕ್ಕೆ ಮನೆಯವರು ನೋಡಿದವರನ್ನು ವಿವಾಹ ಆಗಬೇಕು ಅನ್ನೋದು!

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಮದುವೆ ಮಹತ್ವದ ಪಾತ್ರ ವಹಿಸುತ್ತದೆ. ಕೆಲವರು ತಾವು ಇಷ್ಟ ಪಟ್ಟವರನ್ನೇ ಮದುವೆಯಾಗುತ್ತಾರೆ. ಇನ್ನೂ ಕೆಲವರು ಮನೆಯವರು ಒಪ್ಪಿದವರನ್ನೇ ವಿವಾಹವಾಗಲು ಸಮ್ಮತಿ ಸೂಚಿಸುತ್ತಾರೆ.

Reasons Why Arranged Marriage is Still Successful in India in Kannada

ಇತ್ತೀಚಿನ ಕಾಲದಲ್ಲಿ ಪ್ರೇಮ ವಿವಾಹಗಳೇ ಹೆಚ್ಚಾಗಿದೆ. ಆದರೆ ಪ್ರೇಮ ವಿವಾಹಕ್ಕಿಂತ ಮನೆಯವರೆಲ್ಲಾ ಒಪ್ಪಿದ ವರ/ ವಧುವನ್ನು ಮದುವೆಯಾದ್ರೆ ಏನೆಲ್ಲಾ ಪ್ರಯೋಜನಗಳಿದೆ. ಮನೆಯವರು ಒಪ್ಪಿದ ವಿವಾಹಗಳು ಯಶಸ್ವಿಯಾಗೋದಕ್ಕೆ ಕಾರಣಗಳು ಏನು ಅನ್ನೋದನ್ನು ಹೇಳ್ತೀವಿ.

1. ಹಿರಿಯರ ಆಶೀರ್ವಾದ ಇರುತ್ತದೆ

ಪ್ರೇಮ ವಿವಾಹದಲ್ಲಿ ಕೆಲವೊಂದು ಬಾರಿ ಕುಟುಂಬಸ್ಥರಿಂದ ವಿರೋಧಗಳು ಎದುರಾಗುತ್ತದೆ. ಆದರೆ ಮನೆಯವರು ಒಪ್ಪಿದ ಮದುವೆಗೆ ಗುರು ಹಿರಿಯರೆಲ್ಲರ ಆಶೀರ್ವಾದ ಇರುತ್ತದೆ. ನಮ್ಮ ವಿದ್ಯಾಭ್ಯಾಸ, ನಮ್ಮ ಘನತೆಗೆ ತಕ್ಕವರನ್ನೇ ಮನೆಯವರು ಆರಿಸುತ್ತಾರೆ. ಮದುವೆಯ ನಂತರ ಏನೇ ಸಮಸ್ಯೆಗಳಾದರೂ ಕುಟುಂಬಸ್ಥರು ಒಟ್ಟಾಗಿ ಸರಿಪಡಿಸುತ್ತಾರೆ.

2. ಇಬ್ಬರ ಮಧ್ಯೆ ಪರಸ್ಪರ ಗೌರವ ಇರುತ್ತದೆ

ಮನೆಯವರೆಲ್ಲಾ ಒಪ್ಪಿ ಆದ ಮದುವೆ ಎಂದರೆ ನಿಮಗೆ ತಕ್ಕ ಉತ್ತಮ ವಧು/ವರನನ್ನೇ ಆರಿಸಿರುತ್ತಾರೆ. ಕುಟುಂಬಸ್ಥರು ನಿಮ್ಮನ್ನು ಗೌರವದಿಂದ ಕಾಣುತ್ತಾರೆ. ಜೊತೆಗೆ ಸಂಗಾತಿಗಳಿಬ್ಬರು ಕೂಡ ಒಬ್ಬರಿಗೊಬ್ಬರು ಗೌರವ ನೀಡುತ್ತಾರೆ.

3. ಆರ್ಥಿಕವಾಗಿ ಸದೃಢರಾಗಿರುತ್ತಾರೆ

ಆರ್ಥಿಕವಾಗಿ ಸದೃಢರಾಗಿದ್ರೆ ಮಾತ್ರ ಜೀವನ ಸಾಗಿಸೋದಕ್ಕೆ ಆಗೋದು. ಪೋಷಕರು ನೋಡಿದ ವರ ಆದ್ರೆ ಆತ ಒಳ್ಳೆಯ ಕೆಲಸದಲ್ಲಿ ಇರುತ್ತಾನೆ ಹಾಗೂ ಮನೆ ಕಡೆ ಕೂಡ ಯಾವುದೇ ರೀತಿ ತೊಂದರೆ ಇರೋದಿಲ್ಲ. ಕೌಟುಂಬಿಕ ಹಿನ್ನಲೆಯನ್ನು ನೋಡಿಕೊಂಡೆ ಮನೆಯವರು ವಿವಾಹ ಮಾಡಿ ಕೊಡ್ತಾರೆ.

4. ಹುಡುಗ ಪ್ರಬುದ್ಧನಾಗಿರುತ್ತಾನೆ

ಮನೆಯವರು ಉತ್ತಮ ವರನನ್ನೇ ತನ್ನ ಮಗಳಿಗಾಗಿ ಆಯ್ದುಕೊಳ್ಳುತ್ತಾರೆ. ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಇರುತ್ತಾನೆ. ಜೊತೆಗೆ ಆತ ವಧುವಿಗಿಂತ ಕೆಲ ವರ್ಷ ಹಿರಿಯನಾಗಿದ್ದು, ಪ್ರಬುದ್ಧತೆ ಇರುತ್ತದೆ. ಯಾವ ವಿಚಾರದ ಬಗ್ಗೆ ಹೇಗೆ ನಿರ್ಧಾರ ತೆಗೆದುಕೊಳ್ಳಬೇಕು ಅನ್ನೋದು ಆತನಿಗೆ ಚೆನ್ನಾಗಿ ಗೊತ್ತಿರುತ್ತದೆ. ಹಾಗೂ ತನ್ನ ಸಂಗಾತಿಗೂ ಸಲಹೆಗಳನ್ನು ನೀಡಿ. ಆಕೆಯನ್ನು ಸರಿ ದಾರಿಯಲ್ಲಿ ನಡೆಸುತ್ತಾನೆ.

5. ಮದುವೆಯ ನಂತರ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ

ಮನೆಯವರು ಒಪ್ಪಿ ಆದ ಮದುವೆಯಲ್ಲಿ ವಧು-ವರರು ಒಬ್ಬರಿಗೊಬ್ಬರು ಅಷ್ಟಾಗಿ ಪರಿಚಯ ಇರೋದಿಲ್ಲ. ಮದುವೆಯ ನಂತರ ಅವರಿಬ್ಬರ ನಡುವಿನ ಇಷ್ಟ ಕಷ್ಟಗಳನ್ನು ಅರಿತು ಕೊಳ್ಳಲು ಇದೊಂದು ಒಳ್ಳೆಯ ಅವಕಾಶ. ಜೊತೆಗೆ ಹೊರಗಡೆ ಹೋಗಬಹುದು. ತನ್ನ ಗಂಗಾತಿಗೆ ಇಷ್ಟ ಆಗುವ ಗಿಫ್ಟ್‌ ನೀಡಬಹುದು. ಹುಟ್ಟು ಹಬ್ಬಗಳನ್ನು ಚೆನ್ನಾಗಿ ಸೆಲೆಬ್ರೇಟ್‌ ಮಾಡಬಹುದು. ಇಂತಹ ಹೊಸ ಅನುಭವಗಳನ್ನು ಪಡೆಯಬಹುದು.

6. ಹೊಸ ಜೀವನ ಶುರು ಮಾಡಬಹುದು

ಕೆಲವೊಂದು ಸಾರಿ ನೀವು ಇಷ್ಟ ಪಟ್ಟ ಪ್ರೀತಿ ನಿಮ್ಮನ್ನು ಬಿಟ್ಟು ಹೋದಾಗ ನೀವು ತುಂಬಾನೇ ನೊಂದು ಕೊಳ್ಳೋದು ಸಹಜ. ಇಂತಹ ವೇಳೆ ನಿಮ್ಮ ಜೀವನದಲ್ಲಿ ಬರೋ ಬಾಳ ಸಂಗಾತಿಯಿಂದ ನೀವು ಹಳೆಯ ನೆನಪುಗಳನ್ನು ಮರೆಯಬಹುದು. ಸಂಗಾತಿಯೊಂದಿಗೆ ಹೊಸ ಜೀವನ ಶುರು ಮಾಡಿ ಖುಷಿಯಾಗಿರಬಹುದು.

7. ಕುಟುಂಬದೊಂದಿಗೆ ಬಾಂಧವ್ಯ ಚೆನ್ನಾಗಿರುತ್ತದೆ

ಮನೆಯವರು ಒಪ್ಪಿ ಮಾಡಿದ ಮದುವೆ ಅಂದ ಮೇಲೆ ಸಾಮಾನ್ಯವಾಗಿ ಇಬ್ಬರು ಕೂಡ ಒಂದೇ ಜಾತಿ-ಧರ್ಮಕ್ಕೆ ಸೇರಿದವರಾಗಿರುತ್ತಾರೆ. ಮದುವೆಯ ಎಲ್ಲಾ ಶಾಸ್ತ್ರ, ಸಂಪ್ರದಾಯಗಳು ಕೂಡ ಒಂದೇ ಆಗಿರುತ್ತದೆ. ಇವುಗಳ ಜೊತೆಗೆ ಎರಡು ಮನೆಯ ಸಂಬಂಧಿಕರು ಒಟ್ಟಾಗುತ್ತಾರೆ. ಕುಟುಂಬದೊಳಗಿನ ಬಾಂಧವ್ಯ ಗಟ್ಟಿಯಾಗುತ್ತದೆ.

8. ಕನ್ಯಾದಾನ

ಹಿಂದೂ ಧರ್ಮದಲ್ಲಿ ಕನ್ಯಾದಾನಕ್ಕೆ ಪ್ರಮುಖ ಸ್ಥಾನ ನೀಡಲಾಗಿದೆ. ಮಗಳ ಕನ್ಯಾದಾನ ಮಾಡುವಾಗ ಪ್ರತಿಯೊಬ್ಬ ತಂದೆಯೂ ಕಣ್ಣೀರಿಡುತ್ತಾನೆ. ಹಾಗೆ ಆಕೆ ತನ್ನ ಗಂಡನ ಮನೆಯನ್ನು ಬೆಳಗಲಿ ಎಂದು ಮನತುಂಬಿ ಆಶೀರ್ವದಿಸುತ್ತಾನೆ. ಪ್ರೇಮ ವಿವಾಹಗಳಲ್ಲಿ ಕನ್ಯಾದಾನ ನೆರವೇರುವ ಅವಕಾಶಗಳು ಕಡಿಮೆ. ಮನೆಯವರು ಒಪ್ಪಿದ ಹುಡುಗನನ್ನು ಮದುವೆಯಾದರೆ ಕನ್ಯಾದಾನದ ಸಂಪ್ರದಾಯ ನೆರವೇರಿಸಲಾಗುತ್ತದೆ.

ಪ್ರೇಮ ವಿವಾಹ ಹಾಗೂ ಮನೆಯವರು ಒಪ್ಪಿದ ಮದುವೆಯ ಬಗ್ಗೆ ಚರ್ಚೆಗಳು ಏನೇ ಇರಲಿ. ಆದರೆ ಒಂದು ಅಧ್ಯಯನದ ಪ್ರಕಾರ ಮನೆಯವರು ಒಪ್ಪಿದ ವಿವಾಹಗಳೇ ಉತ್ತಮ ಅಂತ ಹೇಳಲಾಗ್ತಿದೆ. ಹಾಗಂತ ಇದೇ ನಿಜ ಅಂತ ಹೇಳೋದಿಕ್ಕಾಗಲ್ಲ. ಪ್ರೇಮ ವಿವಾಹವಿರಲಿ ಮನೆಯವರು ಒಪ್ಪಿದ ವಿವಾಹವಿರಲಿ ಎರಡರಲ್ಲೂ ಜೋಡಿಗಳ ಮಧ್ಯೆ ಹೊಂದಾಣಿಕೆ ಇದ್ದಾಗ ಮಾತ್ರ ಸುಖ-ಸಂಸಾರ ನಡೆಸೋದಕ್ಕೆ ಸಾಧ್ಯ.

English summary

Reasons Why Arranged Marriage is Still Successful in India in Kannada

Here are the reasons why arranged Marriage is still successful in India. Read More.
Story first published: Friday, March 24, 2023, 18:22 [IST]
X
Desktop Bottom Promotion