For Quick Alerts
ALLOW NOTIFICATIONS  
For Daily Alerts

ಪ್ರತಿಯೊಬ್ಬ ಹೆಂಡತಿ ತನ್ನ ಗಂಡ ಈ ಮಾತುಗಳನ್ನಾಡಬೇಕು ಎಂದು ತುಂಬಾ ಬಯಸುತ್ತಾಳೆ

|

'ಗಂಡ ಹೇಗೆ ನೋಡಿಕೊಳ್ಳುತ್ತಿದ್ದೇನೆ ಎಂಬುವುದು ಹೆಣ್ಣಿನ ಮುಖ ನೋಡಿದರೆ ಸಾಕು ತಿಳಿಯುತ್ತದೆ ' ಎಂಬ ಮಾತಿದೆ. ಆ ಮಾತು ನೂರಕ್ಕೆ ನೂರು ಸತ್ಯ.

ಗಂಡನ ಪ್ರೀತಿ, ಆರೈಕೆ ಮಡದಿಯಿದ್ದರೆ ಅವಳಲ್ಲಿ ರಾಣಿ ಕಳೆಯಿರುತ್ತದೆ. ಗಂಡ ಬಡವ-ಶ್ರೀಮಂತ, ಅವನ ವೃತ್ತಿ ಯಾವುದೂ ಮುಖ್ಯವಾಗಲ್ಲ. ಅವಳು ತುಂಬಾ ಖುಷಿಯಾಗಿರುತ್ತಾಳೆ, ಅವಳು ಖುಷಿಯಾಗಿದ್ದರೆ ಸ್ವಾಭಾವಿಕವಾಗಿ ಮನೆಯ ವಾತಾವರಣ ಕೂಡ ಚೆನ್ನಾಗಿರುತ್ತದೆ.

ಹೆಂಡತಿಯನ್ನು ಖುಷಿಯಾಗಿಡುವುದು ಅಂದ್ರೆ ಹೇಗೆ? ಅವಳಿಗೆ ತುಂಬಾ ಒಡವಿ ಕೊಡಿಸುವುದು, ದೊಡ್ಡ, ಮನೆ, ಆಸ್ತಿ, ಬಂಗಲೆಯೇ? ಖಂಡಿತ ಅಲ್ಲ, ಆ ರೀತಿಯೆಂದರೆ ಹಣವಿರುವವರ ಹೆಂಡತಿಯರು ತುಂಬಾ ಸಂತೋಷದಿಂದಿರಬೇಕು ಅಲ್ವಾ? ಶ್ರೀಮಂತಿಗೆ ಇದೆ, ದೊಡ್ಡ ಬಂಗಲೆ ಇದೆ, ದೊಡ್ಡ ಉದ್ಯೋಗ ಇದೆ ಎಂದು ಕೊಟ್ಟ ಹೆಣ್ಮಕ್ಕಳು ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆ ಮಾಡಿಕೊಂಡಿರುವ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣು ಮುಂದೆ ಇದೆ. ಇನ್ನು ಬಡತನವಿದ್ದರೂ ಗಂಡ-ಹೆಂಡತಿ ತುಂಬಾ ಅನ್ಯೂನ್ಯವಾಗಿರುವ ಹಾಗಾದರೆ ಒಬ್ಬ ಹೆಣ್ಣು ನಿಜವಾಗಲೂ ತನ್ನ ಗಂಡನಿಂದ ಏನು ಬಯಸುತ್ತಾಳೆ, ಪ್ರೀತಿ, ಆರೈಕೆ ಹಾಗೂ ನೀವು ಈ ಮಾತುಗಳನ್ನು ಹೇಳಬೇಕೆಂದು ಬಯಸುತ್ತಾಳೆ.

* ಚೆಂದ ಕಾಣ್ತಾ ಇದ್ದೀಯ:

* ಚೆಂದ ಕಾಣ್ತಾ ಇದ್ದೀಯ:

ನಿಮ್ಮ ಹೆಂಡತಿ ಎಲ್ಲಿಗಾದರೂ ಹೊರಟು ನಿಂತಾಗ ಈ ಸೀರೆ ಮ್ಯಾಚಿಂಗ್‌ ಇದೆ, ಮುದ್ದಾಗಿ ಕಾಣ್ತಾ ಇದ್ದೀಯ ಇಂಥ ಮಾತುಗಳನ್ನು ನಿಮ್ಮಿಂದ ನಿರೀಕ್ಷಿಸುತ್ತಾಳೆ. ಅವಳು ಚೆನ್ನಾಗಿ ಅಲಂಕಾರ ಮಾಡಿಕೊಂಡು ರೀ ಹೇಗೆ ಕಾಣ್ತಾ ಇದ್ದೀನಿ ಅಂತ ಕೇಳುತ್ತಾಳೆ. ಕೆಲವೊಮ್ಮೆ ಏನೂ ಕೇಳದರೆ ಹೋದರೂ ನೀವು ಏನಾದರೂ ಹೇಳಲಿ ಎಂದು ನಿಮ್ಮ ಎದುರು ಸುಮ್ಮನೆ ಒಂದೆರಡು ಸಲ ಓಡಾಡುತ್ತಾಳೆ. ಆಗ ಅವಳಿಗೆ ಸೂಪರ್ ಆಗಿ ಕಾಣ್ತಾ ಇದ್ದೀಯ ಅಂದ್ರೆ ಸಾಕು, ಅವಳ ಆ ದಿನದ ಖುಷಿಗೆ ಮತ್ತೇನೂ ಮಾಡಬೇಕಾಗಿಲ್ಲ.

 ನಿನ್ನಿಂದ ನನ್ನ ಬದುಕು ಮತ್ತಷ್ಟು ಸುಂದರವಾಗಿದೆ:

ನಿನ್ನಿಂದ ನನ್ನ ಬದುಕು ಮತ್ತಷ್ಟು ಸುಂದರವಾಗಿದೆ:

ಅವಳು ನಿಮ್ಮ ಕೈ ಹಿಡಿದು ಬರುವಾಗ ತನ್ನೆವರೆನ್ನೆಲ್ಲಾ ಬಿಟ್ಟು ನಿಮಗಾಗಿಯೇ ಬಂದು, ನಿಮ್ಮ ಬೇಕು-ಬೇಡಗಳನ್ನು ನೋಡಿಕೊಂಡು ಜೀವಿಸುತ್ತಿರುತ್ತಾಳೆ. ನೀವು ಅವಳಿಗೆ ಅವಳ ತ್ಯಾಗಕ್ಕೆ, ಅವಳ ಸೇವೆಗೆ ನೀನು ನನ್ನ ಹೆಂಡತಿಯಾಗಿರುವುದು ನನ್ನ ಹೆಮ್ಮೆ ಎಂಬ ಮಾತು ಹೇಳಿದರೆ ಅವಳಿಗೆ ತುಂಬಾ ಸಾರ್ಥಕ ಭಾವ ಬರುತ್ತದೆ.

ನಿನ್ನ ಮೇಲೆ ನಂಬಿಕೆ ಇದೆ:

ನಿನ್ನ ಮೇಲೆ ನಂಬಿಕೆ ಇದೆ:

ಎಷ್ಟೋ ಗಂಡಸರು ಇದನ್ನು ಹೇಳುವುದೇ ಇಲ್ಲ, ಅವಳ ತಪ್ಪುಗಳನ್ನು ಎತ್ತಿ ತೋರಿಸುತ್ತಾರೆ. ಆದರೆ ನೀವು ನೀವು ಅವಳಿಂದ ಏನಾದರೂ ತಪ್ಪು ಮಾಡಿದಾಗ ಅಥವಾ ಅವಳು ನನ್ನಿಂದ ಸಾಧ್ಯವಿಲ್ಲದ ಕಾರ್ಯವಿದು ಎಂದು ಮಾನಸಿಕವಾಗಿ ಕುಗ್ಗಿದಾಗ ನನಗೆ ನಿನ್ನ ಮೇಲೆ ಭರವಸೆ ಇದೆ ಎಂದು ಹೇಳಿ ನೋಡಿ, ಅವಳು ತುಂಬಾನೇ ಎಚ್ಚರಿಕೆವಹಿಸಿ ನಿಮ್ಮ ಭರವಸೆ ಉಳಿಸುವ ಪ್ರಯತ್ನ ಮಾಡದಿದ್ದರೆ ಮತ್ತೆ ಕೇಳಿ.

 ನಿನ್ನ ಕೈ ರುಚಿ ಬೊಂಬಾಟ್:

ನಿನ್ನ ಕೈ ರುಚಿ ಬೊಂಬಾಟ್:

ನಿಮಗಾಗಿ ತುಂಬಾ ಕಷ್ಟಪಟ್ಟು ಅಡುಗೆ ಮಾಡಿ ಬಡಿಸುತ್ತಾಳೆ. ನಾಳೆಯ ಬ್ರೇಕ್‌ಫಾಸ್ಟ್‌ ಇಂದಿನಿಂದಲೇ ತಲೆ ಕೆಡಿಸಿಕೊಂಡಿರುತ್ತಾರೆ ಗೊತ್ತಾ? ಅವಳು ಅಷ್ಟೆಲ್ಲಾ ಶ್ರಮ ಹಾಕಿ ಅಡುಗೆ ಮಾಡಿ ಬಡಿಸಿದಾಗ ಆ ಅಡುಗೆ ಸೂಪರ್ ಆಗಿದ್ದರೆ ಅದನ್ನು ಬಾಯಿ ಬಿಟ್ಟು ಇವತ್ತು ಅಡುಗೆ ಸೂಪರ್ ಅನ್ನಿ, ಅವಳಿಗೆ ತುಂಬಾನೇ ಖುಷಿಯಾಗುವುದು, ಕೆಲವೊಮ್ಮೆ ಅಡುಗೆಯಲ್ಲಿ ಹೆಚ್ಚು-ಕಡಿಮೆಯಾಗುತ್ತೆ ಆಗ ರೇಗಾಡದೆ ನಾಳೆಯಿಂದ ಸ್ವಲ್ಪ ಉಪ್ಪು ಅಥವಾ ಖಾರ ಕಮ್ಮಿಯಿದ್ದರೆ ಅಡುಗೆ ಸೂಪರ್ ಆಗುತ್ತೆ ಅನ್ನಿ.

ಇವತ್ತು ನಾನು ಮಾಡ್ತೀನಿ ನೀನು ರೆಸ್ಟ್ ಮಾಡು:

ಇವತ್ತು ನಾನು ಮಾಡ್ತೀನಿ ನೀನು ರೆಸ್ಟ್ ಮಾಡು:

ಗೃಹಿಣಿಯಾಗಿದ್ದರೆ 'ನಿನಗೇನು ಮಹಾನ್ ಕೆಲಸ ಇದೆ.. ' ಎಂದು ಮಾತನಾಡುವ ಎಷ್ಟೋ ಪುರುಷರಿದ್ದರೆ. ಆ ಮಾತುಗಳನ್ನಾಡುವ ಮುನ್ನ ಒಂದೆರಡು ದಿನ ನೀವು ಸಂಪೂರ್ಣ ಮನೆ ಕೆಲಸ ಮಾಡಿ ನೋಡಿ ಆಗ ಏನು ಮಹಾನ್‌ ಕೆಲಸವಿರುತ್ತದೆ ಎಂದು ತಿಳಿಯುತ್ತದೆ... ನಿಮಗಾದರೆ ವಾರದಲ್ಲಿ ಒಂದು ಅಥವಾ ಎರಡು ದಿನ ರಜೆ ಇರುತ್ತದೆ. ಆದರೆ ಅವಳು ವಾರವಿಡೀ ದುಡಿಯಬೇಕು, ಆದರೂ ಅವಳ ಕೆಲಸದ ಬಗ್ಗೆ ಒಂದು ಮೆಚ್ಚುಗೆ ಮಾತಗಳನ್ನಾಡಲು ಮೀನ ಮೇಷ ಎಣಿಸುತ್ತಾರೆ, ಒಂದು ದಿನ ಅವಳಿಗೆ ನಿನಗಾಗಿ ನಾನು ಕಾಫಿ ಮಾಡ್ತೀನಿ, ಅಡುಗೆ ಮಾಡ್ತೀನಿ ಹೇಳಿ ನೋಡಿ, ಅವಳ ಮುಖದಲ್ಲಿ ಖುಷಿಯ ಕಳೆ ನೋಡಿ ನಿಮ್ಮ ತುಟಿಯಲ್ಲಿ ಕಿರುನಗೆ ತಂದುಕೊಳ್ಳುವಿರಿ.

 ನೀನು ಗ್ರೇಟ್‌ ತಾಯಿ

ನೀನು ಗ್ರೇಟ್‌ ತಾಯಿ

ಮಕ್ಕಳ ಜವಾಬ್ದಾರಿ ತಂದೆ-ತಾಯಿ ಇಬ್ಬರಿಗೂ ಇದ್ದರೂ ತಾಯಿ ಪಾಲು ತುಂಬಾನೇ ಜಾಸ್ತಿ. ಮಕ್ಕಳನ್ನು ಒಂದು ಒಳ್ಳೆಯ ರೀತಿಯಲ್ಲಿ ಬೆಳೆಸುವಲ್ಲಿ ತಾಯಿಯ ಪಾಲು ತುಂಬಾನೇ ಇದೆ. ಒಂದು ಮಗುವನ್ನು ಸಾಕಿ ಬೆಳೆಸುವಲ್ಲಿ ತುಂಬಾನೇ ಶ್ರಮ ಪಡುತ್ತಾಳೆ. ನೀನು ನನ್ನ ಮಕ್ಕಳಿಗೆ ಗ್ರೇಟ್‌ ತಾಯಿ ಅನ್ನಿ ಅವಳಿಗೆ ತುಂಬಾನೇ ಆನಂದವಾಗುತ್ತೆ.

ಐ ಲವ್ ಯೂ:

ಐ ಲವ್ ಯೂ:

ಲವ್‌ ಮಾಡುತ್ತಿದ್ದಾಗ ಅಥವಾ ಮದುವೆಯಾದ ಹೊಸತರಲ್ಲಿ ಗಂಟೆಗೊಮ್ಮೆ ಲವ್‌ ಯೂ ಅಂತ ಹೇಳುತ್ತಿದ್ದವರು ತಿಂಗಳುಗಳು, ವರ್ಷಗಳು ಕಳೆಯುತ್ತಿದ್ದಂತೆ ಹೇಳುವುದನ್ನು ಕಮ್ಮಿ ಮಾಡುತ್ತೀರಿ, ಆದರೆ ಅವಳು ನಿಮ್ಮಿಂದ ಆ ಮಾತಗಳನ್ನು ಕೇಳಲು ಬಯಸುತ್ತಾಳೆ. ಆದ್ದರಿಂದ ನೀವು ಆ ಅಭ್ಯಾಸ ಬಿಟ್ಟಿದ್ದರೆ ಅಪರೂಪಕ್ಕಾದರೂ ಹೇಳಿ.

English summary

Words Every Women Want To Hear From Husband in Kannada

These are the words every women want to hear from her husband, have a look.....
Story first published: Monday, December 5, 2022, 13:05 [IST]
X
Desktop Bottom Promotion