Latest Updates
-
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ! -
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು! -
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು! -
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ!
ಜೀವನ ಆರಂಭಕ್ಕೂ ಮುನ್ನವೇ ಕೆಲವರ ವೈವಾಹಿಕ ಜೀವನ ಅಂತ್ಯವಾಗೋದು ಏಕೆ ಗೊತ್ತಾ?
ಮದುವೆಯ ಈ ಬಂಧ ಅನುರಾಗದ ಅನುಬಂಧˌ ಏಳೇಳು ಜನ್ಮಗಳೂ ತೀರದ ಸಂಬಂಧ. ಇದು ಕನ್ನಡ ಸಿನಿಮಾದ ಹಾಡು. ಹೌದು ಮದುವೆ ಎಂದರೆ ಹಾಗೇ ನಮ್ಮ ಜೀವನದಲ್ಲಿ ಒಂದೇ ಬಾರಿ ನಡೆಯುವ ಸವಿನೆನಪಿನ ಕ್ಷಣ. ಈ ಸುಮಧುರ ಕ್ಷಣವನ್ನು ಜೀವನ ಪೂರ್ತಿ ನೆನಪಿಟ್ಟುಕೊಳ್ಳುವುದು ಅಥವಾ ಮರೆಯುವುದು ಎಲ್ಲವೂ ನಮ್ಮ ಕೈಯಲ್ಲೇ ಇರುತ್ತದೆ. ಯಾಕೆಂದರೆ ವೈವಾಹಿಕ ಜೀವನ ಸುಖವಾಗಿದ್ದರೆ ಅಥವಾ ಸುಖದಿಂದ ನಡೆಸಿಕೊಂಡು ಹೋದರೆ ಅದು ನೆನಪಿರುತ್ತದೆ. ಎಲ್ಲದರೂ ಜೀವನವನ್ನು ಸುಖವಾಗಿ ಇಟ್ಟುಕೊಳ್ಳದಿದ್ದರೆ ಅದು ಮರೆತು ಹೋಗುತ್ತದೆ.
ಆದರೆ ಈಗೀನ ಅನೇಕ ವೈವಾಹಿಕ ಜೀವನಗಳು ಮುರಿದು ಬೀಳುವುದನ್ನು ನಾವು ಕಾಣುತ್ತೇವೆ. ಅನೇಕ ಡಿವೋರ್ಸ್ ಕೇಸ್ ಗಳು ನಮ್ಮ ಮುಂದೆ ಇರುವುದು ನಾವು ಗಮನಿಸುತ್ತೇವೆ. ಆದರೆ ಒಂದು ಮಾತ್ರ ಸತ್ಯ ಈ ಮದುವೆ ಅನ್ನೋ ಬಂಧನ ನಿಜಕ್ಕೂ ಪುಣ್ಯದ್ದು, ಏಕೆಂದರೆ ಅನೇಕರು ಎಷ್ಟೇ ಪ್ರಯತ್ನ ಪಟ್ಟರೂ ಮದುವೆಯೇ ಆಗೋದಿಲ್ಲ. ಅವರಿಗೆ ಲಗ್ನ ಕೂಡಿ ಬರೋದೇ ಇಲ್ಲ. ಹೀಗೆಲ್ಲ ಇರುವಾಗ ನಾವು ಮದುವೆ ಬಂಧವನ್ನು ಮುರಿದುಕೊಳ್ಳುವ ಬಗ್ಗೆ ದೀರ್ಘಃವಾಗಿ ಯೋಚಿಸಬೇಕು.
ಅದೇನೆ ಇರಲಿ, ಹಾಗಾದ್ರೆ ವೈವಾಹಿಕ ಜೀವನ ಸರಿಯಾಗಿ ಆಗುವುದಕ್ಕಿಂತ ಮುಂಚೆ ಡಿವೋರ್ಸ್ ಕಡೆಗೆ ದಂಪತಿ ಮುಖ ಮಾಡುವುದು ಏಕೆ? ಅವರ ಮಧ್ಯೆ ಬರುವ ಸಮಸ್ಯೆಗಳು ಏನು ಇರಬಹುದು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಮನಸ್ಸಿಲ್ಲದ ಮದುವೆ!
ಅನೇಕ ವೈವಾಹಿಕ ಜೀವನ ಮುರಿದು ಬೀಳಲು ಮನಸ್ಸಿಲ್ಲದ ಮದುವೆ ಕೂಡ ಕಾರಣವಾಗಿದೆ. ಹೌದು, ಅನೇಕ ಕಡೆಗಳಲ್ಲಿ ಏನಾಗುತ್ತೆ ಅಂದರೆ ಹಿರಿಯರು ಹುಡಗಿ ಅಥವಾ ಹುಡುಗಿಯನ್ನು ನೋಡಿಕೊಂಡಿರುತ್ತಾರೆ. ಮದುವೆಯಾಗುವವರ ಬಳಿ ಯಾವುದೇ ಅಭಿಪ್ರಾಯ ಕೇಳಿರುವುದಿಲ್ಲ. ಹೀಗಾದಾಗ ಏನಾಗುತ್ತದೆ ಅಂದರೆ ಹುಡುಗ-ಹುಡುಗಿ ನಡುವೆ ಯಾವುದೇ ಸಮನ್ವಯತೆ ಇರುವುದಿಲ್ಲ. ಪೋಷಕರಿಗಾಗಿ ಅಥವಾ ಹಿರಿಯರಿಗಾಗಿ ನಮ್ಮ ಮದುವೆ ಆಯ್ತು ಎನ್ನುವ ಯೋಚನೆ ಇಬ್ಬರಿಗೂ ಬರುತ್ತದೆ. ಹೀಗಾಗಿ ಇಂತಹ ಮದುವೆ ಜಾಸ್ತಿ ಸಮಯ ಇರುವುದಿಲ್ಲ. ಮದುವೆ ಎಂದರೆ ಇಬ್ಬರು ಒಪ್ಪಿಕೊಂಡು ನಡೆಯಬೇಕು. ಹೀಗಿದ್ದಾಗ ಮಾತ್ರ ಇಂತಹ ಮದುವೆ ನಿಜಕ್ಕೂ ಅರ್ಥಪೂರ್ಣವಾಗುತ್ತದೆ. ಯಾರದ್ದೋ ಒತ್ತಾಯಕ್ಕೆ ಮದುವೆ ಆದರೆ ಅಥವಾ ಒಲ್ಲದ ಮನಸ್ಸಿನಿಂದ ಮದುವೆಯಾದರೆ ಆ ವಿವಾಹ ಜೀವನ ಮುರಿದು ಬೀಳುತ್ತದೆ.

ಇಬ್ಬರಿಗೂ ಪ್ರಬುದ್ಧತೆ ಇಲ್ಲದೆ ಇರುವುದು!
ಇಂದಿನ ದಿನಗಳಲ್ಲಿ ಅನೇಕ ದುಡ್ಡು ಇರುವ ಕುಟುಂಬದವರು ತಮ್ಮ ಮಕ್ಕಳನ್ನು ವಯಸ್ಸಿಗೆ ಬಂದಾಗಲೇ ಮದುವೆ ಮಾಡಿಸಿಕೊಡುತ್ತಾರೆ. ಇದರಿಂದ ಹುಡುಗ ಮತ್ತು ಹುಡುಗಿಗೆ ಜೀವನ ಸಾಗಿಸಲು ಕಷ್ಟ ಆಗುತ್ತದೆ. ಜೀವನದ ಅನುಭವ ಇರುವುದಿಲ್ಲ, ತಮ್ಮ ಬ್ಯಾಚುಲರ್ ಜೀವನವನ್ನು ಕಳೆದಿರುವುದಿಲ್ಲ. ಮದುವೆ ಎಂದರೆ ಏನು? ಜೀವನ ಎಂದರೆ ಏನು? ಎಂದು ತಿಳಿದಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಅವರಿಗೆ ಜೀವನವನ್ನು ಸರಿಯಾಗಿ ನಿಭಾಯಿಸಲು ಬರದೆ ವೈವಾಹಿಕ ಜೀವನ ಅಲ್ಲಿಗೆ ಅಂತ್ಯವಾಗುತ್ತದೆ. ಪ್ರಬುದ್ಧತೆ ಇಲ್ಲದಿದ್ದರೆ ಇಬ್ಬರ ನಡುವೆ ಸಮನ್ವಯತೆ ಕೊರತೆ ಕಾಡುತ್ತದೆ, ಕೆಲಸ, ಹಣಕಾಸಿನ ವಿಚಾರಕ್ಕೆ ಗಲಾಟೆಗಳು ಸಂಭವಿಸಬಹುದು.

ಸಂಬಂಧದಲ್ಲಿ ಕಮಿಟ್ ಮೆಂಟ್ ಕೊರತೆ!
ವೈವಾಹಿಕ ಸಂಬಂಧದಲ್ಲಿ ಇಬ್ಬರ ನಡುವೆ ಕಮಿಟ್ ಮೆಂಟ್ ಇರಬೇಕು. ಇಲ್ಲದಿದ್ದರೆ ಅಂತಹ ವೈವಾಹಿಕ ಜೀವನ ಅಂತ್ಯವಾಗುತ್ತದೆ. ಇಬ್ಬರ ನಡುವೆ ನಂಬಿಕೆ, ಪ್ರೀತಿ, ಅರ್ಥ ಮಾಡಿಕೊಳ್ಳುವ ಗುಣ, ಮಾತುಕತೆ. ಹೀಗೆ ಇವುಗಳೆಲ್ಲ ಒಂದು ವೈವಾಹಿಕ ಜೀವನದಲ್ಲಿ ಇದ್ದರೆ ಮಾತ್ರ ಅದು ಸುಂದರವಾಗುತ್ತದೆ. ಇಬ್ಬರ ಎಲ್ಲಾ ವಿಚಾರಗಳಲ್ಲಿ ಹೊಂದಿಕೊಂಡು ಹೋಗುತ್ತೇವೆ ಎನ್ನುವ ಭರವಸೆಯು ಇರಬೇಕು ಇಲ್ಲದಿದ್ದರೆ ಸಮಸ್ಯೆ ಕಟ್ಟಿಟ್ಟಬುತ್ತಿ. ಇಲ್ಲದಿದ್ದರೆ ವೈವಾಹಿಕ ಜೀವನ ಅಂತ್ಯವಾಗುತ್ತದೆ. ಉದಾಹರಣೆಗೆ ಎಲ್ಲಾ ವಿಚಾರಗಳಲ್ಲೂ ಪತ್ನಿಯನ್ನು ದೂಷಿಸುವುದು, ಪ್ರೀತಿ ಇರದೆ ಇರುವುದು, ರಾತ್ರಿ ಎಷ್ಟೋ ಗಂಟೆಗೆ ಬಂದು ಮನೆ ಸೇರುವುದು. ಹೀಗೆ ವೈವಾಹಿಕ ಜೀವನದಲ್ಲಿ ಕಮಿಟ್ ಆಗದೆ ಇದ್ದರೆ ಸಮಸ್ತೆ ಉಂಟಾಗುತ್ತದೆ.

ಲೈಂಗಿಕ ತೃಪ್ತಿ ಸಿಗದೇ ಇರುವುದು!
ಇತ್ತೀಚಿಗಿನ ದಿನಗಳಲ್ಲಿ ನಡೆಯುತ್ತಿರುವ ಅನೇಕ ಡಿವೋರ್ಸ್ ಗಳಲ್ಲಿ ನಾವು ನೋಡಿರುವಂತಹ ವಿಚಾರ ಇದು. ಹೌದು, ಅನೇಕ ವೈವಾಹಿಕ ಜೀವನಗಳು ಲೈಂಗಿಕ ತೃಪ್ತಿ ಇಲ್ಲದೆ ಇರುವ ಕಾರಣಕ್ಕೆ ಮುರಿದುಬೀಳುವುದುಂಟು. ಹೌದು, ಗಂಡನಿಗೆ ಪತ್ನಿಯಿಂದ ಲೈಂಗಿಕ ಸುಖ, ಪತಿಯಿಂದ ಪತ್ನಿಗೆ ಲೈಂಗಿಕ ಸುಖ ಸಿಗದೇ ಇದ್ದಾಗ ಅದು ಮುನಿಸು, ಗಲಾಟೆ ಮೂಲಕ ಕೌಟುಂಬಿಕ ಸಮಸ್ಯೆಗೆ ಕಾರಣವಾಗುತ್ತದೆ. ಹೀಗೆ ಕಾರಣವಾಗುವ ಸಮಸ್ಯೆ ಬಳಿಕ ವಿಚ್ಛೇದನದಲ್ಲಿ ಕೊನೆಗೊಳ್ಳುತ್ತದೆ. ಹೀಗಾಗಿ ವೈವಾಹಿಕ ಜೀವನ ಖುಷಿಯಿಂದ ಇರಬೇಕಾದರೆ ಲೈಂಗಿಕ ಜೀವನವು ಅತೀ ಅಗತ್ಯವಾಗಿದೆ.

ಸಂಹವನ ಕೊರತೆ!
ಸಂವಹನ ಕೊರತೆಯು ನಿಮ್ಮ ವೈವಾಹಿಕ ಜೀವನವನ್ನು ಅಂತ್ಯಗೊಳಿಸಬಹುದು. ಇದು ಕೂಡ ಮತ್ತೊಂದು ಪ್ರಮುಖ ಕಾರಣವಾಗಬಹುದು. ಉದಾಹರಣೆಗೆ ಯಾವೋದೋ ಒಂದು ಜಗಳಕ್ಕೆ ದಂಪತಿ ನಡುವೆ ಜಗಳವಾಗಿರುತ್ತದೆ. ಅದನ್ನು ಮಾತನಾಡಿ ಸರಿಮಾಡಿಕೊಂಡರೆ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ. ಜಗಳ ಮುಂದುವರೆಸಿದರೆ ಇಬ್ಬರ ನಡುವೆ ಮಾತುಕತೆ ಕಮ್ಮಿ ಆಗುತ್ತದೆ. ಇಬ್ಬರೂ ದೂರವಾಗುತ್ತಾರೆ. ಅದು ಡಿವೋರ್ಸ್ ಗೆ ತಲುಪಬಹುದು. ಒಳ್ಳೆಯಾದಾಗಲಿ ಅಥವಾ ಕೆಟ್ಟದಾಗಲಿ ಮೊದಲು ಸಂಹವನ ನಡೆಸಬೇಕು. ಮಾತಿಗೆ ನೂರಾರು ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಇದೆ.

ಅನೈತಿಕ ಸಂಬಂಧ!
ಅನೇಕರ ಜೀವನದಲ್ಲಿ ಇಂತಹದೊಂದು ಘಟನೆ ನಡೆದಿರುತ್ತದೆ. ಅನೈತಿಕ ಸಂಬಂಧ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಪತಿ ಬೇರೆಯೊಬ್ಬರ ಜೊತೆ ಅನೈತಿಕ ಸಬಂಧ, ಪತ್ನಿ ಬೇರೆಯೊಬ್ಬನ ಜೊತೆ ಅನೈತಿಕ ಸಂಬಂಧ. ಈ ವಿಚಾರ ತಿಳಿದಾಗ ಸಾಮಾನ್ಯವಾಗಿ ಆ ವೈವಾಹಿಕ ಜೀವನ ಅಂತ್ಯವಾಗುತ್ತದೆ. ಕೆಲವರು ಮಾತುಕತೆಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುತ್ತಾರೆ. ಆದರೆ ಅನೇಕರು ಈ ವೈವಾಹಿಕ ಜೀವನವನ್ನೇ ಅಂತ್ಯಗೊಳಿಸುತ್ತಾರೆ. ಅಥವಾ ಕೆಲವರಿಗೆ ಮದುವೆ ಆದ ನಂತರ ಬೇರೆಯೊಬ್ಬರ ಮೇಲೆ ಪ್ರೇಮವಾಗಿ ಹಳೆ ವೈವಾಹಿಕ ಜೀವನಕ್ಕೆ ಪೂರ್ಣ ವಿರಾಮ ಇಡುವುದುಂಟು.
ಹಣದ ವಿಚಾರ!
ಹಣದ ವಿಚಾರಕ್ಕೂ ವೈವಾಹಿಕ ಜೀವನ ಅಂತ್ಯಗೊಳ್ಳಬಹುದು. ಹೌದು, ಇದರಲ್ಲಿ ಎರಡು ವಿಚಾರ ಇದೆ. ಕೆಲವರು ತಮ್ಮ ಬಳಿ ಭಾರೀ ಹಣವಿದೆ ಎಂದು ನಂಬಿಸಿ ವಿವಾಹವಾಗಿ ಬಳಿಕ ತನ್ನ ಬಳಿ ಏನು ಇಲ್ಲವೆಂದಾಗ ಅನೇಕ ವೈವಾಹಿಕ ಸಂಬಂಧಗಳು ಮುರಿದುಬೀಳುತ್ತದೆ. ಇನ್ನು, ಮದುವೆಯಾದ ನಂತರ ಹಣದ ವಿಚಾರಕ್ಕೆ ಪತ್ನಿ-ಪತ್ನಿ ನಡೆಯುವ ಜಗಳವು ಸಮಸ್ಯೆಯನ್ನು ತಂದಿಡಬಹುದು. ಹಣ, ಆಸ್ತಿ ಸಂಬಂಧ ಕೆಲವೊಂದು ಏಕಮುಖ ನಿರ್ಧಾರವೂ ವೈವಾಹಿಕ ಜೀವನ ಅಂತ್ಯಕ್ಕೆ ಕಾರಣವಾಗಬಹುದು. ಇನ್ನು ಕುಟುಂಬದಲ್ಲಿ ಆರ್ಥಿಕ ವಿಚಾರಕ್ಕೆ ತಲೆಕೆಡಿಸಿಕೊಳ್ಳದೆ ಇರುವುದು ಕೂಡ ವೈವಾಹಿಕ ಸಂಬಂಧ ಹಳಸಲು ಕಾರಣವಾಗುತ್ತದೆ. ಹೀಗಾಗಿ ಕುಟುಂಬ ಎಂದಾಗ ಇಬ್ಬರು ಸರಿಯಾಗಿ ಖರ್ಚು ಮಾಡುವುದು, ಆರ್ಥಿಕತೆ ಸಂಬಂಧ ಯಾವುದೇ ನಿರ್ಧಾರ ಕೈಗೊಳ್ಳುವುದಾದರೂ ಚರ್ಚೆ ನಡೆಸುವುದು ಹೀಗೆ ಹಲವಾರು ಕ್ರಮಗಳನ್ನು ಸುಖಿ ಕುಟುಂಬಕೋಸ್ಕರ ತೆಗೆದುಕೊಳ್ಳಬೇಕಾಗುತ್ತದೆ.
ಬೇರೆ ಕಾರಣಗಳು!
ಅನೇಕ ವೈವಾಹಿಕ ಜೀವನ ಮುರಿದು ಬೀಳಲು ಮನೆಯಲ್ಲಿ ನಡೆಯುವ ಗಲಾಟೆಗಳಾಗಿರಬಹುದು. ನಿತ್ಯವೂ ಪತ್ನಿಗೆ ಪತಿ ಹೊಡೆಯೋದು, ಕೆಟ್ಟ ಪದಗಳಿಂದ ನಿಂದಿಸುವುದು. ಹಾಗೇ ಪತ್ನಿ ಪತಿಗೆ ಹೊಡೆಯುವುದು ಕೆಟ್ಟ ಪದಗಳಿಂದ ನಿಂದಿಸುವುದು. ಹೀಗೆ ಇದು ಕೂಡ ಮುಖ್ಯ ಕಾರಣವಾಗಿರುತ್ತದೆ. ಇನ್ನು ಇದಲ್ಲದೇ ಕೆಲವು ಕಡೆ ವರದಕ್ಷಿಣೆಗೋಸ್ಕರ ಪತ್ನಿ ಮೇಲೆ ಹಲ್ಲೆ ನಡೆಸುವುದು, ಅತ್ತೆಯಿಂದ ಸೊಸೆಗೆ ಹಲ್ಲೆ, ಕಿರುಕುಳ ಹೀಗೆ ಇಂತಹ ಘಟನೆಗಳು ಕೂಡ ವೈವಾಹಿಕ ಜೀವನ ಅಂತ್ಯಕ್ಕೆ ಕಾರಣವಾಗಿರಬಹುದು.



Click it and Unblock the Notifications











