Latest Updates
-
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು!
ಪತಿ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾರಾ? ಹಾಗಾದ್ರೆ ಹೀಗೆ ಮಾಡಿ.
ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿದ್ದಂತೆ ಕಂಡರೂ ಕೂಡ ಸಂಬಂಧ ಹಳೆಯದಾದಂತೆ ಮನಸ್ಥಾನಗಳು ಬರುವುದು ಸಹಜ. ಅದರಲ್ಲೂ ಗಂಡಸರು ಹೆಚ್ಚಾಗಿ ಪತ್ನಿಯನ್ನು ನಿರ್ಲಕ್ಷಿಸೋದಕ್ಕೆ ಶುರು ಮಾಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಪತ್ನಿಗೆ ಏನು ಮಾಡಬೇಕು ಅನ್ನುವುದೇ ತೋಚೋದಿಲ್ಲ.

ನಿಮ್ಮ ಪತಿ ನಿಮ್ಮನ್ನು ನಿರ್ಲಕ್ಷ್ಯ ಮಾಡ್ತಿದ್ದಾರಾ? ಪತಿಯ ಕೋಪಕ್ಕೆ ಕಾರಣ ಏನು ಅಂತ ಗೊತ್ತಾಗುತ್ತಿಲ್ವಾ? ಸಂಬಂಧ ಮುರಿದು ಬೀಳುವ ಹಂತದಲ್ಲಿದ್ಯಾ? ಮುನಿಸಿಕೊಂಡ ನಿಮ್ಮ ಪತಿಯನ್ನು ಒಲಿಸಿಕೊಳ್ಳಬೇಕಾ? ಹಾಗಾದ್ರೆ ಹೀಗೆ ಮಾಡಿ.
ಪತಿಯು ಪತ್ನಿಯನ್ನು ನಿರ್ಲಕ್ಷಿಸೋದಕ್ಕೆ ಕಾರಣಗಳೇನು?
* ಪತ್ನಿಯು ಪತಿಯನ್ನ ಪದೇ ಪದೇ ಬೈಯುತ್ತಿದ್ದರೆ.
* ಸಣ್ಣ ಭಿನ್ನಾಭಿಪ್ರಾಯಗಳು ಪತಿಯಲ್ಲಿ ಕೋಪ ಮತ್ತು ಹತಾಶೆಯನ್ನುಂಟು ಮಾಡಬಹುದು.
* ಕೆಲಸದ ಒತ್ತಡ
* ಸಂಬಂಧ ಬೇಸರ ಅನ್ನಿಸಿರಬಹುದು
* ಹಣಕಾಸಿನ ಸಮಸ್ಯೆ ಎದುರಾಗಿರಬಹುದು
* ಅವರು ನಿಮಗೆ ವಂಚಿಸಿದಕ್ಕಾಗಿ ಪಾಪಪ್ರಜ್ಞೆ ಅವರನ್ನು ಕಾಡುತ್ತಿರಬಹುದು
ನಿಮ್ಮ ಪತಿ ನಿಮ್ಮ ಮೇಲೆ ಬೇಸರ ಪಟ್ಟುಕೊಳ್ಳಲು ಇವುಗಳು ಪ್ರಾಥಮಿಕ ಕಾರಣಗಳಾಗಿರಬಹುದು. ಆದರೆ ಆದಷ್ಟು ಬೇಗ ಆತನ ಮುನಿಸಿಗೆ ಕಾರಣ ಏನು ಎಂಬುವುದನ್ನು ಅರಿತು ಸಂಬಂಧವನ್ನು ಸರಿಪಡಿಸಲು ಪ್ರಯತ್ನಿಸಿ.
ಪತಿ ನಿರ್ಲಕ್ಷಿಸಿದಾಗ ಆತನನ್ನು ಸಮಾಧಾನ ಪಡಿಸಲು ಹೀಗೆ ಮಾಡಿ:

1. ಇಬ್ಬರ ನಡುವಿನ ಸಂವಹನವನ್ನು ಉತ್ತಮಪಡಿಸಿ
ಕುಳಿತು ಮಾತನಾಡಿದಾಗ ಮಾತ್ರ ಎಂತಹ ಸಮಸ್ಯೆಗಳಿದ್ದರೂ ಕೂಡ ಬಗೆಹರಿಯೋದಕ್ಕೆ ಸಾಧ್ಯ. ನಿಮ್ಮ ಪತಿ ನಿಮ್ಮನ್ನು ನಿರ್ಲಕ್ಷಿಸಿದರೆ ಆತನಲ್ಲಿ ಮಾತನಾಡಲು ಪ್ರಯತ್ನಿಸಿ. ಮುನಿಸಿದ್ದಾಗ ಪುರುಷರು ನಿಮ್ಮಲ್ಲಿ ಮಾತನಾಡಲು ಇಚ್ಛಿಸುವುದಿಲ್ಲ. ಆಗ ಹೇಗಾದರೂ ಮಾಡಿ ಆತನ ಸಮಸ್ಯೆ ಏನು ಎಂದು ಅರ್ಥಮಾಡಿಕೊಳ್ಳಿ. ನಿಮ ಪತಿ ನಿಮ್ಮಲ್ಲಿ ಕೋಪದಿಂದ ಜೋರಾಗಿ ಮಾತನಾಡಿದರೆ ನೀವು ಆ ಸಮಯದಲ್ಲಿ ಸುಮ್ಮನಿರಿ. ಅದನ್ನು ಬಿಟ್ಟು ನೀವು ಕೂಡ ಆತನ ವಿರುದ್ಧವಾಗಿ ಮಾತನಾಡಿದರೆ ಸಂಬಂಧ ಮತ್ತಷ್ಟು ಹಾಳಾಗುತ್ತದೆ.

2. ಪತಿಯನ್ನು ಪೀಡಿಸಬೇಡಿ, ಅವನಷ್ಟಕ್ಕೆ ಬಿಟ್ಟುಬಿಡಿ
ಕೆಲವೊದು ಬಾರಿ ನಿಮ್ಮ ಪತಿ ಏಕಾಂಗಿಯಾಗಿರಲು ಇಷ್ಟಪಡುತ್ತಾನೆ. ಈ ವೇಳೆ ಆತನನ್ನು ಪೀಡಿಸಬೇಡಿ. ಆತನಲ್ಲಿ ಪದೇ ಪದೇ ಕಾರಣವನ್ನು ಕೇಳಲು ಹೋಗಬೇಡಿ. ನಿಮ್ಮ ನಡವಳಿಕೆ ಅವನಿಗೆ ಇಷ್ಟವಾಗದೇ ಇರಬಹುದು. ಆತನಷ್ಟೆಗೆ ಬಿಟ್ಟು ಬಿಡಿ. ಎಲ್ಲ ಸರಿ ಹೋದಾಗ ಆತ ನಿಮ್ಮಲ್ಲಿ ನೋವನ್ನು ಹಂಚಿಕೊಳ್ಳುತ್ತಾನೆ.

3. ಧನಾತ್ಮಕವಾಗಿರಿ
ಆತನ ನಡವಳಿಕೆ ನಿಮಗೆ ಇಷ್ಟವಾಗದೇ ಇರಬಹುದು ಆಗ ನೀವು ಚಿಂತಾಕ್ರಾಂತರಾಗಬಾರದು. ಎಂದಿಗೂ ನಿಮ್ಮೊಳಗೆ ಋಣಾತ್ಮಕ ಆಲೋಚನೆಗಳನ್ನು ಒಳ ನುಸುಳಲು ಬಿಡಬೇಡಿ. ಆತನಿಗೆ ಬೇರೆ ಯಾವುದಾದರೂ ಸಂಬಂಧವಿರಬಹುದು ಎಂಬ ಅಲೋಚನೆಗಳು ಸಾಮಾನ್ಯವಾಗಿ ಕಾಡುತ್ತದೆ. ಆದರೆ ಅದಕ್ಕೆ ಅವಕಾಶಕೊಡಬೇಡಿ. ಒಂದು ಸಾರಿ ಅನುಮಾನದ ಹುಳ ನಿಮ್ಮ ಮನಸ್ಸನ್ನು ಹೊಕ್ಕಿ ಬಿಟ್ಟರೆ ಸಂಬಂಧ ತುಂಬಾ ದಿನ ಗಟ್ಟಿಯಾಗಿ ಇರುವುದಿಲ್ಲ.

4. ಸಂಗಾತಿಯೊಂದಿಗೆ ವಾದಿಸಬೇಡಿ
ಸಂಗಾತಿ ನಿಮ್ಮ ಜೊತೆ ಮಾತನಾಡದೇ ಇಗ್ನೋರ್ ಮಾಡಿದಾಗ ಬೇಸರವಾಗುವುದು ಸಹಜ. ಹಾಗಂತ ಆತನೊಂದಿಗೆ ನೀವು ಸಂಘರ್ಷಕ್ಕೆ ಇಳಿಯುವುದಕ್ಕೆ ಹೋಗಬೇಡಿ. ಮಾತಿಗೆ ಮಾತು ಬೆಳೆಸಲೇಬೇಡಿ. ಬದಲಾಗಿ ಕೊಂಚ ಹೊತ್ತು ಸುಮ್ಮನಿದ್ದು, ಆತ ಶಾಂತನಾಗಿದ್ದಾನೆ ಎಂದು ನಿಮಗೆ ಅನಿಸಿದಾಗ ಸಮಾಧಾನವಾಗಿ ಆತನಲ್ಲಿ ಮಾತನಾಡಿ. ಸಮಸ್ಯೆಯನ್ನು ಅರಿತುಕೊಳ್ಳಿ.

5. ಪರಿಸ್ಥಿತಿ ಅರ್ಥೈಸಿಕೊಳ್ಳಿ
ನಿಮ್ಮ ಮಧ್ಯೆ ಯಾವಾತ್ತಾದರೂ ಜಗಳ ಆಗಿರಬಹುದು. ಅಥವಾ ಯಾವುದಾದರೂ ವಿಚಾರಕ್ಕೆ ಮನಸ್ಥಾಪ ಬಂದಿರಬಹುದು. ಒಂದ ಕ್ಷಣ ಕುಳಿತು ಆಲೋಚಿಸಿ ನನ್ನ ವರ್ತನೆಯಿಂದ ಆತನ ಮನಸ್ಸಿಗೆ ನೋವಾಗಿರಬಹುದಾ ಅನ್ನೋದನ್ನ. ಒಂದು ವೇಳೆ ನೋವಾಗಿದ್ದು ನಿಜವೇ ಆದರೆ ಆತನ ಬಳಿ ಹೋಗಿ ಕ್ಷಮೆ ಕೇಳುವುದರಲ್ಲಿ ತಪ್ಪಿಲ್ಲ.

6. ಸಂಬಂಧದಲ್ಲಿ ಹೊಸತನವನ್ನು ಕಂಡುಕೊಳ್ಳಿ
ಸಂಬಂಧ ಹಳೆಯದಾದಂತೆ ಹುಡುಗರು ಆಸಕ್ತಿ ಕಳೆದುಕೊಂಡು ಬಿಡುತ್ತಾರೆ. ಇಂತಹ ಸಂದರ್ಭದಲ್ಲಿ ಪತಿಯು ಬೇರೆಡೆಗೆ ಆಕಷ್ಟಿತವಾಗುವುದು ಸಹಜ. ಆದರೆ ಅದಕ್ಕೆ ಅವಕಾಶ ನೀಡಬೇಡಿ. ಏನನ್ನಾದರೂ ಹೊಸತು ಮಾಡಿ ಗಂಡನನ್ನು ಖುಷಿ ಪಡಿಸಿ. ಮದುವೆಯ ಸಂದರ್ಭವನ್ನು ನೆನಪಿಸಲು ಆತನನ್ನು ಡೇಟ್‌ಗೆ ಕರೆದುಕೊಂಡು ಹೋಗಿ ಅಥವಾ ಆತನಿಗೆ ಉಡುಗೊರೆಗಳನ್ನು ನೀಡಿ. ಆಗ ಸಂಬಂಧಕ್ಕೆ ಮತ್ತೆ ಹೊಸ ಹುರುಪು ಬರುತ್ತದೆ.

7. ನಿಮ್ಮನ್ನು ನೀವು ಬ್ಯುಸಿಯಾಗಿ ಇಟ್ಟುಕೊಳ್ಳಿ
ಗಂಡ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾನೆ ಎಂದು ಇಡೀ ದಿನ ಕೊರಗುತ್ತಾ ಕೂರಬೇಡಿ. ಬದಲಾಗಿ ನಿಮ್ಮನ್ನು ನೀವು ಬ್ಯುಸಿಯಾಗಿ ಇಟ್ಟುಕೊಳ್ಳಿ. ಏನಾದರೂ ಉಪಯೋಗವಾಗೋ ಕೆಲಸ ಮಾಡಿ. ಆ ಕೆಲಸದಲ್ಲಿ ಖುಷಿಯನ್ನು ಅನುಭವಿಸಿ. ಮಕ್ಕಳು ಅಥವಾ ಸ್ನೇಹಿತರ ಜೊತೆಗೆ ನಿಮ್ಮ ಸಮಯವನ್ನು ಕಳೆಯಿರಿ. ಆಗ ನಿಮಗೆ ಇಂತಹ ಆಲೋಚನೆಗಳು ಹತ್ತಿರವು ಸುಳಿಯೋದಿಲ್ಲ.
ಸಮಸ್ಯೆಗಳು ಬಂದಾಗ ಕುಗ್ಗಬಾರದು ದೈರ್ಯದಿಂದ ಎದುರಿಸಬೇಕು. ಸಂಬಂಧಗಳು ಅಂದರೆ ಹಾಗೆನೇ ಏರು-ಪೇರು ಇದ್ದೇ ಇರುತ್ತದೆ. ಹಾಗೆಂದ ಮಾತ್ರಕ್ಕೆ ನಾವು ಎಲ್ಲವನ್ನೂ ಕಳೆದುಕೊಂಡವರಂತೆ ಹತಾಶರಾಗಬಾರದು, ಬದಲಾಗಿ ಹೋರಾಡಬೇಕು.



Click it and Unblock the Notifications