Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ದಾಂಪತ್ಯ ವಿಷಯದಲ್ಲಿ ಮಾತೇ ಬದುಕು ಬಂಗಾರವಾಗಿಸುವುದು, ಮೌನವಲ್ಲ!
ಎಷ್ಟೋ ದಾಂಪತ್ಯದ ಕಲಹಗಳಿಗೆ ಮುಖ್ಯ ಕಾರಣ ಏನು ಗೊತ್ತೇ, ಅವರ ಭಾವನೆಗಳನ್ನು ವ್ಯಕ್ತಪಡಿಸದೇ ಇರುವುದು, ಇವನು ಅವಳಿಗೆ ಏನೂ ಬಾಯೊಬಿಟ್ಟು ಹೇಳಲ್ಲ, ಅವಳು ಇವನಿಗೆ ಏನೂ ಹೇಳಲ್ಲ, ನಂತರ ನನ್ನ Expectation ರೀತಿ ನನ್ನ ಜೀವನ ಇಲ್ಲ ಎಂದು ಕೊರಗುವುದು, ಆ ಕೊರಗನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ನಂತರ ಚಿಕ್ಕ-ಪುಟ್ಟ ವಿಷಯಕ್ಕೆ ಸಿಡಿ ಸಿಡಿ ಅಂತ ಸಿಡುಕುತ್ತಾ ಇರುವುದು... ಇದು ಎಷ್ಟೋ ಸಂಸಾರಗಳಲ್ಲಿ ನಡೆಯುತ್ತಿರುವ ನಿತ್ಯದ ಗೋಳಾಗಿದೆ.

ಏನೂ ಬಾಯಿಬಿಟ್ಟು ಹೇಳಲ್ಲ, ನಾನು ಏಕೆ ಹೇಳಬೇಕು ನನ್ನನ್ನು
ಅವನು ಅರ್ಥ ಮಾಡಿಕೊಳ್ಳಬೇಕು ಎಂದು ಇವಳು ಭಾವಿಸಿದರೆ, ನನ್ನನ್ನು ನನ್ನ ಹೆಂಡತಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಗಂಡ ಬಯಸುತ್ತಾನೆ, ಆದರೆ ನಿಮಗೊಂದು ಕಹಿ ಸತ್ಯ ಗೊತ್ತೇ? ಈ ಪ್ರಪಂಚದಲ್ಲಿ ನಮ್ಮಷ್ಟು ನಮ್ಮನ್ನು ಅರ್ಥ ಮಾಡಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ, ನಮ್ಮನ್ನು ಸಾಕಿ ಬೆಳೆಸ ಅಪ್ಪ-ಅಮ್ಮನಿಗೆ ಕೆಲವೊಮ್ಮೆ ನಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೇ ಹೋಗುವಾಗ ಸಂಗಾತಿಯಿಂದ ಇದನ್ನು ಬಯಸುವುದು ಸರಿಯೇ?
ಸಂಬಂಧದಲ್ಲಿ ಸಂವಹನ ಮುಖ್ಯ
ಆದ್ದರಿಂದ ಸಂಬಂಧದಲ್ಲಿ ಮಾತುಕತೆ ತುಂಬಾನೇ ಮುಖ್ಯ, ಇಬ್ಬರು ಮನಸ್ಸು ಬಿಚ್ಚಿ ಮಾತನಾಡಬೇಕು, ನೀವು ಹೇಳುವ ಎಲ್ಲಾ ವಿಚಾರಗಳನ್ನು ಅವರು ಒಪ್ಪ ಬೇಕಾಗಿಲ್ಲ, ಆದರೆ ಮಾತನಾಡಬೇಕು, ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು.
ಲೈಂಗಿಕ ಆಸಕ್ತಿ ಹೇಳಿದರೆ ನನ್ನ ಬಗ್ಗೆ ತಪ್ಪಾಗಿ ಭಾವಿಸಬಹುದೇ?
ಈ ರೀತಿಯ ಅಳುಕಿನಿಂದಲೇ ಎಷ್ಟೋ ಜನ ತಮ್ಮ ಆಸೆ, ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳಲು ಹಿಂಜರಿಯುತ್ತಾರೆ, ದಾಂಪತ್ಯದಲ್ಲಿ ಲೈಂಗಿಕ ತೃಪ್ತಿ ತುಂಬಾನೇ ಮುಖ್ಯವಾಗುತ್ತೆ. ನಿಮಗೆ ನಿಮ್ಮ ಸಂಗಾತಿಯಿಂದ ನೀವು ಬಯಸಿದ ರೀತಿಯ ಸ್ಪಂದನೆ ಸಿಗದೇ ಹೋದರೆ ಬೇಸರ ಮೂಡುವುದು, ನಿಮ್ಮ ಈ ಅತೃಪ್ತಿ ಅವರ ಮೇಲೆ ಚಿಕ್ಕ ವಿಷಯಕ್ಕೆ ಕೋಪಗೊಳ್ಳುವುದು, ಅವರಿಂದ ಅಂತರ ಕಾಯ್ದುಕೊಳ್ಳುವುದು ಈ ರೀತಿಯೆಲ್ಲಾ ಹೊರಹೊಮ್ಮಬಹುದು.
ಅನೈತಿಕ ಸಂಬಂಧದ ಅಪಾಯ ಹೆಚ್ಚುವುದು
ಇನ್ನು ಪರಸ್ಪರ ಮನಸ್ಸು ಬಿಚ್ಚಿ ಮಾತನಾಡದೇ ಹೋದರೆ ಅವರು ಬಯಸಿದ ಸ್ಪಂದನೆ, ಸುಖ ನಿಮ್ಮಲ್ಲಿ ಸಿಗದೇ ಹೋದಾಗ ಅವರ ಭಾವನೆಗಳಿಗೆ ಸ್ಪಂದಿಸುವ ವ್ಯಕ್ತಿ ಸಿಕ್ಕಾಗ ಅವರತ್ತ ಆಕರ್ಷಿತರಾಗುವ ಅಪಾಯ, ಇದರಿಂದ ದಾಂಪತ್ಯ ಮುರಿದು
ಭಾವನಾತ್ಮಕವಾಗಿ ದೂರ ಇದ್ದಂತೆ ಅನಿಸುವುದು
ನಿಮ್ಮಿಬ್ಬರ ನಡುವೆ ಸಂವಹನ ಇಲ್ಲ ಅಂದರೆ ಒಂದೇ ಮನೆಯಲ್ಲಿ ಇದ್ದರೂ ಭಾವನಾತ್ಮಕವಾಗಿ ದೂರ ಇದ್ದಂತೆ ಅನಿಸುವುದು. ಸಂಸಾರದ ಬಗ್ಗೆ ಜಿಗುಪ್ಸೆ ಮೂಡಬಹುದು, ನನ್ನನ್ನು ಅರ್ಥ ಮಾಡಿಕೊಳ್ಳದ ಈ ವ್ಯಕ್ತಿ ಜೊತೆ ಏಕೆ ಬಾಳಬೇಕು ಎಂದು ಕೂಡ ಅನಿಸಬಹುದು, ಆದ್ದರಿಂದ ಸಂಸಾರದ ವಿಷಯದಲ್ಲಿ ಮೌನಗಿಂತ ಮಾತೇ ನಿಮ್ಮ ಬದುಕನ್ನು ಬಂಗಾರವಾಗಿಸುವುದು.



Click it and Unblock the Notifications
