For Quick Alerts
ALLOW NOTIFICATIONS  
For Daily Alerts

ಸೆಕ್ಸ್‌ ವೇಳೆ ಮಾಸ್ಕ್ ಧರಿಸಿದರೆ ಕೊರೊನಾ ತಡೆಗಟ್ಟಬಹುದೇ?

|

ಕೊರೊನಾವೈರಸ್‌ ಎಂಬುವುದು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ, ಲಾಕ್‌ಡೌನ್‌ ಮಾಡಿ, ಸಾಮಾಜಿಕ ಅಂತರ ಕಾಯ್ದುಕೊಂಡು ಈ ವೈರಸ್‌ ಮಟ್ಟಹಾಕುವ ಪ್ರಯತ್ನವನ್ನು ಸರ್ಕಾರ ಮಾಡಿತು. ಆದರೆ ಅದಕ್ಕೆ ಜನರು ಸರಿಯಾದ ರೀತಿಯಲ್ಲಿ ಸ್ಪಂದಿಸದೆ ಇರುವುದರ ಫಲಿತಾಂಶವೇ ಇಂದು ನಾವು ಕಾಣುತ್ತಿರುವುದು.

ಪ್ರತಿದಿನ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನೋಡಿ ದೇಶವೇ ಬೆಚ್ಚಿ ಬಿದ್ದಿದೆ. ಅದೇ ಮಹಾರಾಷ್ಟ್ರದ ನಂಟೇ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುವಂತೆ ಮಾಡಿದೆ. ಇವೆಲ್ಲದರ ನಡುವೆ ಲಾಕ್‌ಡೌನ್‌ ಮಗೀತಾ ಬಂದಿದೆ. ಜೂನ್‌ 8ರಿಂದ ಅನ್‌ಲಾಕ್‌ ಆಗಲಿದೆ, ಜನರ ಓಡಾಟ, ಕೆಲಸ ಕಾರ್ಯಗಳು ಸಹಜ ಸ್ಥಿತಿಗೆ ಮರುಳುತ್ತಾ ಇದೆ.

ಇದರಿಂದಾಗಿ ಈಗ ನಾವು ಕೊರೊನಾವೈರಸ್‌ ಹರಡದಂತೆ ತುಂಬಾ ಮುನ್ನೆಚ್ಚರಿಕೆವಹಿಸಬೇಕಾಗಿದೆ. ಹೊರಗೆ ಹೋಗುವಾಗ, ಮನೆಗೆ ಮರಳಿ ಬಂದ ಮೇಲೆ, ಮಕ್ಕಳನ್ನು ಮುಟ್ಟುವ ಮುನ್ನ ಅಷ್ಟೇ ಏಕೆ ಗಂಡ-ಹೆಂಡತಿ ಕೂಡುವಾಗಲೂ ಸಾಕಷ್ಟು ಮುನ್ನೆಚ್ಚರಿಕೆವಹಿಸದಿದ್ದರೆ ಅಪಾಯ ತಪ್ಪಿದ್ದಲ್ಲ.

ಕೊರೊನಾವೈರಸ್‌ ಹರಡುವುದನ್ನು ತಡೆಯಲು ಸೆಕ್ಸ್ ನಡೆಸುವಾಗ ಮಾಸ್ಕ್‌ ಧರಿಸುವಂತೆ ಅಧ್ಯಯನದ ವರದಿ ಹೇಳಿದೆ.

ಸೆಕ್ಸ್ ವೇಳೆ ಮಾಸ್ಕ್‌

ಸೆಕ್ಸ್ ವೇಳೆ ಮಾಸ್ಕ್‌

ಲೈಂಗಿಕ ಸಂಬಂಧಿ ರೋಗಗಳನ್ನು ತಡೆಗಟ್ಟುವ ಉದ್ದೇಶದಿಂದ ಕಾಂಡೋಮ್‌ ಧರಿಸಿ ಸೆಕ್ಸ್ ಮಾಡುವಂತೆ ತಜ್ಞರು ಸಲಹೆ ನೀಡುತ್ತಿದ್ದರು. ಇದೀಗ ಕೊರೊನಾವೈರಸ್‌ ತಡೆಗಟ್ಟಲು ಮಾಸ್ಕ್‌ ಧರಿಸುವಂತೆ ಸಲಹೆ ನೀಡಿದ್ದಾರೆ. ಹಾರ್ವಡ್ ಯೂನಿವರ್ಸಿಟಿಯು Annals of Internal Medicine ಎಂಬ ಜರ್ನಲ್‌ನಲ್ಲಿ ಈ ಕುರಿತ ವರದಿ ಪ್ರಕಟಿಸಿದೆ.

 ಲಂಡನ್‌ನಲ್ಲಿ ಹೊಸ ಕಾನೂನು ಕೂಡ ಬಂದಿದೆ

ಲಂಡನ್‌ನಲ್ಲಿ ಹೊಸ ಕಾನೂನು ಕೂಡ ಬಂದಿದೆ

ಕೊರೊನಾವೈರಸ್‌ನಿಂದ ಇಡೀ ವಿಶ್ವವೇ ನಲುಗಿ ಹೋಗಿದೆ. ಇನ್ನು ಇಂಗ್ಲೆಂಡ್‌ನಲ್ಲಿ ಗಂಡು-ಹೆಣ್ಣು ಕೂಡುವುದಕ್ಕೆ ಹೊಸ ಕಾನೂನು ಕೂಡ ಬಂದಿದೆ. ಅಲ್ಲಿ ಬೇರೆ-ಬೇರೆ ಮನೆಗಳಲ್ಲಿರುವ ಜೋಡಿ ಒಂದಾಗುವುದು ಕಾನೂನುಬಾಹಿರವಾಗಿದೆ, ಅಲ್ಲದೆ ಬೇರೆ-ಬೇರೆ ವಾಸಿಸುತ್ತಿರುವವರು ಒಂದೇ ರಾತ್ರಿ ಜೊತೆಗೆ ತಂಗುವಂತೆಯೂ ಇಲ್ಲ.

ಮಾಸ್ಕ್‌ ಏಕೆ ಧರಿಸಿಬೇಕು?

ಮಾಸ್ಕ್‌ ಏಕೆ ಧರಿಸಿಬೇಕು?

ಕೊರೊನಾವೈರಸ್‌ ಕೆಮ್ಮಿದಾಗ, ಸೀನಿದಾಗ ಹಾಗೂ ಎಂಜಲು ಮುಖಾಂತರ ಹರಡುವುದು. ಸೆಕ್ಸ್ ವೇಳೆ ಕಿಸ್‌ ಮಾಡುವುದು ಮಾಡಿದಾಗ ಸಂಗಾತಿಗೆ ಸೋಂಕು ಇದ್ದರೆ ಹರಡುವುದು. ಕೊರೊನಾವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ ಮುಖ, ಕಣ್ಣು, ಬಾಯಿ ಪಾತ್ರ ಬಹುಮುಖ್ಯವಾದದ್ದು. ಇವುಗಳ ಮೂಲಕ ವೈರಸ್‌ ದೇಹದವನ್ನು ಸೇರುತ್ತದೆ. ಇದನ್ನು ತಡೆಗಟ್ಟಲು ಮಾಸ್ಕ್‌ ಧರಿಸಬೇಕು.

ಕೊರೊನಾವೈರಸ್‌ ವೀರ್ಯ ಅಥವಾ ಜನನೇಂದ್ರೀಯ ಮೂಲಕ ಹರಡುವುದೇ?

ಕೊರೊನಾವೈರಸ್‌ ವೀರ್ಯ ಅಥವಾ ಜನನೇಂದ್ರೀಯ ಮೂಲಕ ಹರಡುವುದೇ?

ಕೊರೊನಾವೈರಸ್ ವೀರ್ಯ ಅಥವಾ ಜನನೇಂದ್ರೀಯ ಮೂಲಕ ಹರಡುತ್ತದೆ ಎನ್ನುವುದಕ್ಕೆ ಇದುವರೆಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಆದ್ದರಿಂದ ಸುರಕ್ಷಾ ಕ್ರಮಗಳ ಮೂಲಕ ಸೆಕ್ಸ್ ಮಾಡಬಹುದು ಎಂಬುವುದು ಸದ್ಯ ತಜ್ಞರ ಅಭಿಪ್ರಾಯವಾಗಿದೆ. ಈ ಕುರಿತು ಇನ್ನೂ ಹೆಚ್ಚಿನ ಅಧ್ಯಯನಗಳು ನಡೆಯುತ್ತಿವೆ.

ಯಾವಾಗ ಲೈಂಗಿಕ ಕ್ರಿಯೆ ಸುರಕ್ಷಿತವಲ್ಲ?

ಯಾವಾಗ ಲೈಂಗಿಕ ಕ್ರಿಯೆ ಸುರಕ್ಷಿತವಲ್ಲ?

ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದರೆ, ಕೆಮ್ಮು, ಸೀನು, ಜ್ವರ ಮುಂತಾದ ಕೋವಿಡ್‌ 19 ಲಕ್ಷಣಗಳು ಕಂಡು ಬಂದಾಗ ಲೈಂಗಿಕ ಕ್ರಿಯೆ ನಡೆಸುವುದು ಸೂಕ್ತವಲ್ಲ. ಈ ರೀತಿಯ ಲಕ್ಷಣಗಳು ಕಂಡು ಬಂದರೆ ಅವರು ಯಾರ ಜೊತೆ ಬೆರೆಯದೆ ಪ್ರತ್ಯೇಕವಾಗಿದ್ದು ಕೋವಿಡ್‌ 19 ಪರೀಕ್ಷೆ ಮಾಡಿಸಬೇಕು. ಈ ರೀತಿಯ ಲಕ್ಷಣಗಳು ಕಂಡು ಬಂದಾಗ ಅವರನ್ನು ಆರೈಕೆ ಮಾಡುವ ವ್ಯಕ್ತಿ ಕೂಡ ಸರ್ಜಿಕಲ್ ಮಾಸ್ಕ್ ಧರಿಸಿರಬೇಕು.

 ಲೈಂಗಿಕ ಕರ್ಯಕರ್ತೆಯರ ಜೊತೆ ಸೆಕ್ಸ್

ಲೈಂಗಿಕ ಕರ್ಯಕರ್ತೆಯರ ಜೊತೆ ಸೆಕ್ಸ್

ಕೊರೊನಾವೈರಸ್‌ ಬಾರದಂತೆ ತಡೆಯಲು ಅಪರಿಚಿತ ವ್ಯಕ್ತಿ ಅಥವಾ ಲೈಂಗಿಕ ಕಾರ್ಯಕರ್ತೆಯರ ಜೊತೆ ಸಂಪರ್ಕ ಹೊಂದುವುದು ಅಪಾಯಕಾರಿ. ಇದರಿಂದ ಸೋಂಕು ಹರಡುವ ಸಾಧ್ಯಯತೆ ಹೆಚ್ಚು.

ಯಾವ ರೀತಿಯ ಸೆಕ್ಸ್ ಸುರಕ್ಷಿತ

ಯಾವ ರೀತಿಯ ಸೆಕ್ಸ್ ಸುರಕ್ಷಿತ

ಕೋವಿಡ್‌ 19 ಬಂದಾಗಿನಿಂದ ಆನ್‌ಲೈನ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುವವರ ಸಂಖ್ಯೆ ಹೆಚ್ಚಾಗಿದೆ. ಇನ್ನು ಜನರು ಲೈಂಗಿಕ ತೃಪ್ತಿಗಾಗಿ ಸೆಕ್ಸ್‌ ಆಟಿಕೆಗಳ ಮೊರೆ ಹೋಗಿರುವುದಾಗಿ ಭಾರತದಲ್ಲಿ ಆನ್‌ಲೈನ್‌ನಲ್ಲಿ ಸೆಕ್ಸ್ ಟಾಯ್ ಮಾರುತ್ತಿರುವ ಆನ್‌ಲೈನ್‌ ಸ್ಟೋರ್‌ನ ವಕ್ತಾರರು ಹೇಳಿದ್ದಾರೆ. ಇನ್ನು ಪೋರ್ನ್‌ ಸೈಟ್‌ವೊಂದು ಕೊರೊನಾವೈರಸ್‌ ಬಂದಾಗಿನಿಂದ ಅದರ ವೀಕ್ಷಣೆ ಶೇ.11.6% ಹೆಚ್ಚಾಗಿದೆ ಎಂದು ಹೇಳಿದೆ.

ಇನ್ನು ಸಂಗಾತಿಯೊಂದಿಗೆ ಮತ್ತಷ್ಟುಆಪ್ತತೆ ಬೆಳೆಯಲು ವರ್ಚ್ಯೂಯಲ್ ಡೇಟಿಂಗ್, ಜೊತೆಗೆ ಮ್ಯೂಸಿಕ್ ಕೇಳುವುದು ಒಬ್ಬರಿಗೊಬ್ಬರು ಡ್ರೆಸ್‌ ಮಾಡಿಕೊಳ್ಳುವುದು ಇಂಥ ಐಡಿಯಾಗಳನ್ನು ಮಾಡಬಹುದು.

 ಗಮನಿಸಿ

ಗಮನಿಸಿ

ಕೊರೊನಾವೈರಸ್‌ ತಡೆಗಟ್ಟಲು ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಒಳ್ಳೆಯದು

  • ಒಬ್ಬ ಸಂಗಾತಿಯೊಂದಿಗೆ ಮಾತ್ರ ಲೈಂಗಿಕಕ್ರಿಯೆ ನಡೆಸಬೇಕು
  • ಕಿಸ್‌ ಮಾಡದಿರುವುದು ಒಳ್ಳೆಯದು
  • ಮೌಖಿಕ ಸೆಕ್ಸ್ ಸುರಕ್ಷಿತವಲ್ಲ
  • ಕಾಂಡೋಮ್ ಹಾಗೂ ಡೆಂಟಲ್ ಗಮ್‌ ಬಳಸಿ.
  • ಮಾಸ್ಕ್‌ ಕಡ್ಡಾಯವಾಗಿ ಧರಿಸಿ
  • ಸೆಕ್ಸ್ ಆಟಿಕೆ ಬಳಸುವ ಮೊದಲು ಹಾಗೂ ನಂತರ ಸ್ವಚ್ಛ ಮಾಡಿ.
  • ಸೆಕ್ಸ್ ಮಾಡುವ ಮುನ್ನ ಆಲ್ಕೋಹಾಲ್‌ ವೈಪ್ಸ್ ಅಥವಾ ಸೋಪ್‌ ಬಳಸಿ ಖಾಸಗಿ ಜಾಗ ಸ್ವಚ್ಛ ಮಾಡಿ.
English summary

Wear Face Mask During Sex To Avoid Coronavirus

After coronavirus outbreak wearing mask is become part of life. And now, this has also encroached on people’s sex life.
Story first published: Friday, June 5, 2020, 18:00 [IST]
X