For Quick Alerts
ALLOW NOTIFICATIONS  
For Daily Alerts

ಮ್ಯಾಟ್ರಿಮೋನಿಯಲ್‌ನಲ್ಲಿ ಬಾಳ ಸಂಗಾತಿ ಹುಡುಕುವುದಾದರೆ ಮೊದಲ ಡೇಟ್‌ನಲ್ಲಿಯೇ ಈ ತಪ್ಪುಗಳನ್ನು ಮಾಡಲೇಬೇಡಿ

|

ಹಿಂದೆಯೆಲ್ಲಾ ಮದುವೆ ಬ್ರೋಕರ್‌ಗಳ ಮೂಲಕ ಎಷ್ಟೋ ಮದುವೆಗಳು ನಡೆಯುತ್ತಿದ್ದೆವು, ಈಗ ಆ ಸ್ಥಾನವನ್ನು ಮ್ಯಾಟ್ರಿಮೋನಿ ಸೈಟ್‌ಗಳು ಆವರಿಸಿಕೊಂಡು ಬಿಟ್ಟಿದೆ. ಬ್ರೋಕರ್‌ ನೀಡುವ ಹಣವನ್ನು ಇಲ್ಲಿ ಹಾಕಿದರೆ ಸಾಕು ಆಪ್ಷನ್‌ಗಳು ಅಧಿಕವಿರುತ್ತದೆ, ನಮಗೆ ಇಷ್ಟವಾದ, ನಮಗೆ ಸೂಕ್ತವೆನಿಸಿದ ಬಾಳ ಸಂಗಾತಿಯನ್ನು ಆಯ್ಕೆ ಮಾಡಬಹುದು.

Things to Avoid on Matrimonial Sites Before Going

ಈ ಮ್ಯಾಟ್ರಿಮೋನಿ ಸೈಟ್ ಮೂಲಕ ಸುಂದರವಾದ ಬದುಕು ಕಟ್ಟಿಕೊಂಡವರೂ ಇದ್ದಾರೆ, ಇದರ ಮೂಲಕ ಸಂಗಾತಿಯನ್ನು ಹುಡುಕಿಕೊಂಡು ಬದುಕನ್ನು ಹಾಳು ಮಾಡಿಕೊಂಡವರೂ ಇದ್ದಾರೆ, ಮ್ಯಾಟ್ರಿಮೋನಿಯಲ್ಲಿ ಒಳ್ಳೆಯವರಷ್ಟೇ ಅಲ್ಲ, ಮೋಸ ಮಾಡುವವರೂ ಇರುತ್ತಾರೆ, ಆದ್ದರಿಂದ ಬಾಳ ಸಂಗಾತಿಯನ್ನು ಆಯ್ಕೆ ಮಾಡುವಾಗ ತುಂಬಾ ಹುಷಾರಾಗಿರಬೇಕು, ಏಕೆಂದರೆ ಬದುಕಿನ ಪ್ರಶ್ನೆ ಅಲ್ವಾ?

ನೀವು ಮ್ಯಾಟ್ರಿಮೋನಿ ಮೂಲಕ ಸಂಗಾತಿಯನ್ನು ಹುಡುಕುತ್ತಿದ್ದರೆ ಮೊದಲ ಡೇಟ್‌ನಲ್ಲಿಯೇ ಈ ರೀತಿಯ ತಪ್ಪುಗಳನ್ನು ಮಾಡಲೇಬೇಡಿ:

ಪ್ರೊಪೈಲ್ ಸ್ಪಷ್ಟವಾಗಿರಲಿ:

ಪ್ರೊಪೈಲ್ ಸ್ಪಷ್ಟವಾಗಿರಲಿ:

ಹೌದು, ಮ್ಯಾಟ್ರಿಮೋನಿಯಲ್‌ ಸೈಟ್‌ನಲ್ಲಿ ನಿಮ್ಮ ಪ್ರೊಫೈಲ್ ರಚಿಸುವಾಗ ನಿಮ್ಮೆಲ್ಲಾ ಬೇಡಿಕೆಗಳನ್ನು ಮೊದಲು ಸ್ಪಷ್ಟವಾಗಿ ನಮೂದಿಸಿ. ಅದು ಸ್ಥಳ, ಜಾತಿ, ವೃತ್ತಿ, ಯಾವುದೇ ಆಗಿರಲಿ, ಪ್ರತಿಯೊಂದರ ಬಗ್ಗೆ ಸ್ಪಷ್ಟತೆಯಿರಲಿ. ನಿಮಗೆ ಏನು ಬೇಕೋ ಅದರ ಬಗ್ಗೆಯ ಸ್ಪಷ್ಟತೆಯಿಲ್ಲದಿದ್ದರೆ, ಆ ಲಕ್ಷಾಂತರ ಜನರ ಪ್ರೊಫೈಲ್ ನೋಡಿ ನೀವು ಗೊಂದಲಕ್ಕೊಳಗಾಗಬಹದು. ಆದ್ದರಿಂದ ಎಲ್ಲವನ್ನೂ ಮೊದಲೇ ಸರಿಯಾಗಿ ನಮೂದಿಸಿ.

ಉಚಿತ ಸೇವೆ ಹುಡುಕುವುದನ್ನು ತಪ್ಪಿಸಿ:

ಉಚಿತ ಸೇವೆ ಹುಡುಕುವುದನ್ನು ತಪ್ಪಿಸಿ:

ಮದುವೆ ಒಂದು ಸುಮಧುರ ಭಾವನೆಯಾಗಿದ್ದು, ಇದಕ್ಕೆ ಉಚಿತ ಸೇವೆ ಅಥವಾ ಫ್ರೀ ಸರ್ವಿಸ್ ಕೇಳುವುದು ಸರಿಯಲ್ಲ. ಆದ್ದರಿಂದ ವಿಶ್ವಾಸಾರ್ಹ ವೆಬ್‌ಸೈಟ್‌ಗಳನ್ನ ಆರಿಸಿ, ಸಂಬಂಧಿತ ಪ್ಯಾಕೇಜ್ ಖರೀದಿಸಿ. ನಿಮಗೆ ಸಮಯ ಮತ್ತು ತಾಳ್ಮೆಯ ಕೊರತೆಯಿದ್ದರೆ, ವೈಯಕ್ತಿಕ ಪ್ರತಿನಿಧಿಯನ್ನು ಸಹ ಹುಡುಕಬಹುದು.

ಫೋಟೋ ನೋಡಿ ಮರುಳಾಗದಿರಿ:

ಫೋಟೋ ನೋಡಿ ಮರುಳಾಗದಿರಿ:

ಒಮ್ಮೆ ನೀವು ನಿಮ್ಮ ಅವಶ್ಯಕತೆಗಳ ಪ್ರಕಾರ ಪ್ರೊಫೈಲ್‌ಗಳನ್ನು ಫಿಲ್ಟರ್ ಮಾಡಿದ ನಂತರ, ಕೇವಲ ಫೋಟೋ ಅಷ್ಟೇ ನೋಡಿ ಮರುಳಾಗಬೇಡಿ, ಆ ಫ್ರೊಫೈಲ್‌ನ್ನು ಸರಿಯಾಗಿ ಪರಿಶೀಲಿಸಿ. ಫ್ರೊಫೈಲ್‌ನಲ್ಲಿ ಹಾಕಿರುವ ಫೋಟೋ ಎಷ್ಟೋ ಸಮಯ ಹಿಂದಿನದ್ದಾಗಿರಬಹುದು. ಆದ್ದರಿಂದ ಆ ಫ್ರೊಫೈಲ್ ಸರಿಯಾಗಿ ಪರಿಶೀಲಿಸಿ, ಮಾಹಿತಿಗಳು ನಿಜವೆಂದು ಅನಿಸಿದರೆ ಮಾತ್ರ ಮುಂದುವರಿಯಿರಿ. .

ಸೋಶಿಯಲ್ ಮೀಡಿಯಾ ಖಾತೆ ಪರಿಶೀಲಿಸಲು ಮರೆಯದಿರಿ:

ಸೋಶಿಯಲ್ ಮೀಡಿಯಾ ಖಾತೆ ಪರಿಶೀಲಿಸಲು ಮರೆಯದಿರಿ:

ಒಬ್ಬ ವ್ಯಕ್ತಿ ನಿಮ್ಮ ಮನವಿಯನ್ನು ಒಪ್ಪಿಕೊಂಡರೆ, ಅವರ ಸೋಶಿಯಲ್ ಮೀಡಿಯಾ ಪರಿಶೀಲಿಸುವುದನ್ನು ಮರೆಯದಿರಿ. ಅವರ ಸೋಶಿಯಲ್ ಮೀಡಿಯಾ ಖಾತೆಗಳ ಬಗ್ಗೆ ವಿಚಾರಿಸಿ, ಅವುಗಳನ್ನು ಸರಿಯಾಗಿ ನೋಡಿ. ಇದರಿಂದ ನೀವು ಮೋಸಹೋಗುವದನ್ನು ತಡೆಯಬಹುದು. ಲಿಂಕ್ಡ್‌ಇನ್ ಪ್ರಾರಂಭಿಸಲು ಉತ್ತಮ ಸ್ಥಳವಾಗಿದೆ.

ನಿಮ್ಮ ಕುರಿತು ಹೆಚ್ಚು ಮಾಹಿತಿ ನೀಡಲೇಬೇಡಿ

ನಿಮ್ಮ ಕುರಿತು ಹೆಚ್ಚು ಮಾಹಿತಿ ನೀಡಲೇಬೇಡಿ

'ನಿರಂತರ ಎಚ್ಚರವಾಗಿರಿ' ಎಂಬುದು ಆನ್‌ಲೈನ್ ಮ್ಯಾಟ್ರಿಮೋನಿಯಲ್ ಜಗತ್ತಿನಲ್ಲಿ ಹೆಚ್ಚು ಪ್ರಸಿದ್ಧಿ ಆಗಿದೆ. ಅನುಭವಿ ಸ್ಕ್ಯಾಮರ್ ಕೆಲವೇ ಫೋನ್ ಕರೆಗಳಲ್ಲಿ ಪ್ರಮುಖ ಮಾಹಿತಿಯನ್ನು ಸಂಗ್ರಹಿಸಬಹುದು. ಆದ್ದರಿಂದ ಯಾರಿಗೂ ಹೆಚ್ಚಿನ ಮಾಹಿತಿ ನೀಡಬೇಡಿ, ಮುಖ್ಯವಾಗಿ ನಿಮ್ಮ ಸಾಮಾನ್ಯ ಇಮೇಲ್ ಐಡಿಯನ್ನು ಬಳಸಬೇಡಿ ಅಥವಾ ಹಂಚಿಕೊಳ್ಳಬೇಡಿ. ಈ ವರ ಅಥವಾ ವಧು ಹುಡುಕಾಟದ ಉದ್ದಕ್ಕೂ ಪ್ರತ್ಯೇಕ ಇಮೇಲ್ ಖಾತೆಯನ್ನು ರಚಿಸುವುದು ಮತ್ತು ನಿರ್ವಹಿಸುವುದು ಉತ್ತಮವಾಗಿದೆ.

ಸಾಲ ಕೊಡಬೇಡಿ:

ಸಾಲ ಕೊಡಬೇಡಿ:

ಇದು ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕಾದ ವಿಚಾರ. ಒಮ್ಮೆ ಪರಿಚಯವಾದ ಬಳಿಕ, ಅವರು ಭಾವನಾತ್ಮಕವಾಗಿ ಮಾತನಾಡಿದರೂ ಅವರಿಗೆ ಸಾಲ ಅಥವಾ ಹಣ ಕೊಡುವ ಸಾಹಸಕ್ಕೆ ಹೋಗಬೇಡಿ. ಅವರ ಕಥೆಯು ಎಷ್ಟೇ ದುಃಖಕರವಾಗಿದ್ದರೂ, ಅವರ ಮೇಲೆ ನಂಬಿಕೆ ಬರುವವರೆಗೂ ಹಣದ ವಿಚಾರದಲ್ಲಿ ಮುಂದುವರಿಯಬೇಡಿ.

ಅಪರಿಚಿತ ಸ್ಥಳಗಳಲ್ಲಿ ಭೇಟಿಗೆ ಹೋಗಬೇಡಿ

ಅಪರಿಚಿತ ಸ್ಥಳಗಳಲ್ಲಿ ಭೇಟಿಗೆ ಹೋಗಬೇಡಿ

ಯಾವುದೇ ಸಂದರ್ಭದಲ್ಲಿ, ಅಜ್ಞಾತ ಸ್ಥಳದಲ್ಲಿ ಭೇಟಿಯಾಗಲು ಒಪ್ಪಿಕೊಳ್ಳಬೇಡಿ. ಮೊದಲ ಭೇಟಿಯ ವಿವರಗಳನ್ನು ಎರಡೂ ಕುಟುಂಬಗಳು ತಿಳಿದಿರಬೇಕು ಮತ್ತು ಅನುಮೋದಿಸಬೇಕು. ಸ್ನೇಹಿತನನ್ನು ಕರೆದುಕೊಂಡು ಹೋಗಿ ಅಥವಾ ನಿಮ್ಮ ಲೈವ್ ಸ್ಥಳವನ್ನು ಅವರೊಂದಿಗೆ ಹಂಚಿಕೊಳ್ಳಿ. ನೀವು ಸುರಕ್ಷಿತವಾಗಿರುವುದು ಉತ್ತಮ. ಆದ್ದರಿಂದ ಯಾವುದೇ ಕಾರಣಕ್ಕೂ ರಹಸ್ಯ ಅಥವಾ ಖಾಸಗಿಯಾಗಿ ಭೇಟಿಯಾಗಲು ಒಪ್ಪಿಗೆ ಕೊಡಬೇಡಿ. ಏಕೆಂದರೆ ವ್ಯಕ್ತಿಯ ಬಗ್ಗೆ ನಿಮಗೆ ಏನೂ ತಿಳಿದಿರುವುದಿಲ್ಲ.

English summary

Things to Avoid on Matrimonial Sites Before Going on That First Meeting in kannada

Here we talking about Things to Avoid on Matrimonial Sites Before Going on That First Meeting in kannada, read on
X
Desktop Bottom Promotion