Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಕುಳ್ಳಗಿರುವ ಪತ್ನಿ ಮತ್ತು ಉದ್ದಗಿರುವ ಪತಿ ವೈಜ್ಞಾನಿಕವಾಗಿ ಅತ್ಯುತ್ತಮ ಜೋಡಿ
ಬಾಲಿವುಡ್ ನ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ನಟಿಸಿದ್ದ ಲಾವಾರಿಸ್ ಸಿನಿಮಾದಲ್ಲಿ ಹಾಡೊಂದರಲ್ಲಿ ಜಿಸ್ಕಿ ಬೀವಿ ಛೋಟಿ ಹೋ, ಉಸ್ಕಾ ಬಿ ಬಡಾ ನಾಮ್...ಎನ್ನುವ ಸಾಲೊಂದು ಬಂದಿತ್ತು. ಈ ಹಾಡಿನಲ್ಲಿ ಪ್ರತಿಯೊಬ್ಬರ ಪತ್ನಿಯು ಯಾವ ರೀತಿಯಲ್ಲಿ ಇದ್ದರೆ ಅವರಿಗೆ ಯಾವೆಲ್ಲಾ ಲಾಭಗಳು ಇದೆ ಎಂದು ಸುಂದರವಾಗಿ ವಿವರಿಸಲಾಗಿತ್ತು. ಆದರೆ ಕುಳ್ಳ ದೇಹದ ಪತ್ನಿಯಿದ್ದರೆ ಅದು ವೈಜ್ಞಾನಿಕವಾಗಿ ಅತ್ಯುತ್ತಮ ಜೋಡಿ ಎಂದು ಸಂಶೋಧನೆಗಳು ಪತ್ತೆ ಮಾಡಿವೆ.

ಉದ್ದಗೆ ಇರುವಂತಹ ಪುರುಷರು ಹೆಚ್ಚಾಗಿ ತಮಗಿಂತ ಸ್ವಲ್ಪ ಉದ್ದ ಕಡಿಮೆ ಇರುವಂತಹ ಪತ್ನಿ ಬೇಕು ಎಂದು ಬಯಸುವರು. ಆದರೆ ನಿಜವಾಗಿಯೂ ಉದ್ದ ಪುರುಷರಿಗೆ ಕುಳ್ಳಗಿರುವ ಪತ್ನಿ ಇದ್ದರೆ ಆಗ ಅತ್ಯುತ್ತಮ ಸಂಬಂಧ ಮತ್ತು ಮದುವೆಯು ಯಶಸ್ವಿಯಾಗುವುದು ಎಂದು ಅಧ್ಯಯನಗಳು ಕಂಡುಕೊಂಡಿವೆ. ಕುಳ್ಳಗಿರುವ ಪತ್ನಿ ಹಾಗೂ ಉದ್ದ ಪತಿ ಇರುವಂತಹ ಮದುವೆಯು ಹೆಚ್ಚು ಯಶಸ್ವಿಯಾಗುವುದು ಎಂದು ಹೇಳಲಾಗಿದೆ, ಅಲ್ಲದೇ, ಉದ್ದಗಿನ ಪುರುಷರ ಕುಳ್ಳಗಿರುವ ಪತ್ನಿಯರು ಹೆಚ್ಚು ಸಂತೋಷವಾಗಿರುವರು ಎಂದು ಕೂಡ ಈ ಅಧ್ಯಯನವು ಹೇಳಿವೆ.

ಕುಳ್ಳಗಿರುವ ಪತ್ನಿಯ ಬೇಡಿಕೆಗಳನ್ನು ಇಚ್ಚೆಯಿಂದ ಪುರುಷರು ಈಡೇರಿಸುವರು
ಲೈಂಗಿಕ ಸಂಬಂಧದ ವಿಚಾರಕ್ಕೆ ಬಂದರೆ ಎತ್ತರದಲ್ಲಿ ವ್ಯತ್ಯಾಸವಿರುವ ದಂಪತಿಗಳು ತುಂಬಾ ಸಂತೋಷದ ಸಂಬಂಧವನ್ನು ಹೊಂದಿರುವರು. ಉದ್ದದಲ್ಲಿ ಹೆಚ್ಚು ವ್ಯತ್ಯಾಸವಿಲ್ಲದೆ ಇರುವಂತಹ ದಂಪತಿಗೆ ಈ ಅಧ್ಯಯನವು ನಿರಾಶೆ ತಂದಿದೆ. ಆದರೆ ಇದು ವಿಶ್ವಾದ್ಯಂತ ಅಥವಾ ಎಲ್ಲಾ ದಂಪತಿಯ ವಿಷಯಗದಲ್ಲೂ ಹೀಗೆ ಆಗಬೇಕು ಎಂದೇನಿಲ್ಲ ಎಂದು ಸಹ ಅಧ್ಯಯನ ತಿಳಿಸಿದೆ.

ಸಂತೋಷಕ್ಕೆ ದಾರಿ
ಪುರುಷರು ಹೆಚ್ಚಿನ ಪರಿಸ್ಥಿತಿಯಲ್ಲಿ ನಿಯಂತ್ರಣ ಸಾಧಿಸಲು ಪ್ರಯತ್ನಿಸುವರು, ಜಬಾವ್ದಾರಿ ತೆಗೆದುಕೊಳ್ಳುವರು ಇದರಿಂದ ಪತ್ನಿಯು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಹುಡುಗಿಯ ಪತಿಯು ಹೆಚ್ಚು ಉದ್ದ ಇದ್ದರೆ ಆಗ ಆಕೆಯ ಜೀವನವು ಸಂತೋಷವಾಗಿರುವುದು ಮತ್ತು ಇತರ ಸಾಮಾನ್ಯ ಹುಡುಗಿಯರಿಗಿಂತ ಉತ್ತಮವಾಗಿರುವುದು.

ಉದ್ದಗಿನ ಪುರುಷರನ್ನು ಮಹಿಳೆಯರು ಇಷ್ಟಪಡುವರು
ಪತಿ ಮತ್ತು ಪತ್ನಿ ನಡುವಿನ ಉದ್ದದ ಅಂತರವು ಆ ದಂಪತಿಯ ಸಂತೋಷದ ಮೇಲೆ ತುಂಬಾ ಧನಾತ್ಮಕ ಪರಿಣಾಮ ಬೀರುವುದು. ಅಚ್ಚರಿಯೆಂದರೆ ಕುಳ್ಳಗಿರುವ ಹುಡುಗಿಯರು ಉದ್ದನೆಯ ಹುಡುಗರನ್ನು ಹೆಚ್ಚು ಇಷ್ಟಪಡುತ್ತಾರಂತೆ, ಹುಡುಗರ ವಿಚಾರದಲ್ಲೂ ಇದು ಸತ್ಯ ಎಂದು ಸಂಶೋಧನೆ ತಿಳಿಸುತ್ತದೆ. ಕೆಲವು ವಿಚಾರಗಳನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟವಾಗಿರುವುದು, ಆದರೆ ಇದನ್ನು ನಂಬಲೇಬೇಕು.

ಪುರುಷರಿಗೆ ಹೆಚ್ಚು ಪುರುಷತ್ವದ ಭಾವನೆಯಾಗುವುದು
ಕುಳ್ಳಗಿರುವಂತಹ ಮಹಿಳೆಯರು ಉದ್ದಗಿನ ಪುರುಷರು ರಕ್ಷಿಸುವರು ಎನ್ನುವಂತಹ ಭಾವನೆ ಅವರಲ್ಲಿ ಮೂಡಿರುವುದು. ಕುಳ್ಳಗಿರುವಂತಹ ಮಹಿಳೆಯರು ಯಾವಾಗಲೂ ತುಂಬಾ ಸುಂದರ ಹಾಗೂ ಮುಗ್ದರಂತೆ ಕಾಣಿಸುವ ಕಾರಣದಿಂದಾಗಿ ಅವರನ್ನು ಸಂಗಾತಿಯು ರಕ್ಷಿಸುವರು. ಮಹಿಳೆಯ ಎತ್ತರ ಯಾವಾಗಲೂ ಪುರುಷರನ್ನು ಆಕರ್ಷಿಸುವುದು, ಆಕೆಯ ಎತ್ತರಿದಂದಲೇ ಎಲ್ಲಾ ಪುರುಷರು ತಮ್ಮ ಪ್ರೀತಿಯನ್ನು ರಕ್ಷಿಸಲು ಬಯಸುವರು. ಎತ್ತರ ಕಡಿಮೆ ಇರುವ ಮಹಿಳೆಯರು ತುಂಬಾ ರಕ್ಷಣಾತ್ಮಕ ಹಾಗೂ ಆಕ್ರಮಣಕಾರಿ ಸಹ ಆಗಿರುವರು.

ಅಪ್ಪಿಕೊಳ್ಳುವುದು ಇನ್ನಷ್ಟು ಖುಷಿ ಕೊಡುವುದು
ಹೆಚ್ಚು ಉದ್ದ ಇಲ್ಲದೆ ಇರುವಂತಹ ಮಹಿಳೆಯರನ್ನು ಪುರುಷರು ಅಪ್ಪಿಕೊಳ್ಳಲು ಇಷ್ಟಪಡುವರು. ಪುರುಷರು ತಮ್ಮ ಸಂಗಾತಿಯನ್ನು ಅಪ್ಪಿಕೊಳ್ಳುವ ವೇಳೆ ಆಕೆಯ ತಲೆಯು ತಮ್ಮ ಗಲ್ಲಕ್ಕೆ ತಾಗುವುದನ್ನು ಇಷ್ಟಪಡುವರು. ಎದೆಯ ಮೇಲೆ ಸಂಗಾತಿ ಕೆನ್ನೆಯು ತಾಗುತ್ತಿರುವಂತೆ ತಮ್ಮ ಗಲ್ಲವು ಸಂಗಾತಿಯ ತಲೆಯ ಮೇಲೆ ಇರಬೇಕು ಎಂದು ಉದ್ದಗಿನ ಪುರುಷರು ಬಯಸುವರು. ಇದರಿಂದಾಗಿ ಪುರುಷರು ಸಂತೋಷವಾಗಿರುವರು ಮತ್ತು ಇದರ ಪರಿಣಾಮವಾಗಿ ಸಂಬಂಧವು ಯಶಸ್ವಿಯಾಗುವುದು.

ಕುಳ್ಳಗಿರುವ ಪತ್ನಿಯನ್ನು ಎತ್ತಿಕೊಳ್ಳಲು ಇಷ್ಟಪಡುವ ಪತಿ
ಕುಳ್ಳಗಿರುವ ಹುಡುಗಿಯರು ನಿಮಗೆ ಬೇಕಾದಂತೆ ತುಂಬಾ ಸುಲಭವಾಗಿ ಒಂದು ಕಡೆಯಿಂದ ಮತ್ತೊಂದೆಡೆಗೆ ಸಾಗಿಸಬಹುದು. ಅತಿಯಾದ ಎತ್ತರವಿಲ್ಲದ ಹುಡುಗಿಯು ಪುರುಷರಿಗೆ ಯಾವಾಗಲೂ ಒಂದು ಗೊಂಬೆಯಿದ್ದಂತೆ, ಇವರು ಸಣ್ಣ ಜಾಗದಲ್ಲೂ ಹೊಂದಿಕೊಳ್ಳಬಲ್ಲರು.

ಪತ್ನಿಯ ಕೆಲಸಕ್ಕೆ ಪತಿ ಜತೆಯಾಗಬಹುದು
ಪತ್ನಿ ತುಂಬಾ ಕುಳ್ಳಗೆ ಇದ್ದರೆ ಆಗ ಮನೆಯಲ್ಲಿ ಪ್ರತಿ ಕೆಲಸದಲ್ಲಿ ಪುರುಷರು ಕೈ ಜತೆಯಾಗುವರು. ಎತ್ತರದಲ್ಲಿ ಇಟ್ಟಿರುವಂತಹ ಸಾಮಾನುಗಳನ್ನು ತೆಗೆಯಲು ಪತಿ ನೆರವಾಗುವನು. ಇದರಿಂದಾಗಿ ಪತಿ-ಪತ್ನಿ ಪರಸ್ಪರ ಜತೆಯಾಗುವಿಕೆ, ಅರ್ಥೈಸುವಿಕೆಗೆ ಸಹಕಾರಿ, ಪುರುಷರ ಮನಸ್ಥಿತಿಯು ಉತ್ತಮವಾಗಿರುವುದು ಮತ್ತು ಸಂಬಂಧವು ಆರೋಗ್ಯವಾಗಿರುವುದು.

ಕುಳ್ಳಗಿರುವ ಮಹಿಳೆಯರ ಕೋಪವು ಚೆನ್ನಾಗಿ ಕಾಣಿಸುವುದು
ಕೋಪವನ್ನು ಯಾರಾದರೂ ಧನಾತ್ಮಕ ರೀತಿಯಿಂದ ಪರಿಗಣಿಸಿದ್ದೀರಾ? ಕುಳ್ಳಗಿರುವ ಮಹಿಳೆಯರಿಗೆ ಕೋಪ ಬಂದ ವೇಳೆ ಅವರು ತುಂಬಾ ಸುಂದರವಾಗಿ ಕಾಣಿಸುವರು. ಇದರಿಂದ ಪುರುಷರು ಹುಚ್ಚರಂತೆ ಅವರ ಕಡೆಗೆ ಆಕರ್ಷಿತರಾಗುವರು.

ಗೊಂಬೆಯನ್ನು ಮುದ್ದಾಡಿದಂತೆ
ಕುಳ್ಳಗಿರುವ ಮಹಿಳೆಯರನ್ನು ಮುದ್ದಾಡುವುದು ತುಂಬಾ ಒಳ್ಳೆಯದು ಮತ್ತು ಅವರ ಅಪ್ಪುಗೆ ಹೆಚ್ಚು ಬಿಸಿಯಾಗಿರುವುದು! ಮುದ್ದಾಡುವುದರಿಂದಾಗಿ ಒತ್ತಡವು ನಿವಾರಣೆ ಆಗುವುದು ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ ಮತ್ತು ಇದರಿಂದ ನಿದ್ರೆಯು ಚೆನ್ನಾಗಿ ಆಗುವುದು. ಜೀವಂತ, ಉಸಿರಾಡುವ ಜೀವವು ಜತೆಗೆ ಇರುವಾಗ ಗೊಂಬೆ ಯಾಕೆ ಬೇಕು ಹೇಳಿ.

ತಲೆಯೆತ್ತಿ ನೋಡುವಳು
ಸಂಗಾತಿಯು ತಮ್ಮನ್ನು ತಲೆ ಎತ್ತಿ ನೋಡಬೇಕು ಎಂದು ಯಾರು ತಾನೇ ಬಯಸುವುದಿಲ್ಲ ಹೇಳಿ. ಪತ್ನಿಯು ಕುಳ್ಳಗಿದ್ದರೆ ಆಗ ಆಕೆ ತಲೆಯೆತ್ತಿ ನಿಮ್ಮನ್ನು ನೋಡುವಳು, ಇದರಿಂದ ಪುರುಷರ ಅಹಂಗೆ ಬಲ ಬರುವುದು. ಉದ್ದನೆಯ ಪತ್ನಿ ಇದ್ದರೆ ಪುರುಷನಿಗೆ ಕೀಳರಿಮೆ ಸಹ ಕಾಡಬಹುದು ಎಂದು ಸಂಶೋಧನೆ ತಿಳಿಸಿದೆ. ಇಂತಹ ಸಣ್ಣಪುಟ್ಟ ಅಂಶಗಳು ಸಹ ಪತಿ-ಪತ್ನಿಯ ಸುಖಕರ ವೈವಾಹಿಕ ಜೀವನಕ್ಕೆ ಕಾರಣಗಳಾಗುತ್ತದೆ.



Click it and Unblock the Notifications