For Quick Alerts
ALLOW NOTIFICATIONS  
For Daily Alerts

ಪತ್ನಿ ದಿನಾ ಮ್ಯಾಗಿ ಕೊಡ್ತಾಳೆ ಅಂತ ವಿಚ್ಚೇದನ ಪಡೆದ ಪತಿ! ನಮ್ಮ ಕರ್ನಾಟಕದಲ್ಲಿ ನಡೆದಿರುವ ಪ್ರಕರಣವಿದು

|

ಏನೆಲ್ಲಾ ಕಾರಣಕ್ಕೆ ವಿಚ್ಛೇದನ ಪಡೆದವರನ್ನು ನೋಡಿರುತ್ತಿರಿ, ಆದರೆ ಮ್ಯಾಗಿ ಕಾರಣದಿಂದಾಗಿ ವಿಚ್ಚೇದನ ನಡೆದಿರುವುದನ್ನು ನೋಡಿದ್ದೀರಾ, ಕೇಳಿದ್ದೀರಾ? ಹೌದು ಅಂಥದ್ದೊಂದು ಪ್ರಕರಣ ನಡೆದಿದ್ದು ಈ ಸುದ್ದಿ ಸಕತ್‌ ವೈರಲ್‌ ಆಗುತ್ತಿದೆ.

ಅಡುಗೆ ಮಾಡಲು ಬೇಸರವೆಂದು ಹೆಚ್ಚಾಗಿ ಮ್ಯಾಗಿ ಮಾಡುವ ಪತ್ನಿಯರೇ ಹಾಗೆ ಮಾಡಲೇಬೇಡಿ ... ಸಂಸಾರಕ್ಕೆ ಕುತ್ತು ಉಂಟಾಗಬಹುದು ಹುಷಾರ್!

 ಹಾಗಂತ ಈ ಪ್ರಕರಣ ಬೇರೆಲ್ಲೋ ದೂರ ನಡೆದಿಲ್ಲ

ಹಾಗಂತ ಈ ಪ್ರಕರಣ ಬೇರೆಲ್ಲೋ ದೂರ ನಡೆದಿಲ್ಲ

ಹೌದು ಮ್ಯಾಗಿ ಮಾಡಿ ಕೊಟ್ಟ ಕಾರಣಕ್ಕೆ ವಿಚ್ಛೇದನ ನಡೆದಿರುವುದು ಬೇರೆ ಯಾವುದೋ ರಾಜ್ಯದಲ್ಲಿ ಅಲ್ಲ, ನಮ್ಮ ಕರ್ನಾಟಕದಲ್ಲಿಯೇ ಅದೂ ಬಳ್ಳಾರಿಯಲ್ಲಿ. ಕೌಟಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಎಂ ಎಲ್‌ ರಘುನಾಥ್‌ ಈ ಕುರಿತು ತಿಳಿಸಿದ್ದಾರೆ.

 ಪಾಪ ಬ್ರೇಕ್‌ಫಾಸ್ಟ್, ಲಂಚ್‌, ಡಿನ್ನರ್‌ ಎಲ್ಲಾ ಮ್ಯಾಗಿನೇ ತಿನ್ನಬೇಕಿತ್ತು

ಪಾಪ ಬ್ರೇಕ್‌ಫಾಸ್ಟ್, ಲಂಚ್‌, ಡಿನ್ನರ್‌ ಎಲ್ಲಾ ಮ್ಯಾಗಿನೇ ತಿನ್ನಬೇಕಿತ್ತು

ಈತನ ಹೆಂಡತಿ ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ಮ್ಯಾಗಿ ನೂಡಲ್ಸ್, ಮಧ್ಯಾಹ್ನ ಲಂಚ್‌ಗೆ ಬಂದಾಗ ಮ್ಯಾಗಿ ಅಥವಾ ನೂಡಲ್ಸ್, ರಾತ್ರಿಯೂಟದಲ್ಲಿ ಪುನಃ ಅದನ್ನೇ ಮಾಡಿ ಬಡಿಸುತ್ತಿದ್ದಳಂತೆ ಈ ಕಾರಣಕ್ಕೆ ಬೇಸತ್ತು ಆಕೆಯಿಂದಲೇ ವಿಚ್ಚೇದನ ಪಡೆದಿದ್ದಾನೆ.

ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ

ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ

ಪರಸ್ಪರ ಒಪ್ಪಿ ವಿಚ್ಛೇದನ ಪಡೆದು ಈ ಜೋಡಿ ದೂರಾಗಿದ್ದಾರೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ವಿಚ್ಚೇದನ ಕೇಸ್‌ಗಳು ಹೆಚ್ಚಾಗುತ್ತಿವೆ. ಕೆಲವು ಜೋಡಿಗಳನ್ನು ಮತ್ತೆ ಒಂದು ಮಾಡಲು ಸಾಧ್ಯವಾಗುವುದು ಆದರೆ ಇನ್ನು ಕೆಲವರು ಮಾನಸಿಕವಾಗಿ ತುಂಬಾ ಅಗಲಿರುತ್ತಾರೆ. ವಿಚ್ಛೇದನಕ್ಕೆ ಅರ್ಜಿ ಹಾಕುವ ಮುನ್ನ ಜೋಡಿ ಕೊನೇಪಕ್ಷ ಒಂದು ವರ್ಷವಾದರೂ ಜೊತೆಗೆ ಬಾಳಿರಬೇಕು ಎಂಬ ಕಾನೂನು ಇದೆ, ಇಲ್ಲದಿದ್ದರೆ ಕೆಲವರೇ ಮದುವೆ ಮುಗಿದ ಮರುಕ್ಷಣ ಮಂಟಪದಿಂದಲೇ ಅರ್ಜಿ ಹಾಕುವ ಪ್ರಕರಣವೂ ಇರ್ತಾ ಇತ್ತು ಎಂದು ಹೇಳಿದ್ದಾರೆ.

ಚಿಕ್ಕ ಕಾರಣಕ್ಕೆ ಒಡೆಯುತ್ತಿದೆ ಸಂಸಾರ

ಚಿಕ್ಕ ಕಾರಣಕ್ಕೆ ಒಡೆಯುತ್ತಿದೆ ಸಂಸಾರ

ಈ ಮ್ಯಾಗಿ ಕತೆಯಂತೆ ವಿಚ್ಛೇದನ ಪಡೆಯುತ್ತಿರುವ ಎಷ್ಟೋ ಜೋಡಿಗಳು ತುಂಬಾ ಸಿಲ್ಲಿ ಕಾರಣಕ್ಕೆ ಬೇರೆಯಾಗುತ್ತಿದ್ದಾರೆ. ಈ ಕೇಸ್‌ನಲ್ಲಿಯೇ ನೋಡಿ ಅವಳಿಗೆ ಅಡುಗೆ ಬರಲ್ಲ ಎಂದು ಮ್ಯಾಗಿ ಮಾಡಿದ್ದರೆ ಯಾವತ್ತೂ ಅದನ್ನೇ ಮಾಡ್ತಾ ಇರ್ತಾ ಇರಲಿಲ್ಲ, ಬೇರೆ ಅಡುಗೆ ಕಲಿಯುವ ಪ್ರಯತ್ನ ಮಾಡುತ್ತಿದ್ದಳು.

ಹೆಂಡತಿ ಎಂದರೆ ಏನು ಅಡುಗೆ ಮಾಡಿ ಹಾಕುವುದಕ್ಕಾ ಎಂದು ಪ್ರಶ್ನಿಸುವವರೂ ಇದ್ದಾರೆ, ಆದರೆ ಈ ಸಮಾಜದಲ್ಲಿ ಕೆಲವೊಂದು ಕರ್ತವ್ಯಗಳು ಹೆಣ್ಣು-ಗಂಡಿಗೆ ಪ್ರತ್ಯೇಕವಾಗಿಯೇ ಇದೆ, ಅದು ರೂಲ್ಸ್ ಅಲ್ಲ ಕರ್ತವ್ಯ ಅಂತ ಭಾವಿಸಬೇಕು, ಅವಳಿಗೆ ಅವನ ಮೇಲೆ ಪ್ರೀತಿ ಇದ್ದಿದ್ದರೆ ಗಂಡನಿಗೆ ಇಷ್ಟವಾಗುತ್ತಿಲ್ಲ ಎಂದು ಬದಲಾಗಲು ಪ್ರಯತ್ನಿಸುತ್ತಿದ್ದಳು. ಪ್ರೀತಿಯೇ ಇಲ್ಲದ ಮೇಲೆ ಏನೂ ಮಾತನಾಡಿ ಪ್ರಯೋಜನವಿಲ್ಲ, ಅಲ್ವಾ?

English summary

Maggi Divorce Case: Man Filed For Divorce After Wife Gave Him Maggi for all Meals

Maggi Divorce Case: Man filed for Divorce after Wife gave him maggi for all meals...
Story first published: Tuesday, May 31, 2022, 18:40 [IST]
X
Desktop Bottom Promotion