Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಸಂಗಾತಿಯ ಮೋಸ ನೆನೆದು ನೋವು ಪಡುವುದಕ್ಕಿಂತ ಹೀಗೆ ಮಾಡುವುದೇ ವಾಸಿ
ನಾವು ನಿಂತಿರುವ ನೆಲ ಇದ್ದಕ್ಕಿದ್ದಂತೆ ನಡುಗಲಾರಂಭಿಸಿದರೆ ಎಲ್ಲಿಗೆ ಓಡುವುದು, ಏನು ಮಾಡುವುದು ಎಂದು ದಿಕ್ಕೇ ತೋಚುವುದಿಲ್ಲ ಅಲ್ವಾ? ಅದೇ ರೀತಿ ವೈವಾಹಿಕ ಜೀವನದಲ್ಲಿ ಸಂಗಾತಿ ಮೋಸ ಮಾಡಿದರೆ ದಿಕ್ಕೇ ತೋಚಲ್ಲ.

ಅಷ್ಟೊಂದು ನಂಬಿದ, ನಾನು ಅಷ್ಟೊಂದು ಪ್ರೀತಿಸುತ್ತಿರುವ ವ್ಯಕ್ತಿ ನನಗೆ ಮೋಸ ಮಾಡುತ್ತಾರಾ? ಎಂದು ಒಂದು ಕ್ಷಣ ಅನಿಸಿ ನಾನು ಕೇಳಿದ್ದು, ಕಂಡದ್ದು ಎಲ್ಲಾ ಸುಳ್ಳಾಗಲಿ ದೇವರೇ ಎಂದು ಪ್ರಾರ್ಥಿಸುತ್ತೇವೆ.
ಆದರೆ ಕಟು ಸತ್ಯ ಒಪ್ಪಿಕೊಳ್ಳಲೇಬೇಕಾಗುತ್ತದೆ, ನನ್ನವನು/ನನ್ನವಳು ನನಗೆ ಮೋಸ ಮಾಡಿ ಬೇರೆ ಕಡೆ ಆಕರ್ಷಿತರಾಗಿದ್ದಾನೆ/ಳೆ ಎಂದು ತಿಳಿದಾಗ ಮನಸ್ಸಿಗೆ ನೋವು ಎನ್ನುವುದಕ್ಕಿಂತ ದೊಡ್ಡ ಆಘಾತವೇ ಉಂಟಾಗುವುದು. ಬೇರೆ ವ್ಯಕ್ತಿಗಾಗಿ ನನ್ನ ಬಿಟ್ಟು ಹೋಗುತ್ತಾರಾ?
ನನ್ನ ಸಂಸಾರದಿಂದ ಆ ವ್ಯಕ್ತಿ ದೂರಾಗುತ್ತಾರಾ ಎಂದು ನೆನಸಿಕೊಂಡಷ್ಟು ತುಂಬಾನೇ ಭಯಾನಕ ಅನಿಸುವುದು. ಇನ್ನು ಯಾರಿಗೋಸ್ಕರ ಬದುಕಬೇಕು? ಹೇಗೆ ಬದುಕಬೇಕು? ನನ್ನ ಬದುಕಿಗೆ ಅರ್ಥವೇನು ಎಂದೆಲ್ಲಾ ಅನಿಸಲಾರಂಭಿಸುತ್ತದೆ. ಕೆಲವರು ಈ ಕಾರಣಕ್ಕೆ ಖಿನ್ನತೆಗೆ ಜಾರುತ್ತಾರೆ.
ಆದರೆ ಒಂದು ವಿಷಯ ನೆನಪಿಟ್ಟುಕೊಳ್ಳಿ ನೀವು ಕುಗ್ಗಿದಷ್ಟೂ ನಿಮ್ಮನ್ನು ಬಿಟ್ಟು ಹೋದ, ನಿಮಗೆ ಮೋಸ ಮಾಡಿದ ವ್ಯಕ್ತಿ ಅವರು ಮಾಡಿದ್ದು ಎಂದು ಸರಿ ಅನಿಸುವುದು.
ಅದರ ಬದಲಿಗೆ ನಿಮ್ಮತ್ತ ನೀವು ಗಮನ ನೀಡಿ, ಈ ಟಿಪ್ಸ್ ನಿಮ್ಮ ನೋವು ಮರೆಯಲು ಹಾಗೂ ಆತ್ಮವಿಶ್ವಾಸ ಹೆಚ್ಚಲು ಸಹಕಾರಿಯಾದೀತು ನೋಡಿ:

ನಿಮ್ಮನ್ನು ಪ್ರೀತಿಸಿ
ನಿಮ್ಮನ್ನು ನೀವು ಪ್ರೀತಿಸಿ, ಕಳೆದ ಹೋದ ಬಗ್ಗೆ ಚಿಂತೆ ಮಾಡದೆ ಭವಿಷ್ಯ ಬಗ್ಗೆ ಚಿಂತಿಸಿ, ಏನು ಮಾಡಬೇಕೆಂದು ಆಲೋಚಿಸಿ, ನಿಮ್ಮಲ್ಲಿ ಒಂದು ಬಗೆಯ ಆತ್ಮವಿಶ್ವಾಸ ಮೂಡುತ್ತದೆ. ಇಷ್ಟು ಆ ವ್ಯಕ್ತಿಗಾಗಿ ನಿಮ್ಮ ಎಷ್ಟೋ ಖುಷಿಗಳನ್ನು ಮರೆತಿರುತ್ತೀರಿ. ಈಗ ಅವುಗಳನ್ನು ನೆನಪಿಸಿಕೊಂಡು ನಿಮ್ಮ ಖುಷಿಯಾಗುವಂತೆ ಬದುಕಿ.
ಯಾರು ಏನು ಹೇಳುತ್ತಾರೆ ಎಂಬ ಚಿಂತೆ ಬಿಡಿ, ನಿಮಗೆ ಖುಷಿಯಾಗುವಂತೆ ಬದುಕಿ.

ನಿಮ್ಮ ಆರೈಕೆ ಕಡೆ ಗಮನ ನೀಡಿ
ನಿಮ್ಮ ಶರೀರ ಹಾಗೂ ಮನಸ್ಸು ಎರಡೂ ಕಹಿ ಘಟನೆಗಳಿಂದ ಬಳಲಿರುತ್ತದೆ. ಆದ್ದರಿಂದ ನಿಮ್ಮ ಆರೈಕೆಯತ್ತ ಗಮನ ನೀಡಿ. ಧ್ಯಾನ ಮಾಡಿ. ಅಲ್ಲದೆ ಸುಮ್ಮನಿದ್ದರೆ ಚಿಂತೆ ಬರುತ್ತದೆ, ನಿಮ್ಮನ್ನು ನೀವು ಮರೆಯುವಷ್ಟು ಬ್ಯುಸಿಯಾಗಿ, ಇದರಿಂದ ಆರ್ಥಿಕವಾಗಿ ಬೆಳೆಯುವಿರಿ ಜೊತೆಗೆ ನಿಮ್ಮ ಆತ್ಮವಿಶ್ವಾಸ ತುಂಬಾ ಹೆಚ್ಚಾಗುವುದು.

ಅಗ್ಯತ ಬಿದ್ದರೆ ಮ್ಯಾರೇಜ್ ಕೌನ್ಸಿಲರ್ ಸಲಹೆ ಪಡೆಯಿರಿ
ನಿಮ್ಮ ಮನಸ್ಸಿಗಾದ ಅಘಾತ, ನೋವಿನಿಂದ ಹೊರಬರಲು ಸಾಧ್ಯವಿಲ್ಲ ಎಂದಾದರೆ ನೀವು ಮ್ಯಾರೇಜ್ ಕೌನ್ಸಿಲರ್ ಭೇಟಿಯಾಗಿ, ಅವರು ನಿಮಗೆ ಸರಿಯಾದ ಸಲಹೆ ನೀಡುತ್ತಾರೆ.

ಮೋಸ ಮಾಡಿವರು ತಿರುಗಿ ಬಂದರೆ?
ಕೆಲವರು ಮೋಸ ಮಾಡುವಾಗ ಏನೂ ಯೋಚಿಸುವುದಿಲ್ಲ ಆ ಕ್ಷಣದ ಆಕರ್ಷಣೆಗೆ ಒಳಗಾಗಿ ಹೋಗಿ ಬಿಡುತ್ತಾರೆ, ನಂತರ ಅವರಿಗೆ ಅಲ್ಲಿ ಜೀವನ ನರಕವಾದಾಗ ನಿಮ್ಮ ನೆನಪಾಗುವುದು, ಆ ರೀತಿ ಬಂದರೆ ಅವರನ್ನು ನಿಮ್ಮ ಜೀವನದಲ್ಲಿ ಮತ್ತೆ ಸೇರಿಸಿಕೊಂಡರೆ ನೀವು ಕಟ್ಟಿಕೊಂಡ ಸುಂದರ ಜೀವನವನ್ನು ನಿಮ್ಮ ಕೈಯಾರೆ ಹಾಳು ಮಾಡಿದಂತೆ ನೆನಪಿರಲಿ.



Click it and Unblock the Notifications
