For Quick Alerts
ALLOW NOTIFICATIONS  
For Daily Alerts

ಹದಿಹರೆಯದ ಮಕ್ಕಳ ಜತೆ ಪೋಷಕರು ಹೇಗಿರಬೇಕು?

|

ಮದುವೆಯಾದ ನವ ದಂಪತಿಗೆ ತಮ್ಮದೇ ಆದ ಒಂದು ಮುದ್ದಾದ ಮಗುವನ್ನು ಪಡೆಯುವ ಬಯಕೆ ಇರುತ್ತದೆ ಅದರಂತೆ ಮಗು ಹುಟ್ಟಿದ ಮೇಲೆ ಅದರ ಲಾಲನೆ - ಪಾಲನೆಯ ಜೊತೆಗೆ ಅದರ ಬೇಕು - ಬೇಡಗಳ ಪೂರೈಸುವಿಕೆಯ ಕಡೆ ತಂದೆ - ತಾಯಿಯರ ಗಮನ ಹರಿಯುತ್ತದೆ. ಹುಟ್ಟಿದಾಗಿನಿಂದ ದೊಡ್ಡವರಾದ ಮೇಲೂ ತಮ್ಮ ಮಗುವನ್ನು ಚೆನ್ನಾಗಿ ಅರ್ಥ ಮಾಡಿಕೊಂಡ ಯಾರಾದರೂ ವ್ಯಕ್ತಿಗಳು ಈ ಪ್ರಪಂಚದಲ್ಲಿ ಇದ್ದರೆ ಅದು ಆ ಮಗುವಿನ ಸ್ವಂತ ತಂದೆ ತಾಯಿ. ಮಗುವಿಗೂ ಅಷ್ಟೇ ಬೇರೆಲ್ಲೂ ಸಿಗದ ಸಲುಗೆ, ಆತ್ಮೀಯತೆ, ನೆಮ್ಮದಿ ತಂದೆ ತಾಯಿಯ ಬಳಿ ಸಿಗುತ್ತದೆ. ಹಾಗೆಂದು ಎಲ್ಲಾ ವಿಷಯಗಳಲ್ಲೂ ತಂದೆ - ತಾಯಿ ಮತ್ತು ಮಗುವಿಗೆ ಸರಿ ಹೊಂದುವುದಿಲ್ಲ. ಅದಕ್ಕೆ ಕಾರಣ ವಯಸ್ಸಿನ ಹಾಗೂ ಮನಸ್ಥಿತಿಯ ಅಂತರ.

How Parenting Should Change In Your Childrens Teen Age

ಮಕ್ಕಳು ಸಣ್ಣ ವಯಸ್ಸಿನಿಂದ ನಿಧಾನವಾಗಿ ಹದಿಹರೆಯದ ವಯಸ್ಸಿಗೆ ಕಾಲಿಡುವ ಸಂದರ್ಭದಲ್ಲಿ ಅವರ ಮನಸ್ಥಿತಿ ಬದಲಾಗುತ್ತಾ ಹೋಗುತ್ತದೆ. ದಿನ ಕಳೆದಂತೆ ಬುದ್ಧಿ ಬೆಳವಣಿಗೆಯಾದಂತೆ ತಂದೆ - ತಾಯಿಯ ಹಿಡಿತದಿಂದ ಸ್ವಲ್ಪ ಸ್ವಲ್ಪವಾಗಿ ಮಕ್ಕಳು ದೂರಾಗಿ ತಮ್ಮದೇ ಹಾದಿ ಹಿಡಿಯಲು ಮುಂದಾಗುತ್ತಾರೆ. ಆ ಸಂದರ್ಭದಲ್ಲಿ ಪೋಷಕರ ಕೋಪತಾಪಕ್ಕಿಂತ ಬುದ್ಧಿವಂತಿಕೆ ಕೆಲಸಕ್ಕೆ ಬರುತ್ತದೆ. ಹದಿಹರೆಯದ ಮಕ್ಕಳ ವಿಷಯದಲ್ಲಿ ಪೋಷಕರ ಜವಾಬ್ದಾರಿಗಳು ಏನು ಮತ್ತು ಅವುಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ.
ನಿಮ್ಮ ಮಗುವಿಗೆ ತನ್ನ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಬಿಡಿ

ನಿಮ್ಮ ಮಗುವಿಗೆ ತನ್ನ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಬಿಡಿ

ಪೋಷಕರು ಎಂದ ಮೇಲೆ ಮಕ್ಕಳ ಜವಾಬ್ದಾರಿ ಅತಿ ಮುಖ್ಯ. ಮಕ್ಕಳ ಬೆಳವಣಿಗೆಯಲ್ಲಿ ಅವರ ಸಂಪೂರ್ಣ ಕಾರ್ಯ ಚಟುವಟಿಕೆಗಳ ಮೇಲೆ ಗಮನ ವಹಿಸಿ ಅವರು ಹಾದಿ ತಪ್ಪದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ತಂದೆ ತಾಯಿಯ ಆದ್ಯ ಕರ್ತವ್ಯ. ಪುಟ್ಟ ಮಗುವಾಗಿದ್ದಾಗ ಮಕ್ಕಳಿಗೆ ಜಗತ್ತಿನ ಅರಿವಿರುವುದಿಲ್ಲ. ಆ ಸಮಯದಲ್ಲಿ ತಂದೆ - ತಾಯಿ ಆದವರು ಮಕ್ಕಳ ಬೆನ್ನಿಗೆ ನಿಂತು ಪ್ರತಿಯೊಂದು ವಿಷಯದಲ್ಲೂ ಅವರಿಗೆ ಸಹಾಯ ಮತ್ತು ಮಾರ್ಗದರ್ಶನ ಮಾಡಿ ಮಕ್ಕಳನ್ನು ಬುದ್ಧಿವಂತರನ್ನಾಗಿ ಮಾಡಬೇಕು.

ಮನೆಯೇ ಮೊದಲ ಪಾಠಶಾಲೆ

ಮನೆಯೇ ಮೊದಲ ಪಾಠಶಾಲೆ

ಶಾಲೆಯ ಶಿಕ್ಷಕರು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಾರಾದರೂ 'ಮನೆಯೇ ಮೊದಲ ಪಾಠಶಾಲೆ' ಎಂಬಂತೆ ಪೋಷಕರ ಕೆಲಸ ಈ ವಿಷಯದಲ್ಲಿ ಎಲ್ಲರನ್ನೂ ಮೀರಿಸುವಂತೆ ಇರಬೇಕಾಗುತ್ತದೆ. ಮಕ್ಕಳು ಬೆಳೆದು ದೊಡ್ಡವರಾಗುತ್ತಾ ಹದಿಹರೆಯದ ವಯಸ್ಸಿಗೆ ಅಂದರೆ 13ನೇ ವಯಸ್ಸಿನಿಂದ 19ನೇ ವಯಸ್ಸಿಗೆ ಬಂದು ತಲುಪುತ್ತಾರೆ. ಈ ಸಮಯದಲ್ಲಿ ಮಕ್ಕಳ ಮನಸ್ಸು ಅರೆ ಪಕ್ಷವಾಗಿರುವ ಹಣ್ಣಿನಂತೆ.

ಸಾಮಾನ್ಯವಾಗಿ ಮಕ್ಕಳಿಗೆ ಈ ಸಮಯದಲ್ಲಿ ತಮ್ಮದೇ ಆದ ನಿರ್ಧಾರ ತೆಗೆದುಕೊಳ್ಳುವ ಆಸೆ ಮತ್ತು ಆತುರತೆ ಇರುತ್ತದೆ. ಇಂತಹ ಸಮಯದಲ್ಲಿ ಪೋಷಕರಾದವರು ಇದನ್ನು ಅರ್ಥ ಮಾಡಿಕೊಂಡು ಮಕ್ಕಳಿಗೆ ಅನುವು ಮಾಡಿಕೊಡಬೇಕು. ಹಾಗೆಂದು ನಿಮ್ಮ ಜವಾಬ್ದಾರಿಯಿಂದ ಸಂಪೂರ್ಣವಾಗಿ ಹಿಂದೆ ಸರಿಯುವ ಅವಶ್ಯಕತೆ ಇಲ್ಲ. ಮಕ್ಕಳು ಕೆಟ್ಟ ದಾರಿ ತುಳಿಯದಂತೆ ಅವರನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಿಕೊಂಡು ಹೋಗುವ ಕೆಲಸ ನಿಮ್ಮದೇ ಆಗಿರಬೇಕು.

ಮಕ್ಕಳ ಜೊತೆ ದೊಡ್ಡವರಂತೆ ವರ್ತಿಸಿ

ಮಕ್ಕಳ ಜೊತೆ ದೊಡ್ಡವರಂತೆ ವರ್ತಿಸಿ

ಮನೆಯಲ್ಲಿ ಒಂದು ಪುಟ್ಟ ಮಗುವಿದ್ದರೆ ಸಾಕು, ಮನೆಯ ತುಂಬಾ ಅದರ ಕಿಲಕಿಲ ನಗು ಎಲ್ಲರನ್ನು ಮಾತು ಮುಗ್ಧರನ್ನಾಗಿ ಮಾಡಿ ಬಿಡುತ್ತದೆ. ದೊಡ್ಡವರಾದ ನಾವುಗಳು ಯಾವುದಾದರೂ ಮನಸ್ಸಿಗೆ ಭಾರ ಎನಿಸುವ ಯೋಚನೆಯಲ್ಲಿ ಮುಳುಗಿದ್ದರೆ, ಆ ಕ್ಷಣಕ್ಕೆ ಮಕ್ಕಳ ನಲಿವಿನಲ್ಲಿ ಆಟ ಪಾಠಗಳಲ್ಲಿ ನಾವೂ ಮಕ್ಕಳಾಗಿ ಬೆರೆತು ಎಲ್ಲಾ ನೋವನ್ನು ಮರೆಯುತ್ತೇವೆ.

ಮಕ್ಕಳನ್ನು ಸ್ನೇಹಿತರನ್ನಾಗಿ ಕಾಣಿ

ಮಕ್ಕಳನ್ನು ಸ್ನೇಹಿತರನ್ನಾಗಿ ಕಾಣಿ

ಅಂದರೆ ಪುಟ್ಟ ಮಗುವಿನ ಜೊತೆ ನಾವೂ ಮಗುವಾಗಿ ಬದಲಾಗಿ ಬಿಟ್ಟಿರುತ್ತೇವೆ. ಆದರೆ ಅದೇ ಮಕ್ಕಳು ಹದಿಹರೆಯದ ವಯಸ್ಸಿಗೆ ಬಂದು ತಲುಪಿದಾಗ ನಾವು ಮೊದಲಿನಂತೆ ವರ್ತಿಸಲು ಸಾಧ್ಯವಿಲ್ಲ. ಬದಲಾಗಿ ತಿಳಿದವರು ಹೇಳುವಂತೆ ಮಕ್ಕಳನ್ನು ಮಕ್ಕಳಾಗಿ ಕಾಣುವ ಬದಲು ಸ್ನೇಹಿತರನ್ನಾಗಿ ಕಾಣುವ ಅಭ್ಯಾಸ ಬೆಳೆಸಿಕೊಳ್ಳಬೇಕು.

ಅಂದರೆ ನಾವು ನಮ್ಮ ಸಹೋದ್ಯೋಗಿಗಳ ಜೊತೆ ಯಾವ ರೀತಿ ವರ್ತಿಸುತ್ತೇವೆ ಹಾಗೆ. ಹದಿಹರೆಯದ ಮಕ್ಕಳಿಗೆ ನಮಗೆಲ್ಲಾ ಗೊತ್ತು ಯಾರಿಂದಲೂ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂಬ ಭಾವನೆ ಮನಸ್ಸಿನಲ್ಲಿ ಮನೆ ಮಾಡಿರುತ್ತದೆ. ಇದನ್ನು ಅರ್ಥ ಮಾಡಿಕೊಂಡು ಅವರಿಗೆ ಯಾವ ರೀತಿ ಬುದ್ಧಿವಂತಿಕೆಯ ಮಾತುಗಳನ್ನು ಹೇಳಬೇಕು ಎಂಬುದನ್ನು ತಿಳಿಸಿ ಕೊಡುವ ಹವ್ಯಾಸವನ್ನು ಕಲಿಯಬೇಕು.

ಹದಿಹರೆಯ ಮಕ್ಕಳ ಜೊತೆ ಆಗಾಗ ಜಗಳ ನಿಶ್ಚಿತ

ಹದಿಹರೆಯ ಮಕ್ಕಳ ಜೊತೆ ಆಗಾಗ ಜಗಳ ನಿಶ್ಚಿತ

ಹದಿಹರೆಯದ ಮಕ್ಕಳಲ್ಲಿ ಹಠ ಜಾಸ್ತಿ. ಇನ್ನೂ ಅಷ್ಟಾಗಿ ಬೆಳೆದು ದೊಡ್ಡವರಾಗಿರದಿದ್ದರೂ ದೊಡ್ಡವರಂತೆಯೇ ನಡೆದುಕೊಳ್ಳಲು ಬಯಸುತ್ತಾರೆ. ತಾವು ಹೇಳಿದ್ದೇ ನಡೆಯಬೇಕು ಎಂಬ ವಾದ ಬೇರೆ. ಕೆಲವು ಸೂಕ್ಷ್ಮ ವಿಷಯಗಳನ್ನು ದೊಡ್ಡದು ಮಾಡುವ ಮತ್ತು ಅದೇ ವಿಷಯಕ್ಕೆ ಆಗಾಗ ಜಗಳ ಮಾಡುವ ಮನಸ್ಥಿತಿ ಹೊಂದಿರುತ್ತಾರೆ. ಪೋಷಕರು ಈ ಸಮಯದಲ್ಲಿ ಅವರ ವಿರುದ್ಧ ತಾಳ್ಮೆ ಇಲ್ಲದೆ ತಮ್ಮ ನಾಲಿಗೆ ಹರಿ ಬಿಟ್ಟರೆ ಆಗುವ ಅರ್ಥಗಳಿಗಿಂತ ಅನರ್ಥಗಳೇ ಜಾಸ್ತಿ.

ತಾಳ್ಮೆಯಿಂದ ಮಕ್ಕಳಿಗೆ ತಿಳಿ ಹೇಳಿ

ತಾಳ್ಮೆಯಿಂದ ಮಕ್ಕಳಿಗೆ ತಿಳಿ ಹೇಳಿ

ಕೆಲವೊಮ್ಮೆ ದುರ್ಘಟನೆಗಳು ನಡೆಯುವ ಸಂಭವವೂ ಇರುತ್ತದೆ. ಆದ್ದರಿಂದ ಪೋಷಕರು ಬಹಳಷ್ಟು ಜಾಣತನದಿಂದ ಜಾಗರೂಕರಾಗಿ ಯಾವುದೇ ವಿಷಯವನ್ನು ಮಕ್ಕಳ ಬಳಿ ಚರ್ಚಿಸುವ ಮೊದಲು ಸಾವಿರ ಬಾರಿ ಆಲೋಚಿಸಿ, ಈ ನಿರ್ದಿಷ್ಟ ವಿಷಯವನ್ನು ಯಾವ ರೀತಿ ಹೇಳಿದರೆ ಚೆನ್ನ ಎಂಬುದನ್ನು ಮೊದಲೇ ಮನಗಂಡು ನಂತರ ಮಕ್ಕಳ ಬಳಿ ಮಾತನಾಡಲು ಮುಂದಾಗಬೇಕು. ಒಂದು ವೇಳೆ ಈ ಸಮಯದಲ್ಲಿ ಮಕ್ಕಳು ಕೆಟ್ಟ ದಾರಿ ತುಳಿದು ತಾನೇ ಸರಿ ಎಂದು ನಡೆದುಕೊಂಡರೂ ಪೋಷಕರಾದವರು ಕೋಪ ಮಾಡಿಕೊಳ್ಳದೇ ಬಹಳ ತಾಳ್ಮೆಯಿಂದ ಮಕ್ಕಳಿಗೆ ತಿಳಿ ಹೇಳಿ ಸರಿದಾರಿಗೆ ತರುವ ಪ್ರಯತ್ನ ಮಾಡಬೇಕು.

English summary

How Parenting Should Change In Your Childrens Teen Age

Here we are going to discuss about how parenting should change in your child’s teen age. Here are the ways in which parenting changes as your children advance into their teen years. Read more.
X
Desktop Bottom Promotion