Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೆಲಸದ ವಿಷಯದಲ್ಲಿ ಗಂಡನಿಗೆ ಒತ್ತಾಯ ಮಾಡಬೇಡಿ!
ಯಾವುದೇ ಹೆಂಗಸು ತನ್ನ ಗಂಡನನ್ನು ಒತ್ತಾಯ ಮಾಡಲು ಇಷ್ಟಪಡುವುದಿಲ್ಲ. ಆದರೆ ಇದು ಸುಮ್ಮನೆ ನಡೆದು ಬಿಡುತ್ತದೆ. ವಿಷಯ ಏನಪ್ಪಾ ಎಂದರೆ, ಒತ್ತಾಯ ಮಾಡುವುದರಿಂದ ಕೆಲಸಗಳು ಸಾಗುತ್ತವೆಯೇ? ಮೊದಲಿಗೆ ಇದರರ್ಥ ಏನು? ಒತ್ತಾಯ ಮಾಡುವುದು ಎಂದರೆ ಒಬ್ಬರನ್ನು ಪದೇ ಪದೇ ಒಂದು ಕೆಲಸ ಮಾಡುವಂತೆ ಪೀಡಿಸುವುದಾಗಿರುತ್ತದೆ. ಒಂದು ಅಧ್ಯಯನದ ಪ್ರಕಾರ ಈ ಪೀಡಿಸುವುದು ಅಥವಾ ಒತ್ತಾಯ ಮಾಡುವುದು ಹಲವಾರು ಸಂಬಂಧಗಳು ಮುರಿದು ಬೀಳಲು ಕಾರಣವಾಗಿವೆಯಂತೆ, ಇದರಿಂದ ಕೆಲವೊಂದು ನಿರ್ದಿಷ್ಟ ಪರಿಣಾಮಗಳು ಎದುರಾಗುತ್ತವೆ.
ಒಬ್ಬ ವ್ಯಕ್ತಿಯನ್ನು ಪೀಡಿಸಲು ನಿಮಗೆ ನಾನಾ ಕಾರಣಗಳು ಇರಬಹುದು. ಆದರೆ ಈ ಪೀಡನೆಯಿಂದ ನಿಮ್ಮ ಕೆಲಸಗಳು ಆಗುತ್ತವೆಯೇ? ಮೊದಲಿಗೆ ನಿಮ್ಮ ಒತ್ತಾಯದಿಂದ ನಿಮ್ಮ ಸಂಗಾತಿಗೆ ಕಿರಿಕಿರಿಯುಂಟಾಗಬಹುದು. ಎರಡನೆಯದಾಗಿ ಆತ ಅಥವಾ ಆಕೆ ನಿಮ್ಮನ್ನು ಸಂಪೂರ್ಣವಾಗಿ ದ್ವೇಷಿಸಲು ಶುರು ಮಾಡಬಹುದು. ನಮ್ಮಲ್ಲಿ ಬಹುತೇಕ ಮಂದಿ ಮಹಿಳೆಯರು ಹೀಗೆ ಪೀಡಿಸುತ್ತಾರೆ ಎಂದು ಕೊಂಡಿರುತ್ತಾರೆ.
ಆದರೆ ಈ ವಿಚಾರದಲ್ಲಿ ಗಂಡಸರು ಸಹ ಹಿಂದೆ ಬಿದ್ದಿರುವುದಿಲ್ಲ. ಆರೋಗ್ಯಕರ ಸಂಬಂಧಗಳು ತಾಳ್ಮೆಯ ಮೇಲೆ ನಿರ್ಮಾಣಗೊಂಡಿರುತ್ತವೆ. ಬನ್ನಿ ಇಂದು ಈ ಒತ್ತಾಯ ಮಾಡುವಿಕೆ ಕುರಿತು ತಿಳಿದುಕೊಳ್ಳೋಣ. ಗಂಡಸರನ್ನು ಒತ್ತಾಯ ಮಾಡುವುದರಿಂದ ಏಕೆ ಪ್ರಯೋಜನವಾಗುವುದಿಲ್ಲ. ಮದುವೆಗೆ ಮುಂಚೆ ಮುಜುಗರ ತರುವ ಪ್ರಶ್ನೆಯನ್ನು ಕೇಳಬೇಡಿ

ಕಿರಿಕಿರಿ
ನಿಮ್ಮ ಒತ್ತಾಯವು ಆತ ಅಥವಾ ಆಕೆಗೆ ಕಿರಿಕಿರಿಯನ್ನುಂಟು ಮಾಡಲು ಆರಂಭಿಸಬಹುದು. ನೀವು ಅವರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದೀರಿ ಎಂದು ಅವರು ಭಾವಿಸಬಹುದು. ಒಬ್ಬ ವ್ಯಕ್ತಿಗೆ ಕಿರಿಕಿರಿಯುಂಟು ಮಾಡುವುದರಿಂದ ನಿಮ್ಮ ಸಂಬಂಧ ಹಾಳಾಗುತ್ತದೆ.
ಬೇಸರ
ನೀವು ಒತ್ತಾಯ ಮಾಡಲು ಆರಂಭಿಸಿದರೆ, ಆ ವ್ಯಕ್ತಿಗೆ ಬೇಸರ ಬರಲು ಶುರುವಾಗುತ್ತದೆ. ನೀವು ಬದಲಾಗದಿದ್ದರೆ, ಜನರು ನಿಮ್ಮಿಂದ ದೂರ ಉಳಿಯಲು ಆರಂಭಿಸುತ್ತಾರೆ.
ವಾದಗಳು
ಬಹುತೇಕ ವ್ಯರ್ಥ ವಾದಗಳು ಈ ಒತ್ತಾಯ ಮಾಡುವಿಕೆಯಿಂದ ಶುರುವಾಗುತ್ತವೆ. ಇವು ಸಂಬಂಧದಲ್ಲಿ ಬಿರುಕನ್ನು ಉಂಟು ಅಮಡುತ್ತದೆ. ಆದ್ದರಿಂದ ಒತ್ತಾಯ ಮಾಡುವಿಕೆ ಎಂಬುದು ನಿಮ್ಮ ವರ್ತನೆಗೆ ಅಂಟಿದ ಕಪ್ಪು ಚುಕ್ಕೆ ಎಂದು ಅರ್ಥ ಮಾಡಿಕೊಳ್ಳಿ.
ಆನಂದ
ಸಂಬಂಧದಲ್ಲಿನ ಆನಂದವು ಅಡಗಿರುವುದೇ ನೀವಿಬ್ಬರೂ ಸಂತೋಷವಾಗಿರುವುದರಲ್ಲಿ, ಒತ್ತಾಯ ಮಾಡುವಿಕೆಯು ಯಾರಿಗೂ ಆನಂದವನ್ನು ತರುವುದಿಲ್ಲ. ಆಗ ನಿಮಗೆ ಸಂಬಂಧವೇ ಕಿರಿಕಿರಿಯನ್ನು ತರುವ ಒಂದು ಬಲೆಯಾಗಿ ಕಾಣಿಸುತ್ತದೆ.



Click it and Unblock the Notifications
