ತಿರಸ್ಕಾರಕ್ಕೆ ತಿಲಾಂಜಲಿ ಇಟ್ಟರೆ ಯಶಸ್ಸು ಕಟ್ಟಿಟ್ಟ ಬುತ್ತಿ!

ತಿರಸ್ಕಾರ, ಅಪಯಶಸ್ಸು ಮತ್ತು ನಿರಾಸೆ ಈ ಮೂರನ್ನು ನಾವು ನಮ್ಮ ಜೀವನದಲ್ಲಿ ಆಗಾಗ ಎದುರಿಸುತ್ತಲೇ ಇರುತ್ತೇವೆ. ಇದಕ್ಕೆ ಯಾವುದೇ ವಯಸ್ಸಿನ ಭೇದವಿರುವುದಿಲ್ಲ. ತಿರಸ್ಕಾರವು ಒಮ್ಮೊಮ್ಮೆ ನಿಮ್ಮ ಜೀವನವನ್ನು ನೀವು ನೋಡುವ ರೀತಿಯನ್ನೆ ಬದಲಿಸಿ ಬಿಡುತ್ತದೆ. ಆದರೆ ಅದರಿಂದ ಆಗುವ ಕಿರಿಕಿರಿ ಮತ್ತು ಅವಮಾನದಿಂದ ನೀವು ಬೇಗ ಹೊರಬಂದರೆ ಯಶಸ್ಸು ನಿಮಗೆ ಕಟ್ಟಿಟ್ಟ ಬುತ್ತಿ.

ಜೀವನದಲ್ಲಿ ನಾವು ಕೆಲವೊಂದನ್ನು ನಿರಾಕರಿಸಲು ಸಾಧ್ಯವಾಗುವುದಿಲ್ಲ. ಸೋಗು ಹಾಕಿಕೊಂಡು ತುಂಬಾ ದಿನ ಇರಲು ಸಹ ಆಗುವುದಿಲ್ಲ. ಯಾರಾದರು ನಮ್ಮನ್ನು ತಿರಸ್ಕರಿಸಿದರೆ ಅದನ್ನು ನಾವು ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಇದು ಸ್ವಲ್ಪ ಕಷ್ಟಕರವಾದ ಕೆಲಸ. ಆದರೂ ಪ್ರತಿಯೊಂದರಲ್ಲಿಯು ತಿರಸ್ಕರಿಸಿಕೊಂಡರೆ ನಮ್ಮ ಆತ್ಮ ವಿಶ್ವಾಸ ಕುಗ್ಗಿ ಹೋಗುವ ಕಾರಣ ಮತ್ತು ಇದರಿಂದ ನಮ್ಮ ವ್ಯಕ್ತಿತ್ವವು ಸಹ ಬದಲಾವಣೆಗೆ ಒಳಪಡುವುದರಿಂದ ಇದನ್ನು ಸ್ವಲ್ಪ ಕ್ರೀಡಾ ಮನೊಭಾವದಿಂದ ಸ್ವೀಕರಿಸಿ. ಏಕೆಂದರೆ ತಿರಸ್ಕಾರವು ನಿಮ್ಮನ್ನು ಮಾನಸಿಕವಾಗಿ ಘಾಸಿಗೊಳಿಸುತ್ತದೆ.

ತಿರಸ್ಕಾರದಿಂದ ನಿಮ್ಮ ಬಾಳಿನಲ್ಲಿ ಖಿನ್ನತೆ ಆವರಿಸಿಕೊಳ್ಳದಂತೆ ನೋಡಿಕೊಳ್ಳಿ. ಆದರೆ ಅದೇ ಸಮಯದಲ್ಲಿ ತಿರಸ್ಕಾರಗೊಳ್ಳುವುದರಿಂದ ಹೊರಬರಲು ಹಲವು ಮಾರ್ಗಗಳಿವೆ ಎಂಬುದನ್ನು ಮರೆಯಬೇಡಿ. ಬನ್ನಿ ಆ ಮಾರ್ಗಗಳು ಯಾವುವು ಎಂಬುದನ್ನು ತಿಳಿದುಕೊಳ್ಳಿ. ಸಂಬಂಧದಲ್ಲಿ ನಡೆಯುವ ಮಾತಿನ ಜಗಳಕ್ಕೆ ತೀರಾ ಹತಾಶರಾಗಬೇಡಿ!

ಆತ್ಮ ಸ್ಥೈರ್ಯವನ್ನು ಕಳೆದುಕೊಳ್ಳಬೇಡಿ

Ways To Overcome Rejection

ಕೆಲಸದ ಸ್ಥಳವಾಗಿರಲಿ ಅಥವಾ ಮನೆಯಾಗಿರಲಿ ನೀವು ತಿರಸ್ಕಾರಗೊಂಡರೆ, ಅದಕ್ಕಾಗಿ ದುಃಖಪಡಲು ನಿಮಗೆ ಹಲವಾರು ಕಾರಣಗಳು ಇರುತ್ತವೆ. ಅದನ್ನು ಜೀರ್ಣಿಸಿಕೊಳ್ಳಲು ಮತ್ತು ಅದನ್ನು ಮರೆಯಲು ನಿಮಗೆ ಸಮಯ ಬೇಕಾಗುತ್ತದೆ. ಆದರೆ ಯಾವುದೇ ಕಾರಣಕ್ಕು ಇಲ್ಲಿ ನಿಮ್ಮ ಭಾವನೆಗಳು ನಿಮ್ಮ ಆತ್ಮ ಸ್ಥೈರ್ಯವನ್ನು ಕುಸಿಯುವಂತೆ ಮಾಡಲು ಬಿಡಬೇಡಿ. ಏಕೆಂದರೆ ಇವುಗಳು ನಿಮ್ಮ ಪರಿಸ್ಥಿತಿಯನ್ನು ಮತ್ತಷ್ಟು ಹಾಳು ಮಾಡಿಬಿಡುತ್ತವೆ.

ವಿಶ್ವಾಸಾರ್ಹ ವ್ಯಕ್ತಿಯೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ


ಇಂತಹ ಕಠಿಣ ಪರಿಸ್ಥಿತಿಗಳಲ್ಲಿ ನೀವು ತಿರಸ್ಕಾರಗೊಂಡ ವಿಚಾರವನ್ನು ನಿಮ್ಮ ವಿಶ್ವಾಸಾರ್ಹ ವ್ಯಕ್ತಿಯೊಂದಿಗೆ ಹಂಚಿಕೊಳ್ಳಿ. ಇದರಿಂದ ನಿಮ್ಮ ನೋವು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಒಬ್ಬ ಸ್ನೇಹಿತನು ಖಂಡಿತ ನಿಮ್ಮ ನೆರವಿಗೆ ಬರುತ್ತಾನೆ ಎಂಬುದನ್ನು ಮರೆಯಬೇಡಿ.

ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ


ತಿರಸ್ಕಾರಗೊಂಡಾಗ ನಿಮಗೆ ಆಶಾಭಂಗವಾಗಬಹುದು, ಸ್ವಲ್ಪ ಮಟ್ಟಿಗೆ ಅಹಂಗೆ ಹಾನಿಯಾಗಬಹುದು ಅಥವಾ ಜೀವನವೇ ಕೊನೆಯಾಗಿ ಹೋಯಿತು ಎಂಬ ರೀತಿಯ ಭಾವನೆ ಉಂಟಾಗಬಹುದು. ಆದರೆ ಅಂತಹ ಭಾವನೆಗಳಿಗೆ ಅವಕಾಶ ಮಾಡಿಕೊಡಬೇಡಿ. ದುಃಖವಾದರೆ ಅಳಿ, ಕೋಪ ಬಂದರೆ ಕಿರುಚಿ, ನಿಮ್ಮ ಭಾವನೆಗಳನ್ನು ಆದಷ್ಟು ವೈಯುಕ್ತಿಕವಾಗಿ ನಿಮ್ಮ ಮಟ್ಟಿಗೆ ಹೊರಹಾಕಿ. ಇದರಿಂದ ನಿಮ್ಮ ಮನಸ್ಸಿನಲ್ಲಿರುವ ಒತ್ತಡವು ಕಡಿಮೆಯಾಗುತ್ತದೆ. ನಿಮ್ಮ ಮುದ್ದಿನ ಪತ್ನಿಯನ್ನು ಪ್ರೀತಿಸಲು ಬಜೆಟ್ ನೋಡಬೇಡಿ!

ವಾಸ್ತವವನ್ನು ಒಪ್ಪಿಕೊಳ್ಳಿ


ತಿರಸ್ಕಾರವನ್ನು ಸಹ ಒಪ್ಪಿಕೊಳ್ಳಿ. ಇದಕ್ಕೆ ಕಾರಣವನ್ನು ಆತ್ಮಾವಲೋಕನ ಮಾಡಿಕೊಳ್ಳಿ, ಆಗ ಅದಕ್ಕೆ ಉತ್ತರ ನಿಮಗೆ ದೊರೆಯುತ್ತದೆ. ತಿರಸ್ಕಾರಗೊಂಡಿರೆಂದ ಮಾತ್ರಕ್ಕೆ ಎಲ್ಲವೂ ಮುಗಿದು ಹೋಗುವುದಿಲ್ಲ. ಇದಕ್ಕಿಂತ ಉತ್ತಮವಾದ ವ್ಯಕ್ತಿಯು ನಿಮ್ಮ ಬಾಳಿನಲ್ಲಿ ಬರಬಹುದು. ಭವಿಷ್ಯದಲ್ಲಿ ಅವರು ನಿಮಗೆ ಸಿಗುವ ದಿನಗಳು ದೂರವಿಲ್ಲ. ಈ ತಿರಸ್ಕಾರದಿಂದ ಆದಷ್ಟು ಬೇಗ ಹೊರಬಂದು ಮತ್ತಷ್ಟು ಸದೃಢರಾಗಲು ಪ್ರಯತ್ನಿಸಿ.

Story first published: Monday, April 13, 2015, 10:04 [IST]
X
Desktop Bottom Promotion