Latest Updates
-
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್
ನಿಮ್ಮ ಸಾಧನೆ ಕಂಡು ಒಳಗೊಳಗೆ ಹೊಟ್ಟೆಕಿಚ್ಚು ಪಡುತ್ತಿರುವವರ ಸೂಚನೆಗಳಿವು
ಅಸೂಯೆ ಅಥವಾ ಹೊಟ್ಟೆ ಕಿಚ್ಚು ಎಂಬುದು ಮನುಷ್ಯರಲ್ಲಿರುವ ಬಹಳ ನೈಸರ್ಗಿಕ ಭಾವನೆ. ನಿಮ್ಮ ಸಾಧನೆ ಕಂಡು ಕೆಲವರು ಎದುರಲ್ಲೇ ಅಸೂಯೆ ತೋರ್ಪಡಿಸಿದರೆ, ಇನ್ನೂ ಕೆಲವರು ಎದುರಲ್ಲಿ ಚೆನ್ನಾಗಿದ್ದು, ಒಳಗೊಳಗೆ ಹೊಟ್ಟೆ ಉರಿ ಪಡುತ್ತಿರುತ್ತಾರೆ. ಅಷ್ಟೇ ಅಲ್ಲ, ಎಲ್ಲರ ಎದುರು ಹೊಟ್ಟೆಕಿಚ್ಚಿಲ್ಲ ಎಂಬಂತೆ ನಟಿಸುತ್ತಿರುತ್ತಾರೆ. ಆದರೆ ಅವರು ನಡೆದುಕೊಳ್ಳುವ ಕೆಲವೊಂದು ನಡವಳಿಕೆಗಳಿಂದ ಅವರು ನಿಮ್ಮ ಮೇಲೆ ಅಸೂಯೆ ಹೊಂದಿದ್ದಾರೆ ಎಂಬುದನ್ನು ತಿಳಿದುಕೊಳ್ಳಬಹುದು. ಅದೇಗೆ ಎಂಬುದನ್ನು ಇಲ್ಲಿ ನೋಡೋಣ.
ಯಾರಾದರೂ ನಿಮ್ಮ ಬಗ್ಗೆ ರಹಸ್ಯವಾಗಿ ಹೊಟ್ಟೆ ಕಿಚ್ಚು ಪಡುತ್ತಿದ್ದಾರೆ ಎಂದು ಸೂಚಿಸುವ ಎಚ್ಚರಿಕೆ ಚಿಹ್ನೆಗಳು ಇಲ್ಲಿವೆ:

ಅವರ ಅಭಿನಂದನೆ ವ್ಯಂಗ್ಯವಾಗಿರುವುದು:
ನಿಮ್ಮ ಸ್ನೇಹಿತನು ನಿಮ್ಮ ಬಗ್ಗೆ ಅಸೂಯೆ ಪಡುತ್ತಿದ್ದರೆ, ಅವರ ಅಭಿನಂದನೆಯನ್ನೊಮ್ಮೆ ಗಮನಿಸಿ. ನಿಮ್ಮನ್ನು ಅಭಿನಂದಿಸುವಾಗ ವ್ಯಂಗ್ಯವಾಗಿ ಮಾತನಾಡುತ್ತಾರೆ. ನಿಮಗೆ ಏನು ಪ್ರೋತ್ಸಾಹ ಬೇಕೋ ಅದೆಲ್ಲಾವನ್ನು ಕೊಡುವ ನಾಟಕದ ಮಾತುಗಳನ್ನಾಡುವರು. ಅವರ ಮಾತಿನ ಆಳದಲ್ಲಿ ಬೇರೆಯೇ ಅರ್ಥವಿರುವುದು. ನೀವು ಸರಿಯಾಗಿ ಗಮನ ಕೊಟ್ಟು ಕೇಳಿದರೆ ಹೊಟ್ಟೆಕಿಚ್ಚು ನಿಮ್ಮ ಗಮನಕ್ಕೆ ಬರುವುದು.

ಯಶಸ್ಸನ್ನು ಕಡಿಮೆ ಮಾಡಲು ಪ್ರಯತ್ನ:
ಹೊಟ್ಟೆಕಿಚ್ಚು ಹೊಂದಿರುವ ಜನರು ನಿಮ್ಮ ಯಶಸ್ಸನ್ನು ಕಡಿಮೆ ಮಾಡಲು ಪ್ರಯತ್ನಿಸಬಹುದು. ನೀವು ಸಾಧಿಸಿದಷ್ಟು ಸಾಧಿಸಲು ಅವರಿಗೆ ಸಾಧ್ಯವಾಗುವುದಿಲ್ಲ ಎಂಬ ಕಾರಣದಿಂದ ಅಸುರಕ್ಷತೆ ಹೊಂದಿರುತ್ತಾರೆ. ಅದಕ್ಕಾಗಿ ನೀವು ಒಳ್ಳೆಯವರಲ್ಲ ಎಂದು ಯಾವಾಗಲೂ ಇತರರಿಗೆ ಹೇಳಿಕೊಂಡು ಬರುತ್ತಾ ಜನರನ್ನು ಒಪ್ಪಿಸಲು ಪ್ರಯತ್ನಿಸುತ್ತಾರೆ.

ನಿಮ್ಮೊಂದಿಗೆ ಸ್ಪರ್ಧಿಗಿಳಿಯುವರು:
ಯಾರಿಗಾದರೂ ಹೊಟ್ಟೆ ಕಿಚ್ಚು ಆಗುತ್ತಿದೆ ಎಂದರೆ ನಿಮ್ಮ ಸಾಧನೆ ಉತ್ತಮವಾಗಿದೆ ಎಂದರ್ಥ. ಆ ಸಮಯದಲ್ಲಿ ಅವರ ಶಕ್ತಿ-ಸಾಮರ್ಥ್ಯವನ್ನು ಸಾಬೀತುಪಡಿಸುವ ಅವಶ್ಯಕತೆ ಎದುರಾಗುವುದು. ಇದೇ ಕಾರಣಕ್ಕಾಗಿ ಅವರು ನಿಮ್ಮೊಂದಿಗೆ ಅಥವಾ ಇತರ ಜನರೊಂದಿಗೆ ಹೆಚ್ಚು ಸ್ಪರ್ಧೆಗಿಳಿಯುತ್ತಾರೆ.

ನಿಮ್ಮ ತಪ್ಪುಗಳನ್ನೇ ಹುಡುಕುವರು:
ನೀವು ಬಹಳ ಹಿಂದೆ ಮಾಡಿದ ಒಂದು ಸಣ್ಣ ತಪ್ಪಾಗಿದ್ದರೂ, ಅದಕ್ಕೆ ನೀವು ನಷ್ಟವನ್ನು ಎದುರಿಸಿದ್ದರೂ ಸಹ, ಅದನ್ನ ಪದೇ ಪದೇ ನೆನಪಿಸುತ್ತಾರೆ. ಆ ತಪ್ಪನ್ನೇ ಆಗಾಗ ಎತ್ತಿ ಹಿಡಿಯುತ್ತಾರೆ. "ನಾನು ಅವತ್ತೇ ಹೇಳಿದೆ, ನೀನೇ ಕೇಳಲಿಲ್ಲ" ಎಂದು ಹೇಳಿ ನಿಮ್ಮನ್ನೇ ತಪ್ಪಿತಸ್ಥರನ್ನಾಗಿ ಮಾಡುವರು. ನೀವು ಸೋತಾಗ ಅವರು ಸಂತೋಷ ಮತ್ತು ತೃಪ್ತಿಯನ್ನು ಅನುಭವಿಸುತ್ತಾರೆ.

ಫರ್ಫೆಕ್ಟ್ ಕಾಪಿ ಕ್ಯಾಟ್:
ನಿಮ್ಮ ಬಗ್ಗೆ ಅಸೂಯೆ ಹೊಂದಿರುವವರು ನಿಮ್ಮಂತೆ ಆಗಲು, ನೀವು ಮಾಡುವ ಎಲ್ಲವನ್ನೂ ಅನುಕರಿಸಲು ಪ್ರಯತ್ನಿಸಬಹುದು. ವಾಕಿಂಗ್, ಡ್ರೆಸ್ಸಿಂಗ್ ಮತ್ತು ಮಾತನಾಡುವ ರೀತಿ ಎಲ್ಲವನ್ನು. ಮೊದಮೊದಲು ಅದನ್ನು ಅಭಿನಂದನೆಯಾಗಿ ತೆಗೆದುಕೊಂಡರೂ, ನಂತರ ಅದು ನಿಮ್ಮ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ.

ನಿಮ್ಮ ಸೋಲನ್ನು ಆಚರಿಸುವರು:
ನಿಮ್ಮ ಗುರಿಗಳನ್ನು ಮುಟ್ಟುವಲ್ಲಿ ನೀವು ವಿಫಲರಾಗಿದ್ದೀರಿ ಎಂದು ಅಸೂಯೆ ಪಡುವ ಜನರಿಗೆ ತಿಳಿದರೆ, ಅವರು ಅದನ್ನು ಸಂಭ್ರಮಿಸುತ್ತಾರೆ. ಆದರೆ ನಿಮ್ಮ ಹಿನ್ನಡೆಯ ಸುದ್ದಿ ಅವರಿಗೆ ತಂದ ಸಂತೋಷದ ಬಗ್ಗೆ ಎಂದಿಗೂ ಹೇಳುವುದಿಲ್ಲ. ಬದಲಾಗಿ, ರಹಸ್ಯವಾಗಿ ಒಳಗೊಳಗೆ ಸಂತೋಷಪಡುತ್ತಾರೆ. ಆ ಸೋಲಿನಿಂದ ಹೊರಬರುವ ದಾರಿಯನ್ನು ಅವರು ಹೇಳುವುದಿಲ್ಲ.



Click it and Unblock the Notifications