Latest Updates
-
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ!
ಹುಡುಗರಲ್ಲಿ ಈ ಅಭ್ಯಾಸಗಳಿದ್ದರೆ, ಹುಡುಗಿ ಹತ್ತಿರ ಸುಳಿಯಲಾರಳು!
ಒಂದೇ ರೀತಿಯ ಮನೋಭಾವ, ಆಸಕ್ತಿಗಳಿರುವವರು ಬೇಗನೇ ಹತ್ತಿರವಾಗುವುದು ಸಾಮಾನ್ಯ. ಪ್ರೀತಿ ಮಾಡುವ ಪ್ರೇಮಿಗಳ ನಡುವೆ ಅದೆಷ್ಟೋ ಹೋಲಿಕೆಗಳಿದ್ದರೂ, ಅವರಿಗೆ ಇಷ್ಟವಾಗದ ಗುಣಗಳು ಅನೇಕ ವಿಷಯಗಳಿರುತ್ತವೆ. ಅವು ಮೊದಲಗೆ ಗಮನಕ್ಕೆ ಬಾರದಿದ್ದರೂ, ಸಮಯ ಕಳೆದಂತೆ ಅನುಭವಕ್ಕೆ ಬರುತ್ತವೆ.
ಅದರರಲ್ಲೂ ಹುಡುಗಿಯರು, ತನ್ನ ಪ್ರಿಯತಮನ ನಡವಳಿಕೆಯನ್ನು ಅತೀ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಆ ಸಮಯದಲ್ಲಿ ಅವರಿಗೆ ವಿಷಯಗಳು ಇಷ್ಟವಾಗದಿದ್ದಲ್ಲಿ, ನಿಮ್ಮೊಂದಿಗೆ ಇರಲು ಬಯಸಲಾರರು. ಆದ್ದರಿಂದ ಇಂದು ಹುಡುಗಿಯರಿಗೆ ಇಷ್ಟವಾಗದ ಕೆಲವು ಹುಡುಗರ ಅಭ್ಯಾಸಗಳ ಬಗ್ಗೆ ಹೇಳಿದ್ದೇವೆ.
ಹುಡುಗಿಯರು ಇಷ್ಟಪಡದ ಹುಡುಗರ ಅಭ್ಯಾಸಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ತಾವೇ ರೈಟ್, ತಾನೇ ಗ್ರೇಟ್ ಎನ್ನುವುದು:
ಅನೇಕ ಹುಡುಗರು ಎಲ್ಲದರಲ್ಲೂ ತಾವು ಮಾಡಿದ್ದೇ ಸರಿ, ತನ್ನ ನಿರ್ಧಾರವೇ ಉತ್ತಮ ಎನ್ನುವ ಅಭ್ಯಾಸವನ್ನು ಹೊಂದಿದ್ದಾರೆ. ಹುಡುಗರ ಈ ಅಭ್ಯಾಸವನ್ನು ಹುಡುಗಿಯರು ಇಷ್ಟಪಡುವುದಿಲ್ಲ. ಇಂದಿನ ಹುಡುಗಿಯರು ಪ್ರತಿಯೊಂದು ಕೆಲಸದಲ್ಲೂ ಪುರುಷರಿಗೆ ಪೈಪೋಟಿ ನೀಡುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಪುರುಷರು ತಮ್ಮನ್ನು ತಾವು ಹೆಚ್ಚು ಮತ್ತು ಮಹಿಳೆಯರನ್ನು ಕಡಿಮೆ ಎಂದು ಪರಿಗಣಿಸುವ ಹುಡುಗರಿಂದ ದೂರವಿರುವುದು ಉತ್ತಮ ಎಂದು ಹೆಚ್ಚಿನ ಹುಡುಗಿಯರು ಪರಿಗಣಿಸುತ್ತಾರೆ.

ಎಲ್ಲದಕ್ಕೂ ಹೌದು ಎನ್ನುವುದು:
ಕೆಲ ಹುಡುಗರು ಹುಡುಗಿಯರನ್ನು ಮೆಚ್ಚಿಸಲು ಎಲ್ಲದಕ್ಕೂ ಹೌದು ಎನ್ನಲು ಪ್ರಾರಂಭಿಸುತ್ತಾರೆ. ಆದರೆ, ನೆನಪಿಡಿ ಇದು ಕೆಲ ದಿನಗಳವರೆಗೆ ಮಾತ್ರ ನಡೆಯುವುದು. ಏಕೆಂದರೆ, ಹುಡುಗಿ ಅಂತಹ ಸ್ವಭಾವದಿಂದ ಕೆಲವು ದಿನಗಳವರೆಗೆ ಸಂತೋಷವಾಗಿರಬಹುದು. ಮುಂದೆ ಬಹುಶಃ ಹುಡುಗನಿಗೆ ತನ್ನ ಮೇಲೆ ವಿಶ್ವಾಸವಿಲ್ಲ ಎಂದು ಆಕೆ ಅರ್ಥಮಾಡಿಕೊಳ್ಳಬಹುದು. ಸಾಮಾನ್ಯವಾಗಿ, ಯಾವುದು ಸರಿ, ಯಾವುದು ತಪ್ಪು ಎಂದು ಹೇಳುವುದನ್ನು ಇಬ್ಬರೂ, ಮೊದಲಿನಿಂದಲೇ ಬೆಳೆಸಿಕೊಳ್ಳಬೇಕು. ಸರಿ-ತಪ್ಪು ತಿಳಿದವರಿಗೆ, ಹೊಂದಿಕೊಂಡು ಹೋಗುವುದು ಕಷ್ಟವೇನಲ್ಲ.

ಮಗುವಿನಂತೆ ಆಡುವುದು:
ಮನಸ್ಸಿನಲ್ಲಿ ಸದಾ ಮಗುವಿನಂತಿರಬೇಕು ಎನ್ನುತ್ತಾರೆ. ಆದರೆ ಯಾವಾಗಲೂ ಬಾಲಿಶ ಸ್ವಭಾವವನ್ನು ಹೊಂದಿರುವುದು ತಪ್ಪು. ಹೆಂಗಸರು ಸಹ ಅಂತಹ ಹುಡುಗರನ್ನು ಇಷ್ಟಪಡುವುದಿಲ್ಲ, ಅವರ ಸ್ವಭಾವವು ಮಕ್ಕಳಂತೆ ಇರುತ್ತದೆ. ಇದರ ಹೊರತಾಗಿ ಹುಡುಗ ಯಾವುದೇ ಒಳ್ಳೆಯ ಕೆಲಸ ಮಾಡದಿದ್ದರೆ ಅಥವಾ ಯಾವುದೇ ಕೆಲಸದ ಜವಾಬ್ದಾರಿಯನ್ನು ತೆಗೆದುಕೊಳ್ಳದಿದ್ದರೆ, ಹುಡುಗಿಯರು ಅಂತಹ ಹುಡುಗರಿಂದ ದೂರ ಉಳಿಯಲು ಇಷ್ಟಪಡುತ್ತಾರೆ. ಏಕೆಂದರೆ, ಮುಂದೆ ಹೋಗಿ ಜವಾಬ್ದಾರಿ ತೆಗೆದುಕೊಳ್ಳುವವರೇ ಹೆಚ್ಚಾಗಿ ಮಹಿಳೆಯರಿಗೆ ಇಷ್ಟವಾಗುವುದು.

ಸ್ವಯಂ ಹೊಗಳಿಕೆ:
ಅನೇಕ ಜನರು ತಮ್ಮನ್ನು ತಾವು ಪರಿಪೂರ್ಣವೆಂದು ಪರಿಗಣಿಸುತ್ತಾರೆ. ತಮಗೆ ಎಲ್ಲವೂ ತಿಳಿದಿರುವಂತೆ ಎಲ್ಲರೆದುರು ಬಿಂಬಿಸುತ್ತಿರುತ್ತಾರೆ. ಇತರರ ಮುಂದೆ ತಮ್ಮ ಜ್ಞಾನವನ್ನು ಹಂಚಿಕೊಳ್ಳುತ್ತಾರೆ, ಎಲ್ಲದರಲ್ಲೂ ತಮ್ಮದೇ ಆದ ರೀತಿಯಲ್ಲಿ ಕೆಲಸವನ್ನು ಮಾಡಲು ಇಷ್ಟಪಡುತ್ತಾರೆ. ಆದರೆ ಯಾವಾಗಲೂ ನಿಯಮಗಳನ್ನು ಮಾಡುವ ಹುಡುಗರು ಹುಡುಗಿಯರ ಆಯ್ಕೆಯಾಗುವುದಿಲ್ಲ. ತಮ್ಮ ಬಗ್ಗೆ ಸುಖಾಸುಮ್ಮನೆ ಹೊಗಳಿಕೆಕೊಳ್ಳುವ ವ್ಯಕ್ತಿ ಹುಡುಗಿಯರಿಗೆ ಇಷ್ಟವಾಗುವುದಿಲ್ಲ.



Click it and Unblock the Notifications