Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಒಂದು ರೊಮ್ಯಾಂಟಿಕ್ ಕಿಸ್ ನೀಡುವುದು ಖುಷಿ, ನಂಬಿಕೆ, ಲೈಂಗಿಕ ತೃಪ್ತಿ
ಕಿಸ್ ಎಂಬುವುದು ಸೈನ್ ಆಫ್ ಅಟ್ರಾಕ್ಷನ್. ನಮ್ಮ ಸಂಗಾತಿ/ಪ್ರೇಮಿಗೆ ನಾವು ಮುತ್ತಿಟ್ಟಾಗ ಅಥವಾ ಅವರು ನಮಗೆ ಮುತ್ತಿಟ್ಟಾಗ ಆ ಕ್ಷಣ ಬೇರೆಲ್ಲಾ ಮರೆತು ನಮ್ಮದೇ ಲೋಕದಲ್ಲಿ ಮಗ್ನರಾಗುತ್ತೇವೆ ಆ ಶಕ್ತಿ ಕಿಸ್‌ನಲ್ಲಿದೆ.

ಒಂದು ಕಿಸ್ ಅವರು ನಮ್ಮನ್ನು ಎಷ್ಟೊಂದು ಪ್ರೀತಿಸುತ್ತಿದ್ದಾರೆ, ನಾವು ಅವರಿಗೆಷ್ಟು ಮುಖ್ಯ ಎಂಬುವುದನ್ನು ಸೂಚಿಸುತ್ತದೆ. ಒಂದು ಸಂಬಂಧ ಮತ್ತಷ್ಟು ಗಟ್ಟಿಯಾಗಲು ಕಿಸ್ ತುಂಬಾನೇ ಮುಖ್ಯವಾಗಿರುತ್ತೆ, ಲೈಂಗಿಕ ತೃಪ್ತಿಯಲ್ಲೂ ಕಿಸ್ ಪ್ರಮುಖ ಪಾತ್ರವಹಿಸುತ್ತದೆ.
ಕಿಸ್ ನಿಮ್ಮನ್ನು ಭಾವನಾತ್ಮಕವಾಗಿ ಹಾಗೂ ದೈಹಿಕವಾಗಿ ನಿಮ್ಮಿಬ್ಬರನ್ನು ಒಂದು ಮಾಡುವುದು. ಕಿಸ್ ಸಂಬಂಧವನ್ನು ಮತ್ತಷ್ಟು ಬೆಸೆಯುವುದು, ಸಂಬಂದಲ್ಲಿ ಕಂಡು ಬರುವ ಚಿಕ್ಕ ಪುಟ್ಟ ಮುನಿಸು ಮರೆಸುವ ಶಕ್ತಿ ಕಿಸ್‌ಗಿದೆ, ನೋವನ್ನು ಮರೆಸುವ, ಖುಷಿಯನ್ನು ತರುವ ಮ್ಯಾಜಿಕ್ ಪವರ್ ಕಿಸ್‌ನಲ್ಲಿದೆ.
ಸಂಗಾತಿಗೆ ಕಿಸ್ ನೀಡುವುದರಿಂದ ಇನ್ನೂ ಅನೇಕ ಪ್ರಯೋಜನಗಳಿವೆ ನೋಡಿ:

ಸಂಗಾತಿ ನಡುವೆ ಬಾಂಧವ್ಯ ಹೆಚ್ಚಿಸುತ್ತೆ
ನಿಮ್ಮ ಸಂಗಾತಿಯೊಂದಿಗೆ ಭಾವನಾತ್ಮಕವಾಗಿ ಹಾಗೂ ದೈಹಿಕವಾಗಿ ಒಂದಾಗಲು ಕಿಸ್ ಸಹಾಯ ಮಾಡುತ್ತೆ. ಒಂದು ಕಿಸ್ ಇಬ್ಬರಲ್ಲಿ ಫೈರ್ ಉಂಟು ಮಾಡುತ್ತೆ, ಒಬ್ಬರಿಗೊಬ್ಬರು ಬೇಕು ಅನಿಸಲಾರಂಭಿಸುತ್ತದೆ, ಪ್ರೀತಿಯ ಆಳವನ್ನು ಹೆಚ್ಚಿಸುತ್ತೆ.

ಮಾನಸಿಕ ಒತ್ತಡವನ್ನು ದೂರ ಮಾಡುತ್ತೆ
ಇಬ್ಬರು ಪರಸ್ಪರ ಕಿಸ್ ನೀಡಲಾರಂಭಿಸಿದಾಗ ಬೇರೆಲ್ಲಾ ಒತ್ತಡ, ಚಿಂತೆ ಎಲ್ಲವೂ ಮರೆತು ಆ ಕ್ಷಣ ಅನುಭವಿಸಲು ಸಾಧ್ಯವಾಗುವುದು. ಕಿಸ್ ಮಾನಸಿಕ ಒತ್ತಡ ಹೊರದೂಡುತ್ತೆ, ಮನಸ್ಸಿನಲ್ಲಿ ಖುಷಿ ಹೆಚ್ಚಿಸುತ್ತೆ.

ನಂಬಿಕೆ ಹೆಚ್ಚಿಸುವುದು
ಸಂಬಂಧದಲ್ಲಿ ಮುಖ್ಯವಾಗಿ ಬೇಕಾಗಿರುವುದು ನಂಬಿಕೆ. ಪರಸ್ಪರ ಇಷ್ಟವಿಲ್ಲದಿದ್ದರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬಹುದು, ಆದರೆ ಕಿಸ್ ಮಾಡಲ್ಲ. ಕಿಸ್ ಮಾಡಬೇಕೆಂದರೆ ಒಬ್ಬರನ್ನೊಬ್ಬರು ತುಂಬಾ ಇಷ್ಟ ಪಡಲೇಬೇಕು. ಆದ್ದರಿಂದ ಕಿಸ್ ಸಂಗಾತಿ ಮೇಲಿಟ್ಟಿರುವ ನಂಬಿಕೆ ಹೆಚ್ಚಿಸುವುದು.

ಕಿಸ್ ಖುಷಿ ನೀಡುವುದು
ರೊಮ್ಯಾಂಟಿಕ್ ಮುತ್ತು ತುಂಬಾ ಖುಷಿ ನೀಡುವುದು, ಕಿಸ್ ಮಾಡಿದಾಗ ಖುಷಿಯ ಹಾರ್ಮೋನ್‌ಗಳು ಉತ್ಪತ್ತಿಯಾಗುವುದು, ಕಿಸ್ ಮೂಲಕ ಸಂಗಾತಿಯನ್ನು ಸೆಳೆಯಬಹುದು, ತುಟಿಗೆ-ತುಟಿ ಬೆಸೆದು ನಿಡುವ ಕಿಸ್ ನಿಮ್ಮಿಬ್ಬರಲ್ಲಿ ದೈಹಿಕವಾಗಿ ಒಂದಾಗಬೇಕೆಂಬ ಅಸೆಯನ್ನು ಮೂಡಿಸುವುದು, ಸೆಕ್ಸ್ ಲೈಫ್ ಎಂಜಾಯ್ ಮಾಡಲು ಕಿಸ್ ಮುಖ್ಯ. ಬೆಡ್‌ರೂಂನಲ್ಲಿ ಸಂಗಾತಿ ನೀಡುವ ಕಿಸ್ ದೈಹಿಕ ಹಾಗೂ ಮಾನಸಿಕ ತೃಪ್ತಿ ನೀಡುವುದು.



Click it and Unblock the Notifications
