For Quick Alerts
ALLOW NOTIFICATIONS  
For Daily Alerts

Valentine's Day: ಮತ್ತೆ ಟ್ರೆಂಡ್‌ ಆಗ್ತಿದೆ "ಪ್ರೇಮಪತ್ರ': ಮನಸ್ಸಿನ ಭಾವನೆಗೆ ಅಕ್ಷರ ರೂಪ ಕೊಟ್ಟು ಪ್ರಪೋಸ್‌ ಮಾಡಿ!!

|

ಇನ್ನೇನು ಪ್ರೇಮಿಗಳ ದಿನಾಚರಣೆಗೆ ದಿನಗಣನೆ ಆರಂಭವಾಗಿದೆ. ತನ್ನ ಪ್ರೇಮಿಗೆ ವಿಭಿನ್ನವಾಗಿ, ವಿಶೇಷವಾಗಿ ಪ್ರೇಮ ನಿವೇದನೆ ಮಾಡಬೇಕೆಂದು ಹಲವು ಪ್ರೇಮಿಗಳು ಸಾಕಷ್ಟು ಯೋಚಿಸಿರಬಹುದು. ಆದರೆ ಒಂದನ್ನು ನೆನಪಿಡಿ, ನೀವು ಎಷ್ಟೇ ಭಿನ್ನವಾಗಿ ನಿಮ್ಮ ಪ್ರೇಮ ನಿವೇದನೆ ಮಾಡಿದರೂ ಈ ಒಂದು ಅಂಶವನ್ನು ಮಾತ್ರ ಮರೆಯಲೇ ಬೇಡಿ. ಅದುವೇ "ಪ್ರೇಮಪತ್ರ".

Love Letter

ಇದು ವ್ಯಾಟ್ಸ್ಯಾಪ್‌, ಫೇಸ್‌ಬುಕ್‌, ಇನ್ಸ್ಟಾಗ್ರಾನಂಥ ಸಾಮಾಜಿಕ ಜಾಲತಾಣಗಳ ಯುಗ. ಬಹುತೇಕ ಪ್ರೇಮಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಪ್ರೇಮವನ್ನು ಹೇಳಿಕೊಳ್ಳಲು ಯೋಚಿಸಿದ್ದರೆ ಇಂದೇ ಇಂಥಾ ಯೋಚನೆಯನ್ನು ಬಿಟ್ಟುಬಿಡಿ. ಏಕೆಂದರೆ ಜಗತ್ತು ಎಷ್ಟೇ ಮುಂದುವರೆದರೂ ಭಾವನೆಗಳು ಬದಲಾಗುವುದಿಲ್ಲ. ಸಾಮಾಜಿಕ ಜಾಲತಾಣಗಳಿಂದ ಮಾಡುವ ಪ್ರೇಮ ನಿವೇದನೆಗಿಂದ ನಿಮ್ಮದೇ ಭಾವನೆಗಳನ್ನು, ನಿಮ್ಮದೇ ಭಾಷೆಯಲ್ಲಿ ಸ್ವತಃ ಹಸ್ತಾಕ್ಷರಗಳ ಮೂಲಕ ಬರೆದು ಪ್ರೇಮಿಗೆ ನೀಡುವ ಪ್ರೇಮ ಪತ್ರ ಎಂದಿಗೂ ವಿಶೇಷ. ಇದು ನಿಮ್ಮ ಪ್ರೇಮಿಗೆ ವಿಶೇಷ ಭಾವನೆ ಮೂಡಿಸಬಹುದು

ಇಂದಿನ ಇಮೋಜಿಗಿಂತ ಅಂದಿನ ಪ್ರೇಮಪತ್ರವೇ ಹೆಚ್ಚು ಅಮೂಲ್ಯ
20ನೇ ಶತಮಾನದ ಬಹುತೇಕ ಪ್ರೇಮಿಗಳು ತಮ್ಮ ಪ್ರೇಮಿಗೆ ಒಂದು ಪ್ರೇಮ ಪತ್ರವನ್ನು ಬರೆದಿರುವುದಿಲ್ಲ. ಇವರಿಗೆ ಪ್ರೇಮ ಪತ್ರದ ಮಹತ್ವವೇ ತಿಳಿದಿಲ್ಲ ಎನ್ನಬಹುದು. ಕೆಲವರು ಇಂಥಾ ಯುಗದಲ್ಲೂ ಪ್ರೇಮ ಪತ್ರವೇ ಎಂದು ಹೀಯಾಳಿಸುವವರೂ ಉಂಟು. ಆದರೆ ಪ್ರೇಮ ಪತ್ರ ಎಂದಿಗೂ ಎನರ್‌ಗ್ರೀನ್‌, ನಿಮ್ಮ ನಿಜ ಭಾವನೆಗಳನ್ನು ಪ್ರೇಮಿಗೆ ದಾಟಿಸಲು ಬೆಸ್ಟ್ ಆಯ್ಕೆ ಏಕೆ ಎಂದು ಮುಂದೆ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ ನೋಡಿ.

1. ಪ್ರೇಮಪತ್ರ ಏಕಿಷ್ಟು ವಿಶೇಷ?

1. ಪ್ರೇಮಪತ್ರ ಏಕಿಷ್ಟು ವಿಶೇಷ?

ಪ್ರೇಮಪತ್ರ ಕೇವಲ ಒಂದು ಕಾಗದದ ತುಂಡಲ್ಲ, ಇದು ನಿಮ್ಮ ಪ್ರೇಮಿಯಲ್ಲಿ ಪ್ರಬಲವಾದ ಭಾವನೆಗಳನ್ನು ಉಂಟುಮಾಡುವ ಶಕ್ತಿಯನ್ನು ಹೊಂದಿವೆ.

ನಿಮ್ಮ ಪ್ರೇಮಿಯ ಬಗ್ಗೆ ಒಂದು ಸುದೀರ್ಘ ಪತ್ರ ಬರೆಯುವ ಮೂಲಕ ನೇರವಾಗಿ ನಿಮ್ಮ ಪ್ರೇಮಿಗೆ ಹೇಳಲು ಸಾಧ್ಯವಾಗದ ಹಾಗೂ ನಿಮ್ಮ ಪ್ರೇಮಿಯ ಬಗ್ಗೆ ಇರುವ ಅದೆಷ್ಟೋ ಭಾವನೆಗಳನ್ನು ಸುಲಭವಾಗಿ ಅಕ್ಷರರೂಪಕ್ಕೆ ಇಳಿಸಬಹುದು. ಈಗಾಗಲೇ ಸೇವ್‌ ಆಗಿರುವ ಪ್ರೇಮಿಯ ನಂಬರ್‌ ಗೆ ಕೇವಲ ಒಂದು ಸ್ವೈಪ್‌ ಮಾಡುವ ಮೂಲಕ ಸಂದೇಶ ಕಳುಹಿಸುವುದರಲ್ಲಿರುವ ಭಾವನೆಗಿಂತ ಪತ್ರ ಬರೆದು ಪ್ರೇಮಿಗೆ ನೀಡುವ ಭಾವನೆ ಅಮೂಲ್ಯ. ನಿಮ್ಮ ಭಾವನೆಗಳನ್ನು ಕಾಗದದ ಮೇಲೆ ಅಕ್ಷರವಾಗಿ ಮೂಡಿಸಿದಾಗ ನಿಮ್ಮ ಪ್ರೇಮಿಗೆ ಆಗುವ ಸಂತೋಷವನ್ನು ಬೇರೆ ಯಾವುದೇ ಮೊಬೈಲ್‌ ಸಂದೇಶ ನೀಡಲು ಖಂಡಿತ ಸಾಧ್ಯವಿಲ್ಲ. ಕೇವಲ ಮೊಬೈಲ್‌ ನ ಇಮೋಜಿಯಲ್ಲೇ ಎಲ್ಲವನ್ನೂ ಹೇಳುವ ಬದಲು ನಿಮ್ಮ ಅಕ್ಷರಗಳಿಗೆ ಜೀವ ತುಂಬುವ ಮೂಲಕ ನಿಮ್ಮ ಈ ಪ್ರೇಮಿಗಳ ದಿನವನ್ನು ವಿಶೇಷಗೊಳಿಸಿ.

2. ಶಾಶ್ವತವಾಗಿಡಬಹುದಾದ ನೆನಪು

2. ಶಾಶ್ವತವಾಗಿಡಬಹುದಾದ ನೆನಪು

ನಿಮ್ಮ ಫೋನ್ ಮೂಲಕ ನೀವು ಕಳುಹಿಸುವ ವರ್ಚುವಲ್ ಸಂದೇಶಗಳಿಗೆ ಹೋಲಿಸಿದರೆ ಪ್ರೀತಿಯ ಅಕ್ಷರಗಳು ಭೌತಿಕವಾಗಿರುತ್ತವೆ. ಮೊಬೈಲ್‌ನ ಪ್ರೇಮಪತ್ರದಲ್ಲಿ ನೀವು ಅಕ್ಷರಗಳನ್ನು ಅಕ್ಷರಗಳಾಗಿಯಷ್ಟೇ ನೋಡಬಹುದು, ಹಸ್ತಾಕ್ಷರದ ಅನುಭವ ನೀಡಲು ಅದರಿಂದ ಸಾಧ್ಯವಿಲ್ಲ. ಮೊಬೈಲ್‌ ಸಂದೇಶ ತಾತ್ಕಾಲಿಕ ಅಥವಾ ಮೊಬೈಲ್‌ ಹಾಳಾದರೆ, ಬದಲಾಯಿಸಿದರೆ ನಾಶವಾಗಬಹುದು. ಪ್ರೇಮಪತ್ರವನ್ನು ಎಂದಿಗೂ ಸುರಕ್ಷಿತವಾಗಿ ಇಡಬಹುದು, ಬೇಕೆನಿಸಿದಾಗ ಮತ್ತೆ ಮತ್ತೆ ಓದಬಹುದು. ಪ್ರೇಮದ ಅತ್ಯುತ್ತಮ ನೆನಪಾಗಿ ಉಳಿಯುತ್ತದೆ.

3. ಅಮೂಲ್ಯ ಮತ್ತು ವೈಯಕ್ತಿಕವಾದುದು

3. ಅಮೂಲ್ಯ ಮತ್ತು ವೈಯಕ್ತಿಕವಾದುದು

ನಿಮ್ಮದೇ ಹೆಸರಿರುವ ಪ್ರೇಮಪತ್ರ ಒಂದನ್ನು ನಿಮ್ಮ ನೆಚ್ಚಿನವರಿಂದ ಸ್ವೀಕರಿಸುವುದೇ ಒಂದು ಅಮೂಲ್ಯ ಭಾವನೆ. ಇದನ್ನು ನಿಮಗಾಗಿ ಎಂದೇ ನಿಮ್ಮ ಪ್ರೇಮಿ ಸಾಕಷ್ಟು ಸಮಯ ನೀಡಿ, ಭಾವನೆಗಳನ್ನು ತುಂಬಿ, ದೀರ್ಘಕಾಲ ಆಲೋಚಿಸಿದ ನಂತರ ಬರೆದಿರುವ ಈ ಪತ್ರ. ಇದು ನಿಮಗೆ ಮಾತ್ರ ಸೇರಿದ್ದು, ತುಂಬಾ ವೈಯಕ್ತಿಕವೂ ಹೌದು.

4. ಹೆಚ್ಚು ಅಭಿವ್ಯಕ್ತಿಸಬಹುದಾದ ಮಾಧ್ಯಮ

4. ಹೆಚ್ಚು ಅಭಿವ್ಯಕ್ತಿಸಬಹುದಾದ ಮಾಧ್ಯಮ

ಪ್ರೇಮಿಗಳು ತಮ್ಮ ಪ್ರೀತಿಪಾತ್ರರ ಬಗ್ಗೆ ತಮ್ಮ ಭಾವನೆಗಳನ್ನು ನೇರವಾಗಿ ವ್ಯಕ್ತಪಡಿಸಲು ಅನೇಕ ಬಾರಿ ಹೆಣಗಾಡುತ್ತಾರೆ. ಆದರೆ ಪ್ರಮ ಪತ್ರ ನಿಮ್ಮ ಭಾವನೆಗಳಿಗೆ ಹೆಚ್ಚು ಅರ್ಥ ನೀಡುತ್ತದೆ, ಅಲ್ಲದೆ ಇದು ನಿಮ್ಮ ಸಂಬಂಧವನ್ನು ಇನ್ನಷ್ಟು ಗಾಢವಾಗಿಸುತ್ತದೆ. ನಿಮ್ಮ ಸಂಗಾತಿ ನಿಮ್ಮ ಭಾವನೆಗಳನ್ನು ಓದಬಹುದು ಮತ್ತು ಅಕ್ಷರದಲ್ಲಡಗಿರುವ ಭಾವನೆಗಳನ್ನು ನಿಧಾನವಾಗಿ ಅರ್ಥಮಾಡಿಕೊಂಡು ಪ್ರತ್ರಿಕ್ರಿಯೆ ನೀಡಬಹುದು.

5. ನೆನಪಿನಲ್ಲುಳಿಯುವಂತೆ ನೀಡಿ

5. ನೆನಪಿನಲ್ಲುಳಿಯುವಂತೆ ನೀಡಿ

ನಿಮ್ಮ ಮೊದಲ ಪ್ರೇಮ ಪತ್ರವನ್ನು ಜೀವನಪರ್ಯಂತ ನೆನಪಿನಲ್ಲಿ ಉಳಿಯುವಂತೆ ಮಾಡಲು ವಿಭಿನ್ನವಾಗಿ ನೀಡುವ ಮೂಲಕ ಈ ವಿಶೇಷ ಅನುಭವವನ್ನು ಹೆಚ್ಚು ರೋಮಾಂಚನಗೊಳಿಸಬಹುದು. ನಿಮ್ಮ ಪ್ರೇಮಿಯ ಮನೆಗೆ ಪೋಸ್ಟ್ ಮಾಡಬಹುದು ಅಥವಾ ಅವರ ಬ್ಯಾಗ್‌ನಲ್ಲಿ ಅವರಿಗೇ ಅರಿವಿಲ್ಲದಂತೆ ಇಟ್ಟು ನಿಮ್ಮ ಸಂಗಾತಿ ಅವುಗಳನ್ನು ಕಂಡುಹಿಡಿಯಲು ಕಾಯಬಹುದು. ಎಲ್ಲಕ್ಕಿಂತ ಭಿನ್ನವಾಗಿ, ಆಕರ್ಷಕವಾಗಿ ಪ್ಲಾನ್‌ ಮಾಡಿ, ಅದ್ಭುತ ಸೆಟ್‌ ಕ್ರಿಯೇಟ್‌ ಮಾಡಿ ಅಲ್ಲಿ ನಿಮ್ಮ ಪ್ರೇಮ ಪತ್ರವನ್ನು ನೀಡಿದರೆ ನಿಮ್ಮ ಪ್ರೇಮಿ ಖಂಡಿತವಾಗಿಯೂ ಅಚ್ಚರಿಯಾಗುವುದರಲ್ಲಿ ಸಂಶಯವೇ ಇಲ್ಲ.

English summary

Move Aside Social Media, Love Letter Is The Best Option To Express Love

Here we are going to tell you about why love letter is more precious and expressive than social media. We have many platforms to express our feelings, yet we hold ourselves back from expressing freely; we depend on same old one-liner texts or emojis to do the talking for us. We will tell you why it is so important to write and send love letters or notes to.
X
Desktop Bottom Promotion