For Quick Alerts
ALLOW NOTIFICATIONS  
For Daily Alerts

ವ್ಯಾಲೆಂಟೈನ್ಸ್ ಡೇ ಕುರಿತ 15 ಆಸಕ್ತಿಕರ ಸಂಗತಿಗಳು

|

ವ್ಯಾಲೆಂಟೈನ್ಸ್ ಡೇ- ಪ್ರತಿ ವರ್ಷ ಪ್ರೀತಿಸುವವರು ತಮ್ಮ ಪ್ರೀತಿಗಾಗಿ ತಾವು ಮನಸಾರೆ ಪ್ರೀತಿ ಮಾಡುವವರ ಬಳಿ ತಮ್ಮ ನಿವೇದನೆಯನ್ನು ಪ್ರೀತಿಯಿಂದ ಹೇಳಿಕೊಳ್ಳುವ ದಿನ. ಈ ದಿನದಂದು ತಮ್ಮ ಪ್ರೀತಿಯನ್ನು ನಿವೇದನೆ ಮಾಡಿಕೊಂಡರೆ ಅದು ಸಫಲವಾಗುತ್ತದೆ ಎಂಬ ಭಾವನೆ ಈಗಲೂ ಹಲವರಲ್ಲಿದೆ.

ಹಾಗಾಗಿ ಪ್ರತಿ ವರ್ಷ ಫೆಬ್ರವರಿ 14 ಕ್ಕೆ ವಿಶೇಷವಾದ ಪ್ರಾಧಾನ್ಯತೆ ಕೇವಲ ನಮ್ಮ ಭಾರತ ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದ ಹಲವು ಭಾಗಗಳಲ್ಲಿ ಇದೆ. ಅಷ್ಟಕ್ಕೂ ವ್ಯಾಲೆಂಟೈನ್ಸ್ ಡೇ ಎಂಬ ವಿಚಾರವಾಗಿ ನಾವು ಪ್ರಭಾವಿತರಾಗಿರುವುದೇ ಬೇರೆ ದೇಶಗಳಿಂದ, ಮುಂದುವರೆದ ರಾಷ್ಟ್ರಗಳಿಂದ. ಅಲ್ಲೆಲ್ಲಾ ಜನರು ವ್ಯಾಲೆಂಟೈನ್ಸ್ ಡೇ ದಿನದಂದು ತುಂಬಾ ಸಡಗರದಿಂದ ದುಬಾರಿ ಉಡುಗೊರೆಗಳಿಗಾಗಿ ಹಣ ಖರ್ಚು ಮಾಡಿಈ ದಿನದ ವಿಶೇಷತೆಯನ್ನು ಹೆಚ್ಚಿಸುತ್ತಾರೆ.

ವ್ಯಾಲೆಂಟೈನ್ಸ್ ಡೇ ದಿನದ ವಿಶೇಷತೆ ಮತ್ತು ಫೆಬ್ರವರಿ 14 ನೇ ತಾರೀಖಿಗೆ ಇಷ್ಟು ಪ್ರಾಧಾನ್ಯತೆ ಬರಲು ಕಾರಣ ಏನು ಎಂಬುದನ್ನು ಈ ಲೇಖನದಲ್ಲಿ ಸವಿಸ್ತಾರವಾಗಿ ತಿಳಿದುಕೊಳ್ಳೋಣ.

ವ್ಯಾಲೆಂಟೈನ್ಸ್ ಡೇ ಗೆ ಈ ಹೆಸರು ಬರಲು ಕಾರಣವೆಂದರೆ ಅದೇ ಹೆಸರಿನ ಒಬ್ಬ ವ್ಯಕ್ತಿ. ವ್ಯಾಲೆಂಟೈನ್ ಎಂಬ ಸಂತ ವ್ಯಾಲೆಂಟೈನ್ಸ್ ಡೇ ಪ್ರಾರಂಭವಾಗಲು ಕಾರಣವಾದನು ಎಂದು ಹೇಳುತ್ತಾರೆ. ಆದರೆ ಇಲ್ಲೊಂದು ಗೊಂದಲವಿದೆ. ಏನೆಂದರೆ ವ್ಯಾಲೆಂಟೈನ್ ಹೆಸರಿನಲ್ಲಿ ಇಬ್ಬರು ವ್ಯಕ್ತಿಗಳಿದ್ದರು. ಕೆಲವೊಂದು ಮೂಲಗಳ ಪ್ರಕಾರ ಮೂರನೇ ಶತಮಾನದಲ್ಲಿ ರೋಮ್ ದೇಶದಲ್ಲಿ ವ್ಯಾಲೆಂಟೈನ್ ಎಂಬ ಪೂಜಾರಿ ಇದ್ದನು. ಆಗಿನ ಕಾಲದಲ್ಲಿ ಅಲ್ಲಿನ ರಾಜ ಕ್ಲಾಡಿಯಸ್ II ಮದುವೆ ಸಂಭ್ರಮದ ಮೇಲೆ ನಿರ್ಬಂಧ ಹೇರಿದ್ದನು. ಏಕೆಂದರೆ ಮದುವೆ ಎನ್ನುವ ನೆಪದಿಂದ ತನ್ನ ಸೈನಿಕರು ಪ್ರಭಾವಿತರಾಗಿ ತಮ್ಮ ಕಾರ್ಯ ನಿರ್ವಹಣೆಯಲ್ಲಿ ಶೇಕಡ 100% ಕಾರ್ಯಕ್ಷಮತೆ ತೋರಿಸುವುದಿಲ್ಲ. ಇದರಿಂದ ತನಗೆ ಅಕ್ಕಪಕ್ಕದ ರಾಜರುಗಳಿಂದ ಸೋಲು ಎದುರಾಗುತ್ತದೆ ಎನ್ನುವ ಕಾರಣಕ್ಕೆ ಸಂಪೂರ್ಣವಾಗಿ ಮದುವೆಯ ವಿಚಾರವನ್ನು ತಡೆಹಿಡಿದಿದ್ದನು. ಆದರೆ ವ್ಯಾಲೆಂಟೈನ್ ಎಂಬ ವ್ಯಕ್ತಿ ಇದಕ್ಕೆ ವಿರುದ್ಧವಾಗಿ ಕದ್ದು ಮುಚ್ಚಿ ಮದುವೆಗಳನ್ನು ಮಾಡಿಸುತ್ತಿದ್ದನು. ಈ ವಿಚಾರ ರಾಜನಿಗೆ ತಿಳಿದು ಅವನನ್ನು ನೇಣಿಗೇರಿಸಿದನು. ಇದರ ಜ್ಞಾಪಕಾರ್ಥಕವಾಗಿ ವ್ಯಾಲೆಂಟೈನ್ಸ್ ಡೇ ಎಂಬ ಹೆಸರು ಬಂದಿತು ಎಂದು ಹೇಳುತ್ತಾರೆ.

1. ಪ್ರಾಚೀನ ಪಗಾನ್ ಹಬ್ಬದಲ್ಲಿ ವ್ಯಾಲೆಂಟೈನ್ಸ್ ಡೇ ತನ್ನ ಮೂಲವನ್ನು ಹೊಂದಿದೆ ಎಂದು ತಿಳಿದು ಬಂದಿದೆ : -

1. ಪ್ರಾಚೀನ ಪಗಾನ್ ಹಬ್ಬದಲ್ಲಿ ವ್ಯಾಲೆಂಟೈನ್ಸ್ ಡೇ ತನ್ನ ಮೂಲವನ್ನು ಹೊಂದಿದೆ ಎಂದು ತಿಳಿದು ಬಂದಿದೆ : -

ಕೆಲವು ಇತಿಹಾಸ ತಜ್ಞರು ಹೇಳುವ ಹಾಗೆ ವ್ಯಾಲೆಂಟೈನ್ ಎಂಬ ಸಂತ ಫೆಬ್ರವರಿ 14 ರಂದು ಮರಣ ಹೊಂದಿದ ಕಾರಣ ಅಂದಿನಿಂದ ಇಂದಿನವರೆಗೆ ಆ ದಿನವನ್ನು ವ್ಯಾಲೆಂಟೈನ್ಸ್ ಡೇ ಎಂದು ಕರೆಯುತ್ತಾರೆ. ಅಲ್ಲಿನ ಇನ್ನು ಕೆಲವರು ಹೇಳುವ ಹಾಗೆ ಪ್ರಾಚೀನ ಕಾಲದಲ್ಲಿ ರೋಮ್ ದೇಶದಲ್ಲಿ ಫೆಬ್ರವರಿ 15 ರಂದು Lupercalia ಫಲವತ್ತತೆಯ ಹಬ್ಬವನ್ನು ಆಚರಿಸಲಾಗುತ್ತಿತ್ತು. ಈ ಹಬ್ಬದ ಆಚರಣೆಯ ಸಂಭ್ರಮದಲ್ಲಿ ಅಲ್ಲಿನ ಕೃಷಿ ಪದ್ಧತಿಗೆ ಸಂಬಂಧ ಪಟ್ಟಂತೆ Faunus ಎಂಬ ದೈವೀ ಶಕ್ತಿಗೆ ರೋಮ್ ದೇಶದ ಉನ್ನತಿಗೆ ಕಾರಣವಾದ Romulus ಮತ್ತು Remus ಎಂಬುವರು ಪ್ರಾಣಿಗಳನ್ನು ಬಲಿ ಕೊಟ್ಟು ಅವುಗಳ ಚರ್ಮದಿಂದ ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಹೊಡೆಯುತ್ತಿದ್ದರು. ಹೀಗೆ ಮಾಡುವುದರಿಂದ ಮಹಿಳೆಯರ ದೇಹದ ಫಲವತ್ತತೆ ಹೆಚ್ಚಾಗುತ್ತದೆ ಎಂಬುದು ಅವರ ನಂಬಿಕೆ ಆಗಿತ್ತು. ಇದು ಆನಂತರದಲ್ಲಿ ವ್ಯಾಲೆಂಟೈನ್ಸ್ ಡೇ ಆಗಿ ಬದಲಾಯಿತು ಎಂದು ಕೆಲವರು ಹೇಳುತ್ತಾರೆ.

2. ಪ್ರೀತಿಗಾಗಿ 1300 ನೇ ಇಸ್ವಿಯಲ್ಲಿ ಫೆಬ್ರವರಿಯ 14 ನೇ ತಾರೀಖಿನ ದಿನವನ್ನು ಮೀಸಲಿಟ್ಟು ಅಧಿಕೃತವಾಗಿ ಅಂದು ರಜೆ ಘೋಷಣೆ ಮಾಡಲಾಯಿತು : -

2. ಪ್ರೀತಿಗಾಗಿ 1300 ನೇ ಇಸ್ವಿಯಲ್ಲಿ ಫೆಬ್ರವರಿಯ 14 ನೇ ತಾರೀಖಿನ ದಿನವನ್ನು ಮೀಸಲಿಟ್ಟು ಅಧಿಕೃತವಾಗಿ ಅಂದು ರಜೆ ಘೋಷಣೆ ಮಾಡಲಾಯಿತು : -

ಕೆಲವು ಮೂಲಗಳು ಹೇಳುವ ಹಾಗೆ 5ನೇ ಶತಮಾನದ ಅಂತ್ಯದಲ್ಲಿ ರೂಮ್ ದೇಶದ ಪಾದ್ರಿ Gelasius ಎನ್ನುವವರು ಫೆಬ್ರವರಿ 14ರಂದು ರಜೆ ಘೋಷಣೆ ಮಾಡಿ ಅದನ್ನು ವ್ಯಾಲೆಂಟೈನ್ಸ್ ಡೇ ಎಂದು ಅಧಿಕೃತವಾಗಿ ಆದೇಶ ಹೊರಡಿಸಿದರು. ಇದರ ನಂತರ ಇದೊಂದು ಸಂಪ್ರದಾಯವಾಗಿ ಬದಲಾಗಿ ಫ್ರಾನ್ಸ್ ಮತ್ತು ಇಂಗ್ಲೆಂಡ್ ದೇಶದಲ್ಲಿ ಮೊದಲ ಬಾರಿಗೆ ಆಚರಣೆ ಮಾಡಿದರು. ಅವರ ಪ್ರಕಾರ ಫೆಬ್ರವರಿ 14 ರ ನಂತರ ಹಕ್ಕಿಗಳು ಸಹ ತಮ್ಮ ಸಂತತಿಯನ್ನು ವೃದ್ಧಿಸಿಕೊಳ್ಳಲು ಪ್ರಯತ್ನ ಮಾಡುತ್ತವೆ ಎಂದು ನಂಬಿದ್ದಾರೆ.

3. ವ್ಯಾಲೆಂಟೈನ್ಸ್ ಡೇ ಕಾರ್ಡ್ ಮೇಲೆ ಬಿಲ್ಲು ಮತ್ತು ಬಾಣವನ್ನು ಹಿಡಿದ ಕ್ಯುಪಿಡ್ ಚಿತ್ರ ನಿಮಗೆ ನೋಡಲು ಕಾಣಸಿಗುತ್ತದೆ.

3. ವ್ಯಾಲೆಂಟೈನ್ಸ್ ಡೇ ಕಾರ್ಡ್ ಮೇಲೆ ಬಿಲ್ಲು ಮತ್ತು ಬಾಣವನ್ನು ಹಿಡಿದ ಕ್ಯುಪಿಡ್ ಚಿತ್ರ ನಿಮಗೆ ನೋಡಲು ಕಾಣಸಿಗುತ್ತದೆ.

ಈ ಚಿತ್ರಕ್ಕೆ ಗ್ರೀಕ್ ಪುರಾಣದ ಇತಿಹಾಸವಿದೆ. ಆದರೆ ನಿಮಗೆಲ್ಲ ಈಗ ಮನಸ್ಸಿನಲ್ಲಿ ಒಂದು ಸಂದೇಹ ಮೂಡಿ ಬರಬಹುದು. ವ್ಯಾಲೆಂಟೈನ್ಸ್ ಡೇ ಕಾರ್ಡ್ ಮೇಲೆ ಕ್ಯುಪಿಡ್ ಚಿತ್ರ ಹಾಕಲು ಕಾರಣವೇನು ಎಂದು. ಇದಕ್ಕೂ ಒಂದು ಕಥೆಯಿದೆ. ಅದೇನೆಂದರೆ 700 BC ನಲ್ಲಿ ಗ್ರೀಕ್ ದೇಶದಲ್ಲಿ Eros ಎಂಬ ಅತ್ಯಂತ ಸುಂದರ ಮನಮೋಹಕ ವ್ಯಕ್ತಿಯನ್ನು ಪ್ರೀತಿಯ ವಿಚಾರದಲ್ಲಿ ದೇವರು ಎಂದು ಪೂಜಿಸುತ್ತಿದ್ದರು. ಈತ ನೋಡಲು ಸುಂದರವಾಗಿರುವುದು ಮಾತ್ರವಲ್ಲದೆ ಈತನ ಸೌಂದರ್ಯಕ್ಕೆ ಮತ್ತು ದೇಹದ ಮೈಕಟ್ಟನ್ನು ನೋಡಿದವರಿಗೆ ತಾವು ಜೀವನದಲ್ಲಿ ಪ್ರೀತಿ ಮಾಡಬೇಕು ಎನಿಸುತ್ತಿತ್ತು. ಆದರೆ ನಾಲ್ಕನೇ ಶತಮಾನದವರೆಗೆ ರೋಮ್ ದೇಶದಲ್ಲಿ ಪ್ರೀತಿಯ ಸಂಕೇತವಾಗಿ ಒಬ್ಬ ಅತ್ಯಂತ ಸುಂದರವಾದ ಚಿಕ್ಕ ಹುಡುಗನ ಚಿತ್ರವನ್ನು ಕಾರ್ಡ್ ಗಳ ಮೇಲೆ ಬಳಕೆ ಮಾಡಲಾಗುತ್ತಿತ್ತು. ಆದರೆ ಆನಂತರದಲ್ಲಿ ಹುಡುಗನ ಬದಲಿಗೆ Eros ನನ್ನು ಕ್ಯುಪಿಡ್ ಎಂದು ನಾಮಕರಣ ಮಾಡಿ ಬಳಸಲು ಪ್ರಾರಂಭ ಮಾಡಿದರು. ಈ ಪದ್ಧತಿ ಅಧಿಕೃತವಾಗಿ 19ನೇ ಶತಮಾನದಲ್ಲಿ ವ್ಯಾಲೆಂಟೈನ್ಸ್ ಡೇ ಸಂಕೇತವಾಗಿ ಬದಲಾಯಿತು.

4. ಮೊದಲ ವ್ಯಾಲೆಂಟೈನ್ ಸಂದೇಶ 15ನೇ ಶತಮಾನದಲ್ಲಿ ರವಾನೆಯಾದ ಬಗ್ಗೆ ಮಾಹಿತಿಯಿದೆ : -

4. ಮೊದಲ ವ್ಯಾಲೆಂಟೈನ್ ಸಂದೇಶ 15ನೇ ಶತಮಾನದಲ್ಲಿ ರವಾನೆಯಾದ ಬಗ್ಗೆ ಮಾಹಿತಿಯಿದೆ : -

ವ್ಯಾಲೆಂಟೈನ್ಸ್ ಡೇ ಸಂದರ್ಭದಲ್ಲಿ ಪ್ರೇಮಿಗಳು ತಮ್ಮ ಪ್ರೀತಿಯ ನಿವೇದನೆ ಹೊಂದಿರುವ ಸಂದೇಶವನ್ನು ಎಕ್ಸ್ಚೇಂಜ್ ಮಾಡಿಕೊಳ್ಳುವುದು ವಾಡಿಕೆ. ಆದರೆ ಇದಕ್ಕೆ ಸಂಬಂಧಪಟ್ಟಂತೆ ಮೊದಲನೆಯ ಸಂದೇಶ ಯಾವಾಗ ಯಾರಿಂದ ಯಾರಿಗೆ ತಲುಪಿತು ಎಂಬುದನ್ನು ಪತ್ತೆ ಹಚ್ಚಲು ಮುಂದಾದರೆ ಫ್ರೆಂಚ್ ದೇಶದಲ್ಲಿ ಚಾರ್ಲ್ಸ್ ಎಂಬ ವ್ಯಕ್ತಿ ತನ್ನ ಪ್ರೀತಿಯ ಹೆಂಡತಿಗೆ 1415 ನೇ ಇಸವಿಯಲ್ಲಿ ಒಂದು ಕವಿತೆಯ ಮೂಲಕ ಸಂದೇಶ ರವಾನಿಸಿದನು. ಆತನನ್ನು ಲಂಡನ್ ನ ಒಂದು ಸೆರೆಮನೆಯಲ್ಲಿ ಬಂಧಿಸಿಡಲಾಗಿತ್ತು. ಅವನಿಗೆ ಕೇವಲ 21 ವರ್ಷ ವಯಸ್ಸಾಗಿತ್ತು. ಆತನು ತನ್ನ ಕವಿತೆಯ ಮೂಲಕ ಫೆಬ್ರವರಿ 14ರಂದು ತನ್ನ ಹೆಂಡತಿಗೆ ಸಂದೇಶವನ್ನು ಕಳುಹಿಸಿದನು.

5. ಇಸವಿ 1840 ವ್ಯಾಲೆಂಟೈನ್ ಶುರುವಿನ ಪರ್ವ ಎಂದು ಕರೆಯಬಹುದು : -

5. ಇಸವಿ 1840 ವ್ಯಾಲೆಂಟೈನ್ ಶುರುವಿನ ಪರ್ವ ಎಂದು ಕರೆಯಬಹುದು : -

17ನೇ ಶತಮಾನದಲ್ಲಿ ಜನರು ತಮ್ಮ ಸ್ನೇಹಿತರಿಗೆ ಮತ್ತು ತಾವು ಪ್ರೀತಿಸುತ್ತಿರುವವರಿಗೆ ವ್ಯಾಲೆಂಟೈನ್ ಡೇ ಕಾರ್ಡ್ ಗಳನ್ನು ಮತ್ತು ತಾವೇ ಸ್ವತಹ ಕೈಯಲ್ಲಿ ಬರೆದ ಪತ್ರಗಳನ್ನು ಕಳುಹಿಸಲು ಮತ್ತು ತೆಗೆದುಕೊಳ್ಳಲು ಪ್ರಾರಂಭ ಮಾಡಿದರು. ಆದರೆ ಇದು ಅಷ್ಟು ಪ್ರಚಲಿತವಾಗಿರಲಿಲ್ಲ. ಆದರೆ 1840 ಇಸವಿಯ ಆಸುಪಾಸಿನಲ್ಲಿ ಅಮೇರಿಕಾದ ತುಂಬೆಲ್ಲ ವ್ಯಾಲೆಂಟೈನ್ಸ್ ಡೇ ಕಾರ್ಡ್ ಗಳು ಮೊಟ್ಟಮೊದಲ ಬಾರಿಗೆ ಅಪಾರ ಪ್ರಮಾಣದಲ್ಲಿ ಒಬ್ಬರಿಂದ ಒಬ್ಬರಿಗೆ ರವಾನೆಯಾಗಲು ಪ್ರಾರಂಭ ಆಯಿತು. ಇದಕ್ಕೆ ಮುಖ್ಯ ಕಾರಣ ಎಂದರೆ ಅಮೇರಿಕಾದ Esther A. Howland ಎಂಬ ಮಹಿಳೆ. ಈಕೆಯನ್ನು ಅಲ್ಲಿನವರು ಅಮೇರಿಕಾದ ವ್ಯಾಲೆಂಟೈನ್ ತಾಯಿ ದೇವತೆ ಎಂದು ಕರೆಯುತ್ತಾರೆ. ವ್ಯಾಲೆಂಟೈನ್ ಡೇ ಕಾರ್ಡ್ ಗಳನ್ನು ವಾಣಿಜ್ಯೀಕರಣ ಮಾಡಿದ ಮೊಟ್ಟ ಮೊದಲ ಮಹಿಳೆ ಎಂಬ ಖ್ಯಾತಿ ಇವರಿಗೆ ಸಲ್ಲುತ್ತದೆ. ಆಕೆಯಲ್ಲಿ ಅತ್ಯದ್ಭುತವಾದ ಕ್ರಿಯಾಶೀಲತೆ ಅಡಗಿತ್ತು. ತಾನೇ ಸ್ವತಃ ಪ್ರತಿಯೊಂದು ವ್ಯಾಲೆಂಟೈನ್ಸ್ ಡೇ ಕಾರ್ಡ್ ಗೆ ಲೇಸ್ ಮತ್ತು ರಿಬ್ಬನ್ ಗಳನ್ನು ಬಳಕೆ ಮಾಡಿ ಅಲಂಕಾರ ಮಾಡುತ್ತಿದ್ದಳು.

6. ವ್ಯಾಲೆಂಟೈನ್ಸ್ ಡೇ ದಿನದಂದು ಕೆಂಪು ಗುಲಾಬಿ ನೀಡುವ ಪದ್ಧತಿಗೆ 17ನೇ ಶತಮಾನದಲ್ಲಿ ಚಾಲನೆ ಸಿಕ್ಕಿತು : -

6. ವ್ಯಾಲೆಂಟೈನ್ಸ್ ಡೇ ದಿನದಂದು ಕೆಂಪು ಗುಲಾಬಿ ನೀಡುವ ಪದ್ಧತಿಗೆ 17ನೇ ಶತಮಾನದಲ್ಲಿ ಚಾಲನೆ ಸಿಕ್ಕಿತು : -

ನಿಮಗೆಲ್ಲ ಗೊತ್ತಿರುವ ಹಾಗೆ ವ್ಯಾಲೆಂಟೈನ್ಸ್ ಡೇ ದಿನದಂದು ಪ್ರತಿಯೊಬ್ಬ ಪ್ರೇಮಿ ತನ್ನ ಪ್ರಿಯತಮೆಗೆ ಪ್ರೀತಿಯಿಂದ ಗುಲಾಬಿ ಹೂಗಳನ್ನು ನೀಡುತ್ತಾನೆ. ಇದು ಆತ ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು, ತನ್ನ ಸಂಗಾತಿಯನ್ನು ಇಷ್ಟಪಡಲು ಅಥವಾ ಮದುವೆಯಾದ ಬಳಿಕವೂ ತನ್ನ ಪ್ರೀತಿಯ ನಿವೇದನೆಯನ್ನು ಮಾಡಿಕೊಳ್ಳಲು ಈ ಪ್ರಕ್ರಿಯೆಯನ್ನು ಅನುಸರಿಸುತ್ತಾರೆ.

ಇದು ಆನಂತರದಲ್ಲಿ ತುಂಬಾ ಪ್ರಚಲಿತವಾಯಿತು. ಸ್ವೀಡನ್ ದೇಶದ ರಾಜ Charles II ಪರ್ಷಿಯಾ ಗೆ ಪ್ರವಾಸ ಹೊರಟ ಸಂದರ್ಭದಲ್ಲಿ ಈ ಸಂಸ್ಕೃತಿಯನ್ನು ಯುರೋಪ್ ದೇಶದಾದ್ಯಂತ ಪರಿಚಯ ಮಾಡಿದನು. ವಿಕ್ಟೋರಿಯಾ ಕಾಲಮಾನದಲ್ಲಿ ಒಬ್ಬ ವ್ಯಕ್ತಿ ತನ್ನ ಪ್ರಿಯತಮಗೆ ತನ್ನ ಆಳವಾದ ಪ್ರೀತಿಯನ್ನು ವ್ಯಕ್ತಪಡಿಸಲು ಕೆಂಪು ಬಣ್ಣದ ಗುಲಾಬಿಗಳನ್ನು ನೀಡುವುದು ರೂಢಿಯಾಯಿತು.

7. ಅಮೇರಿಕಾ ದೇಶದಲ್ಲಿ ಇಂದು ಪ್ರೀತಿಗಾಗಿ ಜನರು ಎಷ್ಟು ಖರ್ಚು ಮಾಡುತ್ತಾರೆ ಗೊತ್ತಾ?

7. ಅಮೇರಿಕಾ ದೇಶದಲ್ಲಿ ಇಂದು ಪ್ರೀತಿಗಾಗಿ ಜನರು ಎಷ್ಟು ಖರ್ಚು ಮಾಡುತ್ತಾರೆ ಗೊತ್ತಾ?

ಈ ವಿಚಾರವನ್ನು ತಿಳಿದುಕೊಳ್ಳಲು ನೀವು 2019 ನೇ ಇಸ್ವಿಯಲ್ಲಿ ನ್ಯಾಷನಲ್ ರೀಟೈಲ್ ಫೌಂಡೇಶನ್ ನಡೆಸಿದ ಒಂದು ಅಧ್ಯಯನದ ವರದಿಯ ಬಗ್ಗೆ ತಿಳಿದುಕೊಳ್ಳಬೇಕು. 2019ರಲ್ಲಿ ಅಲ್ಲಿನ ಜನರು ವ್ಯಾಲೆಂಟೈನ್ಸ್ ಡೇ ಉಡುಗೊರೆಗಳಿಗೆ ಸುಮಾರು 20 ಬಿಲಿಯನ್ ಡಾಲರ್ ಖರ್ಚು ಮಾಡಿದ್ದರು. ಕೇವಲ ಕ್ಯಾಂಡಿಗಳು 2.4 ಬಿಲಿಯನ್ ಡಾಲರ್ ಗಳಿಗೆ ಮಾರಾಟವಾದ ಬಗ್ಗೆ ಪ್ರಸ್ತಾಪವಿದೆ. ಬರುವ ವರ್ಷದಲ್ಲಿ ಈ ಖರ್ಚು ದುಪ್ಪಟ್ಟಾಗುವ ಸಾಧ್ಯತೆ ಇದೆ. ಹೋದ ವರ್ಷ ವ್ಯಾಲೆಂಟೈನ್ಸ್ ಡೇ ದಿನದಂದು ಒಬ್ಬ ವ್ಯಕ್ತಿಯ ಸರಾಸರಿ ಪ್ರೀತಿಗೆ ಸಂಬಂಧ ಪಟ್ಟಂತೆ ಖರ್ಚು ವೆಚ್ಚಗಳನ್ನು ನೋಡಿದರೆ 196 ಡಾಲರ್ ಆಗಿದೆ. ಮುಂಬರುವ ವರ್ಷದಲ್ಲಿ ಇದು 291 ಡಾಲರ್ ತಲುಪುವ ಸಾಧ್ಯತೆ ಇದೆ. ಮಹಿಳೆಯರ ಖರ್ಚು ವೆಚ್ಚಗಳು ಈ ಸಂದರ್ಭದಲ್ಲಿ 106 ಡಾಲರ್ ಗಳಿವೆ ಎಂದು ಅಂದಾಜಿಸಲಾಗಿದೆ.

8. ಪ್ರತಿ ವರ್ಷ ಅಮೇರಿಕಾ ದೇಶದಲ್ಲಿ ಸರಿ ಸುಮಾರು 145 ಮಿಲಿಯನ್ ವ್ಯಾಲೆಂಟೈನ್ಸ್ ಡೇ ಕಾರ್ಡ್ ಗಳು ರವಾನೆಯಾಗುತ್ತವೆ : -

8. ಪ್ರತಿ ವರ್ಷ ಅಮೇರಿಕಾ ದೇಶದಲ್ಲಿ ಸರಿ ಸುಮಾರು 145 ಮಿಲಿಯನ್ ವ್ಯಾಲೆಂಟೈನ್ಸ್ ಡೇ ಕಾರ್ಡ್ ಗಳು ರವಾನೆಯಾಗುತ್ತವೆ : -

ಅಮೆರಿಕ ದೇಶದವರು ಪ್ರತಿ ವರ್ಷ ಫೆಬ್ರವರಿ 14 ನೇ ತಾರೀಕನ್ನು ಹೆಚ್ಚು ವಿಶೇಷವಾಗಿ ನೋಡುತ್ತಾರೆ. ಸುಮಾರು 145 ಮಿಲಿಯನ್ ವ್ಯಾಲೆಂಟೈನ್ಸ್ ಡೇ ಕಾರ್ಡ್ ಗಳು ಈ ಸಂದರ್ಭದಲ್ಲಿ ವಿನಿಮಯ ಆಗುತ್ತವೆ. ಶಾಲೆಗೆ ಹೋಗುವ ಮಕ್ಕಳು ಸಹ ತಮ್ಮ ತರಗತಿಯಲ್ಲಿ ವ್ಯಾಲೆಂಟೈನ್ಸ್ ಡೇ ಕಾರ್ಡ್ ಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಎಂದರೆ ನಮಗೆ ನಿಮಗೆ ಆಶ್ಚರ್ಯವಾಗುತ್ತದೆ. ಹೀಗಾಗಿ ಕ್ರಿಸ್ಮಸ್ ನಂತರದ ರಜಾ ದಿನವನ್ನಾಗಿ ಗ್ರೀಟಿಂಗ್ ಕಾರ್ಡ್ ಗಳನ್ನು ವಿನಿಮಯ ಮಾಡಿಕೊಳ್ಳಲು ಈ ದಿನವನ್ನು ಮೀಸಲಿಡಲಾಗುತ್ತದೆ. ಶಿಕ್ಷಕರು, ಮಕ್ಕಳು, ತಾಯಂದಿರು ಮತ್ತು ಪತ್ನಿಯರು ಬಹುತೇಕ ವ್ಯಾಲೆಂಟೈನ್ಸ್ ಡೇ ಕಾರ್ಡ್ ಗಳನ್ನು ವಿನಿಮಯ ಮಾಡಿಕೊಳ್ಳುವಲ್ಲಿ ನಿರತರಾಗಿರುತ್ತಾರೆ. ಮೊದಲ ಬಾರಿಗೆ ವ್ಯಾಲೆಂಟೈನ್ಸ್ ಡೇ ಕಾರ್ಡ್ ಗಳನ್ನು ಮುದ್ರಿಸಿದ ಖ್ಯಾತಿ Hallmark Cards ಸಂಸ್ಥೆಗೆ ಸಲ್ಲುತ್ತದೆ.

9. ಅಮೆರಿಕದಲ್ಲಿ ಪ್ರಾಣಿಗಳ ಜೊತೆ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಶನ್ : -

9. ಅಮೆರಿಕದಲ್ಲಿ ಪ್ರಾಣಿಗಳ ಜೊತೆ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಶನ್ : -

ನಿಮಗೆ ಈ ವಿಚಾರ ಗೊತ್ತಿದೆಯೋ ಅಥವಾ ಇಲ್ಲವೋ ನಮಗೆ ಗೊತ್ತಿಲ್ಲ. ಅಮೆರಿಕ ದೇಶದಲ್ಲಿ ಜನರು ತಮ್ಮ ಮನೆಯಲ್ಲಿನ ಸಾಕು ಪ್ರಾಣಿಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾರೆ. ತಾವು ಪ್ರೀತಿಯಿಂದ ಮನೆಯಲ್ಲಿ ಸಾಕುವ ಬೆಕ್ಕು ಮತ್ತು ನಾಯಿಗಳನ್ನು ಹೆಚ್ಚು ಮುದ್ದಿಸುತ್ತಾರೆ. ಹಾಗಾಗಿ ಅವುಗಳ ಜೊತೆ ಸಹ ವ್ಯಾಲೆಂಟೈನ್ಸ್ ಡೇ ದಿನದಂದು ಗ್ರೀಟಿಂಗ್ ಕಾರ್ಡ್ ಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಕಳೆದ ವರ್ಷ ಅಲ್ಲಿನ ಜನರು ತಮ್ಮ ಸಾಕು ಪ್ರಾಣಿಗಳಿಗಾಗಿ 17.1 ಮಿಲಿಯನ್ ಕಾರ್ಡ್ಗಳನ್ನು ಖರೀದಿ ಮಾಡಿದ್ದಾರೆ ಇದು ಪ್ರಾಣಿಗಳಿಗೆ ನೀಡುವ ಉಡುಗೊರೆಗಳ ಮೇಲೆ ಸುಮಾರು 751.3 ಮಿಲಿಯನ್ ಡಾಲರ್ ಖರ್ಚು ಮಾಡಿದ್ದಾರೆ.

10. ವ್ಯಾಲೆಂಟೈನ್ಸ್ ಡೇ ದಿನದಂದು ಆಭರಣಗಳಿಗೆ ಹೆಚ್ಚು ಖರ್ಚು ಮಾಡುತ್ತಾರೆ : -

10. ವ್ಯಾಲೆಂಟೈನ್ಸ್ ಡೇ ದಿನದಂದು ಆಭರಣಗಳಿಗೆ ಹೆಚ್ಚು ಖರ್ಚು ಮಾಡುತ್ತಾರೆ : -

ಅಮೇರಿಕ ದೇಶದಲ್ಲಿ ತಮ್ಮ ಪ್ರೀತಿಯ ಸಂದೇಶವನ್ನು ರವಾನಿಸಲು ಜನರು ಕ್ಯಾಂಡಿಗಳು ಮತ್ತು ಹೂವುಗಳ ಮೇಲೆ ಹೆಚ್ಚು ಖರ್ಚು ಮಾಡುತ್ತಾರೆ. ಇದರ ಸಾಲಿಗೆ ಸೇರ್ಪಡೆಯಾಗುವ ದುಬಾರಿ ಉಡುಗೊರೆ ಎಂದರೆ ಅದು ಆಭರಣ. ಕಳೆದ 2020 ನೇ ಇಸ್ವಿಯಲ್ಲಿ ಅಲ್ಲಿನ ಜನರು ಫೆಬ್ರವರಿ 14ರಂದು ಸಂಶೋಧನೆಯ ಮೂಲಗಳ ಪ್ರಕಾರ ಒಡವೆಗಳಿಗಾಗಿ 5.8 ಬಿಲಿಯನ್ ಡಾಲರ್ ಖರ್ಚು ಮಾಡಿದ್ದಾರೆ. ಇದಾದ ನಂತರದಲ್ಲಿ ಸಂಜೆಯ ನೈಟ್ ಔಟ್ ಡಿನ್ನರ್ ಗೆ ಸರಾಸರಿ 4.3 ಬಿಲಿಯನ್ ಡಾಲರ್ ವೆಚ್ಚವಾಗಿದೆ. ಇದರ ನಂತರ ದುಬಾರಿ ಬಟ್ಟೆಗಳು, ಕ್ಯಾಂಡಿಗಳು ಮತ್ತು ಗುಲಾಬಿ ಹೂವುಗಳು ಖರ್ಚಾಗಿವೆ.

11. ಹೃದಯದ ಚಿಹ್ನೆಯ ಚಾಕ್ಲೆಟ್ ಬಾಕ್ಸ್ 1861 ನೇ ಇಸ್ವಿಯಲ್ಲಿ ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ ಪರಿಚಯವಾಯಿತು : -

11. ಹೃದಯದ ಚಿಹ್ನೆಯ ಚಾಕ್ಲೆಟ್ ಬಾಕ್ಸ್ 1861 ನೇ ಇಸ್ವಿಯಲ್ಲಿ ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ ಪರಿಚಯವಾಯಿತು : -

ಕ್ಯಾಡ್ಬರಿ ಕಂಪನಿಯ ಸಂಸ್ಥಾಪಕರಾದ ಜಾನ್ ಕ್ಯಾಡ್ಬರಿ ರವರ ಮಗ ರಿಚರ್ಡ್ ಕ್ಯಾಡ್ಬರಿ ಹೆಚ್ಚು ಕ್ರಿಯಾಶೀಲ ವ್ಯಕ್ತಿಯಾಗಿದ್ದರು. ಅವರು ಫ್ಯಾನ್ಸಿ ಬಾಕ್ಸ್ ಗಳ ಮೂಲಕ ವಿವಿಧ ಬಗೆಯ ಚಾಕ್ಲೆಟ್ ಗಳನ್ನು ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದರು. ಇದರಿಂದ ದಿನೇ ದಿನೇ ವ್ಯಾಪಾರ - ವಹಿವಾಟು ಏರಿಕೆ ಆಗತೊಡಗಿತು. ವ್ಯಾಲೆಂಟೈನ್ಸ್ ಡೇ ರಿಚರ್ಡ್ ಕ್ಯಾಡ್ಬರಿ ಅವರಿಗೆ ಹೆಚ್ಚು ಇಂಪ್ರೆಸ್ ಮಾಡಿತು. 1861 ರಲ್ಲಿ ಮೊಟ್ಟ ಮೊದಲ ಬಾರಿಗೆ ಹೃದಯದ ಆಕಾರ ಇರುವ ಚಾಕ್ಲೆಟ್ ಬಾಕ್ಸ್ ಪರಿಚಯ ಮಾಡಲು ಮುಂದಾದರು. ವ್ಯಾಲೆಂಟೈನ್ಸ್ ಡೇ ದಿನ ಇದು ಬಹಳಷ್ಟು ಜನರಿಗೆ ಇಷ್ಟವಾಗಿ ಸುಮಾರು 36 ಮಿಲಿಯನ್ ಹೃದಯದ ಆಕಾರ ಹೊಂದಿರುವ ಚಾಕ್ಲೆಟ್ ಬಾಕ್ಸ್ ಗಳು ಮಾರಾಟ ಆದವು. ಅಂದರೆ ಸುಮಾರು 58 ಮಿಲಿಯನ್ ಪೌಂಡ್ ತೂಕದ ಚಾಕ್ಲೆಟ್ ಗಳು ಮಾರಾಟವಾಗಿದ್ದವು.

12 . ಸಂಭಾಷಣ ಹೃದಯಗಳು ವೈದ್ಯಕೀಯ ಲೋಜನ್ ಗಳಾಗಿ ಪ್ರಾರಂಭ ಆದವು : -

12 . ಸಂಭಾಷಣ ಹೃದಯಗಳು ವೈದ್ಯಕೀಯ ಲೋಜನ್ ಗಳಾಗಿ ಪ್ರಾರಂಭ ಆದವು : -

ಬೋಸ್ಟನ್ ನ ಆರೋಗ್ಯ ತಜ್ಞ Oliver Chase ಒಂದು ಯಂತ್ರವನ್ನು ಕಂಡು ಹಿಡಿದರು. ಗಂಟಲು ನೋವು ಮತ್ತು ಇತರ ಅಸ್ವಸ್ಥತೆಗೆ ಬಳಕೆ ಮಾಡುವ ವೈದ್ಯಕೀಯ ಲೋಜನ್ ಗಳು ಉಪಯೋಗಕ್ಕೆ ಬರುವ ವಿಧಾನ ಸರಳವಾಯಿತು. ಪ್ರಾಯೋಗಿಕವಾಗಿ ಇದಕ್ಕೆ ಲಭ್ಯವಾದ ಒಂದು ಪ್ರೇರಣೆ ಎಂದರೆ ಅಮೇರಿಕಾದ ಮೊಟ್ಟ ಮೊದಲ ತಯಾರು ಮಾಡುವ ಯಂತ್ರ. ಇದನ್ನು ನೋಡಿದ ವೈದ್ಯಕೀಯ ಸಿಬ್ಬಂದಿಯೊಬ್ಬರು ಕ್ಯಾಂಡಿಗಳನ್ನು ಮಾಡುವ ಬದಲು ವೈದ್ಯಕೀಯ ಲೋಜನ್ ಗಳನ್ನು ತಯಾರು ಮಾಡಲು ಪ್ರಾರಂಭ ಮಾಡಿದರು. ನಂತರ ಅವರು ಇದನ್ನು ವೃತ್ತಿಯನ್ನಾಗಿ ಮಾಡಿಕೊಂಡು Necco ಎಂಬ ಕಂಪನಿಯನ್ನು ಸ್ಥಾಪಿಸಿದರು. ಇಂದು ನಮಗೆ ಮಾರುಕಟ್ಟೆಯಲ್ಲಿ Necco wafers ಲಭ್ಯವಿರುವುದು ಇದೇ ಕಂಪನಿಯಿಂದ.

13. ಸಂಭಾಷಣೆಯ ಹೃದಯಗಳ ಮೇಲೆ ಸಂದೇಶಗಳು ಬರಲು ಪ್ರಾರಂಭವಾಗಿದ್ದು 1866 ರ ನಂತರ : -

13. ಸಂಭಾಷಣೆಯ ಹೃದಯಗಳ ಮೇಲೆ ಸಂದೇಶಗಳು ಬರಲು ಪ್ರಾರಂಭವಾಗಿದ್ದು 1866 ರ ನಂತರ : -

Necco sweetheart ಗಳ ಮೇಲೆ Daniel Chase ಭಾವನಾತ್ಮಕವಾದ ಸಂದೇಶಗಳನ್ನು ಮುದ್ರಣ ಮಾಡಿ ಇಂದು ನಾವು ನೋಡುತ್ತಿರುವ ಕ್ಯಾಂಡಿಗಳಿಗಿಂತ ದೊಡ್ಡ ಗಾತ್ರದ ಕ್ಯಾಂಡಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದರು.

14. ಸುಮಾರು ಎಂಟು ಬಿಲಿಯನ್ ನಷ್ಟು ಈ ರೀತಿಯ ಸಂಭಾಷಣೆಯ ಹೃದಯಗಳು ಮಾರುಕಟ್ಟೆಗೆ ಪ್ರತಿ ವರ್ಷ ಪರಿಚಯ ಆಗುತ್ತಿವೆ.

14. ಸುಮಾರು ಎಂಟು ಬಿಲಿಯನ್ ನಷ್ಟು ಈ ರೀತಿಯ ಸಂಭಾಷಣೆಯ ಹೃದಯಗಳು ಮಾರುಕಟ್ಟೆಗೆ ಪ್ರತಿ ವರ್ಷ ಪರಿಚಯ ಆಗುತ್ತಿವೆ.

Necco ಕಂಪನಿಯು ಇಂದು ಯಾವ ಮಟ್ಟಿಗೆ ಪ್ರಸಿದ್ಧಿಯಾಗಿದೆ ಎಂದರೆ ಪ್ರತಿ ವರ್ಷ ಫೆಬ್ರವರಿ 14 ಬಂದ ನಂತರ ಕೆಲವು ದಿನಗಳ ಅಂತರದಲ್ಲಿ ಮುಂದಿನ ವರ್ಷಕ್ಕೆ ಬೇಕಾಗುವಷ್ಟು ಸಂಭಾಷಣೆಯ ಹೃದಯದ ಕ್ಯಾಂಡಿಗಳನ್ನು ಪ್ರಾರಂಭ ಮಾಡುತ್ತದೆ. ಅಂದರೆ ಒಂದು ದಿನಕ್ಕೆ 100,000 ಪೌಂಡ್ ನಷ್ಟು ತಯಾರಾಗುತ್ತದೆ. ಇದರ ಒಂದೊಂದು ಬಾಕ್ಸ್ ಮೇಲೆ ಪ್ರೀತಿಯ ಚಿಲುಮೆಯನ್ನು ಹರಿಸುವಂತಹ ಹಲವು ಬಗೆಯ ಸಂದೇಶಗಳು ಕಾಣಿಸುತ್ತವೆ.

15. ವ್ಯಾಲೆಂಟೈನ್ಸ್ ಡೇ ದಿನದಂದು ಆರು ಮಿಲಿಯನ್ ಜೋಡಿಗಳು ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ : -

15. ವ್ಯಾಲೆಂಟೈನ್ಸ್ ಡೇ ದಿನದಂದು ಆರು ಮಿಲಿಯನ್ ಜೋಡಿಗಳು ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ : -

ಕೇವಲ ಪ್ರೀತಿಯನ್ನು ವ್ಯಕ್ತಪಡಿಸಲು ಅಥವಾ ಇನ್ನೊಬ್ಬರನ್ನು ಇಷ್ಟಪಡಲು ಮಾತ್ರ ವ್ಯಾಲೆಂಟೈನ್ಸ್ ಡೇ ಇದೆ ಎಂದು ಅಂದುಕೊಳ್ಳುವುದು ತಪ್ಪು. ಬಹಳಷ್ಟು ದಿನಗಳು ಕಾದು ಫೆಬ್ರವರಿ 14ರಂದು ನಿಶ್ಚಿತಾರ್ಥ ಮಾಡಿಕೊಳ್ಳಲು ಬಹಳಷ್ಟು ಯುವಕ - ಯುವತಿಯರು ಆಸೆ ಪಡುತ್ತಾರೆ. ಹಾಗಾಗಿ ಇಡೀ ವರ್ಷದಲ್ಲಿ ಫೆಬ್ರವರಿ 14 ನೇ ತಾರೀಕಿಗೆ ಅಮೇರಿಕ ದೇಶದಲ್ಲಿ ಅತಿ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾರೆ. ಸುಮಾರು 40% ಪುರುಷರು ಈ ವಿಚಾರವಾಗಿ ತಮ್ಮ ಅಭಿಪ್ರಾಯವನ್ನು ಸಕಾರಾತ್ಮಕವಾಗಿ ಹಂಚಿಕೊಂಡಿದ್ದಾರೆ.

ಪ್ರಪಂಚದ ನಾನಾ ಭಾಗಗಳಲ್ಲಿ ವ್ಯಾಲೆಂಟೈನ್ಸ್ ಡೇ ಬೇರೆ ಬೇರೆ ರೀತಿಯಲ್ಲಿ ಅತ್ಯಂತ ಖುಷಿ ಪಟ್ಟು ತನ್ನಷ್ಟೇ ಆದ ವಿಶಿಷ್ಟ ಬಗೆಯಲ್ಲಿ ಆಚರಿಸಲಾಗುತ್ತದೆ.

English summary

Interesting Facts About Valentines Day in Kannada

Here are interesting facts about valentines day, have a look...
X
Desktop Bottom Promotion