For Quick Alerts
ALLOW NOTIFICATIONS  
For Daily Alerts

ಪುರುಷರು ಅಥವಾ ಮಹಿಳೆಯರು: ಯಾರು ಬೇಗನೇ ಬ್ರೇಕಪ್ ಮಾಡಿಕೊಳ್ಳುವರು?

|

ಪ್ರೀತಿಯ ಸಂಬಂಧವು ಶಾಶ್ವತವಾಗಿ ಬಾಳಬೇಕೆಂಬುದು ಬಹುತೇಕ ಎಲ್ಲ ಪ್ರೀತಿಸಿದವರ ಮನದಾಸೆಯಾಗಿರುತ್ತದೆ. ಆದರೂ ಅದ್ಯಾಕೊ ಎಲ್ಲ ಸಂಬಂಧಗಳು ಶಾಶ್ವತವಾಗಿ ಮುಂದುವರಿಯುವುದಿಲ್ಲ. ಹಲವಾರು ಜೋಡಿಗಳ ಪ್ರೀತಿಯ ಬಂಧ ಮಧ್ಯದಲ್ಲೇ ಅಂತ್ಯಗೊಂಡು 'ಬ್ರೇಕಪ್'ಆಗಿ ಬಿಡುತ್ತವೆ. ಹೀಗೆ ಸಂಬಂಧವೊಂದು ಬ್ರೇಕಪ್ ಆದಾಗ ಗಂಡು ಹಾಗೂ ಹೆಣ್ಣು ಇಬ್ಬರಿಗೂ ಸಹಜವಾಗಿಯೇ ಮನದಲ್ಲಿ ಆಳವಾದ ನೋವಾಗುತ್ತದೆ.

ಕೆಲವರು ಇಂಥ ನೋವಿನಿಂದ ಬೇಗ ಹೊರಬಹುದು, ಇನ್ನು ಕೆಲವರು ದೇವದಾಸ ರೀತಿ ಅದರ ಕೊರಗಿನಲ್ಲೇ ನರಳಬಹುದು. ಆದರೂ ಇಂಥ ಬ್ರೇಕಪ್ ಆಘಾತದಿಂದ ಚೇತರಿಸಿಕೊಳ್ಳುವ ಅವಧಿ ಪುರುಷ ಹಾಗೂ ಮಹಿಳೆಯರಿಗೆ ಬೇರೆ ಬೇರೆಯಾಗಿದೆ. ಇದು ಸಂಶೋಧನೆಗಳಿಂದ ದೃಢಪಟ್ಟಿದೆ ಕೂಡ.

ಬ್ರೇಕಪ್‌ನ ಪರಿಣಾಮ ಪುರುಷ ಅಥವಾ ಮಹಿಳೆ ಯಾರ ಮೇಲೆ ಹೆಚ್ಚು?

ಬ್ರೇಕಪ್‌ನ ಪರಿಣಾಮ ಪುರುಷ ಅಥವಾ ಮಹಿಳೆ ಯಾರ ಮೇಲೆ ಹೆಚ್ಚು?

ಪ್ರೀತಿ ಹಾಗೂ ಬ್ರೇಕಪ್ ವಿಷಯಗಳು ಯಾವಾಗಲೂ ಸಂಕೀರ್ಣವಾಗಿರುತ್ತವೆ. ಪ್ರತಿಯೊಬ್ಬ ವ್ಯಕ್ತಿಯೂ ಬ್ರೇಕಪ್ ನಿಂದ ಹೊರಬರಲು ತನ್ನದೇ ಆದ ಸಮಯ ತೆಗೆದುಕೊಳ್ಳುತ್ತಾನೆ. ಅಧ್ಯಯನಗಳ ಪ್ರಕಾರ ಬ್ರೇಕಪ್ ಎಂಬುದು ಪುರುಷ ಹಾಗೂ ಮಹಿಳೆ ಇಬ್ಬರನ್ನೂ ಬೇರೆ ಬೇರೆ ತೆರನಾಗಿ ಕಾಡಿಸುತ್ತದೆಯಂತೆ. ಇಂಥ ಪರಿಸ್ಥಿತಿಯಲ್ಲಿ ಪುರುಷ ಹಾಗೂ ಮಹಿಳೆಯ ಭಾವನೆಗಳು ವಿಭಿನ್ನವಾಗಿರುತ್ತವೆ. ಕುತೂಹಲಕರ ವಿಷಯ ಏನೆಂದರೆ, ಬ್ರೇಕಪ್ ಆದ ನಂತರ ಮಹಿಳೆಯು ಅತಿ ಹೆಚ್ಚು ಮಾನಸಿಕ ಹಾಗೂ ದೈಹಿಕ ನೋವು ಅನುಭವಿಸುತ್ತಾಳೆ. ಆದರೆ ಅಷ್ಟೇ ಬೇಗನೆ ಆಕೆ ಅದರಿಂದ ಹೊರಬಂದು ಜೀವನದಲ್ಲಿ ಮುನ್ನಡೆಯುತ್ತಾಳೆ. ಈ ವಿಷಯದ ಬಗ್ಗೆ ನಡೆದ ಸಂಶೋಧನೆಗಳ ಪೂರ್ಣ ಮಾಹಿತಿ ನೋಡೋಣ ಬನ್ನಿ.

ಏನು ಹೇಳುತ್ತದೆ ಸಂಶೋಧನೆ?

ಏನು ಹೇಳುತ್ತದೆ ಸಂಶೋಧನೆ?

ಬ್ರೇಕಪ್ ನಂತರದ ವರ್ತನೆಗಳ ಕುರಿತಾಗಿ ನಡೆದ ಅತಿ ದೊಡ್ಡ ಸಂಶೋಧನೆ ಇದಾಗಿದೆ. ಎವಲ್ಯೂಶನರಿ ಬಿಹೇವಿಯರಲ್ ಸೈನ್ಸ್ ಜರ್ನಲ್‌ನಲ್ಲಿ ಈ ಸಂಶೋಧನಾ ವರದಿ ಪ್ರಕಟಗೊಂಡಿದೆ. ಬಿಗಾಂಪ್ಟನ್ ವಿಶ್ವವಿದ್ಯಾಲಯ ಹಾಗೂ ಯುನಿವರ್ಸಿಟಿ ಕಾಲೇಜ್ ಆಫ್ ಲಂಡನ್ ನ ಸಂಶೋಧಕರು 96 ದೇಶಗಳಲ್ಲಿ 5,705 ಜನರನ್ನು ಸಂದರ್ಶಿಸಿ ಬ್ರೇಕಪ್ ನ ದೈಹಿಕ ಹಾಗೂ ಮಾನಸಿಕ ನೋವಿನ ತೀವ್ರತೆ ಅವರಲ್ಲಿ ಯಾವ ರೀತಿಯಾಗಿತ್ತು ಎಂಬುದನ್ನು ಕೇಳಿ ಮಾಹಿತಿ ಪಡೆದುಕೊಂಡಿದ್ದರು.

Most Read: ಬ್ರೇಕ್ ಅಪ್ ಶಾಕ್ ಗಂಡಸರಿಗೇ ಹೆಚ್ಚಾಗಿ ಕಾಡುತ್ತದೆಯಂತೆ!

ಬ್ರೇಕಪ್ ಗೆ ಮಹಿಳೆಯರ ಪ್ರತಿಕ್ರಿಯೆ ಹೇಗಿರುತ್ತೆ?

ಬ್ರೇಕಪ್ ಗೆ ಮಹಿಳೆಯರ ಪ್ರತಿಕ್ರಿಯೆ ಹೇಗಿರುತ್ತೆ?

ಸಂಬಂಧವೊಂದು ಅಂತ್ಯಗೊಂಡಾಗ ಮಹಿಳೆಯರು ಹೆಚ್ಚಾಗಿ ಮಾನಸಿಕ ಹಾಗೂ ದೈಹಿಕ ನೋವು ಅನುಭವಿಸುತ್ತಾರೆ ಎಂಬುದು ತಿಳಿದು ಬಂದಿದೆ. ಬ್ರೇಕಪ್ ನಂತರ ಮಹಿಳೆಯರು ತಮ್ಮ ಭಾವನಾತ್ಮಕ ವೇದನೆಗೆ 6.84 ಅಂಕ ನೀಡಿದ್ದರೆ, ಪುರುಷರು 6.58 ಅಂಕ ನೀಡಿದ್ದರು. ಹಾಗೆಯೇ ಮಹಿಳೆಯರು ದೈಹಿಕ ನೋವಿಗೆ 4.21 ಅಂಕ ಹಾಗೂ ಪುರುಷರು 3.75 ಅಂಕ ನೀಡಿದ್ದರು.

ಮಹಿಳೆಯರು ಹೆಚ್ಚು ಜೀವನ್ಮುಖಿ

ಮಹಿಳೆಯರು ಹೆಚ್ಚು ಜೀವನ್ಮುಖಿ

ಸಂಬಂಧ ಕಡಿತದ ನಂತರ ಮಹಿಳೆಯರು ಅತಿ ಹೆಚ್ಚು ದೈಹಿಕ ಹಾಗೂ ಮಾನಸಿಕ ನೋವು ಅನುಭವಿಸುತ್ತಾರೆ ಎಂಬುದು ಸತ್ಯ ಎಂಬುದು ಸಂಶೋಧನೆಗಳು ಹೇಳಿವೆ. ಆದರೆ ನೊಂದುಕೊಂಡಷ್ಟೆ ಬೇಗ ಮಹಿಳೆಯರು ಈ ನೋವಿನಿಂದ ಹೊರಬಂದು ಮತ್ತೆ ಮುಂದಿನ ಜೀವನದತ್ತ ಮುಖ ಮಾಡುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಪುರುಷರ ಕತೆ ಏನು?

ಪುರುಷರ ಕತೆ ಏನು?

ಬ್ರೇಕಪ್ ಆದ ನಂತರ ಮಹಿಳೆಯರು ತಮ್ಮ ಭಾವನೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೊಂದು ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತಾರೆ. ಆದರೆ ಇಂಥ ಸಂದರ್ಭದಲ್ಲಿ ಪುರುಷರು ತೀರಾ ವಿಭಿನ್ನವಾಗಿ ವರ್ತಿಸುತ್ತಾರೆ. ಒಂದೋ ಅವರಿಗೆ ಏನೂ ಅನಿಸುವುದಿಲ್ಲ ಅಥವಾ ಸುಮ್ಮನೆ ಎಣ್ಣೆ ಹೊಡೆಯುವುದು ಅಥವಾ ಡ್ರಗ್ಸ್ ತೆಗೆದುಕೊಳ್ಳುವುದು ಅಥವಾ ಹಿಂಸೆಗಿಳಿಯುವುದು ಇಂಥವನ್ನೆಲ್ಲ ಮಾಡುವ ಸಾಧ್ಯತೆಗಳಿರುತ್ತವೆ. ಅಂದರೆ ಸಮಸ್ಯೆಯ ಮೂಲ ಅರಿತುಕೊಂಡು ಅದರಿಂದ ಹೊರಬರಲು ಅವರು ಪ್ರಯತ್ನ ಪಡುವುದಿಲ್ಲವಂತೆ.

ಪುರುಷರಿಗೆ ಹಿಂದಿನದನ್ನು ಮರೆಯಲು ಹೆಚ್ಚು ಸಮಯ ಬೇಕು

ಪುರುಷರಿಗೆ ಹಿಂದಿನದನ್ನು ಮರೆಯಲು ಹೆಚ್ಚು ಸಮಯ ಬೇಕು

ಸಂಶೋಧನೆಯ ಪ್ರಕಾರ ಬ್ರೇಕಪ್ ಆದ ನಂತರ ಸುಧಾರಿಸಿಕೊಳ್ಳಲು ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚು ಸಮಯ ಬೇಕಾಗುತ್ತದೆ. ಸಂಬಂಧವೊಂದು ಮುರಿದು ಬಿದ್ದು ವರ್ಷವೇ ಕಳೆದು ಹೋದರೂ ಪುರುಷರು ಅದರ ಗುಂಗಿನಲ್ಲಿಯೇ ಇರುತ್ತಾರೆ ಎಂಬುದು ತಿಳಿದು ಬಂದಿದೆ. ಇದನ್ನು ಪಿಆರ್‌ಜಿ ಅಥವಾ ಪೋಸ್ಟ್ ರಿಲೇಶನಶಿಪ್ ಗ್ರೀಫ್ ಎಂದು ಕರೆಯಲಾಗಿದೆ.

Most Read: ಲವ್ ಬ್ರೇಕ್‌ ಅಪ್‌ ಆದರೇನಂತೆ? ಪ್ರಪಂಚವೇನೂ ಮುಳುಗಿ ಹೋಗಲ್ಲ!

ವಿಕಸನ ಸಿದ್ಧಾಂತದ ಪಾತ್ರ

ವಿಕಸನ ಸಿದ್ಧಾಂತದ ಪಾತ್ರ

ಸಂಬಂಧಗಳಲ್ಲಿ ಜೀವಶಾಸ್ತ್ರದ ಪಾತ್ರ ಬಹಳ ಮುಖ್ಯವಾಗಿದೆ. ಇದರ ಬಗ್ಗೆಯೂ ವಿವರವಾಗಿ ಸಂಶೋಧನೆ ನಡೆಸಿರುವ ವಿಜ್ಞಾನಿಗಳು, ಸಂಬಂಧವೊಂದರಲ್ಲಿ ಪುರುಷನಿಗಿಂತ ಮಹಿಳೆಯ ಪಾಲು ಹೆಚ್ಚಾಗಿರುತ್ತದೆ ಎನ್ನುತ್ತಾರೆ. ಸಂಶೋಧನಾ ತಂಡದ ಮುಖ್ಯಸ್ಥ ಕ್ರೆಗ್ ಮಾರಿಸ್ ಹೇಳುವಂತೆ, ಒಂದು ಸಣ್ಣ ಪ್ರಣಯ ಸಂಬಂಧವು ಮಹಿಳೆಗೆ 9 ತಿಂಗಳ ಗರ್ಭದಾನ ಮಾಡುತ್ತದೆ. ನಂತರ ಎಷ್ಟೋ ವರ್ಷಗಳವರೆಗೆ ಹುಟ್ಟಿದ ಮಗುವಿಗೆ ಹಾಲೂಡಿಸಬೇಕು. ಆದರೆ ಪುರುಷರ ವಿಷಯ ಹಾಗಲ್ಲ. ಪ್ರಣಯದಾಟ ಮುಗಿದ ತಕ್ಷಣ ಆತ ಮತ್ತೊಂದು ಹಕ್ಕಿಯನ್ನು ಹುಡುಕಿಕೊಂಡು ಹೋಗಬಹುದು. ಆತ ಸಂಬಂಧದಲ್ಲಿ ಹೂಡಿಕೆ ಮಾಡುವುದು ಏನೂ ಇಲ್ಲವೆ ಇಲ್ಲ. ಆದರೆ ಸಂಬಂಧದಲ್ಲಿ ಮಹಿಳೆಯ ಜೀವಶಾಸ್ತ್ರೀಯ ಹೂಡಿಕೆ ಬಹುದೊಡ್ಡದಾಗಿರುವುದರಿಂದ ಆಕೆ ಸಂಬಂಧ ಬೆಳೆಸುವ ಮುನ್ನ ಪುರುಷನ ಪೂರ್ವಾಪರಗಳ ಬಗ್ಗೆ ಬಹು ಚಿಂತಿತಳಾಗಿರುತ್ತಾಳೆ. ಯಾವಾಗಲೂ ಅತಿ ಶ್ರೇಷ್ಠನಾದ ಪುರುಷನೇ ಜೀವನದಲ್ಲಿ ಇರಲಿ ಎಂದು ಬಯಸುತ್ತಾಳೆ. ಹೀಗಾಗಿ ಅಂಥ ಸಂಗಾತಿಯೊಬ್ಬ ದೂರವಾದಾಗ ಅವಳಿಗಾಗುವ ನೋವು ಹೆಚ್ಚಾಗಿಯೇ ಇರುತ್ತದೆ.

English summary

Men or women: Who gets over a break-up faster?

The matters of love and break up are always complicated, and every individual takes his or her own time to move on from the past. However, science indicates that heartbreak impacts men and women differently and both the sexes have different ways to cope with this situation. Interestingly, women experience more emotional and physical pain after a break-up but they tend to move on faster than men.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more