For Quick Alerts
ALLOW NOTIFICATIONS  
For Daily Alerts

ಪ್ರೀತಿಸುವವರು ಓದಲೇ ಬೇಕಾದ ಆರು ಪುಸ್ತಕಗಳು

By Hemanth
|

ಪ್ರೀತಿಗೆ ಬಿದ್ದ ಬಳಿಕ ಅದನ್ನು ಒಂದು ಹಂತಕ್ಕೆ ಕೊಂಡೊಯ್ಯಲು ಸಾಕಷ್ಟು ಪ್ರಯತ್ನ ಬೇಕಾಗುವುದು. ಮೊದಲ ನೋಟದಲ್ಲೇ ನಿಮ್ಮಲ್ಲಿ ಪ್ರೀತಿ ಕಾಣಿಸಿಕೊಂಡರೂ ಅದರ ಬಳಿಕ ಮಾತುಕತೆ, ಜತೆಯಾಗಿ ಓಡಾಟ, ಡೇಟಿಂಗ್ ಹೀಗೆ ಹಲವಾರು ಹಂತಗಳನ್ನು ದಾಟಬೇಕಾಗುವುದು. ಈ ಹಾದಿಯಲ್ಲಿ ನಡೆಯಲು ಕೆಲವೊಂದು ಮಾರ್ಗದರ್ಶನದ ಅಗತ್ಯ ಕೂಡ ಇರುವುದು.

ಇದಕ್ಕಾಗಿ ನೀವು ಸ್ನೇಹಿತರ ನೆರವು ಕೇಳಬಹುದು. ಆದರೆ ಅದರಿಂದ ನಿಮಗೆ ಕಸಿವಿಸಿಯಾಗುತ್ತಿದೆ ಎಂದಾದರೆ ನೀವು ಕೆಲವೊಂದು ಪುಸ್ತಕಗಳ ನೆರವು ಪಡೆಯಬಹುದು. ಹೌದು, ಪುಸ್ತಕಗಳು ನಿಮಗೆ ನಿಜವಾಗಿಯೂ ಒಳ್ಳೆಯ ಸ್ನೇಹಿತರು ಮತ್ತು ಇದು ನಿಮಗೆ ಪ್ರೀತಿಯಲ್ಲಿ ದಾರಿ ತೋರಿಸುವುದು. ಇದಕ್ಕಾಗಿ ನೀವು ಕೆಲವೊಂದು ರೋಮ್ಯಾಂಟಿಕ್ ಆಗಿರುವಂತಹ ಪುಸ್ತಕಗಳನ್ನು ಓದಬೇಕಾಗುತ್ತದೆ.

ಇದು ಯಾವುದೆಂದು ನಾವು ಈ ಲೇಖನದ ಮೂಲಕ ಪಟ್ಟಿ ಮಾಡಿದ್ದೇವೆ. ಅದನ್ನು ತಿಳಿಯಿರಿ.

ಹೌ ಟು ಮೇಕ್ ಎನಿವನ್ ಫಾಲ್ ಇನ್ ಲವ್ ವಿತ್ ಯು

ಈ ಪುಸ್ತಕವನ್ನು ಲಿಲ್ ಲೊವೆಂಡ್ಸ್ ಬರೆದಿದ್ದಾರೆ. ಸಂವಹನದಲ್ಲಿ ತಜ್ಞರಾಗಿದ್ದಂತಹ ಲೊವೆಂಡ್ಸ್ ಅವರು ಈ ಪುಸ್ತಕದಲ್ಲಿ ಯಾರೊಂದಿಗಾದರೂ ಪ್ರೀತಿಯಲ್ಲಿ ಬೀಳಲು ಸಾಮಾಜಿಕ ಕೌಶಲ್ಯಗಳ ಬಗ್ಗೆ ವ್ಯಕ್ತಿಗೆ ಜ್ಞಾನ ನೀಡಿರುವರು. ಇದರಲ್ಲಿ ನೀಡಿರುವಂತಹ ಸಲಹೆಗಳು ಅಧ್ಯಯನಗಳ ಆಧಾರದಿಂದ ಕೂಡಿದೆ. ಲೇಖಕರ ಪ್ರಕಾರ ದೇಹಭಾಷೆ, ಕಣ್ಣಿನ ಸಂಪರ್ಕ, ಶ್ಲಾಘಿಸುವುದು ಮತ್ತು ಫ್ಲರ್ಟ್ ಮಾಡುವ ಕಲೆಗಳ ಬಗ್ಗೆ ಹೇಳಲಾಗಿದೆ. ಡೇಟಿಂಗ್ ಮತ್ತು ಸಂಬಂಧದಲ್ಲಿ ಕೆಲವೊಮ್ಮೆ ಸಣ್ಣ ವಿಚಾರಗಳೇ ಪ್ರಾಮುಖ್ಯತೆ ಪಡೆಯುವುದು.

ಮಾರ್ಡನ್ ರೋಮ್ಯಾನ್ಸ್

ಇದನ್ನು ಖ್ಯಾತ ಕಾಮಿಡಿಯನ್ ಅಜೀಜ್ ಅನ್ಸಾರಿ ಮತ್ತು ಸಮಾಜಶಾಸ್ತ್ರಜ್ಞ ಎರಿಕ್ ಕ್ಲಿನ್ಬೆನ್ಬರ್ಗ್ ಬರೆದಿದ್ದಾರೆ. ಮಾರ್ಡನ್ ರೋಮ್ಯಾನ್ಸ್ ಪುಸ್ತಕದಲ್ಲಿ ಇಂದಿನ ಈ ಆಧುನಿಕ ಯುಗದಲ್ಲಿ ಡೇಟಿಂಗ್ ಮತ್ತು ಅದರ ಚಿಂತೆ ಹಾಗೂ ಸಮಸ್ಯೆಗಳು, ಸಂಗಾತಿಯ ಹುಡುಕಾಟಕ್ಕೆ ನಡೆಸುವ ಪ್ರಯತ್ನಗಳನ್ನು ತುಂಬಾ ಮನೋರಂಜಕವಾಗಿ ವಿವರಿಸಲಾಗಿದೆ.

ರಿಯಲ್ ಲವ್, ರೈಟ್ ನೌ

ಕೈಲೆನ್ ರೋಸೆನ್ಬರ್ಗ್ ಈ ಪುಸ್ತಕ ಬರೆದಿದ್ದಾರೆ. ನಿಜವಾದ ಪ್ರೀತಿ ಹೇಗೆ ಪಡೆಯುವುದು ಎನ್ನುವ ಬಗ್ಗೆ ಎಲ್ಲಾ ವಿಚಾರಗಳನ್ನು ಈ ಪುಸ್ತಕದಲ್ಲಿ ನೀಡಲಾಗಿದೆ. 30 ದಿನಗಳ ಒಂದು ಯೋಜನೆಯನ್ನು ನೀಡಿದ್ದು, ಇದರಲ್ಲಿ ನೀವು ಪ್ರೀತಿಸಲು ತಯಾರಾಗಿದ್ದೀರಾ ಎಂದು ತಿಳಿಯಬಹುದು. 30 ದಿನಗಳ ಯೋಜನೆಯನ್ನು ಸರಿಯಾಗಿ ಪಾಲಿಸಿಕೊಂಡು ಹೋಗಿ, ನಿಮ್ಮಲ್ಲಿ ಆತ್ಮವಿಶ್ವಾಸವಿದೆಯಾ ಎಂದು ತಿಳಿಯಬಹುದು ಮತ್ತು ಪ್ರೀತಿ ಕಂಡುಕೊಳ್ಳಬಹುದು.

ಹೀಸ್ ಜಸ್ಟ್ ನಾಟ್ ಡೇಟ್ ಇನ್ ಟು ಯು

ಗ್ರೆಗ್ ಬೆಹ್ರೆಂಡ್ಟ್ ಮತ್ತು ಲಿಜ್ ಟಕ್ಕಿಲೊ ಈ ಪುಸ್ತಕ ಬರೆದಿದ್ದಾರೆ. ಮಾರುಕಟ್ಟೆಯಲ್ಲಿ ಸಿಗುವಂತಹ ಸಂಬಂಧದ ಸ್ವಸಹಾಯ ಪುಸ್ತಕಗಳಲ್ಲಿ ಇದು ಒಂದು. ಹೀಸ್ ಜಸ್ಟ್ ನಾಟ್ ಡೇಟ್ ಇನ್ ಟು ಯು ಪುಸ್ತಕವು ಸುತ್ತಲಿನ ಡೇಟಿಂಗ್ ಗೇಮ್ ಬಗ್ಗೆ ಹಾಸ್ಯ ದೃಷ್ಟಿಕೋನದಲ್ಲಿ ವಿವರಿಸಲಾಗಿದೆ. ತುಂಬಾ ಸಣ್ಣ ಹಾಗೂ ಸರಳ ಪರಿಕಲ್ಪನೆ ಇದರಲ್ಲಿ ನೀಡಲಾಗಿದ್ದು, ಇದನ್ನು ಹೆಚ್ಚಿನ ಮಹಿಳೆಯರಿಗೆ ಒಪ್ಪಿಕೊಳ್ಳಲು ಕಷ್ಟವಾಗಬಹುದು. ಇದು ಓದಲೇ ಬೇಕಾದ ಪುಸ್ತಕ. ಇದರಲ್ಲಿ ಹೆಚ್ಚಿನ ಮಾಹಿತಿಗಳು ಇವೆ. ಡೇಟಿಂಗ್ ನಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ಇದರಲ್ಲಿ ತಿಳಿಸಲಾಗಿದೆ. ನೀವು ಒಳ್ಳೆಯ ಮನಸ್ಥಿತಿಯಲ್ಲಿದ್ದರೆ ಈ ಪುಸ್ತಕ ಓದಲೇ ಬೇಕು.

ವೈ ಹಿಮ್? ವೈ ಹರ್?

ಹೆಲೆನ್ ಫಿಶರ್ ಬರೆದಿರುವ ಈ ಪುಸ್ತಕವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಧಿಕ ಮಟ್ಟದಲ್ಲಿ ಮಾರಾಟವಾಗಿದೆ. ಹೆಲೆನ್ ಫಿಶರ್ ವಿಚಾರಗಳನ್ನು ತುಂಬಾ ಭಿನ್ನವಾಗಿ ತೆಗೆದುಕೊಳ್ಳುವರು ಮತ್ತು ಇದರಲ್ಲಿ ತುಂಬಾ ವೈಜ್ಞಾನಿಕವಾದ ವಿವರಣೆಯಿದೆ. ಮಾರುಕಟ್ಟೆಯಲ್ಲಿರುವ ಪ್ರೀತಿಯ ಸಲಹೆಗಳ ಇತರ ಪುಸ್ತಕಗಳಿಗಿಂತ ಇದು ತುಂಬಾ ಭಿನ್ನವಾಗಿರುವುದು. ವಿಶ್ವದಲ್ಲಿ ಇರುವಂತಹ ನಾಲ್ಕು ವಿಧದ ಪ್ರೀತಿಸುವ ಜನರ ಬಗ್ಗೆ ಫಿಶರ್ ಬರೆದಿದ್ದಾರೆ. ಇವರು ಪರಸ್ಪರ ಹೇಗೆ ಹೊಂದಾಣಿಕೆಯಾಗುವುದು ಮತ್ತು ಇವರೆಲ್ಲರೂ ಒಬ್ಬರಿಗಿಂತ ಒಬ್ಬರು ಹೇಗೆ ಭಿನ್ನ ಎಂದು ವಿವರಣೆ ನೀಡಿದ್ದಾರೆ. ಇದೇ ರೀತಿಯ ಬೇರೆ ಪುಸ್ತಕಗಳಿಂತ ಇದು ತುಂಬಾ ತಾಜಾ ಆಶಾವಾದ ಮೂಡಿಸುವ ಕಾರಣ ಹೆಚ್ಚಿನವರು ಇದನ್ನು ಇಷ್ಟಪಡುವರು. ಇದನ್ನು ನೀವು ಇಂದೇ ಓದಿಕೊಳ್ಳಿ.

ಆರ್ ಯು ದ ಒನ್ ಫಾರ್ ಮೀ?

ಬಾರ್ಬರಾ ಡಿ ಏಂಜಲೀಸ್ ಬರೆದಿರುವ ಪುಸ್ತಕವು ಪ್ರೀತಿ, ಸಂಬಂಧ, ಡೇಟಿಂಗ್ ಇತ್ಯಾದಿಗಳನ್ನು ಅರ್ಥ ಮಾಡಿಕೊಳ್ಳಲು ತುಂಬಾ ಒಳ್ಳೆಯದು. ಇದು ಸ್ವಸಹಾಯದ ಒಳ್ಳೆಯ ಪುಸ್ತಕ. ನಾವು ಯಾವ ರೀತಿಯಲ್ಲಿ ಒಬ್ಬರ ಪ್ರೀತಿಯಲ್ಲಿ ಹೇಗೆ ಮುಳುಗಿ ಹೋಗುತ್ತೇವೆ ಎನ್ನುವುದನ್ನು ವಿವರಿಸಲು ಬಾರ್ಬರ ಪ್ರಯತ್ನಿಸಿದ್ದಾರೆ. ನಿಮಗೆ ನೆರವಿಗೆ ಪುಸ್ತಕ ಬೇಕಿದ್ದರೆ ಮತ್ತು ಪುಸ್ತಕ ಓದುವ ಹವ್ಯಾಸವಿದ್ದರೆ ಇದು ಒಳ್ಳೆಯ ಆಯ್ಕೆ.

ರೋಮ್ಯಾನ್ಸ್, ಡೇಟಿಂಗ್ ಮತ್ತು ಸಂಬಂಧವನ್ನು ಎದುರುನೋಡುತ್ತಲಿದ್ದರೆ ಈ ಆರು ಪುಸ್ತಕಗಳು ತುಂಬಾ ಒಳ್ಳೆಯದಾಗಿವೆ. ಈ ಪುಸ್ತಗಳನ್ನು ಇಂದೇ ಓದಿಕೊಳ್ಳಿ ಮತ್ತು ನೀವು ಪ್ರೀತಿಸಲು ತಯಾರಾಗಿ. ಪರಿಸ್ಥಿತಿ, ಅನುಭವ, ಕಥೆ ಮತ್ತು ನೈಜತೆಯನ್ನು ವಿವರಿಸುವಂತಹ ಈ ಪುಸ್ತಕಗಳು ಸಂಬಂಧದಲ್ಲಿ ನಿಮ್ಮ ಆಕಾಂಕ್ಷೆ ಏನು ಎನ್ನುವುದನ್ನು ತಿಳಿಯಲು ನೆರವಾಗಲಿದೆ.

ಜಗತ್ತಿನಲ್ಲಿ ಪ್ರೀತಿಗೆ ಯಾವುದೇ ಎಲ್ಲೆಯಿಲ್ಲ. ಪ್ರೀತಿಯಲ್ಲಿ ಬಿದ್ದಾಗ ದೂರದ ಅಂತರ ಒಂದು ದೊಡ್ಡ ವಿಚಾರ ಎಂದು ಅನಿಸುವುದಿಲ್ಲ. ವಾಸ್ತವದಲ್ಲಿ ಅದು ಸಂಬಂಧವನ್ನು ಇನ್ನಷ್ಟು ಪ್ರಬಲವಾಗಿಸುತ್ತದೆ. ಇದೇ ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್ ಅಂದರೆ ಪ್ರೇಮಿಗಳಿಬ್ಬರೂ ದೂರವಿದ್ದರೂ ಅವರಿಬ್ಬರ ನಡುವಿರುವ ಒಂದು ಸುಂದರ ಬಂಧನ. ಹಲವು ಬಾರಿ ಏನಾಗಬಹುದೆಂದರೆ, ನಾವು ಪ್ರೀತಿಸುವ ವ್ಯಕ್ತಿಯು ಅನೇಕ ಕಾರಣಗಳಿಗಾಗಿ ಬೇರೆ ಪಟ್ಟಣ ಅಥವಾ ದೇಶಕ್ಕೆ ತೆರಳಬೇಕಾಗಬಹುದು.

ಯಾವಾಗ ನೀವು ಪ್ರೀತಿಯ ಬಗ್ಗೆ ಗಂಭೀರವಾಗಿ, ಒಬ್ಬರನೊಬ್ಬರಿಗೆ ಬಿಟ್ಟು ಜೀವನದಲ್ಲಿ ಬದುಕಲು ಸಾಧ್ಯವಿಲ್ಲವೆಂದೆನಿಸುತ್ತದೋ ಆಗ ಈ ದೂರದೂರಿನ ಅಂತರದ ಪ್ರೀತಿಯ ಸಂಬಂಧವನ್ನು ಮುಂದುವರಿಸಲು ಕಷ್ಟವಾದರೂ ಲೆಕ್ಕಿಸದೆ ಪ್ರೀತಿಯೆಂಬ ಸುಂದರ ಲೋಕಕ್ಕೆ ಎಲ್ಲಾ ರೀತಿಯಿಂದಲೂ ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್ ಒಂಟಿಯಾಗಿರುವುದು ಪ್ರೇಮಿಗಳಿಬ್ಬರಿಗೂ ಕಷ್ಟ.

ಈ ಸಂಬಂಧವನ್ನು ಕಾಪಾಡಿಕೊಳ್ಳಲು ಬಹಳಷ್ಟು ಪ್ರಯತ್ನ ಮಾಡಬೇಕು. ಪ್ರೇಮಿಗಳಿಬ್ಬರೂ ಸಂಬಂಧವನ್ನು ಮತ್ತು ಅದರಲ್ಲಿನ ಮಿಂಚನ್ನು ಜೀವಂತವಾಗಿಡಲು ಪ್ರಯಾಸಪಡಬೇಕು. ಜೊತೆಯಲ್ಲಿ ಕಾಲಕಳೆಯುವುದು, ಸಿನಿಮಾ ನೋಡುವುದು, ಶಾಪಿಂಗ್ ಮಾಡುವುದು ಅಥವಾ ಎಲ್ಲಾ ಕಾಲದಲ್ಲೂ ಏನೇ ಕಷ್ಟ ಬಂದರೂ ಒಬ್ಬರಿಗೊಬ್ಬರೋ ಊರುಗೋಲಾಗಿರುವುದರಿಂದ ಸಂಬಂಧವನ್ನು ಬಿಗಿಪಡಿಸಬಹುದು. ಈ ಲೇಖನವು ನಿಮಗೆ ನೆರವಾಗಿದ್ದರೆ ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಖಂಡಿತವಾಗಿಯೂ ನಿಮ್ಮ ಅನಿಸಿಕೆ ತಿಳಿಸಿ.

English summary

must-read-these-books-about-love-romance-and-relationships

Books are the best source to derive ideas and guidance for love and romance. If you are the kind of person that likes to dive headfirst into a romantic book about love and relationships, then there is no better place to start than with this list.
X